»   » ಬಟ್ಟೆ-ಬರೆಯೊಂದಿಗೆ ಬೀದಿಗೆ ಬಂದ ಶ್ರೀದೇವಿ ಪುತ್ರಿ

ಬಟ್ಟೆ-ಬರೆಯೊಂದಿಗೆ ಬೀದಿಗೆ ಬಂದ ಶ್ರೀದೇವಿ ಪುತ್ರಿ

Posted By:
Subscribe to Filmibeat Kannada
ಬಟ್ಟೆ-ಬರೆಯೊಂದಿಗೆ ಬೀದಿಗೆ ಬಂದ ಶ್ರೀದೇವಿ ಪುತ್ರಿ | Filmibeat Kannada

ಶ್ರೀದೇವಿ ಸಾವಿನ ಬಳಿಕ ಮಗಳು ಜಾಹ್ನವಿ ಕಪೂರ್ ಬೀದಿಗೆ ಬಂದಿದ್ದಾರೆ. ಇದೇನಪ್ಪಾ ಅಮ್ಮ ಇರಬೇಕಾದರೇ ರಾಣಿಯಂತೆ ಮೆರೆದ ಮಗಳು ಈಗ ದಿಢೀರ್ ಅಂತ ಬೀದಿಗೆ ಬಂದಿದ್ದಾಳೆ ಎಂದ ಅಂದುಕೊಳ್ಳಬೇಡಿ. ಶ್ರೀದೇವಿ ಪುತ್ರಿ ಬೀದಿಗೆ ಬಂದಿರುವುದು ನಿಜ. ಆದ್ರೆ, ನಿಜ ಜೀವನದಲ್ಲಿ ಅಲ್ಲ.

ಅಮ್ಮನ ಅಗಲಿಕೆಯಿಂದ ವಿಶ್ರಾಂತಿ ಪಡೆದುಕೊಂಡಿದ್ದ ಜಾಹ್ನವಿ ಕಪೂರ್ ಮತ್ತೆ ಶೂಟಿಂಗ್ ಗೆ ಹಾಜರಾಗಿದ್ದಾರೆ. ಜಾಹ್ನವಿ ಕಪೂರ್ ಅಭಿನಯಿಸುತ್ತಿರುವ ಚೊಚ್ಚಲ ಸಿನಿಮಾ 'ದಡಕ್' ಚಿತ್ರದ ಚಿತ್ರೀಕರಣಕ್ಕೆ ಮರಳಿರುವ ಜಾಹ್ನವಿ ಕೊಲ್ಕತ್ತಾದ ರಸ್ತೆಯಲ್ಲಿ ಕ್ಯಾಮೆರಾ ಎದುರಿಸುತ್ತಿದ್ದಾರೆ.

ಜಾಹ್ನವಿ-ಖುಷಿ ಕಪೂರ್ ಬಗ್ಗೆ ಕೆಟ್ಟ ಬೈಗುಳ: ನೆಟ್ಟಿಗರಿಗೆ ಪಾಠ ಕಲಿಸಿದ ಅನ್ಷುಲಾ!

Dhadak movie shooting stills

ಇದೀಗ, ಈ ದೃಶ್ಯಗಳ ಫೋಟೋಗಳು ಬಹಿರಂಗವಾಗಿದ್ದು, ಶ್ರೀಮಂತ ಮನೆತನದ ಮಗಳು ತಂದೆ-ತಾಯಿಯನ್ನ ಬಿಟ್ಟು ಉಟ್ಟ ಬಟ್ಟೆಯಲ್ಲೇ ಮನೆಯಿಂದ ಹೊರ ಬಂದಮೇಲೆ ಹೇಗೆ ಕಾಣಿಸಿಕೊಳ್ಳುತ್ತಾಳೆ ಎಂಬ ದೃಶ್ಯವನ್ನ ಸೆರೆಹಿಡಿಯಲಾಗುತ್ತಿದೆ.

ನಾಯಕ ಮತ್ತು ನಾಯಕಿ ಇಬ್ಬರು ಪ್ರೀತಿಸಿ ಮನೆಯವರು ಒಪ್ಪದ ಕಾರಣ ಮನೆಯಿಂದ ಹೊರಬಂದಿರುತ್ತಾರೆ. ಇವರಿಗೆ ಮತ್ತೊಬ್ಬ ವ್ಯಕ್ತಿ ಮನೆ ಮಾಡಿಕೊಡುತ್ತಾನೆ. ಈ ದೃಶ್ಯವನ್ನ ನಿರ್ದೇಶಕರು ನೈಜವಾಗಿ ಚಿತ್ರೀಕರಿಸುತ್ತಿದ್ದಾರೆ.

ನೋವಿನಲ್ಲಿರುವ ಜಾಹ್ನವಿಗೆ ಸಂತಸ ತಂದ ಕಪೂರ್ ಸಹೋದರಿಯರು

Dhadak movie shooting stills

ಕೋಲ್ಕತ್ತಾದ ಗಣೇಶ್ ಚಂದ್ರ ಅವೆನ್ಯೂ, ರಾಯಲ್ ಕಲ್ಕತ್ತಾ ಗಾಲ್ಫ್ ಕ್ಲಬ್ ಬಳಿ ಚಿತ್ರೀಕರಿಸಿಕೊಳ್ಳಲಾಯಿತು. ಹೌರಾ ಅಣೆಕಟ್ಟು, ವಿಕ್ಟೋರಿಯಾ ಸ್ಮಾರಕ, ಪ್ರಿನ್ಸೆಪ್ ಘಾಟ್, ನ್ಯೂ ಮಾರ್ಕೆಟ್ ಏರಿಯಾ ಸೇರಿದಂತೆ ಕಲ್ಕತ್ತಾದ ಸಾಂಸ್ಕೃತಿಕ ಸ್ಥಳಗಳಲ್ಲಿ ಬಹುತೇಕ ಚಿತ್ರೀಕರಣ ನಡೆಯಲಿದೆ.

ಅಂದ್ಹಾಗೆ, 'ದಡಕ್' ಸಿನಿಮಾ ಮರಾಠಿಯ 'ಸೈರಾಟ್' ಚಿತ್ರದ ರೀಮೇಕ್ ಆಗಿದ್ದು, ಜಾಹ್ನವಿ ಕಪೂರ್ ಮತ್ತು ಇಶಾನ್ ಕತ್ತಾರ್ ಮುಖ್ಯ ಪಾತ್ರಗಳಲ್ಲಿ ಅಭಿನಯಿಸುತ್ತಿದ್ದಾರೆ.

ಶ್ರೀದೇವಿ ಪುತ್ರಿಯ ಸಿನಿಮಾದಲ್ಲಿ ಹೊಸ ನಿಯಮ ಜಾರಿಯಾಗಿದೆ

Dhadak movie shooting stills

ಈ ಚಿತ್ರವನ್ನ ಶಶಾಂಕ್ ನಿರ್ದೇಶನ ಮಾಡುತ್ತಿದ್ದು, ಧರ್ಮ ಪ್ರೊಡಕ್ಷನ್ ನಲ್ಲಿ ಚಿತ್ರ ನಿರ್ಮಾಣವಾಗುತ್ತಿದೆ. ಸದ್ಯ, ಬಹುತೇಕ ಸಿನಿಮಾದ ಚಿತ್ರೀಕರಣ ಮುಗಿದಿದ್ದು, ಜುಲೈ ತಿಂಗಳಲ್ಲಿ ಸಿನಿಮಾ ತೆರೆಕಾಣಲಿದೆ.

English summary
Sridevi daughter Janhvi Kapoor is busy with the shoot of her debut film Dhadak. The actor was recently seen on the film's sets in Kolkata.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X