For Quick Alerts
  ALLOW NOTIFICATIONS  
  For Daily Alerts

  ಹಣ ಗೋಲ್‌ಮಾಲ್? 'ವಿಕ್ರಾಂತ ರೋಣ' ಬೆಡಗಿ ಜಾಕ್ವೆಲಿನ್ ಫರ್ನಾಂಡೀಸ್‌ಗೆ ವಿಚಾರಣೆ

  |

  ಇತ್ತೀಚೆಗಷ್ಟೆ ಕನ್ನಡದ 'ವಿಕ್ರಾಂತ್ ರೋಣ' ಸಿನಿಮಾಕ್ಕಾಗಿ ವಿಶೇಷ ಹಾಡಿನಲ್ಲಿ ನರ್ತಿಸಿ ಹೋಗಿರುವ ಬಾಲಿವುಡ್ ಬೆಡಗಿ ಜಾಕ್ವೆಲಿನ್ ಫರ್ನಾಂಡೀಸ್‌ಗೆ ಇಡಿ ಕಂಟಕ ಎದುರಾಗಿದೆ.

  ನಟಿ ಜಾಕ್ವೆಲಿನ್ ಫರ್ನಾಂಡೀಸ್ ಅನ್ನು ಇಡಿ (ಜಾರಿ ನಿರ್ದೇಶನಾಲಯ) ಅಧಿಕಾರಿಗಳು ದೆಹಲಿಯಲ್ಲಿ ಇಂದು ವಿಚಾರಣೆ ಮಾಡಿದ್ದಾರೆ. ಅಕ್ರಮ ಹಣ ವರ್ಗಾವಣೆ ವಿಷಯವಾಗಿ ಈ ವಿಚಾರಣೆ ನಡೆದಿದೆ ಎನ್ನಲಾಗುತ್ತಿದೆ.

  ಕಳೆದ ಐದು ಗಂಟೆಯಿಂದಲೂ ಜಾಕ್ವೆಲಿನ್ ಫರ್ನಾಂಡೀಸ್ ಅನ್ನು ಇಡಿ ಅಧಿಕಾರಿಗಳು ವಿಚಾರಣೆಗೆ ಒಳಪಡಿಸಿದ್ದಾರೆ. ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇಡಿ ಅಧಿಕಾರಿಗಳು ಜಾಕ್ವೆಲಿನ್ ವಿಚಾರಣೆ ನಡೆಸುತ್ತಿದ್ದಾರೆ ಎನ್ನಲಾಗುತ್ತಿದೆ. ಪ್ರಕರಣದ ಬಗ್ಗೆ ಹೆಚ್ಚಿನ ಮಾಹಿತಿ ಇನ್ನಷ್ಟೆ ಲಭ್ಯವಾಗಬೇಕಿದೆ.

  ಜಾಕ್ವೆಲಿನ್ ಫರ್ನಾಂಡೀಸ್‌ ಕೆಲವು ದಿನಗಳ ಹಿಂದಷ್ಟೆ ಸುದೀಪ್ ನಟನೆಯ ಕನ್ನಡ ಸಿನಿಮಾ 'ವಿಕ್ರಾಂತ್ ರೋಣ' ಸಿನಿಮಾದಲ್ಲಿ ವಿಶೇಷ ಹಾಡಿನಲ್ಲಿ ನರ್ತಿಸಿದ್ದರು. ಸಿನಿಮಾಕ್ಕಾಗಿ ಜಾಕ್ವೆಲಿನ್ ಬಂದ ಬಗ್ಗೆ ದೊಡ್ಡ ಪ್ರಚಾರ ನೀಡಲಾಗಿತ್ತು. ಮುಂಬೈನಲ್ಲಿ ಸಹ 'ವಿಕ್ರಾಂತ್ ರೋಣ' ಸಿನಿಮಾದ ದೊಡ್ಡ ಪೋಸ್ಟರ್‌ಗಳನ್ನು ಹಾಕಲಾಗಿದೆ.

