ರಜತ ಪರದೆಗೆ ದಿವ್ಯಾ ಭಾರತಿ ರಿಯಲ್ ಸ್ಟೋರಿ

ಮೇಲ್ಮೋಟಕ್ಕೆ ಆಕೆ ಆತ್ಮಹತ್ಯೆ ಮಾಡಿಕೊಂಡಂತೆ ಕಂಡರೂ ಆಕೆಯ ಸಾವಿನ ಹಿಂದೆ ಏನೋ ಬಲವಾದ ಕಾರಣ, ಕಾಣದ ಕೈಗಳ ಕೈವಾಡ ಇವೆ ಎಂಬ ಶಂಕೆ ಈಗಲೂ ಆಕೆಯ ಅಭಿಮಾನಿಗಳನ್ನು ಆಪಾದಮಸ್ತಕ ಕಾಡುತ್ತಿದೆ.
ಬಾಲಿವುಡ್ ನಲ್ಲಿ ಈಕೆಯ ಜೀವನ ಕತೆಯಾಧಾರಾವಾಗಿ 'ಲವ್ ಬಿಹೈಂಡ್ ದ ಬಾರ್ಡರ್' ಎಂಬ ಚಿತ್ರವನ್ನು ತೆರೆಗೆ ತರಲಾಗುತ್ತಿದೆ. ಚಿತ್ರದಲ್ಲಿ ದಿವ್ಯಾ ಭಾರತಿ ಪಾತ್ರವನ್ನು ಯಾರು ಪೋಷಿಸಲಿದ್ದಾರೆ ಎಂಬುದು ಇನ್ನೂ ಖಚಿತವಾಗಿಲ್ಲ. ಆದರೆ ದಿವ್ಯಾ ಭಾರತಿ ಕಾಸ್ಟ್ಯೂಮ್ ಡಿಸೈನರ್ ನೀತಾ ಲುಲ್ಲಾ ಪಾತ್ರವನ್ನು ಮಾತ್ರ ಗ್ರೀಕ್ ತಾರೆ ಟಾತಿಯಾನಾ ಪೋಷಿಸಲಿದ್ದಾರೆ.
ದಿವ್ಯಾ ಭಾರತಿ ಕೊನೆಯ ಕ್ಷಣಗಳಲ್ಲಿ ನೀತಾ ಲುಲ್ಲಾ, ಆಕೆಯ ಪತಿ ನಿರ್ಮಾಪಕ ಸಾಜಿದ್ ನಡಿಯಾವಾಲಾ ಆಕೆಯ ಸನಿಹದಲ್ಲೇ ಇದ್ದರು. ಟಾಟಿಯಾನಾ ಅವರು ನೀತಾ ಲುಲ್ಲಾ ಪಾತ್ರಕ್ಕೆ ಸರಿಯಾಗಿ ಹೊಂದುತ್ತಾರೆ ಎನ್ನಲಾಗಿದೆ. ಸಾಜಿದ್ ಪಾತ್ರವನ್ನು ವಿಜೆ ಭಾಟಿಯಾ ಪೋಷಿಸಲಿದ್ದಾರೆ.
ಈ ಚಿತ್ರದಲ್ಲಿ ದಿವ್ಯಾ ಭಾರತಿ ಸಾವಿನ ಕಾರಣವಾದ ಘಟನೆಗಳನ್ನು ತೆರೆಗೆ ತರುವ ಸಾಧ್ಯತೆಗಳಿವೆ. 1992-93ರ ಅವಧಿಯಲ್ಲಿ 14 ಹಿಂದಿ ಚಿತ್ರಗಳಲ್ಲಿ ದಿವ್ಯಾ ಭಾರತಿ ಕಾಣಿಸಿಕೊಂಡಿದ್ದರು. 1993ರ ಏಪ್ರಿಲ್ 5ರಂದು ತನ್ನ ಅಪಾರ್ಟ್‌ಮೆಂಟ್‌ನಿಂದ ಕೆಳಗೆಬಿದ್ದು ದುರಂತ ಸಾವಪ್ಪಿದ್ದರು.
ಈಕೆಯ ಸಾವು ಆತ್ಮಹತ್ಯೆಯೋ ಅಥವಾ ಹತ್ಯೆಯೋ ಎಂಬುದು ಕಡೆಗೂ ಗೊತ್ತಾಗಲಿಲ್ಲ. 1998ರಲ್ಲಿ ಈಕೆಯ ಸಾವಿನ ರಹಸ್ಯದ ತನಿಖೆಯ ಫೈಲ್ ಕೂಡ ಕ್ಲೋಸ್ ಆಯಿತು. ಈ ಬಗ್ಗೆ ತನಿಖೆ ಕೈಗೊಂಡ ಪೊಲೀಸರಿಗೂ ಆಕೆಯ ಸಾವಿನ ಬಗ್ಗೆ ನಿಖರ ಮಾಹಿತಿ ಸಿಗಲಿಲ್ಲ. (ಏಜೆನ್ಸೀಸ್)


Click it and Unblock the Notifications











