»   » ಕೊಹ್ಲಿ-ಅನುಷ್ಕಾ ಸಂಬಂಧದಲ್ಲಿ ಹುಳಿ ಹಿಂಡಿದ ರಾಖಿ

ಕೊಹ್ಲಿ-ಅನುಷ್ಕಾ ಸಂಬಂಧದಲ್ಲಿ ಹುಳಿ ಹಿಂಡಿದ ರಾಖಿ

Posted By:
Subscribe to Filmibeat Kannada

ಈ ರೀತಿಯ ಟೈಮ್ ಬಾಂಬ್ ಗಳನ್ನು ಸಿಡಿಸುವುದರಲ್ಲಿ ಬಾಲಿವುಡ್ ಡ್ರಾಮಾ ಕ್ವೀನ್ ರಾಖಿ ಸಾವಂತ್ ಸಖತ್ ಎಕ್ಸ್ ಪರ್ಟ್. ಇದೀಗ ಅವರು ಸಿಡಿಸಿರುವ ಬಾಂಬ್ ಇಬ್ಬರು ಪ್ರೇಮಿಗಳಿಗೆ ಮುಳ್ಳಾಗಿದೆ. ಬಾಲಿವುಡ್ ಬೆಡಗಿ ಅನುಷ್ಕಾ ಶರ್ಮಾ ಹಾಗೂ ಕ್ರಿಕೆಟಿಗ ವಿರಾಟ್ ಕೊಹ್ಲಿ ಅವರ ಪ್ರೇಮ ಬಾಂಧವ್ಯಕ್ಕೆ ರಾಖಿ ಹುಳಿ ಹಿಂಡಿವ ಪ್ರಯತ್ನ ಮಾಡಿದ್ದಾರೆ.

ಕ್ರಿಕೆಟಿಗ ವಿರಾಟ್ ಕೊಹ್ಲಿಯನ್ನು ತಾನು ಮನಸಾರೆ ಪ್ರೀತಿಸುತ್ತಿದ್ದೇನೆ ಎಂದು ಹೇಳುವ ಮೂಲಕ ಬಾಲಿವುಡ್ ನಲ್ಲಿ ಹೊಸ ಬಾಂಬ್ ಸಿಡಿಸಿದಿದ್ದಾರೆ ರಾಖಿ. ಇದು ಅನುಷ್ಕಾ ಶರ್ಮಾ ಅವರ ಮೇಲೂ ಗಂಭೀರ ಪರಿಣಾಮಕ್ಕೆ ಎಡೆಮಾಡಿಕೊಡುವ ಸಾಧ್ಯತೆಗಳಿವೆ. [ಅನುಷ್ಕಾ ಶರ್ಮಾ ಹಾಟ್ ಬಿಕಿನಿ 'ವಿರಾಟ್' ರೂಪ]

Drama Queen Rakhi falls in love with Virat Kohli

ಇತ್ತೀಚೆಗೆ ಮಾಧ್ಯಮಗಳ ಜೊತೆ ಮಾತನಾಡಿದ ರಾಖಿ, "ಅನುಷ್ಕಾ ಅವರು ಎಂದೂ ಕೊಹ್ಲಿಯನ್ನು ಇಷ್ಟಪಡ್ತೀನಿ ಎಂದು ಬಹಿರಂಗವಾಗಿ ಹೇಳಿಲ್ಲ. ಆದರೆ ತಾನಂತೂ ಕೊಹ್ಲಿಯನ್ನು ತುಂಬಾನೇ ಇಷ್ಟಪಡ್ತೀನಿ. ಅನುಷ್ಕಾ ಅವರು ಇದುವರೆಗೂ ತಮ್ಮ ಪ್ರೀತಿಯನ್ನು ವ್ಯಕ್ತಪಡಿಸಿಲ್ಲ. ಹಾಗಾಗಿ ತಾನು ಮನಸಾರೆ ಕೊಹ್ಲಿಯನ್ನು ಪ್ರೀತಿಸುತ್ತಿದ್ದೇನೆ" ಎಂದಿದ್ದಾರೆ.

ಈ ಮಾತನ್ನು ರಾಖಿ ಹೇಳಿರುವುದು ಮುಂಬೈನ ಸ್ಪಾ ಒಂದರ ಉದ್ಘಾಟನೆ ವೇಳೆ ಎಂಬುದು ವಿಶೇಷ. ಆದರೆ ರಾಖಿ ಸಾವಂತ್ ಅವರ ಮಾತಿಗೆ ಅತ್ತ ಅನುಷ್ಕಾ ಆಗಲಿ, ಇತ್ತ ವಿರಾಟ್ ಕೊಹ್ಲಿ ಆಗಲಿ ಕ್ಯಾರೆ ಎಂದಿಲ್ಲ.

Drama Queen Rakhi falls in love with Virat Kohli

ಸಾಕಷ್ಟು ಹಿಂದೆಯೇ ವಿರಾಟ್ ಕೊಹ್ಲಿ ತಮ್ಮ ಮತ್ತು ಅನುಷ್ಕಾ ನಡುವಿನ ಸಂಬಂಧದ ಬಗ್ಗೆ ಹೇಳಿಕೊಂಡಿದ್ದರು. ತನ್ನ ಹಾಗೂ ಅನುಷ್ಕಾ ನಡುವಿನ ಸಂಬಂಧ ಎಲ್ಲರಿಗೂ ಗೊತ್ತಾಗಿದೆ. ಈ ಬಗ್ಗೆ ಕುತೂಹಲ ತೋರಿಸುವ ಅವಶ್ಯಕತೆ ಇಲ್ಲ. ನಾವಿಬ್ಬರೂ ಜೊತೆಯಾಗಿ ಸಿಕ್ಕಿದರೆ ಈಗಲೂ ನಿಮ್ಮಬ್ಬರ ಸಂಬಂಧದ ಬಗ್ಗೆ ಕೇಳುತ್ತಿದ್ದಾರೆ. ಇವರೆಲ್ಲಾ ಒಂಚೂರು ಕಾಮನ್ ಸೆನ್ಸ್ ಬಳಸಿದರೆ ಉತ್ತಮ. ಗೊತ್ತಿದ್ದೂ ಮತ್ತೆ ಮತ್ತೆ ಅದೇ ಪ್ರಶ್ನೆಯನ್ನು ಕೇಳುತ್ತಿರುವುದೇಕೆ? ಎಂದಿದ್ದರು.

English summary
Speaking to media persons at a recent event, Drama Queen Rakhi Sawant openly confessed her love for Virat Kohli. "I like Virat a lot and Anushka hasn't confessed publicly as yet. But I am confessing my love for the young cricketer as I love him and since Anushka has not accepted his love openly, therefore, she would like to express her love for the cricketer."
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada