For Quick Alerts
  ALLOW NOTIFICATIONS  
  For Daily Alerts

  ನಿಟ್ಟುಸಿರು ಬಿಟ್ಟ ಬಾಲಿವುಡ್: 'ದೃಶ್ಯಂ- 2' ಫಸ್ಟ್ ವೀಕೆಂಡ್ ಕಲೆಕ್ಷನ್ ಎಷ್ಟು?

  |

  ಸತತ ಸೋಲುಗಳಿಂದ ಕಂಗೆಟ್ಟಿದ್ದ ಬಾಲಿವುಡ್‌ಗೆ ಕೊನೆಗೂ ಗೆಲುವಿ ಟಾನಿಕ್ ಸಿಕ್ಕಿದೆ. ಅಜಯ್ ದೇವಗನ್, ತಬು ನಟನೆಯ 'ದೃಶ್ಯಂ- 2' ಭರ್ಜರಿ ಓಪನಿಂಗ್ ಪಡೆದು ಮುನ್ನುಗ್ಗುತ್ತಿದೆ. ಮೊದಲ ದಿನಕ್ಕಿಂತ 2ನೇ ಸಿನಿಮಾ ಕಲೆಕ್ಷನ್ ಹೆಚ್ಚಾಗಿದ್ದು, ಸಿನಿಮಾ ಸಕ್ಸಸ್ ಸುಳಿವು ಸಿಕ್ಕಿದೆ.

  'ದೃಶ್ಯಂ- 2' ಕೂಡ ಮಲಯಾಳಂ ಸಿನಿಮಾ ರೀಮೆಕ್. ಮೋಹನ್ ಲಾಲ್ ಮೊದಲಿಗೆ 'ದೃಶ್ಯಂ' ಚಿತ್ರದಲ್ಲಿ ನಟಿಸಿದ್ದರು. ಅದು ಸೂಪರ್ ಹಿಟ್ ಆಗಿ ಮುಂದೆ ದೇಶ ವಿದೇಶದ ಭಾಷೆಗಳಿಗೆ ರೀಮೆಕ್ ಆಗಿತ್ತು. ನಂತರ ಆ ಚಿತ್ರದ ಸೀಕ್ವೆಲ್ ಕೂಡ ಬಂದು ಸಕ್ಸಸ್ ಕಂಡಿತ್ತು. ಎರಡನೇ ಭಾಗವನ್ನು ಕೂಡ ಕನ್ನಡ, ತೆಲುಗಿನಲ್ಲಿ ರೀಮೆಕ್ ಮಾಡಿದ್ದರು. ಆದರೆ ಅಷ್ಟಾಗಿ ಸದ್ದು ಮಾಡಿರಲಿಲ್ಲ. ಆದರೆ ಬಾಲಿವುಡ್‌ನಲ್ಲಿ ಸಿನಿಮಾ ಪ್ರೇಕ್ಷಕರ ಮನಗೆದ್ದಿದೆ. ಮೌತ್ ಟಾಕ್ ಚೆನ್ನಾಗಿದ್ದು ಸಿನಿಮಾ ಥಿಯೇಟರ್‌ಗಳಲ್ಲಿ ಕಚ್ಚಿಕೊಳ್ಳುವ ಸಾಧ್ಯತೆಯಿದೆ.

  'ಕಾಂತಾರ' ನೋಡಿ ಕಣ್ಣಲ್ಲಿ ನೀರು ಬಂತು ಏಕೆಂದರೆ ನಾನು ಅಲ್ಲಿಯವನು: ಸುನೀಲ್ ಶೆಟ್ಟಿ'ಕಾಂತಾರ' ನೋಡಿ ಕಣ್ಣಲ್ಲಿ ನೀರು ಬಂತು ಏಕೆಂದರೆ ನಾನು ಅಲ್ಲಿಯವನು: ಸುನೀಲ್ ಶೆಟ್ಟಿ

  ಪನೋರಮಾ ಸ್ಟುಡಿಯೋಸ್, ವಯಕಾಂ ಸ್ಟುಡಿಯೋಸ್ ಹಾಗೂ ಟೀ- ಸೀರಿಸ್ ಸಂಸ್ಥೆಗಳು ಜಂಟಿಯಾಗಿ 'ದೃಶ್ಯಂ- 2' ಚಿತ್ರ ನಿರ್ಮಿಸಿವೆ. ಬಹುತೇಕ ಮೊದಲ ಭಾಗದಲ್ಲಿ ಇದ್ದ ಕಲಾವಿದರು ಇಲ್ಲೂ ಮುಂದುವರೆದಿದ್ದಾರೆ. ಅಜಯ್ ದೇವಗನ್ ಮತ್ತೆ ವಿಜಯ್ ಸಾಲ್ಗಾಂಕರ್ ಪಾತ್ರದಲ್ಲಿ ಮಿಂಚಿದ್ದು ಆತನ ಪತ್ನಿ ನಂದಿನಿಯಾಗಿ ಶ್ರಿಯಾ ಶರಣ್ ನಟಿಸಿದ್ದಾರೆ.

