For Quick Alerts
  ALLOW NOTIFICATIONS  
  For Daily Alerts

  ದಿಶಾ ಸಾಲಿಯಾನ್ ಆತ್ಮಹತ್ಯೆ: ಆಘಾತಕಾರಿ ಸಂಗತಿಗಳನ್ನು ತೆರೆದಿಟ್ಟ ಪೋಸ್ಟ್ ಮಾರ್ಟಂ ವರದಿ

  |

  ಸುಶಾಂತ್ ಸಿಂಗ್ ರಜಪೂತ್ ಸೇರಿದಂತೆ ವಿವಿಧ ನಟರಿಗೆ ಮ್ಯಾನೇಜರ್ ಆಗಿ ಕೆಲಸ ಮಾಡಿದ್ದ ಉಡುಪಿ ಮೂಲದ ದಿಶಾ ಸಾಲಿಯಾನ್ ಪ್ರಕರಣ ಕೂಡ ತಿರುವು ಪಡೆದುಕೊಳ್ಳುವ ಸೂಚನೆ ನೀಡಿದೆ. ಜೂನ್ 9ರ ಮಧ್ಯರಾತ್ರಿ 2 ಗಂಟೆ ಸುಮಾರಿಗೆ ದಿಶಾ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನುವುದು ವರದಿಯಾಗಿತ್ತು. 14ನೇ ಮಹಡಿಯಲ್ಲಿ ವಾಸವಾಗಿದ್ದ ದಿಶಾ, ಅಲ್ಲಿಂದ ಬಿದ್ದು ಜೀವ ಕಳೆದುಕೊಂಡಿದ್ದರು. ಈ ಸಂದರ್ಭದಲ್ಲಿ ಅವರ ಭಾವಿ ಪತಿ ರೋಹನ್ ರಾಯ್ ಮನೆಯಲ್ಲಿದ್ದರು ಎನ್ನಲಾಗಿದೆ.

  KGF Garuda ಖ್ಯಾತಿಯ RamChandra , Chapter 2 ಬಗ್ಗೆ ಹೇಳೋದೇನು - Part 1 | Filmibeat Kannada

  ಇದು ಆತ್ಮಹತ್ಯೆ ಎಂದು ಪೊಲೀಸರು ಹೇಳಿದ್ದರು. ದಿಶಾ ಕುಟುಂಬ ಕೂಡ ಇದರ ಬಗ್ಗೆ ಹೆಚ್ಚಿನ ಹೇಳಿಕೆ ನೀಡದೆ, ಇದು ಆತ್ಮಹತ್ಯೆ ಎಂದು ಒಪ್ಪಿಕೊಂಡಿತ್ತು. ಆದರೆ ಈ ಘಟನೆಗೂ ನಟ ಸೂರಜ್ ಪಾಂಚೋಲಿಗೂ ನಂಟು ಇದೆ ಎಂಬ ಆರೋಪ ಕೇಳಿಬಂದಿತ್ತು. ಕೆಲವೇ ದಿನಕ್ಕೆ ಸುಶಾಂತ್ ಸಿಂಗ್ ರಜಪೂತ್ ಕೂಡ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾದ ಪ್ರಕರಣ, ದಿಶಾ ಸಾವಿನ ಪ್ರಕರಣವನ್ನು ಮತ್ತೆ ಕೆದಕಿದೆ. ಈ ಎರಡೂ ಸಾವುಗಳ ನಡುವೆ ಸಂಬಂಧ ಇದೆ ಎಂದು ಅನೇಕರು ವಾದಿಸಿದ್ದಾರೆ. ಮುಂದೆ ಓದಿ...

  ತಡವಾಗಿ ಮರಣೋತ್ತರ ಪರೀಕ್ಷೆ

  ತಡವಾಗಿ ಮರಣೋತ್ತರ ಪರೀಕ್ಷೆ

  25 ವರ್ಷದ ದಿಶಾ ಸಾವು ಅನೇಕ ಅನುಮಾನಗಳಿಗೆ ಕಾರಣವಾಗಿದೆ. ಅವರು ಜೂನ್ 9ರಂದು ಮೃತಪಟ್ಟಿದ್ದರೂ ಎರಡು ದಿನಗಳ ನಂತರ ಮರಣೋತ್ತರ ಪರೀಕ್ಷೆ ಮಾಡಲಾಗಿದೆ. ಎರಡು ದಿನ ವಿಳಂಬ ಮಾಡಿ ಪರೀಕ್ಷೆ ನಡೆಸಿರುವುದು ಏಕೆ ಎಂಬ ಪ್ರಶ್ನೆ ಉದ್ಭವವಾಗಿದೆ. ಮುಂಬೈನ ಬೊರಿವಲಿ ಪೋಸ್ಟ್ ಮಾರ್ಟಂ ಕೇಂದ್ರದಲ್ಲಿ ಮರಣೋತ್ತರ ಪರೀಕ್ಷೆ ನಡೆಸಲಾಗಿತ್ತು.

