»   » ಹಾಲಿವುಡ್‌ನಲ್ಲಿ ಮೊದಲ ಸ್ಥಾನಕ್ಕೆ ಪ್ರಿಯಾಂಕ-ದೀಪಿಕಾ ನಡುವೆ ಕಾಂಪಿಟೇಶನ್!

ಹಾಲಿವುಡ್‌ನಲ್ಲಿ ಮೊದಲ ಸ್ಥಾನಕ್ಕೆ ಪ್ರಿಯಾಂಕ-ದೀಪಿಕಾ ನಡುವೆ ಕಾಂಪಿಟೇಶನ್!

Posted By:
Subscribe to Filmibeat Kannada

ಬಾಲಿವುಡ್ ನ ಹಾಟ್ ನಟಿಯರಾದ ಪ್ರಿಯಾಂಕ ಚೋಪ್ರಾ ಮತ್ತು ದೀಪಿಕಾ ಪಡುಕೋಣೆ ಇಬ್ಬರೂ ಸಹ ಹಾಲಿವುಡ್ ನಲ್ಲಿ ನಾಮುಂದು ತಾಮುಂದು ಎಂದು ಮಿಂಚಲು ಶುರು ಮಾಡಿದ್ದಾರೆ. ಆದರೆ ಇಬ್ಬರೂ ನಟಿಯರ ಇತ್ತೀಚಿನ ಸಿನಿಮಾಗಳಾದ 'ಬೇವಾಚ್' ಮತ್ತು 'XXX: ರಿಟರ್ನ್‌ ಆಫ್‌ ಕ್ಸಾಂಡರ್ ಕೇಜ್' ಚಿತ್ರಗಳು ಬಾಕ್ಸ್ ಆಫೀಸ್ ನಲ್ಲಿ ಧೂಳ್ ಎಬ್ಬಿಸಿವೆ. ಪಿಗ್ಗಿಯ ಕೈಯಲ್ಲಿ ಈಗಾಗಲೇ ಎರಡು ಹೊಸ ಹಾಲಿವುಡ್ ಚಿತ್ರಗಳಿದ್ದು, ಆದರೆ ಡಿಪ್ಪಿ ಕತೆ ಏನು ಎನ್ನುವಂತಾಗಿತ್ತು.[ಪ್ಲಾಸ್ಟಿಕ್ ಸರ್ಜರಿ ಫಜೀತಿ: ಪ್ರಿಯಾಂಕ ಮೂಗಿನ ಬಗ್ಗೆ ಟ್ರೋಲ್!]

ಅದಕ್ಕೆ ಈಗ ದೀಪಿಕಾ ಪಡುಕೋಣೆ ಅಭಿನಯದ ಹಾಲಿವುಡ್ ಚಿತ್ರ 'XXX: ರಿಟರ್ನ್‌ ಆಫ್‌ ಕ್ಸಾಂಡರ್ ಕೇಜ್' ನಿರ್ದೇಶಕ ಡಿ.ಜೆ.ಕಾರಸೊ ಉತ್ತರಿಸಿದ್ದಾರೆ. ಸದ್ಯದಲ್ಲೇ 'xxx4' ಚಿತ್ರ ಮೂಡಿಬರಲಿದ್ದು, ಇದರಲ್ಲಿ 'XXX: ರಿಟರ್ನ್‌ ಆಫ್‌ ಕ್ಸಾಂಡರ್ ಕೇಜ್' ಚಿತ್ರದ ತಾರಾಬಳಗವೇ ಇರಲಿದೆ ಎಂದು ಅಭಿಮಾನಿಯೊಬ್ಬರಿಗೆ ಟ್ವಿಟ್ಟರ್ ಮೂಲಕ ಉತ್ತರಿಸಿದ್ದಾರೆ. ಇದರಿಂದ ಈಗ ಭಾರತದ ಈ ಇಬ್ಬರು ನಟಿಯರ ನಡುವೆ ಹಾಲಿವುಡ್ ನಲ್ಲಿ ಹೆಚ್ಚು ಸಿನಿಮಾಗಳಲ್ಲಿ ನಟಿಸಿದ ಮೊದಲ ಸ್ಥಾನಕ್ಕಾಗಿ ಸ್ಪರ್ಧೆ ಶುರುವಾಗಿದೆ. ಮುಂದೆ ಓದಿರಿ..

