For Quick Alerts
  ALLOW NOTIFICATIONS  
  For Daily Alerts

  ಜನಪ್ರಿಯ ಸೀರಿಯಲ್ 'ನಾಗಿನ್' ಸಿನಿಮಾ ಮಾಡಲು ಬಯಸಿದ್ದರು ಏಕ್ತಾ ಕಪೂರ್, ಆದರೆ...

  |

  'ನಾಗಿನ್' ಹಿಂದಿಯಲ್ಲಿ ಅತ್ಯಂತ ಜನಪ್ರಿಯ ಧಾರಾವಾಹಿಗಳಲ್ಲಿ ಒಂದು. ಜನರು ಮೆಚ್ಚಿಕೊಂಡಿರುವ ಕಾರಣದಿಂದಲೇ ಅದು ನಾಲ್ಕನೆಯ ಭಾಗವೂ ಯಶಸ್ವಿಯಾಗಿ ಪ್ರಸಾರವಾಗುತ್ತಿದೆ. ಆದರೆ ಈ ಧಾರಾವಾಹಿಯನ್ನು ಸಿನಿಮಾ ಮಾಡಬೇಕೆಂದು ನಿರ್ಮಾಪಕ ಏಕ್ತಾ ಕಪೂರ್ ನಿಶ್ಚಯಿಸಿದ್ದರು.

  ಇದು ಸಂಪೂರ್ಣ ಮಹಿಳಾ ಪ್ರಧಾನ ಕಥೆ. ಹೀಗಾಗಿ ಜನಪ್ರಿಯ ನಾಯಕಿಯೇ ಇದರ ಮುಖ್ಯ ಪಾತ್ರದಲ್ಲಿ ನಟಿಸಬೇಕು ಎನ್ನುವುದು ಏಕ್ತಾ ಆಶಯವಾಗಿತ್ತು. ಇದಕ್ಕಾಗಿ ಅವರು ಪ್ರಿಯಾಂಕಾ ಚೋಪ್ರಾ ಮತ್ತು ಕತ್ರಿನಾ ಕೈಫ್ ಅವರನ್ನು ಸಂಪರ್ಕಿಸಿದ್ದರಂತೆ.

  'ದರ್ಟಿ ಪಿಕ್ಚರ್' ಸಿನಿಮಾ ಬಳಿಕ ನಾನು ನಾಗಿನ್ ಅನ್ನು ಸಿನಿಮಾ ಮಾಡಲು ಬಯಸಿದ್ದೆ. ಇಬ್ಬರು ನಟಿಯರ ಬಳಿ ಈ ಸಂಗತಿಯನ್ನು ಚರ್ಚಿಸಲು ನಿರ್ಧರಿಸಿದ್ದೆ. ನನಗೆ ಇನ್ನೂ ನೆನಪಿದೆ. ಮೊದಲು ಕತ್ರಿನಾ ಬಳಿ ಹೋಗಿದ್ದೆ. 'ದರ್ಟಿ ಪಿಕ್ಚರ್ ಬಳಿಕ ನೀವು ಮತ್ತೊಂದು ಮೈಲುಗಲ್ಲು ಸಾಧಿಸುವಂತಹ ಸಿನಿಮಾ ಮಾಡಲು ಬಯಸಿದ್ದೀರಿ ಅಲ್ಲವೇ?' ಎಂದು ಕತ್ರಿನಾ ಕೇಳಿದ್ದರು.

  ಕತ್ರಿನಾ ಕೈಫ್ ಬಳಿ ಚರ್ಚೆ

  ಕತ್ರಿನಾ ಕೈಫ್ ಬಳಿ ಚರ್ಚೆ

  'ಆಗ ನಾನು, ಹೌದು ನಾನು ನಾಗಿನ್ ಅನ್ನು ಸಿನಿಮಾ ಮಾಡಲು ಬಯಸಿದ್ದೇನೆ' ಎಂದೆ. ಅದಕ್ಕೆ ಕತ್ರಿನಾ ನನ್ನ ಕಡೆಗೆ ನೋಡಿದರು. ಅದನ್ನು ಕಂಡು ನಾನು ಪ್ರತಿಯೊಂದನ್ನೂ ಬಹಳ ಚೆನ್ನಾಗಿ ವಿವರಿಸಿದೆ ಎಂದು ಭಾವಿಸಿದೆ. ಆಕೆ ಬಹಶಃ ನನ್ನ ಮ್ಯಾನೇಜರ್ ನಂಬರ್ ಬಯಸಿದ್ದಾರೆ ಎಂದುಕೊಂಡೆ. ನಿಜ, ಅದು ಜೋಕ್ ಅಷ್ಟೇ. ಆಕೆ ಅದನ್ನು ಗಂಭೀರವಾಗಿ ಪರಿಗಣಿಸಿರಲಿಲ್ಲ.

  ಈ ಕಾಲಘಟ್ಟಕ್ಕೆ ಅಲ್ಲ ಎಂದು ಕೈಫ್

  ಈ ಕಾಲಘಟ್ಟಕ್ಕೆ ಅಲ್ಲ ಎಂದು ಕೈಫ್

  'ನೀವು ಗಂಭೀರವಾಗಿ ಹೇಳುತ್ತಿದ್ದೀರಾ? ಈ ಕಾಲಘಟ್ಟದಲ್ಲಿ ನಾಗಿನ್ ಎನ್ನುವಂತಹ ಸಿನಿಮಾ ಮಾಡಲು ಹೊರಟಿದ್ದೀರಾ? ಅದನ್ನು ಜನರು ನೋಡುತ್ತಾರಾ?' ಎಂದು ಕತ್ರಿನಾ ಪ್ರಶ್ನಿಸಿದರು. ಬಳಿಕ ನಾನು ಪ್ರಿಯಾಂಕಾ ಚೋಪ್ರಾ ಬಳಿ ಹೋದೆ. ಅದು ಆಕೆ ವಿದೇಶಕ್ಕೆ ಹೊರಟಿದ್ದ ಸಮಯ ಎಂದು ನೆನಪಿಸಿಕೊಂಡಿದ್ದಾರೆ.

  ಜಾನಪದದ ವಿಶಾಲತೆ ಅವರಿಗೆ ಗೊತ್ತಿಲ್ಲ

  ಜಾನಪದದ ವಿಶಾಲತೆ ಅವರಿಗೆ ಗೊತ್ತಿಲ್ಲ

  'ನಾನು ಆಗ ಅದರ ಬಗ್ಗೆ ಕೇವಲ ಪ್ರಸ್ತಾಪವನ್ನಷ್ಟೇ ಮಾಡಿದೆ. ಅದರ ಬಗ್ಗೆ ಇನ್ನೂ ಸೂಕ್ತವಾದ ವಿವರಣೆ ನೀಡಬೇಕಿತ್ತು. ಭಾರತದಲ್ಲಿ ಜಾನಪದವು ಎಷ್ಟು ಆಳವಾಗಿದೆ ಎನ್ನುವುದು ಅವರಿಗೆ ತಿಳಿದಿರಲಿಲ್ಲ. ಪ್ರಿಯಾಂಕಾ ಸಿನಿಮಾಕ್ಕೆ ಒಪ್ಪಿಗೆ ಸೂಚಿಸಿದ್ದರು. ಕತ್ರಿನಾಗೆ ಜಾನಪದದ ತೀವ್ರತೆ ಗೊತ್ತಿರಲಿಲ್ಲ. ಆದರೆ ಈ ಇಬ್ಬರೂ ಮಹಿಳೆಯರು ಮಹಾನ್ ವ್ಯಕ್ತಿಗಳು. ಇವರಿಬ್ಬರನ್ನೂ ನಾನು ಮೆಚ್ಚಿಕೊಳ್ಳುತ್ತೇನೆ ಮತ್ತು ಪ್ರೀತಿಸುತ್ತೇನೆ. ನನ್ನ ವೃತ್ತಿ ಬದುಕಿನಲ್ಲಿ ಅವರಿಬ್ಬರ ಜತೆಗೆ ಕೆಲಸ ಮಾಡುತ್ತೇನೆ ಎಂಬ ಆಶಯ ಹೊಂದಿದ್ದೇನೆ' ಎಂದು ತಿಳಿಸಿದ್ದಾರೆ.

  ಇಬ್ಬರೂ ಜಾಣ ಮಹಿಳೆಯರು

  ಇಬ್ಬರೂ ಜಾಣ ಮಹಿಳೆಯರು

  ಪ್ರತಿಯೊಬ್ಬರೂ ದೊಡ್ಡ ಪುರುಷ ಸ್ಟಾರ್‌ಗಳ ಜತೆಗೆ ಕೆಲಸ ಮಾಡಲು ಬಯಸುತ್ತಾರೆ. ಆದರೆ ನಾನು ಪ್ರಿಯಾಂಕಾ ಮತ್ತು ಕತ್ರಿನಾ ಜತೆ ಕೆಲಸ ಮಾಡಲು ಇಷ್ಟಪಡುತ್ತೇನೆ. ಏಕೆಂದರೆ ಅವರಿಬ್ಬರೂ ಅಷ್ಟು ಜಾಣ ಮಹಿಳೆಯರು. ಕತ್ರಿನಾ ಇಲ್ಲಿ ಬಂದು ಹಿಂದಿಯನ್ನು ಚೆನ್ನಾಗಿ ಕಲಿತರು. ಸಿನಿಮೇತರ ಕುಟುಂಬದಿಂದ ಬಂದರೂ ಪ್ರಿಯಾಂಕಾ ತನ್ನತನ ಛಾಪಿಸಿದರು ಎಂದು ಏಕ್ತಾ ಕೊಂಡಾಡಿದ್ದಾರೆ.

  English summary
  Film maker Ekta Kapoor has revealed that she wanted to make Nagin movie and approached Priyanka Chopra and Katrina Kaif.
  Sunday, March 22, 2020, 17:41
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X