For Quick Alerts
  ALLOW NOTIFICATIONS  
  For Daily Alerts

  'ದೀಪಿಕಾ ಜೊತೆ ನಾನು ವಿಚಾರಣೆಗೆ ಹಾಜರಾಗುತ್ತೇನೆ' ಎಂದು ರಣ್ವೀರ್ NCB ಬಳಿ ಮನವಿ ಮಾಡಿಕೊಂಡಿದ್ದೇಕೆ?

  |

  ಡ್ರಗ್ಸ್ ಮಾಫಿಯಾದ ಜಾಲ ಬೆನ್ನತ್ತಿರುವ ಎನ್ ಸಿ ಬಿ ಪೊಲೀಸರು ದೀಪಿಕಾ ಪಡುಕೋಣೆ ಸೇರಿದಂತೆ ನಾಲ್ಕು ಮಂದಿ ಸ್ಟಾರ್ ನಟಿಯರಿಗೆ ನೋಟಿಸ್ ನೀಡಿದೆ. ನಟಿ ದೀಪಿಕಾ ಪಡುಕೋಣೆ ಗೋವಾದಲ್ಲಿ ಶಕುನ್ ಭಾತ್ರ ನಿರ್ದೇಶನದ ಸಿನಿಮಾದ ಚಿತ್ರೀಕರಣದಲ್ಲಿ ನಿರತರಾಗಿದ್ದರು.

  ದೀಪಿಕಾ ಜೊತೆ ಪತಿ ರಣ್ವೀರ್ ಸಿಂಗ್ ಸಹ ಗೋವದಲ್ಲಿದ್ದರು. ಎನ್ ಸಿ ಬಿ ನೋಟಿಸ್ ಕೈ ಸೇರುತ್ತಿದ್ದಂತೆ ದೀಪಿಕಾ ನಿನ್ನೆ (ಸೆಪ್ಟಂಬರ್ 24) ರಾತ್ರಿ ಗೋವಾದಿಂದ ಹೊರಟು ಮುಂಬೈಗೆ ಆಗಮಿಸಿದ್ದಾರೆ. ಮುಂಬೈ ಏರ್ ಪೋರ್ಟ್ ನಲ್ಲಿ ದೀಪಿಕಾ ಕ್ಯಾಮರಾ ಕಣ್ಣಿಗೆ ಸೆರೆಯಾಗಿದ್ದು, ಪತಿ ರಣ್ವೀರ್ ಸಿಂಗ್ ಪತ್ನಿಯ ಕೈ ಹಿಡಿದು ಕರೆದುಕೊಂಡು ಹೋಗುತ್ತಿರುವ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿವೆ. ಮುಂದೆ ಓದಿ...

  ದೀಪಿಕಾ ಪಡುಕೋಣೆಯ ಪಾರ್ಟಿ ವಿಡಿಯೋ ಪರಿಶೀಲಿಸುತ್ತಿರುವ NCB: ಆ ವಿಡಿಯೋದಲ್ಲಿ ಏನಿದೆ?ದೀಪಿಕಾ ಪಡುಕೋಣೆಯ ಪಾರ್ಟಿ ವಿಡಿಯೋ ಪರಿಶೀಲಿಸುತ್ತಿರುವ NCB: ಆ ವಿಡಿಯೋದಲ್ಲಿ ಏನಿದೆ?

  ಎನ್ ಸಿ ಬಿ ಅಧಿಕಾರಿಗಳ ಬಳಿ ರಣ್ವೀರ್ ಸಿಂಗ್ ಮನವಿ

  ಎನ್ ಸಿ ಬಿ ಅಧಿಕಾರಿಗಳ ಬಳಿ ರಣ್ವೀರ್ ಸಿಂಗ್ ಮನವಿ

  ದೀಪಿಕಾ ನಾಳೆ (ಸೆಪ್ಟಂಬರ್ 26) ಶನಿವಾರ ಎನ್ ಸಿ ಬಿ ವಿಚಾರಣೆಗೆ ಹಾಜರಾಗುತ್ತಿದ್ದಾರೆ. ರಿಪಬ್ಲಿಟ್ ಟಿವಿ ವರದಿ ಮಾಡಿರುವ ಪ್ರಕಾರ ದೀಪಿಕಾ ಪತಿ, ನಟ ರಣ್ವೀರ್ ಸಿಂಗ್ ಪತ್ನಿಗೆ ನೋಟಿಸ್ ನೀಡಿದ ಬಳಿಕ ಎನ್ ಸಿ ಬಿ ಅಧಿಕಾರಿಗಳಿಗೆ ಅರ್ಜಿ ಸಲ್ಲಿಸಿ ಮನವಿಯೊಂದನ್ನು ಮುಂದಿಟ್ಟಿದ್ದಾರೆ. ಪತ್ನಿಯ ವಿಚಾರಣೆ ವೇಳೆ ತಾನು ಕೂಡ ಹಾಜರಿರಬಹುದಾ ಎಂದು ಕೇಳಿಕೊಂಡಿದ್ದಾರಂತೆ.

  ದೀಪಿಕಾ ಆತಂಕದಿಂದ ಬಳಲುತ್ತಾಳೆ, ಪ್ಯಾನಿಕ್ ಅಟ್ಯಾಕ್ ಆಗುತ್ತೆ

  ದೀಪಿಕಾ ಆತಂಕದಿಂದ ಬಳಲುತ್ತಾಳೆ, ಪ್ಯಾನಿಕ್ ಅಟ್ಯಾಕ್ ಆಗುತ್ತೆ

  ಪತ್ನಿ ವಿಚಾರಣೆ ವೇಳೆ ಯಾಕೆ ಜೊತೆಯಲ್ಲಿರಬೇಕು ಎನ್ನುವುದಕ್ಕೆ ಕಾರಣ ಕೂಡ ನೀಡಿದ್ದಾರೆ. ದೀಪಿಕಾ ಕೆಲವೊಮ್ಮೆ ಆತಂಕದಿಂದ ಬಳಲುತ್ತಿರುತ್ತಾರೆ, ಮತ್ತು ಪ್ಯಾನಿಕ್ ಅಟ್ಯಾಕ್ ಆಗುತ್ತಾರೆ. ಹಾಗಾಗಿ ಪತ್ನಿಯ ಜೊತೆ ಇರಲು ಅನುಮತಿ ನೀಡಬೇಕೆಂದು ರಣ್ವೀರ್ ಸಿಂಗ್ ಕೇಳಿಕೊಂಡಿದ್ದಾರಂತೆ. ತನ್ನ ಮನವಿಯಲ್ಲಿ ರಣ್ವೀರ್ ನಾನು 'ಕಾನೂನು ಪಾಲಿಸುವ ಪ್ರಜೆ' ಎನ್ನುವ ಸಾಲುಗಳನ್ನು ಸೇರಿಸಿದ್ದಾರೆ. ಆದರೆ ರಣ್ವೀರ್ ಸಿಂಗ್ ಅರ್ಜಿಯ ಬಗ್ಗೆ ಎನ್ ಸಿ ಬಿ ಅಧಿಕಾರಿಗಳು ಯಾವುದೆ ನಿರ್ಧಾರ ತೆಗೆದುಕೊಂಡಿಲ್ಲ ಎಂದು ಹೇಳಲಾಗುತ್ತಿದೆ.

  ಡ್ರಗ್ಸ್ ದಂಧೆಯಲ್ಲಿ ಹೆಸರು ಕೇಳಿಬರುತ್ತಿದ್ದಂತೆ ಇನ್ಸ್ಟಾಗ್ರಾಮ್ ಕಾಮೆಂಟ್ಸ್ ಲಿಮಿಟ್ ಮಾಡಿದ ಮಹೇಶ್ ಬಾಬು ಪತ್ನಿಡ್ರಗ್ಸ್ ದಂಧೆಯಲ್ಲಿ ಹೆಸರು ಕೇಳಿಬರುತ್ತಿದ್ದಂತೆ ಇನ್ಸ್ಟಾಗ್ರಾಮ್ ಕಾಮೆಂಟ್ಸ್ ಲಿಮಿಟ್ ಮಾಡಿದ ಮಹೇಶ್ ಬಾಬು ಪತ್ನಿ

  ದೀಪಿಕಾ ಡ್ರಗ್ಸ್ ಚಾಟ್

  ದೀಪಿಕಾ ಡ್ರಗ್ಸ್ ಚಾಟ್

  ನಟಿ ದೀಪಿಕಾ ಪಡುಕೋಣೆ ಡ್ರಗ್ಸ್ ಗೆ ಬೇಡಿಕೆ ಇಟ್ಟು ಚಾಟ್ ಮಾಡಿರುವುದು ವೈರಲ್ ಆಗಿದೆ. ದೀಪಿಕಾ ವಾಟ್ಸಪ್ ಚಾಟ್ ಆಧರಿಸಿ ನೋಟಿಸ್ ನೀಡಲಿದೆ. ಚಾಟ್ ನಲ್ಲಿ ದೀಪಿಕಾ ಟ್ಯಾಲೆಂಟ್ ಮ್ಯಾನೇಜರ್ ಕರೀಷ್ಮಾ ಬಳಿ, 'ನಿನ್ನ ಬಳಿ ಮಾಲ್ ಇದೆಯಾ?' ಎಂದು ಕೇಳಿದ್ದಾರೆ. ಇದಕ್ಕೆ ಉತ್ತರಿಸಿದ ಕರಿಷ್ಮಾ, 'ಇದೆ ಆದರೆ ಮನೆಯಲ್ಲಿದೆ, ನಾನು ಬಾಂದ್ರಾದಲ್ಲಿ ಇದ್ದೀನಿ'. 'ನಿಮಗೆ ಬೇಕಾದರೆ ಅಮಿತ್ ಬಳಿ ಕೇಳುತ್ತೇನೆ.' ಎಂದಿದ್ದಾರೆ. ಇದಕ್ಕೆ 'ದೀಪಿಕಾ ಸರಿ ದಯವಿಟ್ಟು ಕೇಳಿ' ಎಂದಿದ್ದಾರೆ. ದೀಪಿಕಾ, 'ಹ್ಯಶ್ ಹಾ?' ಎಂದು ಕೇಳಿದ್ದಾರೆ. 'ಇಲ್ಲ ವೀಡ್ ಇದೆ' ಎಂದು ಕರೀಷ್ಮಾ ಪ್ರತಿಕ್ರಿಯಿಸಿದ್ದಾರೆ. ಈ ಚಾಟ್ ಈಗ ವೈರಲ್ ಆಗಿದೆ.

  ಬೆಂಗಳೂರಿನ ಅನ್ನ ತಿಂದು ಬೈಯ್ಯೋರನ್ನ ಕಂಡ್ರೆ ನಂಗೆ ಉರಿಯುತ್ತೆ | Rishab Shetty | Filmibeat Kannada
  ಎನ್ ಸಿ ಬಿ ವಿಚಾರಣೆ ಎದುರಿಸುವ ನಟಿಯರು

  ಎನ್ ಸಿ ಬಿ ವಿಚಾರಣೆ ಎದುರಿಸುವ ನಟಿಯರು

  ಸೆಪ್ಟಂಬರ್ 26ರಂದು ದೀಪಿಕಾ ಪಡುಕೋಣೆ ಎನ್ ಸಿ ಬಿ ಮುಂದೆ ವಿಚಾರಣೆಗೆ ಹಾಜರಾಗುತ್ತಿದ್ದಾರೆ. ದೀಪಿಕಾ ಜೊತೆ ಸಾರಾ ಅಲಿ ಖಾನ್, ಶ್ರದ್ಧಾ ಕಪೂರ್ ಸಹ ಎನ್ ಸಿ ಬಿ ವಿಚಾರಣೆ ಎದುರಿಸಲಿದ್ದಾರೆ. ಇಂದು ಶುಕ್ರವಾರ ದೀಪಿಕಾ ಪಡುಕೋಣೆ ವ್ಯವಸ್ಥಾಪಕಿ ಕರೀಷ್ಮಾ ಪ್ರಕಾಶ್, ಸುಶಾಂತ್ ಸಿಂಗ್ ಮಾಜಿ ವ್ಯವಸ್ಥಾಪಕಿ ಶ್ರುತಿ ಮೋದಿ ಎನ್ ಸಿ ಬಿ ಮುಂದೆ ಹಾಜರಾಗುತ್ತಿದ್ದಾರೆ.

  English summary
  Ranveer Singh Asks NCB To Let Him Join Deepika Padukone During Probe.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X