»   » ಆಗ ನನಗಿನ್ನೂ ವಯಸ್ಸು 16: ಪ್ರಿಯಾಂಕ ಬಿಚ್ಚಿಟ್ಟ ಅಮೆರಿಕದ ರಹಸ್ಯ

ಆಗ ನನಗಿನ್ನೂ ವಯಸ್ಸು 16: ಪ್ರಿಯಾಂಕ ಬಿಚ್ಚಿಟ್ಟ ಅಮೆರಿಕದ ರಹಸ್ಯ

Posted By:
Subscribe to Filmibeat Kannada

ಕೆಲವೊಂದು ಘಟನೆಗಳು ಹಾಗೆಯೇ, ಎಷ್ಟೇ ಪ್ರಯತ್ನ ಪಟ್ಟರೂ, ಎಷ್ಟೇ ದಿನಗಳಾದರೂ ಮನಸ್ಸಿನಿಂದ ಮಾಸಿ ಹೋಗುವುದಿಲ್ಲ.

ಬಾಲಿವುಡ್ ಚಿತ್ರೋದ್ಯಮದ ಖ್ಯಾತ ನಟಿ ಪ್ರಿಯಾಂಕ ಚೋಪ್ರ ತನ್ನ ಹದಿನಾರನೇ ವಯಸ್ಸಿನಲ್ಲಿ ನಡೆದ ಕಹಿ ಘಟನೆಯನ್ನು ಮಾಧ್ಯಮದವರ ಮುಂದೆ ಬಿಚ್ಚಿಟ್ಟಿದ್ದಾರೆ.

ಅಮೆರಿಕಾದಲ್ಲಿ ಉನ್ನತ ಅಧ್ಯಯನಕ್ಕೆಂದು ಹೋಗಿದ್ದಾಗ, ಅಲ್ಲಿನ ಜನ ಮತ್ತು ಸಹಪಾಠಿಗಳು ತನ್ನ ಜೊತೆ ನಡೆದುಕೊಂಡ ರೀತಿಯನ್ನು ನಾನು ಜೀವನದಲ್ಲಿ ಮರೆಯಲು ಸಾಧ್ಯವಿಲ್ಲ ಎಂದು ಪ್ರಿಯಾಂಕ ಹೇಳಿದ್ದಾರೆ.

ನನ್ನ ಹದಿನಾರನೇ ವಯಸ್ಸಿನಲ್ಲಿ ಮನೆಯವರನ್ನು ಒಪ್ಪಿಸಿ ಅಮೆರಿಕಾಕ್ಕೆ ತೆರಳಿದ್ದೆ. ಅಲ್ಲಿ ಚೆನ್ನಾಗಿ ಓದಿ ಜೊತೆಗೆ ಖುಷಿಯಾಗಿ ಇರಬಹುದೆಂದು ಕನಸು ಕಟ್ಟಿಕೊಂಡು ಹೋಗಿದ್ದೆ. ಆದರೆ ಅಲ್ಲಿ ನಡೆದದ್ದೇ ಬೇರೆ ಎಂದು ಪ್ರಿಯಾಂಕ ಅಂದಿನ ಘಟನೆಯನ್ನು ಬೇಸರದಿಂದ ಮೆಲುಕು ಹಾಕಿಕೊಂಡಿದ್ದಾರೆ.

ಅಮೆರಿಕಾದಲ್ಲಿ ನಡೆದ ಘಟನೆಯನ್ನು ಪ್ರಿಯಾಂಕ ವಿವರಿಸಿದ್ದು, ಸ್ಲೈಡಿನಲ್ಲಿ..

ಅಲ್ಲಿನವರಿಗೆ ಭಾರತೀಯರನ್ನು ಕಂಡರೆ ಅಲರ್ಜಿ

ಅಮೆರಿಕಾ ಸಹಿತ ಯುರೋಪ್ ರಾಷ್ಟ್ರದವರಿಗೆ ಭಾರತೀಯರು ಎಂದರೆ ಅಲರ್ಜಿ. ಭಾರತೀಯರನ್ನು ಕೇವಲವಾಗಿ ನೋಡುತ್ತಿದ್ದರು. ಇದರ ಅನುಭವ ಅಮೆರಿಕಾದಲ್ಲಿದ ಮೊದಲ ವಾರದಲ್ಲೇ ನನಗಾಯಿತು.

ಬ್ರೌನಿ ಅನ್ನುತ್ತಿದ್ದರು

ಪರಿಚಯವಾದ ಮೊದಲಲ್ಲೇ ನನ್ನನ್ನು ಬ್ರೌನಿ ಎಂದು ಸಂಭೋದಿಸಲಾರಂಭಿಸಿದರು. ಆ ನಂತರ ನನಗೆ ತಿಳಿಯಿತು ಭಾರತೀಯರನ್ನು, ಅಮೆರಿಕನ್ನರು ಹೀಗೆ ಕರೆಯುವುದೆಂದು ಎಂದು ಪ್ರಿಯಾಂಕ ನೋವು ತೋಡಿಕೊಂಡಿದ್ದಾರೆ.

ಭಾರತಕ್ಕೆ ವಾಪಸ್ ಬರಬೇಕಾಯಿತು

ಇಂಡಿಯಾದಿಂದ ನೀನು ಇಲ್ಲಿಗೆ ಬಂದಿದ್ದೀಯಾ, ನಿನ್ನ ದೇಶಕ್ಕೆ ನೀನು ವಾಪಸ್ ಹೋಗು ಎಂದು ಕೀಟಲೆ ಕೊಡಲಾರಂಭಿಸಿದರು. ಅವರು ಕೀಟಲೆ ಎಷ್ಟರ ಮಟ್ಟಿಗೆ ಇತ್ತೆಂದರೆ ನಾನು ಓದನ್ನು ಅರ್ಧದಲ್ಲೇ ನಿಲ್ಲಿಸಿ ನನ್ನ ದೇಶಕ್ಕೆ ಹಿಂದಿರುಗ ಬೇಕಾಯಿತು ಎಂದು ಪ್ರಿಯಾಂಕ ಹೇಳಿದ್ದಾರೆ. ಎಲ್ಲಿಂದ ಬಂದ್ದಿದ್ದಿಯೋ ಅಲ್ಲಿಗೆ ಹೊರಟು ಹೋಗು ಎಂದು ನೋಯಿಸಲು ಆರಂಭ ಮಾಡಿದರು. ಅವರ ಕಾಟ ತಾಳಲಾಗದೆ ಓದನ್ನು ಅರ್ಧಕ್ಕೆ ನಿಲ್ಲಿಸಿ ಭಾರತಕ್ಕೆ ಬಂದುಬಿಟ್ಟೆ ಎಂದು ಹೇಳಿದ್ದಾರೆ.

ಈಗ ನಮ್ಮನ್ನು ಪ್ರಶಂಸೆ ಮಾಡುತ್ತಾರೆ

ಆಗಿನ ಕಾಲವೇ ಬೇರೆ, ಈಗಿನ ಕಾಲವೇ ಬೇರೆ. ಈಗ ಭಾರತೀಯರು ಅಮೆರಿಕಾದಲ್ಲಿ ಉನ್ನತ ಸಾಧನೆ ಮಾಡಿದ್ದಾರೆ. ಅಂದು ಅವಮಾನ ಮಾಡಿದ ದೇಶ ನನಗೆ ಅಲ್ಲಿಗೆ ಬಂದು ಪರ್ಫಾಮ್ ಮಾಡಲು ಹೇಳುತ್ತಿದೆ - ಪ್ರಿಯಾಂಕ ಚೋಪ್ರ.

ಅಮೆರಿಕಾದ ರಿಯಾಲಿಟಿ ಶೋ

ಈಗ ' ಕ್ವಾಂಟಿಕೋ' ಹೆಸರಿನ ಅಮೆರಿಕಾದ ರಿಯಾಲಿಟಿ ಶೋನಲ್ಲಿ ಒಂದು ಪಾತ್ರದಲ್ಲಿ ಕಾಣಿಸಿಕೊಂಡಿದ್ದೇನೆ. ಈ ಶೋನಲ್ಲಿ ನಾನು ಅರ್ಧ ಅಮೆರಿಕ ಮತ್ತು ಅರ್ಧ ಭಾರತೀಯಳ ಪಾತ್ರದಲ್ಲಿ ಕಾಣಿಸಿಕೊಂಡಿದ್ದೇನೆ.

English summary
I faced lot of racism in American school, quit school midway: Bollywood actress Priyanka Chopra recalls those days.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada