»   » ದೀಪಿಕಾ ಸಂಭಾವನೆ ಮುಂದೆ ಬಾಲಿವುಡ್ ಸ್ಟಾರ್ ನಟರು ಡಮ್ಮಿ ಆಗೋದ್ರು.!

ದೀಪಿಕಾ ಸಂಭಾವನೆ ಮುಂದೆ ಬಾಲಿವುಡ್ ಸ್ಟಾರ್ ನಟರು ಡಮ್ಮಿ ಆಗೋದ್ರು.!

Posted By:
Subscribe to Filmibeat Kannada

ಬಾಲಿವುಡ್ ನಲ್ಲಿ ಅತಿ ಹೆಚ್ಚು ಸಂಭಾವನೆ ಪಡೆಯುವುದು ಯಾರು ಎಂದು ಕೇಳಿದರೇ, ಬಹುಶಃ ಶಾರೂಖ್ ಖಾನ್, ಸಲ್ಮಾನ್ ಖಾನ್, ಅಮೀರ್ ಖಾನ್ ಅವರ ಹೆಸರುಗಳೇ ಮೊದಲು ಕೇಳಿ ಬರುತ್ತೆ. ಇನ್ಮುಂದೆ ಇವರ ಜಾಗದಲ್ಲಿ ದೀಪಿಕಾ ಪಡುಕೋಣೆ ಹೆಸರು ಬಂದ್ರು ಅಚ್ಚರಿ ಪಡಬೇಕಿಲ್ಲ.

ಹೌದು, ಬಾಲಿವುಡ್ ಖಾನ್ ಗಳನ್ನ ಬಿಟ್ಟರೆ ದೀಪಿಕಾ ಪಡುಕೋಣೆ ಸಂಭಾವನೆಯೇ ಅತಿ ಹೆಚ್ಚು ಎನ್ನಲಾಗುತ್ತಿದೆ. ದೀಪಿಕಾ ಸಂಭಾವನೆ ಮುಂದೆ ಬಾಲಿವುಡ್ ಸ್ಟಾರ್ ನಟರು ಕೂಡ ಡಮ್ಮಿ ಆಗಿದ್ದಾರೆ.

ಹಾಗಿದ್ರೆ, ದೀಪಿಕಾ ಪಡುಕೋಣೆ ಸಂಭಾವನೆ ಎಷ್ಟು? ಒಂದು ಚಿತ್ರಕ್ಕೆ ದೀಪಿಕಾ ಎಷ್ಟು ಹಣ ಪಡೆಯುತ್ತಾಳೆ. ಮುಂದೆ ಓದಿ.....

'ಪದ್ಮಾವತಿ' ಚಿತ್ರಕ್ಕೆ ದೀಪಿಕಾ ಸಂಭಾವನೆ ದಾಖಲೆ

ಸಂಜಯ್ ಲೀಲಾ ಬನ್ಸಾಲಿ ನಿರ್ದೇಶನ ಮಾಡುತ್ತಿರುವ 'ಪದ್ಮಾವತಿ' ಚಿತ್ರದಲ್ಲಿ ನಟಿಸಲ ದೀಪಿಕಾ ಪಡುಕೋಣೆ ದಾಖಲೆ ಮಟ್ಟದ ಸಂಭಾವನೆ ಪಡೆದುಕೊಂಡಿದ್ದಾರೆ ಎನ್ನಲಾಗಿದೆ.

ದೀಪಿಕಾ ಪಡುಕೋಣೆ ಡೇಟಿಂಗ್ ಕುರಿತು ಹೀಗೊಂದು ಸ್ಫೋಟಕ ಸುದ್ದಿ?

ದೀಪಿಕಾ ಪಡೆದುಕೊಂಡ ಸಂಭಾವನೆ ಎಷ್ಟು?

ಬಾಲಿವುಡ್ ಮಾಧ್ಯಮಗಳ ವರದಿ ಪ್ರಕಾರ ಪದ್ಮಾವತಿ ಚಿತ್ರದಲ್ಲಿ ನಟಿಸಲು ದೀಪಿಕಾ ಪಡುಕೋಣೆ ಪಡೆದುಕೊಂಡ ಸಂಭಾವನೆ ಬರೋಬ್ಬರಿ 13 ಕೋಟಿ ರೂಪಾಯಿಯಂತೆ.

ರಣ್ವೀರ್ ಸಿಂಗ್ ಗೂ ಇಷ್ಟು ಕೊಟ್ಟಿಲ್ಲ

'ಪದ್ಮಾವತಿ' ಚಿತ್ರದಲ್ಲಿ 'ಅಲ್ಲಾವುದ್ದೀನ್ ಖಿಲ್ಜಿ' ಪಾತ್ರವನ್ನ ನಿರ್ವಹಿಸಲಿರುವ ರಣ್ವೀರ್ ಸಿಂಗ್ ಗೆ ದೀಪಿಕಾಗಿಂತ ಕಡಿಮೆ ಸಂಭಾವನೆ ನೀಡಲಾಗಿದೆ. ಈ ಚಿತ್ರದಲ್ಲಿ ನಟಿಸಲು ರಣ್ವೀರ್ ಸಿಂಗ್ ಪಡೆದುಕೊಂಡಿರುವ ಮೊತ್ತ 10 ಕೋಟಿ.

ಶಾಹೀದ್ ಕಪೂರ್ ಗೂ ಅದೇ ಮೊತ್ತ

ಇನ್ನು 'ಪದ್ಮಾವತಿ'ಯ ಪತಿ ಪಾತ್ರದಲ್ಲಿ ಕಾಣಿಸಿಕೊಳ್ಳಲಿರುವ ಶಾಹೀದ್ ಕಪೂರ್ ಗೂ ದೀಪಿಕಾಗಿಂತ ಕಡಿಮೆ ಮೊತ್ತವನ್ನ ಸಂಭಾವನೆಯಾಗಿ ನೀಡಲಾಗಿದೆ. ಶಾಹೀದ್ ಕಪೂರ್ ಗೂ ಕೂಡ ಈ ಚಿತ್ರದಲ್ಲಿ ನಟಿಸಲು 10 ಕೋಟಿ ಹಣ ನೀಡಲಾಗಿದೆ.

Deepika Padukone Ranveer Singh Kissing Photo Viral | Filmibeat Kannada

'ಪದ್ಮಾವತಿ' ಚಿತ್ರದ ಬಗ್ಗೆ

'ಪದ್ಮಾವತಿ'.....ಇದೊಂದು ಐತಿಹಾಸಿಕ ಚಿತ್ರವಾಗಿದ್ದು, ಸಂಜಯ್ ಲೀಲಾ ಬನ್ಸಾಲಿ ಈ ಚಿತ್ರವನ್ನ ನಿರ್ದೇಶನ ಮಾಡುತ್ತಿದ್ದಾರೆ. ದೀಪಿಕಾ ಪಡುಕೋಣೆ, ರಣ್ವೀರ್ ಸಿಂಗ್, ಶಾಹೀದ್ ಕಪೂರ್, ಆದತಿ ರಾವ್ ಹೈದಿರಿ, ಸೋನು ಸೂದ್, ಜಿಮ್ ಸರ್ಬ್ ಸೇರಿದಂತೆ ಹಲವು ಕಲಾವಿದರು ಅಭಿನಯಿಸುತ್ತಿದ್ದಾರೆ.

ಬಿಟೌನ್‌ ಅಂಗಳದ ಬೆಸ್ಟ್ ಕಿಸ್ಸರ್ ಯಾರು? ರಣವೀರ್‌ನಿಂದ ಬಹಿರಂಗ!

English summary
Deepika Padukone gets whopping amount of Rs 13 crore for Padmavati, Ranveer Singh and Shahid Kapoor take home Rs 10 crore each.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada