»   » ಅವಳಿ ಜವಳಿ ನಿರೀಕ್ಷೆಯಲ್ಲಿ ಫರ್ದೀನ್ ಖಾನ್ ಪತ್ನಿ

ಅವಳಿ ಜವಳಿ ನಿರೀಕ್ಷೆಯಲ್ಲಿ ಫರ್ದೀನ್ ಖಾನ್ ಪತ್ನಿ

Posted By:
Subscribe to Filmibeat Kannada
Fardeen wife pregnant
ಬಾಲಿವುಡ್ ನಟ ಫರ್ದೀನ್ ಖಾನ್ ಗೊತ್ತಲ್ಲ. ರಾಮ್ ಗೋಪಾಲ್ ವರ್ಮಾ ಅವರ 'ಜಂಗಲ್' ಚಿತ್ರದ ಮೂಲಕ ಬೆಳಕಿಗೆ ಬಂದ ನಟ. ಮಾದಕದ್ರವ್ಯ ಕೊಕೈನ್ ಸಾಗಿಸುತ್ತಿದ್ದಾನೆ ಎಂಬ ಆರೋಪದ ಮೇರೆಗೆ ಈತನನ್ನು ಮಾದಕವಸ್ತುಗಳ ನಿಗ್ರಹ ದಳ ಬಂಧಿಸಿತ್ತು. ಆದರೆ ಈತ ನಿರಪರಾಧಿ ಎಂದು ಬಳಿಕ ಸಾಬೀತಾಗಿತ್ತು. ಇದಿಷ್ಟು ಈತನ ನ್ಯಾನೋ ಬಯೋಡಾಟ.

ಈಗ ವಿಷಯ ಏನಪ್ಪಾ ಅಂದ್ರೆ. ಈತನ ಪತಿ ನಟಾಶಾ ಮಾಧ್ವಾನಿ ಈಗ ಗರ್ಭಿಣಿ. ಅವಳಿ ಜವಳಿ ಕಂದಮ್ಮಗಳ ನಿರೀಕ್ಷೆಯಲ್ಲಿದ್ದಾರೆ ನಟಾಶಾ. ಸ್ವತಃ ಈ ಸುದ್ದಿಯನ್ನು 38ರ ಪ್ರಾಯದ ನಟಾಶಾ ಅವರೇ ಬಹಿರಂಗಪಡಿಸಿದ್ದಾರೆ. ಈಗ ಅವರು ಮೂರು ತಿಂಗಳ ಗರ್ಭಿಣಿ.

ಈ ಬಗ್ಗೆ ಫರ್ದೀನ್ ಖಾನ್ ಕೂಡ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಹೀಗೆಂದಿದ್ದಾರೆ, "ನನ್ನ ಪತ್ನಿ ಈಗ ಮೂರು ತಿಂಗಳ ಗರ್ಭಿಣಿ. ಆಕೆ ಸಂಪೂರ್ಣ ಆರೋಗ್ಯವಾಗಿದ್ದಾರೆ. ನಾವೀಗ ಅವಳಿ ಜವಳಿ ಮಕ್ಕಳ ನಿರೀಕ್ಷೆಯಲ್ಲಿದ್ದೇವೆ" ಎಂದಿದ್ದಾರೆ.

ಒಂದು ಕಾಲದ ತಾರೆ ಮುಮ್ತಾಜ್ ಅವರ ಮಗಳೇ ನಟಾಶಾ. 2005ರಲ್ಲಿ ನಟ ಫರ್ದೀನ್ ಖಾನ್ ಅವರ ಕೈಹಿಡಿದರು ನಟಾಶಾ. ಬಾಲಿವುಡ್ ನಲ್ಲಿ ನಡೆದ ರಾಯಲ್ ಮದುವೆ ಅದಾಗಿತ್ತು. 2010ರ ಬಳಿಕ ಫರ್ದೀನ್ ಖಾನ್ ಯಾವುದೇ ಚಿತ್ರಗಳಲ್ಲಿ ಕಾಣಿಸಿಕೊಳ್ಳುತ್ತಿಲ್ಲ. (ಏಜೆನ್ಸೀಸ್)

English summary
Actor Fardeen Khan and his wife Natasha Madhwani are expecting twins. The 38-year-old Bollywood star himself has confirmed the news that his better half is 13 weeks pregnant. She is healthy and expecting twins.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada