For Quick Alerts
  ALLOW NOTIFICATIONS  
  For Daily Alerts

  ಭಾರತ Vs ಪಾಕಿಸ್ತಾನ ಕ್ರಿಕೆಟ್ ಪಂದ್ಯದ ವೇಳೆನೂ ಕುಗ್ಗಿಲ್ಲ 'ಕಾಂತಾರ': ಬಾಕ್ಸಾಫೀಸ್‌ನಲ್ಲಿ ಹವಾ ಹೇಗಿದೆ?

  |

  ಕರ್ನಾಟಕದಲ್ಲೂ 'ಕಾಂತಾರ' ಆರ್ಭಟ ಇನ್ನೂ ನಿಂತಿಲ್ಲ. ಇದರೊಂದಿಗೆ ಬೇರೆ ಭಾಷೆಯಲ್ಲೂ ಏನು ಕಮ್ಮಿಯಿಲ್ಲ. ಅದರಲ್ಲೂ ಹಿಂದಿ ಹಾಗೂ ತೆಲುಗು ಎರಡೂ ಭಾಷೆಯಲ್ಲಿಯೂ 'ಕಾಂತಾರ' ನಿರೀಕ್ಷೆಗೂ ಮೀರಿ ಮುನ್ನುಗ್ಗುತ್ತಿದೆ.

  ತೆಲುಗುಗಿಂತ ಹಿಂದಿಯಲ್ಲಿ 'ಕಾಂತಾರ' ಬಾಕ್ಸಾಫೀಸ್‌ ಗಳಿಕೆಯಲ್ಲಿ ಕೊಂಚ ಹಿನ್ನೆಡೆ ಅನುಭವಿಸಿತ್ತು. ಆದರೆ. ಕಳೆದ ನಾಲ್ಕೈದು ದಿನಗಳಿಂದ ಹಿಂದಿ ಪ್ರೇಕ್ಷಕರು ಕೂಡ ಸಿನಿಮಾ ನೋಡಲು ಮುನ್ನುಗ್ಗಿ ಬರುತ್ತಿದ್ದಾರೆ. ಅದಕ್ಕೆ ಭಾರತ Vs ಪಾಕಿಸ್ತಾನ ಕ್ರಿಕೆಟ್ ಪಂದ್ಯ ನಡೆದ ದಿನದ ಬಾಕ್ಸಾಫೀಸ್‌ ಗಳಿಕೆಯೇ ಸಾಕ್ಷಿ.

  'ಒಂದು ವಾರ ಈ ಗುಂಗಿನಿಂದ ಹೊರಬರಲ್ಲ': 'ಕಾಂತಾರ' ನೋಡಿ ವಿಡಿಯೋ ಮಾಡಿದ ಕಂಗನಾ!'ಒಂದು ವಾರ ಈ ಗುಂಗಿನಿಂದ ಹೊರಬರಲ್ಲ': 'ಕಾಂತಾರ' ನೋಡಿ ವಿಡಿಯೋ ಮಾಡಿದ ಕಂಗನಾ!

  ನಿನ್ನೆ (ಅಕ್ಟೋಬರ್ 23) ಭಾರತ ಹಾಗೂ ಪಾಕಿಸ್ತಾನ ನಡುವೆ ಹೈ ವೋಲ್ಟೇಜ್ ಪಂದ್ಯವಿತ್ತು. ಭಾರತ Vs ಪಾಕಿಸ್ತಾನ ಪಂದ್ಯ ಇದ್ದಾಗ ಜನರು ಮನೆ ಬಿಟ್ಟು ಹೊರಬರುವುದಿಲ್ಲ. ಈ ದಿನ ಸಿನಿಮಾದ ಕಲೆಕ್ಷನ್ ಮೇಲೆ ದೊಡ್ಡ ಪೆಟ್ಟು ಕೊಟ್ಟೇ ಕೊಡುತ್ತೆ. ಆದರೆ, 'ಕಾಂತಾರ' ವಿಚಾರದಲ್ಲಿ ಅದೆಲ್ಲವೂ ತಲೆಕೆಳಗಾಗಿದೆ.

   'ಕಾಂತಾರ' ಹಿಂದಿ ಕಲೆಕ್ಷನ್ ಎಷ್ಟು?

  'ಕಾಂತಾರ' ಹಿಂದಿ ಕಲೆಕ್ಷನ್ ಎಷ್ಟು?

  ಬಾಲಿವುಡ್ ಸೆಲೆಬ್ರೆಟಿಗಳು 'ಕಾಂತಾರ' ಸಿನಿಮಾ ನೋಡಿ ಮೆಚ್ಚಿಕೊಳ್ಳುತ್ತಿದ್ದಾರೆ. ಒಬ್ಬೊಬ್ಬರಾಗಿಯೇ ಸಿನಿಮಾ ನೋಡಿ ಮೆಚ್ಚುಗೆ ಸೂಚಿಸುತ್ತಿದ್ದಾರೆ. 'ಕಾಂತಾರ' ಹಿಂದಿಗೆ ಡಬ್ ಆಗಿ ಹಿಂದಿಯಲ್ಲಿ ರಿಲೀಸ್ ಆಗಿ ಸುಮಾರು 10 ದಿನಗಳಾಗಿವೆ. ಇಲ್ಲಿವರೆಗೂ 'ಕಾಂತಾರ' ಗಳಿಕೆಯಲ್ಲಿ ಮೋಸ ಆಗಿದೆ. ಈ 10 ದಿನೇ ದಿನ 'ಕಾಂತಾರ' 20 ಕೋಟಿ ರೂಪಾಯಿ ಗಡಿ ದಾಟಿದೆ. ಇದೂವರೆಗೂ ಈ ಸಿನಿಮಾ ಸುಮಾರು 22 ಕೋಟಿ ರೂಪಾಯಿ ಗಳಿಸಿದೆ ಎನ್ನಲಾಗಿದೆ.

  'ಕಾಂತಾರ' ಓಟಿಟಿ ಬಿಡುಗಡೆ ಬಗ್ಗೆ ಹೀಗೊಂದು ಸುದ್ದಿ: ಈ ದಿನವೇ ರಿಲೀಸ್?'ಕಾಂತಾರ' ಓಟಿಟಿ ಬಿಡುಗಡೆ ಬಗ್ಗೆ ಹೀಗೊಂದು ಸುದ್ದಿ: ಈ ದಿನವೇ ರಿಲೀಸ್?

   ಭಾರತ Vs ಪಾಕಿಸ್ತಾನ ಪಂದ್ಯದಂದು ಗಳಿಸಿದ್ದೆಷ್ಟು?

  ಭಾರತ Vs ಪಾಕಿಸ್ತಾನ ಪಂದ್ಯದಂದು ಗಳಿಸಿದ್ದೆಷ್ಟು?

  ಭಾರತ Vs ಪಾಕಿಸ್ತಾನ ಕ್ರಿಕೆಟ್ ಪಂದ್ಯದ ದಿನ ಬಾಕ್ಸಾಫೀಸ್‌ ಕಲೆಕ್ಷನ್ ಡ್ರಾಪ್ ಆಗಬಹುದು ಎಂದು ನಿರೀಕ್ಷೆ ಮಾಡಲಾಗಿತ್ತು. ಆದರೆ, ಆ ಲೆಕ್ಕಾಚಾರ ಕೂಡ ತಲೆಕೆಳಗಾಗಿದೆ. ಪಂದ್ಯ ವೇಳೆನೂ ಜನರು ಥಿಯೇಟರ್‌ಗೆ ಬಂದು ಸಿನಿಮಾ ನೋಡಿದ್ದಾರೆ. ನಿನ್ನೆ (ಅಕ್ಟೋಬರ್ 23) 'ಕಾಂತಾರ' ಸಿನಿಮಾ ಹಿಂದಿ ಬೆಲ್ಟ್‌ನಲ್ಲಿ ಬರೋಬ್ಬರಿ 2 ಕೋಟಿ ರೂ.ಗೂ ಅಧಿಕ ಕಲೆಕ್ಷನ್ ಮಾಡಿದ್ದಾಗಿ ವರದಿಯಾಗಿದೆ. ಈ ಮೂಲಕ ಇದೂವರೆಗೂ ಸುಮಾರು 22 ಕೋಟಿ ರೂ. ಗಳಿಕೆ ಕಂಡಿದೆ.

   30 ಕೋಟಿ ಕ್ಲಬ್ ಮೇಲೆ 'ಕಾಂತಾರ' ಕಣ್ಣು

  30 ಕೋಟಿ ಕ್ಲಬ್ ಮೇಲೆ 'ಕಾಂತಾರ' ಕಣ್ಣು

  ಹಿಂದಿಯಲ್ಲಿ ಈ ಸಿನಿಮಾ 20 ಕೋಟಿ ಗಳಿಸಬಹುದು ಅನ್ನೋ ನಿರೀಕ್ಷೆಯಿರಲಿಲ್ಲ. ಮೊದಲೆರಡು ದಿನ ಹಿಂದಿ ಬೆಲ್ಟ್‌ನಲ್ಲಿ ಆ ಮಟ್ಟಿಗೆ ಸದ್ದು ಮಾಡಿರಲಿಲ್ಲ. ಈಗ ಈ ಸಿನಿಮಾ ಬಗ್ಗೆ ದಿನದಿಂದ ದಿನಕ್ಕೆ ಕ್ರೇಜ್ ಹೆಚ್ಚಾಗುತ್ತಿದೆ. ಹೀಗಾಗಿ 'ಕಾಂತಾರ' ಈ ವಾರದ ಅಂತ್ಯದ ವೇಳೆಗೆ 30 ಕೋಟಿ ರೂ. ಕ್ಲಬ್ ಸೇರಬಹುದು ಎಂದು ಅಂದಾಜಿಸಲಾಗಿದೆ. ಅಲ್ಲದೆ ದೀಪಾವಳಿ ಹಬ್ಬದ ಸಂಭ್ರಮದಲ್ಲಿ ಕಲೆಕ್ಷನ್ ಮೇಲೆ ಚಿತ್ರತಂಡದ ಕಣ್ಣಿದೆ.

   'ಡಾಕ್ಟರ್ ಜಿ' ಹಿಂದಿಕ್ಕಿದ 'ಕಾಂತಾರ'

  'ಡಾಕ್ಟರ್ ಜಿ' ಹಿಂದಿಕ್ಕಿದ 'ಕಾಂತಾರ'

  'ಕಾಂತಾರ' ಬಿಡುಗಡೆಯಾಗಿದ್ದ ದಿನವೇ ಬಾಲಿವುಡ್‌ನಲ್ಲಿ ಎರಡು ಸಿನಿಮಾಗಳು ರಿಲೀಸ್ ಆಗಿದ್ದವು. ಆಯುಷ್ಮಾನ್ ಖುರಾನಾ ಅಭಿನಯದ 'ಡಾಕ್ಟರ್ ಜಿ' ಹಾಗೂ ಪರಿಣಿತಿ ಚೋಪ್ರಾ ಅಭಿನಯದ 'ಕೋಡ್ ನೇವ್ ತಿರಂಗ' ಈ ಎರಡೂ ಸಿನಿಮಾಗಳೂ 'ಕಾಂತಾರ' ಮುಂದೆ ಮಂಡಿಯೂರಿವೆ. ಅದಲ್ಲೂ 'ಕಾಂತಾರ'ಗೆ ಟಕ್ಕರ್ ಕೊಡುತ್ತಿದ್ದ 'ಡಾಕ್ಟರ್ ಜಿ' ಗಳಿಕೆಯನ್ನೂ ಹಿಂದಿಕ್ಕೆ ಹಾಕಿದೆ. ಮುಂಬೈ ಬಿಟ್ಟು ಉಳಿದ ಎಲ್ಲಾ ಕಡೆಗಳಲ್ಲಿ 'ಕಾಂತಾರ' ಕಲೆಕ್ಷನ್ 'ಡಾಕ್ಟರ್‌ ಜಿ'ಗಿಂತ ಹೆಚ್ಚಿದೆ.

  English summary
  Despite India Vs Pakistan Match Kantara Hindi Box Office Collection Is High, Know More.
  Monday, October 24, 2022, 16:19
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X