  ದಿಶಾ ಸಾವಿಗೂ ಸುಶಾಂತ್ ಸಾವಿಗೂ ಸಂಬಂಧವಿದೆಯೇ?: ಕರಾವಳಿ ಯುವತಿಯ ಅಮ್ಮ ಹೇಳಿದ್ದೇನು?ದಿಶಾ ಸಾವಿಗೂ ಸುಶಾಂತ್ ಸಾವಿಗೂ ಸಂಬಂಧವಿದೆಯೇ?: ಕರಾವಳಿ ಯುವತಿಯ ಅಮ್ಮ ಹೇಳಿದ್ದೇನು?

  ಸಾವಿಗೆ ಪ್ರಾಥಮಿಕ ಕಾರಣ

  ಸಾವಿಗೆ ಪ್ರಾಥಮಿಕ ಕಾರಣ

  ಈ ಪರೀಕ್ಷೆಯ ಕೆಲವು ಅಂಶಗಳು ಬಹಿರಂಗವಾಗಿವೆ. ದಿಶಾ ತಲೆಗೆ ಗಂಭೀರವಾದ ಗಾಯಗಳಾಗಿದ್ದವು. ಜತೆಗೆ ದೇಹದಲ್ಲಿ ಅನೇಕ ಅಸ್ವಾಭಾವಿಕ ಗಾಯಗಳಿದ್ದವು. ಕಟ್ಟಡದ 14ನೇ ಮಹಡಿಯಿಂದ ಬಿದ್ದ ಪರಿಣಾಮವಾಗಿ ಉಂಟಾದ ಗಾಯಗಳು ಆಕೆಯ ಸಾವಿಗೆ ಪ್ರಾಥಮಿಕ ಕಾರಣಗಳಾಗಿವೆ ಎಂದು ಮರಣೋತ್ತರ ಪರೀಕ್ಷೆ ನಡೆಸಿದ್ದ ವೈದ್ಯರು ವರದಿಯಲ್ಲಿ ತಿಳಿಸಿದ್ದಾರೆ.

  ದಿಶಾ ಮೇಲೆ ದೌರ್ಜನ್ಯ?

  ದಿಶಾ ಮೇಲೆ ದೌರ್ಜನ್ಯ?

  ದಿಶಾ ಸಾಯುವ ಮುನ್ನ ಅವರ ಮೇಲೆ ಲೈಂಗಿಕ ದೌರ್ಜನ್ಯ ನಡೆದಿತ್ತು ಎಂಬ ಆರೋಪ ಕೇಳಿಬಂದಿದೆ. ದಿಶಾ ಮರಣೋತ್ತರ ಪರೀಕ್ಷೆಯಲ್ಲಿ ಅವರ ಖಾಸಗಿ ಅಂಗಗಳಲ್ಲಿಯೂ ಗಾಯಗಳಾಗಿರುವುದು ಗೊತ್ತಾಗಿದೆ ಎಂದು ಬಿಜೆಪಿ ಸಂಸದ ನಾರಾಯಣ ರಾಣೆ ಆರೋಪಿಸಿದ್ದರು. ಆದರೆ ಮರಣೋತ್ತರ ಪರೀಕ್ಷೆಯ ವರದಿಯಲ್ಲಿ ಇದರ ಬಗ್ಗೆ ನಿರ್ದಿಷ್ಟವಾಗಿ ಉಲ್ಲೇಖಿಸಿಲ್ಲ. ಮಹಿಳೆಯರ ಅಸ್ವಾಭಾವಿಕ ಸಾವಿನ ಪ್ರಕರಣದಲ್ಲಿ ಅವರ ಗುಪ್ತಾಂಗದ ದ್ರವ್ಯಗಳನ್ನು ಶೇಖರಿಸಿ ಪರೀಕ್ಷೆಗೆ ಒಳಪಡಿಸಲಾಗುತ್ತದೆ. ದಿಶಾ ಪ್ರಕರಣದಲ್ಲಿಯೂ ಇದನ್ನು ಸಂಗ್ರಹಿಸಿದ್ದು, ರಾಸಾಯನಿಕ ವಿಶ್ಲೇಷಣೆಗೆ ರವಾನಿಸಲಾಗಿದೆ.

  ರಿಯಾ ಚಕ್ರವರ್ತಿಗೆ ಅಂಡರ್‌ವರ್ಲ್ಡ್ ಸಂಪರ್ಕವಿದೆ ಎಂದ ಬಿಹಾರದ ಮಾಜಿ ಮುಖ್ಯಮಂತ್ರಿರಿಯಾ ಚಕ್ರವರ್ತಿಗೆ ಅಂಡರ್‌ವರ್ಲ್ಡ್ ಸಂಪರ್ಕವಿದೆ ಎಂದ ಬಿಹಾರದ ಮಾಜಿ ಮುಖ್ಯಮಂತ್ರಿ

  ಸುಶಾಂತ್ ಸಾವಿಗೆ ನಂಟು?

  ಸುಶಾಂತ್ ಸಾವಿಗೆ ನಂಟು?

  ದಿಶಾ ಅವರ ಮೇಲೆ ಅತ್ಯಾಚಾರ ಎಸಗಿ ಕೊಲೆ ಮಾಡಲಾಗಿದೆ ಎಂದು ಸಂಸದ ರಾಣೆ ಆರೋಪಿಸಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿಯೂ ಈ ರೀತಿಯ ಅಭಿಪ್ರಾಯ ವ್ಯಕ್ತವಾಗುತ್ತಿದೆ. ಈ ಪ್ರಕರಣಕ್ಕೂ ಸುಶಾಂತ್ ಸಾವಿಗೂ ಸಂಬಂಧವಿದೆ ಎಂದೂ ಹೇಳಲಾಗಿದೆ.

  ದಿಶಾ ಸಾವಿನ ರಹಸ್ಯ ಸುಶಾಂತ್‌ಗೆ ತಿಳಿದಿತ್ತೇ?

  ದಿಶಾ ಸಾವಿನ ರಹಸ್ಯ ಸುಶಾಂತ್‌ಗೆ ತಿಳಿದಿತ್ತೇ?

  ದಿಶಾ ಸಾವನ್ನಪ್ಪಿದ ಐದು ದಿನದಲ್ಲಿ ಸುಶಾಂತ್ ಸಾವಿಗೀಡಾಗಿದ್ದಾರೆ. ತಮ್ಮ ಮಾಜಿ ಮ್ಯಾನೇಜರ್ ದಿಶಾ ಸಾವಿನ ಹಿಂದಿನ ರಹಸ್ಯ ಸುಶಾಂತ್‌ಗೆ ಗೊತ್ತಾಗಿತ್ತು. ಅವರು ಅದರಿಂದ ತುಂಬಾ ಬೇಸರಪಟ್ಟುಕೊಂಡಿದ್ದರು. ಇದರ ಕುರಿತು ಅವರು ಬಹಿರಂಗಪಡಿಸಲು ಮುಂದಾಗಿದ್ದರು. ಈ ಕಾರಣದಿಂದಲೇ ಸುಶಾಂತ್‌ರನ್ನು ಹತ್ಯೆ ಮಾಡಿ ಅದನ್ನೂ ಅತ್ಮಹತ್ಯೆ ಎಂದು ಬಿಂಬಿಸಲಾಗಿದೆ. ಈ ಎರಡರಲ್ಲಿಯೂ ಸುಶಾಂತ್ ಗೆಳೆಯ ಎಂದು ಹೇಳಿಕೊಂಡಿರುವ ಸಂದೀಪ್ ಸಿಂಗ್ ಕೈವಾಡವಿದೆ ಎಂಬ ವಾದ ಮುಂದಿಡಲಾಗಿದೆ.

  ಸುಶಾಂತ್‌ಗೆ ಬೈಪೊಲಾರ್ ಡಿಸಾರ್ಡರ್ ಇತ್ತು ಎಂದಿದ್ದ ವೈದ್ಯೆಯೇ ನಾಪತ್ತೆ!ಸುಶಾಂತ್‌ಗೆ ಬೈಪೊಲಾರ್ ಡಿಸಾರ್ಡರ್ ಇತ್ತು ಎಂದಿದ್ದ ವೈದ್ಯೆಯೇ ನಾಪತ್ತೆ!

  ಅನುಮಾನ ಇಲ್ಲ ಎಂದು ದಿಶಾ ತಂದೆ

  ಅನುಮಾನ ಇಲ್ಲ ಎಂದು ದಿಶಾ ತಂದೆ

  ಆದರೆ, ದಿಶಾ ತಂದೆ ಸತೀಶ್ ಸಾಲಿಯಾನ್ ಈ ಆರೋಪಗಳನ್ನು ನಿರಾಕರಿಸಿದ್ದಾರೆ. ದಿಶಾ ಸಾವಿನ ಪ್ರಕರಣದಲ್ಲಿ ತಾವು ಯಾವುದೇ ಸಂಚು ನಡೆದಿರುವ ಅನುಮಾನ ಹೊಂದಿಲ್ಲ. ಮುಂಬೈ ಪೊಲೀಸರು ನಡೆಸುತ್ತಿರುವ ತನಿಖೆ ಬಗ್ಗೆ ಸಂಪೂರ್ಣ ತೃಪ್ತಿ ಹೊಂದಿದ್ದೇವೆ ಎಂದು ಅಸಿಸ್ಟೆಂಟ್ ಕಮಿಷನರ್‌ಗೆ ಬರೆದ ಪತ್ರದಲ್ಲಿ ಹೇಳಿದ್ದಾರೆ. ಅಲ್ಲದೆ, ಮುಂಬೈ ಪೊಲೀಸರ ಮೇಲೆ ಹಾಗೂ ಈ ಪ್ರಕರಣದಲ್ಲಿ ಅವರ ತನಿಖೆಯ ಕ್ರಮವನ್ನು ನಂಬಿರುವುದಕ್ಕೆ ನಿರಂತರ ಪ್ರಶ್ನಿಸುವುದರ ಮೂಲಕ ಮಾಧ್ಯಮಗಳ ಜನರು ಕುಟುಂಬಕ್ಕೆ ಕಿರುಕುಳ ನೀಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.

  English summary
  Disha Salian's post mortem report has revealed that she suffered head and multiple unnatural injuries.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X