For Quick Alerts
  ALLOW NOTIFICATIONS  
  For Daily Alerts

  ಮದುವೆಗು ಮುನ್ನ ನಾನು ಬುರ್ಖಾ ಧರಿಸುತ್ತಿದ್ದೆ ಎಂದ ನಟಿ ದೀಪಿಕಾ ಪಡುಕೋಣೆ

  |

  ಸೆಲೆಬ್ರೆಟಿಗಳ ಜೀವನ ನಾವಂದುಕೊಂಡಂತೆ ಸಹಜವಾಗಿ ಇರೋದಿಲ್ಲ. ಸಾಮಾನ್ಯ ಜನರು ಅಂದುಕೊಂಡಿದ್ದನ್ನು ಮಾಡಬಲ್ಲರು, ಅಂದುಕೊಂಡ ಸ್ಥಳಕ್ಕೂ ಹೋಗಬಲ್ಲರು. ಆದರೆ ಸೆಲೆಬ್ರೆಟಿಗಳು ಹೀಗೆ ಮಾಡಲು ಸಾಧ್ಯವಿಲ್ಲ. ತಾನೊಂದು ಬಟ್ಟೆ ಕೊಂಡುಕೊಳ್ಳಲು ಅಂಗಡಿಗೆ ಹೋಗುವುದಕ್ಕೂ ಅವರಿಂದ ಸಾಧ್ಯವಾಗುವುದಿಲ್ಲ. ಯಾಕಂದ್ರೆ ಹೊದಲ್ಲಿ ಬಂದಲ್ಲಿ ಅಭಿಮಾನಿಗಳು ಅವರನ್ನು ಮುತ್ತಿಕೊಳ್ಳುತ್ತಾರೆ. ಸೆಲ್ಫಿ ಸೆಲ್ಫಿ ಎಂದು ಮುಗಿಬೀಳ್ತಾರೆ. ಹೀಗಾಗಿ ತಮಗೆ ಶಾಪಿಂಗ್ ಮಾಡಬೇಕು, ಚಾಟ್ಸ್ ತಿನ್ನಬೇಕು ಎಂದು ಅನ್ನಿಸಿದರು ಅದು ಸಾಧ್ಯವಾಗೋದಿಲ್ಲ. ಇದಕ್ಕೆ ಈಗ ಮತ್ತೊಂದು ನಿದರ್ಶನ ಬಿಚ್ಚಿಟ್ಟಿದ್ದಾರೆ ನಟಿ ದೀಪಿಕಾ ಪಡುಕೋಣೆ.

  ನಟಿ ದೀಪಿಕಾ ಪಡುಕೋಣೆ. ಬಾಲಿವುಡ್‌ನ ಟಾಪ್‌ ನಟಿಯರಲ್ಲಿ ಒಬ್ಬರು. 2006ರಲ್ಲಿ ಕನ್ನಡದ ಉಪೇಂದ್ರ ಅಭಿನಯದ ಐಶ್ವರ್ಯ ಸಿನಿಮಾ ಮೂಲಕ ಚಿತ್ರರಂಗಕ್ಕೆ ಪ್ರವೇಶಿಸಿದ ನಟಿ ದೀಪಿಕಾ ಮತ್ತೆ ಕಾಣಿಸಿಕೊಂಡಿದ್ದು ಬಾಲಿವುಡ್‌ನಲ್ಲಿ. 2007ರಲ್ಲಿ ಓಂ ಶಾಂತಿ ಓಂಸಿನಿಮಾ ಮೂಲಕ ತನ್ನ ಬಾಲಿವುಡ್ ಜರ್ನಿ ಪ್ರಾರಂಭಿಸಿದ ದೀಪಿಕಾ ಮತ್ಯಾವತ್ತು ಹಿಂತಿರುಗಿ ನೋಡಲಿಲ್ಲಾ. ಸಾಲು ಸಾಲು ಸಿನಿಮಾಗಳನ್ನು ಮಾಡಿ, ದೊಡ್ಡ ದೊಡ್ಡ ಸ್ಟಾರ್ ಕಲಾವಿದರ ಜೊತೆ ತೆರೆ ಹಂಚಿಕೊಂಡು, ಸಾಕಷ್ಟು ಹಿಟ್ ಚಿತ್ರಗಳನ್ನು ನೀಡಿರುವ ದೀಪಿಕಾ ತನ್ನ ನೀಳ ಕಾಯ, ಸುಂದರ ಮೈಮಾಟದಿಂದಲೇ ಅದೆಷ್ಟೊ ಪಡ್ಡೆ ಹುಡುಗರ ಮನಸ್ಸು ಕದ್ದಿದ್ದಾರೆ. ಹೀಗೆ ಸಾಕಷ್ಟು ಜನಮನ್ನಣೆ ಪಡೆದಿರುವ ನಟಿ ದೀಪಿಕಾ 2018 ನವೆಂಬರ್ 14ಕ್ಕೆ ಬಾಲಿವುಡ್ ನಟ ರಣ್ವೀರ್ ಸಿಂಗ್‌ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ರು.

  ಇತ್ತೀಚೆಗೆ ಒಂದು ಖಾಸಗಿ ಸಂದರ್ಶನಲ್ಲಿ ಭಾಗಿಯಾಗಿದ್ದ ನಟಿ ದೀಪಿಕಾ ಪಡುಕೋಣೆ ಮದುವೆ ಮುಂಚೆ ತಾನು ಬುರ್ಖಾ ಧರಿಸುತ್ತಿದೆ ಎಂದು ಹೇಳುವ ಮೂಲಕ ಅಚ್ಚರಿ ಮೂಡಿಸಿದ್ದಾರೆ. ಈ ವಿಚಾರವನ್ನು ನಾನು ಇಲ್ಲಿವರೇಗು ರಿವೀಲ್ ಮಾಡಿರಲಿಲ್ಲ ಎಂದಿರುವ ದೀಪಿಕಾ ಸಂದರ್ಶನದಲ್ಲಿ ಈ ಬಗ್ಗೆ ಮಾತನಾಡಿದ್ದಾರೆ. ಹಾಗೂ ತಾನು ಬುರ್ಖಾ ಧರಿಸುವ ಅನಿವಾರ್ಯತೆ ಯಾಕೆ ಬಂತು ಅಂತಲೂ ಹೇಳಿಕೊಂಡಿದ್ದಾರೆ.

  "ನನ್ನ ಮತ್ತು ರಣ್‌ವೀರ್ ಮದುವೆ ಫಿಕ್ಸ್ ಆದಾಗಿನಿಂದ ನಾನು ಬುರ್ಖಾ ಧರಿಸುತ್ತಿದೆ. ಇದು ನಿಮಗೆ ಆಶ್ಚರ್ಯ ಅನ್ನಿಸಿದರು, ಬುರ್ಖಾ ಧರಿಸುವ ಅನಿವಾರ್ಯತೆ ನನಗೆ ಎದುರಾಗಿತ್ತು" ಎಂದಿದ್ದಾರೆ ದೀಪಿಕಾ ಪಡುಕೋಣೆ. ಹಾಗೇ "ನಾನು ಯಾಕೆ ಬುರ್ಖಾ ಧರಿಸುತ್ತಿದ್ದೆ ಎಂದರೇ ನಾನು ರಣ್‌ವೀರ್ ಪ್ರೀತಿಸುತ್ತಿದ್ದ ವಿಚಾರ ಹಾಗೆ ನಮ್ಮಿಬ್ಬರ ಮದುವೆ ನಿಗದಿ ಆದ ಸುದ್ದಿ ಅದಾಗಲೇ ಎಲ್ಲೆಡೆ ಹಬ್ಬಿತ್ತು. ಹೀಗಾಗಿ ನಾವು ಎಲ್ಲೇ ಹೋಗಲಿ, ಬರಲಿ ಮಾಧ್ಯಮದ ಕಣ್ಣು ನಮ್ಮ ಮೇಲೆಯೇ ಇರುತ್ತಿತ್ತು. ನಾವು ಮದುವೆಗೆ ಶಾಪಿಂಗ್ ಎಲ್ಲಿ ಮಾಡುತ್ತೇವೆ, ಆಭರಣಗಳನ್ನು ಎಲ್ಲಿಂದ ತೆಗೆದುಕೊಳ್ಳುತ್ತೇವೆ ಎಂಬ ಬಗ್ಗೆ ತಿಳಿದುಕೊಳ್ಳಲು ಕಾಯುತ್ತಿದ್ದರು. ಹೀಗಾಗಿ ನಮಗೆ ಎಲ್ಲೂ ಹೋಗೊದಕ್ಕೆ ಸಾಧ್ಯವಾಗಿರಲಿಲ್ಲ. ಇದರಿಂದ ನನಗೆ ತುಂಬಾ ಚಿಂತೆಯಾಗಿತ್ತು. ಹೀಗಾಗಿ ಬುರ್ಖಾ ಧರಿಸಿಯೇ ನಾನು ಸುಮಾರು ತಿಂಗಳು ಹೊರಗೆ ಓಡಾಡಿದ್ದೇನೆ" ಎಂದಿದ್ದಾರೆ.

  ಮದುವೆ ಕಾಸ್ಟ್ಯೂಮ್ ಬಗ್ಗೆ ನಾನಗೆ ಮತ್ತು ರಣ್‌ವೀರ್‌ಗೆ ಸಾಕಷ್ಟು ಕನಸುಗಳಿತ್ತು. ಮೆಹೆಂದಿ, ಮದುವೆ, ರಿಸೆಪ್ಸನ್‌ಗೆ ಹೇಗೆ ಬಟ್ಟೆಗಳನ್ನು ಧರಿಸಬೇಕು ಎಂಬೆಲ್ಲ ಆಲೋಚನೆಗಳು ಇದ್ದವು. ಇದಕ್ಕಾಗಿ ಸಾಕಷ್ಟು ಬಟ್ಟೆ ಅಂಗಡಿಗಳಿಗೆ ನಾವೇ ಹೋಗಿ ಸೆಲೆಕ್ಷನ್ ಮಾಡಬೇಕಿತ್ತು. ಬಣ್ಣ ಹಾಗೂ ಬಟ್ಟೆ ಮೆಟೀರಿಯಲ್‌ ಸೆಲೆಕ್ಟ್ ಮಾಡೊದಕ್ಕೆ ನಾವು ಶಾಪ್‌ಗಳಿಗೆ ತೆರಳಲೇ ಬೇಕಾದ ಅನಿವಾರ್ಯತೆ ಇತ್ತು. ಇದ್ದಕ್ಕಾಗಿ ಸಾಕಷ್ಟು ಯೋಚಿಸಿದೆವು. ಏನು ಮಾಡಬಹುದು ಎಂಬೆಲ್ಲ ಬಗ್ಗೆ ಚಿಂತಿಸಿದ್ದೆವು. ಆಗ ನಮಗೆ ಸಿಕ್ಕದ್ದೆ ಬುರ್ಖಾ ಐಡಿಯಾ. ಈ ಐಡಿಯಾವನ್ನು ನಮಗೆ ಹೇಳಿದ್ದು ನನ್ನ ಕಾಸ್ಟ್ಯೂಮ್ ಡಿಸೈನರ್ ಸಬ್ಯಸಾಚಿ. ಹಾಗೇ ಇದನ್ನು ಬಿಟ್ಟು ಬೇರೇನು ಉಪಾಯ ಇಲ್ಲ. ಹಾಗೇ ತೆರಳಿದರೆ ತುಂಬ ಕಷ್ಟ ಎಂದಿದ್ದರು. ಹೀಗಾಗಿ ನಾನು ಒಪ್ಪಿಕೊಂಡೆ"ಎಂದಿದ್ದಾರೆ ದೀಪಿಕಾ ಪಡುಕೋಣೆ.

  Deepika Padukone Worn A Burqa To Visit Sabyasachi For Dress Trials Before Her Wedding

  ಬುರ್ಖಾ ಧರಿಸಿ ಮುಂಬೈನ ಪ್ರಸಿದ್ದ ಅಂಗಡಿಗಳು, ಹಾಗೂ ವೆಡ್ಡಿಂಗ್ ಕಲೆಕ್ಷನ್ ಇರುವ ಸ್ಥಳಗಳಿಗೆ ನಾವು ಯಾವುದೇ ತೊಂದರೆ ಇಲ್ಲದೆ ತೆರಳಿದ್ದು, ನಮಗೆ ಬೇಕಾದ ರೀತಿಯಲ್ಲಿ ಶಾಪಿಂಗ್ ಮಾಡಿದೆವು. ಹಾಗೇ ಲೆಹೆಂಗಾ ಹೊಲಿಸಲು ಬಟ್ಟೆ ಪೀಸ್‌ಗಳನ್ನು ತೆಗೆದುಕೊಂಡು ಸಬ್ಯಸಾಚಿಗೆ ನೀಡಿದ್ದಾಗಿ ನಟಿ ದೀಪಿಕಾ ಪಡುಕೋಣೆ ತಿಳಿಸಿದ್ದಾರೆ. ಈ ಹಿಂದೆ ಕನ್ನಡದ ನಟಿ ರಚಿತಾ ರಾಮ್ ಕೂಡ ಹೀಗೆ ಮುಖಕ್ಕೆ ಬಟ್ಟೆ ಕಟ್ಟಿಕೊಂಡು ಸಿನಿಮಾಗಾಗಿ ಕಾಸ್ಟ್ಯೂಮ್ ಖರೀದಿಸಿದ್ದು ಕೂಡ ಹೀಗೆಯೆ ಸುದ್ದಿಯಾಗಿತ್ತು.

  English summary
  Did you know that designer Sabyasachi had called Actress Deepika Padukone in a Burqa for her dress trials before her wedding. Know more.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X