  2 ದಿನಕ್ಕೆ 36.97 ಕೋಟಿ ಕಲೆಕ್ಷನ್

  2 ದಿನಕ್ಕೆ 36.97 ಕೋಟಿ ಕಲೆಕ್ಷನ್

  ವಿಶ್ವದಾದ್ಯಂತ 'ದೃಶ್ಯಂ- 2' ಚಿತ್ರಕ್ಕೆ ಭರ್ಜರಿ ರೆಸ್ಪಾನ್ಸ್ ಸಿಕ್ಕಿದೆ. ಶುಕ್ರವಾರ ತೆರೆಗೆ ಬಂದ ಸಿನಿಮಾ 2 ದಿನಕ್ಕೆ ಭಾರತದಲ್ಲಿ ಅಂದಾಜು 36.97 ಕೋಟಿ ರೂ. ಗಳಿಕೆ ಕಂಡಿದೆ. ಶುಕ್ರವಾರ 15.38 ಕೋಟಿ ಗಳಿಸಿದ್ದ ಸಿನಿಮಾ ಶನಿವಾರ 21.59 ಕೋಟಿ ಬಾಚಿದೆ. ಮೊದಲ ದಿನಕ್ಕಿಂತ 2ನೇ ದಿನ ಕಲೆಕ್ಷನ್ ಹೆಚ್ಚಾಗಿರುವುದು ಸಿನಿಮಾ ಸಕ್ಸಸ್‌ ಬಗ್ಗೆ ಸುಳಿವು ನೀಡುತ್ತಿದೆ. ಇದು ಸಹಜವಾಗಿಯೇ ಬಾಲಿವುಡ್‌ಗೆ ಹೊಸ ಹುರುಪು ತಂದಿದೆ. 3ನೇ ದಿನವೂ ಬುಕ್ಕಿಂಗ್ ಚೆನ್ನಾಗಿದ್ದು, ಸಿನಿಮಾ 15 ಕೋಟಿಗೂ ಅಧಿಕ ಕಲೆಕ್ಷನ್ ಮಾಡುವ ಸಾಧ್ಯತೆಯಿದೆ.

  'ಲಾಲ್ ಸಿಂಗ್' ಮೀರಿಸಿದ 'ದೃಶ್ಯಂ- 2'

  'ಲಾಲ್ ಸಿಂಗ್' ಮೀರಿಸಿದ 'ದೃಶ್ಯಂ- 2'

  ಪ್ಯಾಂಡಮಿಕ್ ನಂತರ ಒಳ್ಳೆ ಓಪನಿಂಗ್ ಪಡೆದುಕೊಂಡ ಬಾಲಿವುಡ್ ಸಿನಿಮಾಗಳ ಪಟ್ಟಿಯಲ್ಲಿ 'ದೃಶ್ಯಂ- 2' ಸಿನಿಮಾ 3ನೇ ಸ್ಥಾನದಲ್ಲಿದೆ. 'ಸೂರ್ಯವಂಶಿ' ಹಾಗೂ 'ಬ್ರಹ್ಮಾಸ್ತ್ರ' ಚಿತ್ರಗಳಿಗೆ ಇದಕ್ಕಿಂತ ಒಳ್ಳೆ ಓಪನಿಂಗ್ ಸಿಕ್ಕಿತ್ತು. ಆದರೆ ಆಮಿರ್ ಖಾನ್ ನಟನೆಯ 'ಲಾಲ್ ಸಿಂಗ್ ಚಡ್ಡಾ' ಮತ್ತು ಅಕ್ಷಯ್ ಕುಮಾರ್ 'ರಾಮ್‌ಸೇತು'ಗಿಂತಲೂ 'ದೃಶ್ಯಂ- 2' ಗಳಿಕೆ ಹೆಚ್ಚಾಗಿದೆ. ಗುಜರಾಜ್‌ನಲ್ಲಿ ಚಿತ್ರಕ್ಕೆ ಅದ್ಭುತ ರೆಸ್ಪಾನ್ಸ್ ಸಿಕ್ಕಿದೆ.

  ಮತ್ತೆ ಕುಟುಂಬದ ಬೆನ್ನಿಗೆ ವಿಜಯ್

  ಮತ್ತೆ ಕುಟುಂಬದ ಬೆನ್ನಿಗೆ ವಿಜಯ್

  ಅಚಾನಕ್‌ ಆಗಿ ನಡೆಯುವ ಒಂದು ಹತ್ಯೆ ಸುತ್ತಾ 'ದೃಶ್ಯಂ' ಸರಣಿ ಸಿನಿಮಾ ಕಥೆಗಳನ್ನು ಹೆಣೆಯಲಾಗಿದೆ. ಚಿತ್ರದ ನಾಯಕ ತನ್ನ ಚಾಕಚಕ್ಯತೆಯಿಂದ ಪೊಲೀಸರ ಕೈಗೆ ಸಿಗದಂತೆ ತನ್ನ ಕುಟುಂಬವನ್ನು ಹೇಗೆ ಕಾಪಾಡಿಕೊಳ್ಳುತ್ತಾನೆ ಅನ್ನುವುದನ್ನು ಬಹಳ ರೋಚಕವಾಗಿ ಹೇಳಲಾಗಿದೆ. ಪ್ರೀಕ್ವೆಲ್‌ನಲ್ಲಿ ಮಗಳು ಮಾಡಿದ ಕೊಲೆಯನ್ನು ಮುಚ್ಚಿ ಹಾಕಲು ವಿಜಯ್ ಸಾಲ್ಗಾಂಕರ್ ಸಾಕಷ್ಟು ಶ್ರಮ ಪಟ್ಟಿರುತ್ತಾನೆ. ಶವವನ್ನು ಪೊಲೀಸ್‌ ಠಾಣೆಯಲ್ಲೇ ಹೂತುಹಾಕಿ ಕೇಸ್ ಮುಚ್ಚಿ ಹಾಕಿರುತ್ತಾನೆ. ಪಾರ್ಟ್ 2ರಲ್ಲಿ ಆ ಕೇಸ್ ಮತ್ತೆ ಓಪನ್ ಆಗಿ ಏನೆಲ್ಲಾ ಆಗುತ್ತದೆ? ಮತ್ತೆ ವಿಜಯ್ ಹೇಗೆ ತನ್ನ ಕುಟುಂಬವನ್ನು ರಕ್ಷಿಸಿಕೊಳ್ಳುತ್ತಾನೆ ಎನ್ನುವ ಕಥೆಯನ್ನು ಹೇಳಲಾಗಿದೆ.

  ಸೋಮವಾರ ಭವಿಷ್ಯ ನಿರ್ಧಾರ

  ಸೋಮವಾರ ಭವಿಷ್ಯ ನಿರ್ಧಾರ

  'ದೃಶ್ಯಂ- 2' ಚಿತ್ರಕ್ಕೆ ವಿಮರ್ಶಕರಿಂದಲೂ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಸಿನಿಮಾ ನೋಡಿದವರು ಮೆಚ್ಚಿ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳುತ್ತಿದ್ದಾರೆ. ಭಾನುವಾರವೂ ಬುಕ್ಕಿಂಗ್ ಚೆನ್ನಾಗಿದ್ದು ಫಸ್ಟ್ ವೀಕೆಂಡ್‌ನಲ್ಲಿ ಸಿನಿಮಾ ಭರ್ಜರಿ ಕಲೆಕ್ಷನ್ ಮಾಡುವ ನಿರೀಕ್ಷೆ ಇದೆ. ಆದರೆ ಸಿನಿಮಾವೊಂದರ ಭವಿಷ್ಯ ನಿರ್ಧಾರ ಆಗುವುದು ತೆರೆಕಂಡ ಮೊದಲ ವೀಕೆಂಡ್ ನಂತರ ಬರುವ ಸೋಮವಾರ. ಹಾಗಾಗಿ ನಾಳೆ ಚಿತ್ರಕ್ಕೆ ರೆಸ್ಪಾನ್ಸ್ ಹೇಗಿರುತ್ತದೋ ಕಾದು ನೋಡಬೇಕು.

  English summary
  Drishyam 2 Box office Report: The Thriller continues it's magical run with 40% growth on Day 2. Movie has garnered a record box office number on Day 2 earning 21.59crs pan India collection. Know more.
  Sunday, November 20, 2022, 18:18
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X