  200 ಕೋಟಿ ಸುಲಿಗೆ ಪ್ರಕರಣದ ತನಿಖೆಯನ್ನು ಇಡಿಯು ಮಾಡುತ್ತಿದ್ದು ಇದಕ್ಕೆ ಸಂಬಂಧಿಸಿದಂತೆ ಜಾಕ್ವೆಲಿನ್ ಫರ್ನಾಂಡೀಸ್‌ರ ವಿಚಾರಣೆ ಮಾಡಲಾಗಿದೆ. ತಿಹಾರ್ ಜೈಲಿನಲ್ಲಿರುವ ಸುಕೇಶ್ ಚಂದ್ರಶೇಖರ್ ಎಂಬಾತ ಜೈಲಿನಲ್ಲಿದ್ದುಕೊಂಡೆ ಹಲವರಿಗೆ ಧಮ್ಕಿ ಹಾಕಿ, ವಂಚಿಸಿ 200 ಕೋಟಿಗೂ ಹೆಚ್ಚು ಹಣ ಗಳಿಸಿದ್ದ ಆತನ ಪ್ರೇಯಸಿ, ನಟಿ ಲೀನಾ ಪೌಲ್ ಅನ್ನು ಸಹ ಕೆಲ ದಿನಗಳ ಹಿಂದಷ್ಟೆ ಇಡಿ ವಿಚಾರಣೆ ಮಾಡಿತ್ತು.

  ಚೆನ್ನೈನ ಈಸ್ಟ್ ಕೋಸ್ಟ್ ರಸ್ತೆಯಲ್ಲಿರುವ ಸುಕೇಶ್‌ನ ಭಾರಿ ಐಶಾರಾಮಿ ಬಂಗ್ಲೆ ಮೇಲೆ ಇಡಿ ಅಧಿಕಾರಿಗಳು ದಾಳಿ ನಡೆಸಿದ್ದು ಮನೆಯಲ್ಲಿದ್ದ ಕೋಟ್ಯಂತರ ಬೆಲೆ ಬಾಳುವ ಚಿನ್ನ, 16 ಐಶಾರಾಮಿ ಕಾರುಗಳು, ಇನ್ನಿತರೆ ಐಶಾರಾಮಿ ವಸ್ತುಗಳು ಸೇರಿ ಇಡೀಯ ಬಂಗ್ಲೆಯನ್ನು ಸೀಜ್ ಮಾಡಿದ್ದಾರೆ. ಸುಕೇಶ್ ಚಂದ್ರಶೇಖರ್ ಅನ್ನು ದೆಹಲಿ ಪೊಲೀಸರು ನಾಲ್ಕು ವರ್ಷಗಳ ಹಿಂದೆಯೇ ಬಂಧಿಸಿ ತಿಹಾರ್ ಜೈಲಿಗೆ ಅಟ್ಟಿದ್ದರು. ತಮಿಳುನಾಡಿನ ಟಿಟಿವಿ ದಿನಕರನ್​ಗೆ ಎಐಎಡಿಎಂಕೆ ಪಕ್ಷದ ಚುನಾವಣಾ ಚಿಹ್ನೆಯಾದ ಎರಡೆಲೆ ಚಿಹ್ನೆಯನ್ನು ನಿಮ್ಮ ಬಣಕ್ಕೆ ಕೊಡಿಸುತ್ತೇನೆ. ಕೇಂದ್ರ ಚುನಾವಣಾ ಆಯೋಗದ ಉನ್ನತ ಅಧಿಕಾರಿಗಳ ಸಂಪರ್ಕವಿದೆ. ಅವರ ಮೂಲಕ ನಿಮ್ಮ ರಾಜಕೀಯ ಪಕ್ಷದ ಬಣಕ್ಕೆ ಎರಡೆಲೆ ಚಿಹ್ನೆ ಸಿಗುವಂತೆ ಮಾಡುತ್ತೇನೆ. ಇದಕ್ಕಾಗಿ ನನಗೆ ₹50 ಕೋಟಿ ನೀಡಬೇಕೆಂದು ಟಿಟಿವಿ ದಿನಕರನ್​ಗೆ ಬೇಡಿಕೆ ಇಟ್ಟಿದ್ದ. ಈತನ ಮಾತು ನಂಬಿ ದಿನಕರನ್ ಸ್ಪಲ್ಪ ಹಣ ಕೂಡ ಕೊಟ್ಟಿದ್ದರು. ಬಳಿಕ ಚುನಾವಣಾ ಚಿಹ್ನೆ ಸಿಗದೇ ಇದ್ದಾಗ ಮೋಸ ಹೋಗಿರುವುದು ಗೊತ್ತಾಗಿ ದೆಹಲಿ ಪೊಲೀಸರಿಗೆ ದೂರು ನೀಡಿದ್ದರು. ದೆಹಲಿಯ ಹಯಾತ್ ಹೊಟೆಲ್​ನ ಕೊಠಡಿಯ ಮೇಲೆ ದಾಳಿ ನಡೆಸಿದ್ದರು. ಸುಕೇಶ್ ಚಂದ್ರಶೇಖರ್ ತಂಗಿದ್ದ ರೂಮಿನಲ್ಲಿ ಬರೋಬ್ಬರಿ ₹1.3 ಕೋಟಿ ಪತ್ತೆಯಾಗಿತ್ತು. ಇಷ್ಟು ಹಣವನ್ನು ದೆಹಲಿಯ ಕ್ರೈಂ ಬ್ರಾಂಚ್ ಪೊಲೀಸರು ಜಪ್ತಿ ಮಾಡಿದ್ದರು. ಬಳಿಕ ಸುಕೇಶ್ ಚಂದ್ರಶೇಖರ್​ನನ್ನು ಬಂಧಿಸಿದ್ದರು.

  ಜಾಕ್ವೆಲಿನ್ ತಮ್ಮ ಒಂದು ಸಿನಿಮಾಕ್ಕೆ ಸುಮಾರು ನಾಲ್ಕು ಕೋಟಿ ಸಂಭಾವನೆ ಪಡೆಯುತ್ತಾರೆ. ಜಾಕ್ವೆಲಿನ್‌ರ ಒಟ್ಟು ಆದಾಯ 100 ಕೋಟಿಗೂ ಹೆಚ್ಚಿದೆ ಎನ್ನಲಾಗಿದೆ. ಜಾಕ್ವೆಲಿನ್, ಸಲ್ಮಾನ್ ಖಾನ್‌ರಿಗೂ ಆಪ್ತರಾಗಿದ್ದು, ಶ್ರೀಲಂಕಾ ಮೂಲದವರಾಗಿದ್ದಾರೆ. ಜಾಕ್ವೆಲಿನ್‌ರ ಪೋಷಕರು, ಸಹೋದರ, ಸಹೋದರಿಯರು ಬೇರೆ ಬೇರೆ ದೇಶಗಳಲ್ಲಿ ವಾಸವಾಗಿದ್ದಾರೆ. ಇವರೊಟ್ಟಿಗೆ ಹಣದ ವಿನಿಮಯ ಜಾಕ್ವೆಲಿನ್ ಮಾಡಿರುವ ಸಾಧ್ಯತೆ ಇದ್ದು ಇದೇ ಕಾರಣಕ್ಕ ಇಡಿ ವಿಚಾರಣೆ ನಡೆಸಿದ್ದಾರೆಯೇ ಅಥವಾ ಬೇರೊಬ್ಬರ ಕಾಳಧನ ಜಾಕ್ವೆಲಿನ್ ಖಾತೆಗೇನಾದರೂ ಹರಿದು ಬಂದು ಆ ಕಾರಣಕ್ಕೆ ವಿಚಾರಣೆ ಎದುರಿಸುತ್ತಿದ್ದಾರೆಯೋ ಕಾದು ನೋಡಬೇಕಿದೆ.

  ಸಿನಿಮಾಗಳ ವಿಷಯ ನೋಡುವುದಾದರೆ ನಟಿ ಜಾಕ್ವೆಲಿನ್ ಫರ್ನಾಂಡೀಸ್, ಕನ್ನಡದ 'ವಿಕ್ರಾಂತ್ ರೋಣ', ಹಿಂದಿಯ ಭೂತ್ ಪೊಲೀಸ್ ಬಿಡುಗಡೆಗೆ ತಯಾರಾಗಿವೆ. ಜಾನ್ ಅಬ್ರಾಹಾಂ ಜೊತೆ 'ಅಟ್ಯಾಕ್', ಸಲ್ಮಾನ್ ಖಾನ್ ಜೊತೆಗೆ 'ಡ್ಯಾನ್ಸಿಂಗ್ ಡ್ಯಾಡ್' ಸಿನಿಮಾದಲ್ಲಿಯೂ ಜಾಕ್ವೆಲಿನ್ ನಟಿಸುತ್ತಿದ್ದಾರೆ

  English summary
  Enforcement Directorate Interrogate actress Jacqueline Fernandez in Delhi regarding money laundring case.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X