ಪ್ರಿಯಾಂಕ ಚೋಪ್ರಾ

ಪ್ರಿಯಾಂಕ ಚೋಪ್ರಾ ಅಭಿನಯದ ಹಾಲಿವುಡ್ ಚೊಚ್ಚಲ ಚಿತ್ರ 'ಬೇವಾಚ್' ಇತ್ತೀಚೆಗೆ ತೆರೆಕಂಡು ಬಾಕ್ಸ್ ಆಫೀಸ್ ನಲ್ಲಿ ಧೂಳ್ ಎಬ್ಬಿಸಿದೆ.

XXX4

ದೀಪಿಕಾ ಪಡುಕೋಣೆ ಈಗಾಗಲೇ ಹಾಲಿವುಡ್ ನ 'XXX: ರಿಟರ್ನ್‌ ಆಫ್‌ ಕ್ಸಾಂಡರ್ ಕೇಜ್' ಚಿತ್ರದಲ್ಲಿ ನಟಿಸಿದ್ದು, ಸದ್ಯದಲ್ಲೇ XXX4 ಚಿತ್ರದಲ್ಲಿಯೂ ಅಭಿನಯಿಸಲಿದ್ದಾರೆ. ಇದು ಅವರ ಎರಡನೇ ಹಾಲಿವುಡ್ ಚಿತ್ರವಾಗಲಿದೆ.

ಪಿಗ್ಗಿ ಕೈಯಲ್ಲಿ ಎರಡು ಚಿತ್ರಗಳಿವೆ

ಪ್ರಿಯಾಂಕ ಚೋಪ್ರಾ ಕೈಯಲ್ಲಿ ಈಗಾಗಲೇ ಎರಡು ಹೊಸ ಹಾಲಿವುಡ್ ಸಿನಿಮಾಗಳಿದ್ದು, ಈ ಚಿತ್ರಗಳಿಗೆ ಬಣ್ಣ ಹಚ್ಚಲು ಸಜ್ಜಾಗಿದ್ದಾರೆ ಎಂದು ತಿಳಿಯಲಾಗಿದೆ. ಅಂದಹಾಗೆ ಪ್ರಿಯಾಂಕ 'ಬೇವಾಚ್' ಚಿತ್ರದಲ್ಲಿ ನಟಿಸುವುದಕ್ಕು ಮುನ್ನ 2013 ರಲ್ಲಿ 'Planes' ಎಂಬ ಹಾಲಿವುಡ್ ಚಿತ್ರದ ಪಾತ್ರವೊಂದಕ್ಕೆ ವಾಯ್ಸ್ ನೀಡಿದ್ದರು. ಈ ಚಿತ್ರ 3D ಕಂಪ್ಯೂಟರ್ ಅನಿಮೇಟೆಡ್ ಸ್ಪೋರ್ಟ್ಸ್ ಕಾಮಿಡಿ ಚಿತ್ರ.

ಮೊದಲ ಸ್ಥಾನದಲ್ಲಿ ಯಾರು?

ಪ್ರಿಯಾಂಕ ಚೋಪ್ರಾ ಭಾರತದಿಂದ ಹಾಲಿವುಡ್ ನಲ್ಲಿ ಹೆಚ್ಚು ಸಿನಿಮಾಗಳಲ್ಲಿ ನಟಿಸಿದ ಮೊದಲ ಸ್ಥಾನಕ್ಕಾಗಿ ಫೈಟ್ ಮಾಡುತ್ತಿದ್ದಾರೆ.

ರೇಸ್ ನಲ್ಲಿ ಡಿಪ್ಪಿ

ಪ್ರಿಯಾಂಕ ರವರಿಗೆ ಸ್ಪರ್ಧೆ ನೀಡುತ್ತಾ, ಭಾರತದಿಂದ ಹಾಲಿವುಡ್ ನ ಹೆಚ್ಚು ಸಿನಿಮಾಗಳಲ್ಲಿ ನಟಿಸಿದ ಮೊದಲ ಸ್ಟಾರ್ ಪಟ್ಟಕ್ಕೆ ದೀಪಿಕಾ ಸಹ ಸ್ಪರ್ಧೆ ನೀಡುತ್ತಿದ್ದಾರೆ.

ಸ್ಪರ್ಧೆಗಾಗಿ ಕಾಲೆಳೆದುಕೊಳ್ಳುವ ನಟಿಯರಲ್ಲ

ದೀಪಿಕಾ ಪಡುಕೋಣೆ ಮತ್ತು ಪ್ರಿಯಾಂಕ ಚೋಪ್ರಾ ಇಬ್ಬರೂ ಸಹ ಸ್ಪರ್ಧೆ ಹೊರತುಪಡಿಸಿಯೂ ತಾವು ಒಬ್ಬರಿಗೊಬ್ಬರೂ ಕಾಲೆಳೆದುಕೊಳ್ಳುವ ತಾರೆಯರಲ್ಲ.

ಆತ್ಮೀಯ ಗೆಳತಿಯರು

ಹಾಲಿವುಡ್ ನಲ್ಲಿ ಹೆಚ್ಚು ಸಿನಿಮಾ ಮಾಡಿದ ಹೆಗ್ಗಳಿಕೆಯ ಸ್ಪರ್ಧೆ ಹೊರತಾಗಿ ಡಿಪ್ಪಿ ಮತ್ತು ಪಿಗ್ಗಿ ಇಬ್ಬರೂ ಉತ್ತಮ ಗೆಳತಿಯರಾಗಿ ಈಗಲೂ ಕಾಣಿಸಿಕೊಳ್ಳುತ್ತಿದ್ದಾರೆ.

ಕ್ವಾಂಟಿಕೋ ಶೋ ನಲ್ಲಿ ಪ್ರಿಯಾಂಕ

ಪ್ರಿಯಾಂಕ ಚೋಪ್ರಾ ಕ್ವಾಂಟಿಕೋ ಟಿವಿ ಸೀರೀಸ್ ನಲ್ಲಿಯ ಅಭಿನಯದ ಮೂಲಕ ಈಗಾಗಲೇ ಅಮೆರಿಕದಲ್ಲಿ ಜನಪ್ರಿಯರಾಗಿದ್ದಾರೆ. ಒಂದು ವೇಳೆ ದೀಪಿಕಾಗೂ ಅವಕಾಶ ಸಿಕ್ಕಲ್ಲಿ ಅವರು ಸಹ ಅಮೆರಿಕದ ಟಿವಿ ಸೀರೀಸ್ ಗೆ ಎಂಟ್ರಿ ಕೊಡುವಲ್ಲಿ ಸಂಶಯವಿಲ್ಲ.

ಮೊದಲ ಸ್ಥಾನ ಯಾರಿಗೆ?

ಹಾಲಿವುಡ್ ನ ಹೆಚ್ಚು ಸಿನಿಮಾಗಳಲ್ಲಿ ನಟಿಸಿದ ಭಾರತೀಯ ನಟಿ ಎಂಬ ಹೆಗ್ಗಳಿಕೆ ಯಾರಿಗೆ ಸಿಗುತ್ತದೋ ಗೊತ್ತಿಲ್ಲ. ಆದರೆ ದೀಪಿಕಾ ಮತ್ತು ಪ್ರಿಯಾಂಕ ಇಬ್ಬರಿಗೂ ಸಕ್ಸಸ್ ಸಿಗಲಿ ಎಂಬುದು ನಮ್ಮ ಆಶಯ.

English summary
Bollywood Actress Deepika Padukone Gives Fitting Competition To Priyanka Chopra! To Star In Another Hollywood Movie.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada