For Quick Alerts
  ALLOW NOTIFICATIONS  
  For Daily Alerts

  ಕೈ ಕೈ ಹಿಡಿದು ಒಟ್ಟಿಗೆ ಹೆಜ್ಜೆ ಇಟ್ಟ ಬಾಲಿವುಡ್ ಪ್ರಣಯ ಪಕ್ಷಿಗಳು

  By Bharath Kumar
  |
  ಕೈ ಕೈ ಹಿಡಿದು ಒಟ್ಟಿಗೆ ಹೆಜ್ಜೆ ಇಟ್ಟ ಬಾಲಿವುಡ್ ಪ್ರಣಯ ಪಕ್ಷಿಗಳು | Filmibeat Kannada

  ಬಾಲಿವುಡ್ ನ ಪ್ರಣಯ ಪಕ್ಷಿಗಳಾದ ದೀಪಿಕಾ ಪಡುಕೋಣೆ ಮತ್ತು ರಣ್ವೀರ್ ಸಿಂಗ್ ಇಬ್ಬರು ಎಂಗೇಜ್ ಮೆಂಟ್ ಮಾಡಿಕೊಂಡಿದ್ದಾರೆ ಎಂಬ ಸುದ್ದಿ ಸದ್ದು ಮಾಡಿತ್ತು. ಆಮೇಲೆ ಅದು ಬರಿ ವದಂತಿ ಮಾತ್ರ ಎಂಬುದು ಖಾತ್ರಿಯಾಯಿತು.

  ಇದೀಗ, ದೀಪಿಕಾ ಹಾಗೂ ರಣ್ವೀರ್ ಸಿಂಗ್ ಇಬ್ಬರು ತುಂಬ ದಿನಗಳ ನಂತರ ಒಟ್ಟಿಗೆ ಕ್ಯಾಮೆರಾ ಕಣ್ಣಿಗೆ ಬಿದ್ದಿದ್ದಾರೆ. ಇಬ್ಬರು ಬಿಳಿ ಬಣ್ಣದ ಬಟ್ಟೆಗಳನ್ನ ತೊಟ್ಟು, ರಾಜ-ರಾಣಿಯಂತೆ ಕಾಣಿಸಿಕೊಂಡಿದ್ದಾರೆ.

  ಒಬ್ಬರ ಕೈ ಮತ್ತೊಬ್ಬರು ಹಿಡಿದುಕೊಂಡು, ನಗು ನಗುತಾ ಒಟ್ಟಿಗೆ ಹೆಜ್ಜೆ ಹಾಕಿ ಎಲ್ಲರ ಗಮನ ಸೆಳೆದಿದ್ದಾರೆ. ಇದು ನೋಡುಗರನ್ನ ಒಂದು ಕ್ಷಣ ಆಶ್ಚರ್ಯ ಉಂಟು ಮಾಡಿದ್ರು, ಸರ್ಪ್ರೈಸ್ ಕೂಡ ಆಗಿತ್ತು.

  ಅನುಷ್ಕಾ-ವಿರಾಟ್ ಜೋಡಿಗೆ ಉಡುಗೊರೆ ಕಳುಹಿಸಿದ ಲವ್ ಬರ್ಡ್ಸ್

  ಅಷ್ಟಕ್ಕೂ, ಇವರಿಬ್ಬರು ಹೀಗೆ ಒಟ್ಟಿಗೆ ಕಾಣಿಸಿಕೊಂಡಿದ್ದು, ಸಂಜಯ್ ಲೀಲಾ ಬನ್ಸಾಲಿ ನಿರ್ದೇಶನದ 'ಪದ್ಮಾವತ್' ಚಿತ್ರದ ವಿಶೇಷ ಪ್ರದರ್ಶನದಲ್ಲಿ. 'ಪದ್ಮಾವತ್' ಸಿನಿಮಾ ಜನವರಿ 25 ರಂದು ತೆರೆಕಾಣುತ್ತಿದ್ದು, ಒಂದು ದಿನ ಮುಂಚೆಯೇ ಸಿನಿಮಾವನ್ನ ಬಾಲಿವುಡ್ ತಾರೆಯರಿಗೆ ತೋರಿಸಲಾಗಿದೆ. ಈ ಪ್ರದರ್ಶನದಲ್ಲಿ ದೀಪಿಕಾ ಮತ್ತು ರಣ್ವೀರ್ ಹೆಚ್ಚು ಆಕರ್ಷಕವಾಗಿದ್ದರು.

  ಅಂದ್ಹಾಗೆ, ಬನ್ಸಾಲಿ ನಿರ್ದೇಶನದ 'ಪದ್ಮಾವತ್' ಚಿತ್ರದಲ್ಲಿ ದೀಪಿಕಾ ಪಡುಕೋಣೆ 'ರಾಣಿ ಪದ್ಮಾವತಿ' ಪಾತ್ರ ನಿರ್ವಹಿಸಿದ್ರೆ, ರಣ್ವೀರ್ ಸಿಂಗ್ ಅಲ್ಲವುದ್ದೀನಿ ಖಿಲ್ಜಿ ಪಾತ್ರ ಮಾಡಿದ್ದಾರೆ. ಜೊತೆಗೆ ಶಾಹೀದ್ ಕಪೂರ್ ಕೂಡ ಅಭಿನಯಿಸಿದ್ದು, ಪತ್ನಿ ಜೊತೆಯಲ್ಲಿ ಸಿನಿಮಾ ನೋಡಿದ್ದಾರೆ,.

  English summary
  The team of Padmaavat was spotted at the film's screening on Tuesday. At the event, rumoured love birds, Deepika Padukone and Ranveer Singh arrived holding hands and smiling for the cameras. The couple matched each other in white and both looked stunning.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X