For Quick Alerts
  ALLOW NOTIFICATIONS  
  For Daily Alerts

  'ಅತರಂಗಿ ರೇ' ಟ್ರೇಲರ್ ಬಿಡುಗಡೆ: ಬಾಲಿವುಡ್‌ನಲ್ಲಿ ಮತ್ತೆ ಮೋಡಿ ಮಾಡಲಿರುವ ಧನುಶ್

  |

  ತಮಿಳು ನಟ ಧನುಶ್ ಭಾಷೆಯ ಗಡಿಗಳನ್ನು ದಾಟಿ ಬಹುಕಾಲವಾಗಿದೆ. ಅವರು ಕೇವಲ ತಮಿಳು ನಟರಲ್ಲ. ಬಾಲಿವುಡ್, ಹಾಲಿವುಡ್‌ನಲ್ಲಿಯೂ ಧನುಶ್ ನಟಿಸಿ ಆಗಿದೆ.

  ತಮಿಳಿನಲ್ಲಿ ಮಾತ್ರವೇ ಅಲ್ಲ ಬಾಲಿವುಡ್‌ನಲ್ಲಿಯೂ ಧನುಶ್‌ಗೆ ದೊಡ್ಡ ಅಭಿಮಾನಿ ವರ್ಗವೇ ಇದೆ. ಧನುಶ್ ಮೊದಲ ಬಾರಿಗೆ 'ರಾಂಝನಾ' ಹೆಸರಿನ ಹಿಂದಿ ಸಿನಿಮಾದಲ್ಲಿ ನಟಿಸಿದ್ದರು. ಆ ಸಿನಿಮಾ ಸೂಪರ್ ಹಿಟ್ ಆಗಿದ್ದಲ್ಲದೆ, ಕಲ್ಟ್ ಕ್ಲಾಸಿಕ್ ಆಗಿ ನೆಲೆ ನಿಂತಿತು. ಆ ನಂತರ ದಂತಕತೆ ಅಮಿತಾಬ್ ಬಚ್ಚನ್ ಜೊತೆ ತೆರೆ ಹಂಚಿಕೊಂಡರು. ಇದೀಗ ಮತ್ತೊಮ್ಮೆ ಬಾಲಿವುಡ್‌ಗೆ ಎಂಟ್ರಿ ಕೊಟ್ಟಿದ್ದು ಈ ಬಾರಿಯೂ ಮೋಡಿ ಮಾಡುವುದು ಪಕ್ಕಾ ಎಂಬುದನ್ನು ಸಿನಿಮಾದ ಟ್ರೇಲರ್ ಹೇಳುತ್ತಿದೆ.

  'ಅತರಂಗಿ ರೇ' ಹೆಸರಿನ ಹಿಂದಿ ಸಿನಿಮಾದಲ್ಲಿ ಧನುಶ್ ನಟಿಸಿದ್ದಾರೆ. ಸಿನಿಮಾದ ಟ್ರೇಲರ್ ಇಂದಷ್ಟೆ ಬಿಡುಗಡೆ ಆಗಿದ್ದು, ಟ್ರೇಲರ್‌ನಲ್ಲಿಯೇ ಧನುಶ್ ಸೆಳೆಯುತ್ತಿದ್ದಾರೆ. ಧನುಶ್ ಮೂಖಾಂತರ ಮತ್ತೊಂದು ಒಳ್ಳೆಯ ಪ್ರೇಮಕತೆ ಹಿಂದಿ ಸಿನಿಮಾಕ್ಕೆ ಸಿಗುತ್ತಿದೆ ಎಂದು ಟ್ರೇಲರ್ ನೋಡಿದ ಕೆಲವರು ಟ್ವೀಟ್ ಮಾಡಿದ್ದಾರೆ.

  'ಅತರಂಗಿ ರೇ' ಸಿನಿಮಾ ಟ್ರೇಲರ್ ಬಿಡುಗಡೆ

  'ಅತರಂಗಿ ರೇ' ಸಿನಿಮಾ ಟ್ರೇಲರ್ ಬಿಡುಗಡೆ

  'ಅತರಂಗಿ ರೇ' ಸಿನಿಮಾದಲ್ಲಿ ಧನುಶ್ ಜೊತೆಗೆ ನಾಯಕಿಯಾಗಿ ಸಾರಾ ಅಲಿ ಖಾನ್ ಇದ್ದಾರೆ. ಜೊತೆಗೆ ಅಕ್ಷಯ್ ಕುಮಾರ್ ಸಹ ಇದ್ದಾರೆ. ಇದೊಂದು ತ್ರಿಕೋನ ಪ್ರೇಮಕತೆಯುಳ್ಳ ಸಿನಿಮಾ ಎಂಬುದು ಟ್ರೇಲರ್‌ನಿಂದ ಗೊತ್ತಾಗುತ್ತಿದೆ. 'ಅತರಂಗಿ ರೇ' ಸಿನಿಮಾದಲ್ಲಿ ಧನುಶ್ ತಮಿಳು ಯುವಕನ ಪಾತ್ರದಲ್ಲಿ ನಟಿಸುತ್ತಿದ್ದಾರೆ.

  ಸಿನಿಮಾದ ಕತೆ ಏನು?

  ಸಿನಿಮಾದ ಕತೆ ಏನು?

  ಧನುಶ್ ಹಾಗೂ ಸಾರಾ ಅಲಿ ಖಾನ್‌ಗೆ ಬಲವಂತದ ಮದುವೆ ನಡೆದು ಬಿಡುತ್ತದೆ. ಇಬ್ಬರಿಗೂ ಆ ಮದುವೆ ಇಷ್ಟವಿಲ್ಲ. ಆದರೆ ಹೇಗೋ ಏನೋ ಇಬ್ಬರೂ ಪ್ರೇಮದಲ್ಲಿ ಬಿದ್ದು ಬಿಡುತ್ತಾರೆ. ಅಷ್ಟರಲ್ಲಿ ಅಕ್ಷಯ್ ಕುಮಾರ್ ಎಂಟ್ರಿಯಾಗುತ್ತದೆ. ಅಕ್ಷಯ್ ಕುಮಾರ್‌, ಸಾರಾ ಅಲಿ ಖಾನ್‌ಳ ಪ್ರೇಮಿ. ಈಗ ಸಾರಾ ಅಲಿ ಖಾನ್, ಧನುಶ್ ಅನ್ನು ಆಯ್ಕೆ ಮಾಡಿಕೊಳ್ಳುತ್ತಾಳೋ ಅಥವಾ ಧನುಶ್‌ನನ್ನೊ ಎಂಬುದು ಸಿನಿಮಾದ ಕತೆ.

  ಆನಂದ್ ಎಲ್ ರಾಯ್ ನಿರ್ದೇಶನದ ಸಿನಿಮಾ

  ಆನಂದ್ ಎಲ್ ರಾಯ್ ನಿರ್ದೇಶನದ ಸಿನಿಮಾ

  'ಅತರಂಗಿ ರೇ' ಸಿನಿಮಾವನ್ನು ಆನಂದ್ ಎಲ್ ರಾಯ್ ನಿರ್ದೇಶನ ಮಾಡಿದ್ದಾರೆ. ಇದೇ ನಿರ್ದೇಶಕ ಧನುಶ್ ನಟನೆಯ ಮೊದಲ ಹಿಂದಿ ಸಿನಿಮಾ 'ರಾಂಝನಾ' ನಿರ್ದೇಶನ ಮಾಡಿದ್ದರು. 'ಅತರಂಗಿ ರೇ' ಸಿನಿಮಾಕ್ಕೆ ಎ.ಆರ್.ರೆಹಮಾನ್ ಸಂಗೀತ ನೀಡಿದ್ದಾರೆ. ಟ್ರೇಲರ್‌ನಲ್ಲಿ ಸಹ ಕೆಲ ಹಾಡುಗಳ ತುಣುಕುಗಳಿದ್ದು ಇಂಪಾಗಿವೆ. ಅಕ್ಷಯ್ ಕುಮಾರ್ ಜಾದೂಗಾರನ ಪಾತ್ರದಲ್ಲಿ ನಟಿಸಿರುವುದು ವಿಶೇಷ.

  ಹಾಲಿವುಡ್ ಸಿನಿಮಾದಲ್ಲಿ ನಟಿಸುತ್ತಿರುವ ಧನುಶ್

  ಹಾಲಿವುಡ್ ಸಿನಿಮಾದಲ್ಲಿ ನಟಿಸುತ್ತಿರುವ ಧನುಶ್

  ಧನುಶ್‌ಗೆ ಬೇರೆ ಭಾಷೆಯ ಸಿನಿಮಾಗಳು ಹೊಸದೇನೂ ಅಲ್ಲ. ಹಿಂದಿಯಲ್ಲಿ 'ರಾಂಝನಾ' ಹಾಗೂ ಅಮಿತಾಬ್ ಬಚ್ಚನ್ ಜೊತೆಗೆ 'ಶಮಿತಾಬ್' ಹೆಸರಿನ ಸಿನಿಮಾಗಳಲ್ಲಿ ಈಗಾಗಲೇ ನಟಿಸಿದ್ದಾರೆ. 'ಅತರಂಗಿ ರೇ' ಅವರ ಮೂರನೇ ಹಿಂದಿ ಸಿನಿಮಾ. ಮಲಯಾಳಂನಲ್ಲಿ 'ಪ್ರಾಪರ್ಟೀಸ್; ಕಾಮತ್ ಆಂಡ್ ಕಾಮತ್' ಹೆಸರಿನ ಸಿನಿಮಾದಲ್ಲಿ ನಟಿಸಿದ್ದಾರೆ. ಇನ್ನು ಹಾಲಿವುಡ್‌ನ 'ದಿ ಎಕ್ಟ್ರಾಡಿನರಿ ಜರ್ನಿ ಆಫ್‌ ಫಕೀರ್' ಸಿನಿಮಾದಲ್ಲಿ ನಟಿಸಿದ್ದಾರೆ. ಇದೀಗ 'ಅವೇಂಜರ್' ಸಿನಿಮಾದ ನಿರ್ದೇಶಕರಾದ ರೊಸ್ಸೊ ಸಹೋದರರು ನಿರ್ದೇಶಿಸುತ್ತಿರುವ 'ದಿ ಗ್ರೇ ಮ್ಯಾನ್' ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಇದೇ ಸಿನಿಮಾದಲ್ಲಿ ಧನುಶ್‌ಗೆ ಜೊತೆಯಾಗಿ 'ಕ್ಯಾಪ್ಟನ್ ಅಮೆರಿಕ' ಖ್ಯಾತಿಯ ಕ್ರಿಸ್ ಇವಾನ್ಸ್, 'ಲಾಲಾ ಲ್ಯಾಂಡ್', 'ದಿ ಬಿಗ್ ಶಾರ್ಟ್' ಸೇರಿ ಹಲವು ಸಿನಿಮಾಗಳಲ್ಲಿ ನಟಿಸಿರುವ ರ್ಯಾನ್ ಗೋಸ್ಲಿಂಗ್ ಸಹ ನಟಿಸುತ್ತಿದ್ದಾರೆ. ಇವುಗಳ ಹೊರತಾಗಿ ನಟ ಧನುಶ್ ಇದೀಗ 'ಮಾರನ್', 'ಆಯರತ್ತಿಲ್ ಒರುವನ್ 2', ಸೆಲ್ವರಾಘವನ್ ನಿರ್ದೇಶನದ 'ನಾನೇ ವರುವೇನ್', ಮಿಥುನ್ ಆರ್ ಜವಾಹರ್ ನಿರ್ದೇಶನದ 'ತಿರುಚಿತ್ರಂಬಳಂ', ಶೇಖರ್ ಕಮ್ಮುಲ ನಿರ್ದೇಶನದ ಇನ್ನೂ ಹೆಸರಿಡದ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ.

  English summary
  Dhanush, Sara Ali Khan, Akshay Kumar starer Hindi movie Atrangi Re trailer released. This is Dhanush's third Hindi movie.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X