For Quick Alerts
  ALLOW NOTIFICATIONS  
  For Daily Alerts

  ಒಡಿಯಾ ಭಾಷೆಯ ಖ್ಯಾತ ಸಿನಿಮಾ ನಿರ್ದೇಶಕ ರಾಜು ಮಿಶ್ರಾ ನಿಧನ

  |

  ಒಡಿಯಾ ಭಾಷೆಯ ಖ್ಯಾತ ಸಿನಿಮಾ ನಿರ್ದೇಶಕ ರಾಜು ಮಿಶ್ರಾ ಇಂದು (ನವೆಂಬರ್ 02) ನಿಧನಹೊಂದಿದ್ದಾರೆ. ಅವರಿಗೆ 72 ವರ್ಷ ವಯಸ್ಸಾಗಿತ್ತು.

  ರಾಜು ಮಿಶ್ರಾ ಅವರಿಗೆ ಹೃದಯಾಘಾತವಾಗಿತ್ತು ಎಂದು ಕುಟುಂಬ ಸದಸ್ಯರು ತಿಳಿಸಿದ್ದಾರೆ. ಕೆಲವು ತಿಂಗಳ ಹಿಂದೆ ಹೃದಯ ಶಸ್ತ್ರಚಿಕಿತ್ಸೆಗೆ ರಾಜು ಮಿಶ್ರಾ ಒಳಗಾಗಿದ್ದರಂತೆ. ಜೊತೆಗೆ ಲಘು ಪಾರ್ಶ್ವವಾಯುವಿಗೆ ಸಹ ತುತ್ತಾಗಿದ್ದರೆಂದು ರಾಜು ಮಿಶ್ರಾ ಪತ್ನಿ ಪಾರ್ತಿಮಾ ಮಂಜರಿ ಮಾಧ್ಯಮಗಳಿಗೆ ತಿಳಿಸಿದ್ದಾರೆ.

  ಮೂರು ದಶಕದಿಂದಲೂ ಒಡಿಯಾ ಸಿನಿಮಾರಂಗದಲ್ಲಿ ಸೇವೆ ಸಲ್ಲಿಸಿದ್ದಾರೆ ರಾಜು ಮಿಶ್ರಾ. 1981 ರಲ್ಲಿ 'ಉಲ್ಕಾ' ಎಂಬ ಸಿನಿಮಾದಲ್ಲಿ ನಟಿಸುವ ಮೂಲಕ ಸಿನಿಮಾ ರಂಗ ಪ್ರವೇಶಿಸಿದ ಅವರು ನಂತರ ನಿರ್ದೇಶಕ ಹಾಗೂ ಸಿನಿಮಾಟೋಗ್ರಾಫರ್ ಆಗಿ ಹೆಚ್ಚು ಹೆಸರು ಮಾಡಿದರು.

  ಹಿಟ್ ಸಿನಿಮಾಗಳಾದ ಜೋರ್ ಜೋರ್ ಮುಲಕ್ ಥಾರ್, ಸಾಗರ್ ಗಂಗಾ, ರೂಪ್ ಗನ್ರಾ ಸುನಾ ಕಾನಿಯಾ, ಸಾತ ಮಿಚ್ಚಾ, ಜೀಬನ ಮೃತ್ಯು, ಸಿಂಘ ಬಹಿನಿ ಸೇರಿ ಇನ್ನೂ ಹಲವಾರು ಸಿನಿಮಾಗಳನ್ನು ರಾಜು ಮಿಶ್ರಾ ಅವರು ಒಡಿಯಾ ಭಾಷೆಗೆ ನೀಡಿದ್ದಾರೆ.

  DIRECTOR'S DIARY : ಬೆಳೆಯೋ ಟೈಮ್ ನಲ್ಲಿ ನನ್ನ ವಿರುದ್ಧ ರವಿ ಬೆಳಗೆರೆ ಪತ್ರಿಕೆಯಲ್ಲಿ ಆರ್ಟಿಕಲ್ ಬಂದಿತ್ತು| Part 1

  ಮೂರು ದಶಕಕ್ಕಿಂತಲೂ ಹೆಚ್ಚು ಕಾಲ ಒಡಿಯಾ ಸಿನಿಮಾಗೆ ಸೇವೆ ಸಲ್ಲಿಸಿರುವ ರಾಜು ಮಿಶ್ರಾ ಅವರಿಗೆ ಜಾಯೆದ್ ಸಮ್ಮಾನ್ ಸೇರಿದಂತೆ ಹಲವು ಪ್ರಶಸ್ತಿಗಳು ದೊರೆತಿವೆ.

  English summary
  Famouse Odia film director Raju Mishra passed away on November 02 due to massive heart attack.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X