»   » ಪಾಕಿಸ್ತಾನದಲ್ಲಿ ಏಕ್ ಥಾ ಟೈಗರ್ ಚಿತ್ರಕ್ಕೆ ನಿಷೇಧ

ಪಾಕಿಸ್ತಾನದಲ್ಲಿ ಏಕ್ ಥಾ ಟೈಗರ್ ಚಿತ್ರಕ್ಕೆ ನಿಷೇಧ

Posted By:
Subscribe to Filmibeat Kannada
"ಮಾಷಾ ಅಲ್ಲಾ..." ಎಂದು ವಾಜಿದ್ ಆಲಿ ಹಾಗೂ ಶ್ರೇಯಾ ಘೋಶಾಲ್ ಅವರ ಕಂಠಸಿರಿಯಲ್ಲಿ ಹಾಡು ಹೊರಹೊಮ್ಮುತ್ತಿದ್ದಂತೆ ಚಿತ್ರಮಂದಿರದಲ್ಲಿ ಜನ ಎದ್ದು ಕುಣಿಯ ತೊಡಗುವ ದೃಶ್ಯ ಎಲ್ಲೆಡೆ ಕಂಡು ಬರುತ್ತಿದೆ. ಪಾಕಿಸ್ತಾನದಲ್ಲೂ ಈ ಹಾಡು ಸಕತ್ ಹಿಟ್ ಆಗಿದೆ. ಬಾಲಿವುಡ್ ನ ಜನಪ್ರಿಯ ನಟ ಸಲ್ಮಾನ್ ಖಾನ್ ಅವರ 'ಏಕ್ ಥಾ ಟೈಗರ್' ನೋಡುವ ಭಾಗ್ಯ ಪಾಕಿಸ್ತಾನದ ಅಭಿಮಾನಿಗಳಿಗೆ ಲಭ್ಯವಾಗುತ್ತಿಲ್ಲ.

ಸಲ್ಮಾನ್ ಖಾನ್ ಹಾಗೂ ಕತ್ರೀನಾ ಕೈಫ್ ಅಭಿನಯದ ಭರ್ಜರಿ ಆರಂಭ ಪಡೆದಿರುವ ಚಿತ್ರಕ್ಕೆ ಪಾಕಿಸ್ತಾನದ ಸೆನ್ಸಾರ್ ಮಂಡಳಿ ಕೊಕ್ಕೆ ಹಾಕಿದೆ. ಏಕ್ ಥಾ ಟೈಗರ್ ಚಿತ್ರವನ್ನು ಪಾಕಿಸ್ತಾನದಲ್ಲಿ ಪ್ರದರ್ಶಿಸಲು ಅನುಮತಿ ನೀಡಲು ಸೆನ್ಸಾರ್ ನಿರಾಕರಿಸಿದ್ದು, ಅಧಿಕೃತ ಹೇಳಿಕೆ ಹೊರ ಬೀಳಬೇಕಿದೆ.

ಆಂಗ್ಲ ಮಾಧ್ಯಮವೊಂದರ ಜೊತೆ ಮಾತನಾಡಿದ ಪಾಕಿಸ್ತಾನಿ ಚಿತ್ರವಿತರಕ ತಮ್ಮ ಗೋಳು ತೋಡಿಕೊಂಡಿದ್ದಾನೆ. ಭಾರತದಲ್ಲಿ ಬಿಡುಗಡೆಗೊಂಡ ಮೊದಲ ದಿನವೇ 30ಕ್ಕೂ ಅಧಿಕ ಕೋಟಿ ಗಳಿಸಿ ಮುನ್ನುಗ್ಗುತ್ತಿರುವುದು ಕಂಡು ಭಾರಿ ಖುಷಿಯಾಯಿತು. ಪಾಕಿಸ್ತಾನದಲ್ಲೂ ಸಲ್ಮಾನ್ ಖಾನ್ ಗೆ ಅಸಂಖ್ಯಾತ ಅಭಿಮಾನಿಗಳಿದ್ದು, ಅವರ ಬೇಡಿಕೆ, ಕಾತುರಕ್ಕೆ ಮಣಿದು ಚಿತ್ರವನ್ನು ಇಲ್ಲಿ ಬೇಗ ರಿಲೀಸ್ ಮಾಡೋಕೆ ಸಿದ್ಧವಾಗಿದ್ದೆವು. ಆದರೆ, ಸೆನ್ಸಾರ್ ಮಂಡಳಿ ಯಾಕೋ ರಾಂಗ್ ಸಿಗ್ನಲ್ ನೀಡಿದ್ದಾರೆ ಎಂದಿದ್ದಾನೆ.

ಈದ್ ಮಿಲಾದ್ ದಿನ 35 ಪ್ರಿಂಟ್ ಗಳ ಮೂಲಕ ಚಿತ್ರ ಬಿಡುಗಡೆ ಮಾಡಲು ಸಿದ್ಧವಾಗಿದ್ದ ವಿತರಕರು ಹಾಗೂ ಪ್ರದರ್ಶಕರು ಈಗ ತಲೆ ಮೇಲೆ ಕೈಹೊತ್ತುಕೊಂಡು ಕೂತಿದ್ದಾರೆ.

ಚಿತ್ರ ನಿರ್ಮಾಣಗಾರ ಕಬೀರ್ ಖಾನ್ ಅವರು ಈ ಸುದ್ದಿಗೆ ಪ್ರತಿಕ್ರಿಯಿಸುತ್ತಾ, "ಎರಡು ದೇಶಗಳ ನಡುವೆ ಶಾಂತಿ, ಸಹಬಾಳ್ವೆ ಸಾರುವ ಚಿತ್ರಕ್ಕೆ ಈ ರೀತಿ ಮರ್ಯಾದೆ ಸಿಗುತ್ತಿರುವುದು ದುಃಖಕರ. ಮನರಂಜನೆಯಲ್ಲೂ ರಾಜಕೀಯ ಬೆರೆಸುವುದು ಎಷ್ಟು ಸರಿ" ಎಂದು ಪ್ರಶ್ನಿಸಿದ್ದಾರೆ.

ಸದ್ಯದ ಟ್ರೆಂಡ್ ಪ್ರಕಾರ ಪಾಕಿಸ್ತಾನದಲ್ಲಿ ಕನಿಷ್ಠವೆಂದರೂ ಆರಂಭಿಕ ಆದಾಯ ರೂಪದಲ್ಲಿ 10 ಕೋಟಿ ರು. ಆದರೂ ಆದಾಯ ಬರಲಿದೆ. ಇದು ಕೇವಲ ದುಡ್ಡು ಗಳಿಕೆ, ಕಳೆದುಕೊಳ್ಳುವ ಪ್ರಶ್ನೆಯಲ್ಲ. ಎರಡು ದೇಶದ ಬಾಂಧವ್ಯಕ್ಕೆ ಈ ರೀತಿ ನಿರ್ಣಯಗಳು ಧಕ್ಕೆ ತರಲಿದೆ ಎಂದು ಕಬೀರ್ ಹೇಳಿದ್ದಾರೆ.

ದುಬೈ ಹಾಗೂ ಲಂಡನ್ ನಲ್ಲೂ ಭಾರತ ಹಾಗೂ ಪಾಕಿಸ್ತಾನದ ಜನ ಇದ್ದಾರೆ ಅಲ್ಲಿ ಯಾವುದೇ ತೊಂದರೆ ಇಲ್ಲದೆ ಚಿತ್ರ ರಿಲೀಸ್ ಆಗಿದ್ದು, ಒಳ್ಳೆ ಪ್ರತಿಕ್ರಿಯೆ ವ್ಯಕ್ತವಾಗಿದೆ ಎಂದರು.

ನಿಷೇಧ ಪಾಕಿಸ್ತಾನದ ಮೊದಲ ಪದ: ಕಳೆದ ಐದು ವರ್ಷಗಳಲ್ಲಿ ಸುಮಾರು ಅರ್ಧ ಡಜನ್ ಗೂ ಅಧಿಕ ಬಿಗ್ ಬಜೆಟ್ ಚಿತ್ರಗಳು ಪಾಕಿಸ್ತಾನದಲ್ಲಿ ನಿಷೇಧಕ್ಕೊಳಗಾಗಿದೆ. ಸೈಫ್ ಅಲಿ ಖಾನ್ ಅವರ ಏಜೆಂಟ್ ವಿನೋದ್ ಇತ್ತೀಚೆಗೆ ಬ್ಯಾನ್ ಆದ ಪ್ರಮುಖ ಚಿತ್ರವಾಗಿದೆ. ಪಾಕಿಸ್ತಾನದ ಗುಪ್ತಚರ ಏಜೆನ್ಸಿ ಐಎಸ್ ಐ ಬಗ್ಗೆ ಚಿತ್ರದಲ್ಲಿ ಉಲ್ಲೇಖಿಸಿದ್ದಕ್ಕೆ ಚಿತ್ರ ಬಿಡುಗಡೆಗೆ ನಿರ್ಬಂಧ ಹೇರಲಾಗಿತ್ತು.

ಮೂಲಗಳ ಪ್ರಕಾರ ಪಾಕಿಸ್ತಾನದ ಐಎಸ್ ಐ ಬಗ್ಗೆ ಉಲ್ಲೇಖವಿರುವ ಯಾವುದೇ ಭಾರತೀಯ ಚಿತ್ರಗಳನ್ನು ಪಾಕಿಸ್ತಾನದಲ್ಲಿ ಬಿಡುಗಡೆ ಮಾಡಲಾಗುವುದಿಲ್ಲ ಎಂದು ಸೆನ್ಸಾರ್ ಮಂಡಳಿ ಅಘೋಷಿತ ನಿರ್ಣಯ ಕೈಗೊಂಡಿದೆಯಂತೆ. ಸಲ್ಲೂ ಮಿಯಾ ಹಾಗೂ ಕೈಫ್ ತಳಕು ಬಳಕು ನೋಡಲು ಕಾತುರರಾಗಿರುವ ಪಾಕಿಸ್ತಾನಿ ಚಿತ್ರಪ್ರೇಮಿಗಳಿಗೆ ನಿರಾಶೆ ತಪ್ಪಿದ್ದಲ್ಲ.

English summary
The Pakistan censor board has banned Salman Khan’s latest flick ‘Ek Tha Tiger’. according to report a Pakistani distributor has told an English daily that the film cannot be released in Pakistan and there will be further discussion on it.
Please Wait while comments are loading...