For Quick Alerts
  ALLOW NOTIFICATIONS  
  For Daily Alerts

  ದೀಪಿಕಾ ಪಡುಕೋಣೆ ಧರಿಸಿದ್ದ ಸಿಲ್ವರ್ ಬಣ್ಣದ ಪ್ಯಾಂಟ್ ಬೆಲೆ ಇಷ್ಟೊಂದಾ.!

  |

  ಬಾಲಿವುಡ್ ಸ್ಟೈಲಿಶ್ ನಟಿಯರಲ್ಲಿ ದೀಪಿಕಾ ಪಡುಕೋಣೆ ಕೂಡ ಒಬ್ಬರು. ವಿಭಿನ್ನ ಪಾತ್ರಗಳ ಮೂಲಕ ಪ್ರೇಕ್ಷಕರನ್ನ ರಂಜಿಸುವ ದೀಪಿಕಾ, ಸಿನಿಮಾದಿಂದ ಹೊರಗೆ ಕೂಡ ಅಷ್ಟೇ ಆಕರ್ಷಣೆಯಾಗಿರುತ್ತಾರೆ.

  ತಾವು ತೊಡುವ ಬಟ್ಟೆ, ಆಭರಣಗಳು, ಪಾದರಕ್ಷೆ ಹೀಗೆ ಪ್ರತಿಯೊಂದರಲ್ಲೂ ಸುದ್ದಿಯಾಗ್ತಾರೆ. ಇತ್ತೀಚಿಗಷ್ಟೆ ನಡೆದ ಮೆಟ್ ಗಾಲಾ, ಕ್ಯಾನ್ ಚಿತ್ರೋತ್ಸವದ ರೆಡ್ ಕಾರ್ಪೆಟ್ ನಲ್ಲಿ ಮಿರಮಿರ ಮಿಂಚಿದ್ದ ದೀಪಿಕಾ, ಈಗ ಸಿಲ್ವರ್ ಬಣ್ಣದ ಪ್ಯಾಂಟ್ ವಿಚಾರಕ್ಕೆ ಭಾರಿ ಸದ್ದು ಮಾಡ್ತಿದ್ದಾರೆ.

  ಏರ್ ಪೋರ್ಟ್ ನಲ್ಲಿ ದೀಪಿಕಾ ನಡವಳಿಕೆಗೆ ಅಭಿಮಾನಿಗಳ ಶ್ಲಾಘನೆ

  ಸಿಲ್ವರ್ ಬಣ್ಣದ ಪ್ಯಾಂಟ್ ಮತ್ತು ಅದಕ್ಕೆ ಮ್ಯಾಚ್ ಆಗುವ ಬಿಳಿ ಬಣ್ಣದ ಟಾಪ್ ಧರಿಸಿರುವ ದೀಪಿಕಾ ಹೊಸ ಲುಕ್ ಈಗ ಬಾಲಿವುಡ್ ನಲ್ಲಿ ಚರ್ಚೆಯಾಗ್ತಿದೆ. ದೀಪಿಕಾ ತೊಟ್ಟಿರುವ ಈ ಸಿಲ್ವರ್ ಬಣ್ಣದ ಪ್ಯಾಂಟ್ ಬೆಲೆ ಎಷ್ಟಿರಬಹುದು ಎಂಬ ಲೆಕ್ಕಾಚಾರ ನಡೆಯುತ್ತಿದೆ.

  ನೀವು ನಂಬ್ತಿರೋ ಬಿಡ್ತಿರೋ ಗೊತ್ತಿಲ್ಲ. ದೀಪಿಕಾ ತೊಟ್ಟಿದ್ದ ಸಿಲ್ವರ್ ಬಣ್ಣದ ಪ್ಯಾಂಟ್ ಬೆಲೆ 64,400 ಸಾವಿರ ರೂಪಾಯಿ ಎನ್ನಲಾಗಿದೆ. ಆನ್ ಲೈನ್ ಶಾಪಿಂಗ್ ನಲ್ಲಿ ಇಷ್ಟು ದುಬಾರಿ ಬೆಲೆಯನ್ನ ಈ ಪ್ಯಾಂಟ್ ಹೊಂದಿದೆ.

  ಪತ್ನಿ ಧರಿಸಿದ್ದ ಚಪ್ಪಲಿಯನ್ನು ಹೊತ್ತುಕೊಂಡಿದ್ದೇಕೆ ರಣವೀರ್ ಸಿಂಗ್?

  ಅಂದ್ಹಾಗೆ, ದೀಪಿಕಾ ಪಡುಕೋಣೆ ಯಾವ ಕಾರಣಕ್ಕಾಗಿ ಅಥವಾ ಯಾವ ಸಂಭ್ರಮಕ್ಕಾಗಿ, ಯಾವ ವಿಶೇಷತೆಗಾಗಿ ಈ ಕಾಸ್ಟ್ಯೂಮ್ ಹಾಕಿಕೊಂಡಿದ್ದರು ಎನ್ನುವುದರ ಬಗ್ಗೆ ಮಾಹಿತಿ ಇಲ್ಲ. ತಮ್ಮ ಇನ್ಸ್ಟಾಗ್ರಾಂನಲ್ಲಿ ಈ ಫೋಟೋಗಳನ್ನ ಹಂಚಿಕೊಂಡಿದ್ದಾರೆ.

  ಇನ್ನುಳಿದಂತೆ ದೀಪಿಕಾ ಪಡುಕೋಣೆ 'ಛಪಾಕ್' ಎಂಬ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಆಸಿಡ್ ದಾಳಿಗೆ ಒಳಗಾಗಿದ್ದ ಲಕ್ಷ್ಮಿ ಅಗರ್ ವಾಲ್ ಅವರ ಬಯೋಪಿಕ್ ಚಿತ್ರದಲ್ಲಿ ದೀಪಿಕಾ ನಾಯಕಿಯಾಗಿ ಅಭಿನಯಿಸುತ್ತಿದ್ದಾರೆ.

  English summary
  Bollywood actress Deepika padukone shared her stylish photos in instagram. Deepika padukone's silver color trousers come with a price tag of Rs 64,400 approximately

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X