For Quick Alerts
  ALLOW NOTIFICATIONS  
  For Daily Alerts

  Fact Check: ಪಾಕಿಸ್ತಾನ ಧ್ವಜ ತಬ್ಬಿಕೊಂಡ ರಾಖಿ ಸಾವಂತ್, ಸತ್ಯಾಂಶವೇನು?

  |

  ರಾಖಿ ಸಾವಂತ್ ವಿವಾದಗಳಿಗೇ ಖ್ಯಾತವಾಗಿರುವ ನಟಿ. ಸಾಮಾನ್ಯವಾಗಿ ಅವರೇ ವಿವಾದಗಳನ್ನು ಹುಡುಕಿಕೊಂಡು ಹೋಗುತ್ತಾರೆ. ಆದರೆ ಈ ಬಾರಿ ವಿವಾದವೇ ಅವರನ್ನು ಹುಡುಕಿಕೊಂಡು ಬಂದಿದೆ.

  ನಟಿ ರಾಖಿ ಸಾವಂತ್, ಪಾಕಿಸ್ತಾನದ ರಾಷ್ಟ್ರಧ್ವಜವನ್ನು ತಬ್ಬಿಕೊಂಡಿರುವ ಚಿತ್ರ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.

  ಭಾರತೀಯಳಾಗಿ ಪಾಕಿಸ್ತಾನದ ಮೇಲೆ ರಾಖಿ ಪ್ರೇಮ ವ್ಯಕ್ತಪಡಿಸಿದ್ದಾರೆ ಎಂಬ ಒಕ್ಕಣೆಯೊಂದಿಗೆ ಚಿತ್ರ ಹರಿದಾಡುತ್ತಿದೆ. ಚಿತ್ರದಿಂದಾಗಿ ಸಾಕಷ್ಟು ಬೈಗುಳಗಳೂ ರಾಖಿಗೆ ಪ್ರಾಪ್ತಿಯಾಗುತ್ತಿದೆ.

  ರಾಖಿ ಸಾವಂತ್, ಪಾಕ್ ಪ್ರೇಮದಿಂದ ಧ್ವಜ ತಬ್ಬಿಕೊಂಡಿಲ್ಲ

  ರಾಖಿ ಸಾವಂತ್, ಪಾಕ್ ಪ್ರೇಮದಿಂದ ಧ್ವಜ ತಬ್ಬಿಕೊಂಡಿಲ್ಲ

  ರಾಖಿ ಸಾವಂತ್ ಪಾಕ್ ಧ್ವಜವನ್ನು ತಬ್ಬಿಕೊಂಡಿರುವ ಚಿತ್ರ ನಿಜವೇ ಆದರೂ, ಉದ್ದೇಶ 'ಪಾಕ್ ಪ್ರೇಮವಲ್ಲ'. ಚಿತ್ರವನ್ನು ತಪ್ಪು ಮಾಹಿತಿಯೊಂದಿಗೆ ಹಂಚಿಕೊಳ್ಳಲಾಗಿದೆ.

  ಸಿನಿಮಾ ಒಂದರ ಶೂಟಿಂಗ್‌ ನಲ್ಲಿ ತೆಗೆದಿರುವ ಚಿತ್ರ

  ಸಿನಿಮಾ ಒಂದರ ಶೂಟಿಂಗ್‌ ನಲ್ಲಿ ತೆಗೆದಿರುವ ಚಿತ್ರ

  ರಾಖಿ ಸಾವಂತ್, ಪಾಕ್ ಧ್ವಜವನ್ನು ತಬ್ಬಿಕೊಂಡಿರುವ ಚಿತ್ರ ಹೋದ ವರ್ಷದ್ದು. ರಾಖಿ, ಪಾಕ್ ಪ್ರೀತಿಯಿಂದ ಧ್ವಜವನ್ನು ತಬ್ಬಿಕೊಂಡಿಲ್ಲ. ಬದಲಿಗೆ ಸಿನಿಮಾ ಒಂದರ ದೃಶ್ಯಕ್ಕೆ ಅವಶ್ಯಕವಾಗಿದ್ದ ಕಾರಣ ರಾಖಿ, ಪಾಕಿಸ್ತಾನ ಧ್ವಜವನ್ನು ತಬ್ಬಿಕೊಂಡಿದ್ದಾರೆ.

  ಧಾರಾ 370 ಸಿನಿಮಾದ ದೃಶ್ಯ

  ಧಾರಾ 370 ಸಿನಿಮಾದ ದೃಶ್ಯ

  ಕಳೆದ ವರ್ಷ ರಾಖಿ ಸಾವಂತ್, 'ಧಾರಾ 370' ಎಂಬ ಸಿನಿಮಾದಲ್ಲಿ ನಟಿಸಿದ್ದರು. ಸಿನಿಮಾದಲ್ಲಿ ಪಾಕಿಸ್ತಾನಿ ಯುವತಿಯ ಪಾತ್ರ ನಿರ್ವಹಿಸಿದ್ದರು ರಾಖಿ. ಆ ಸಿನಿಮಾದ ದೃಶ್ಯವೊಂದಕ್ಕಾಗಿ ಪಾಕಿಸ್ತಾನದ ಧ್ವಜವನ್ನು ತಬ್ಬಿಕೊಂಡಿದ್ದರು ರಾಖಿ.

  RCB ಅಭಿಮಾನಿಗಳ ಕ್ರೇಜ್ ಹೆಚ್ಚಿಸಿದ Duniya Vijay | Filmibeat Kannada
  ಟ್ವಿಟ್ಟರ್, ಇನ್‌ಸ್ಟಾಗ್ರಾಂನಲ್ಲಿ ಸ್ಪಷ್ಟನೆ ನೀಡಿದ್ದ ರಾಖಿ

  ಟ್ವಿಟ್ಟರ್, ಇನ್‌ಸ್ಟಾಗ್ರಾಂನಲ್ಲಿ ಸ್ಪಷ್ಟನೆ ನೀಡಿದ್ದ ರಾಖಿ

  ಈ ಬಗ್ಗೆ ಟ್ವಿಟ್ಟರ್, ಇನ್‌ಸ್ಟಾಗ್ರಾಂ ನಲ್ಲೂ ರಾಖಿ ಸಾವಂತ್ ಮಾಹಿತಿ ನೀಡಿದ್ದರು. ಅದಾಗ್ಯೂ ಆ ಚಿತ್ರ ಈಗಲೂ ತಪ್ಪು ಮಾಹಿತಿಯೊಂದಿಗೆ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೆ ಆಗುತ್ತಿದೆ. ತಪ್ಪು ಮಾಹಿತಿಯೊಂದಿಗೆ ಚಿತ್ರ ನೋಡಿದ ಹಲವರು ರಾಖಿಯನ್ನು ಪಾಕಿಸ್ತಾನಕ್ಕೆ ಹೋಗುವಂತೆ ಸೂಚಿಸಿದ್ದಾರೆ.

  English summary
  Rakhi Sawanth not embracing Pakistan flag intentionally. She do it for a movie called Dhara 370.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X