twitter
    For Quick Alerts
    ALLOW NOTIFICATIONS  
    For Daily Alerts

    ಸುಶಾಂತ್ ಸಿಂಗ್ ಸಾವಿನ ಕುರಿತು ಮತ್ತೊಂದು ಮರಣೋತ್ತರ ಪರೀಕ್ಷೆ: ವರದಿಯಲ್ಲಿ ಏನಿದೆ?

    |

    ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಅವರ ಸಾವು ಆತ್ಮಹತ್ಯೆಯೇ ಅಥವಾ ಕೊಲೆಯೇ ಎಂಬ ಚರ್ಚೆ ನಡೆಯುತ್ತಿದೆ. ಸುಶಾಂತ್ ಸಾವುಗೀಡಾಗಿರುವ ರೀತಿ, ಅವರ ವ್ಯಕ್ತಿತ್ವ, ವೃತ್ತಿ ಬದುಕಿನಲ್ಲಿ ಅವರು ಎದುರಿಸಿದ ಘಟನೆಗಳನ್ನು ಕೆದಕಿ, ಇದು ಆತ್ಮಹತ್ಯೆಯಲ್ಲ ಖಂಡಿತವಾಗಿಯೂ ಕೊಲೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ವಾದ ಮಂಡಿಸಲಾಗುತ್ತಿದೆ. ಈ ಕಾರಣಕ್ಕಾಗಿ ಸಾವಿನ ಬಗ್ಗೆ ಸಿಬಿಐ ತನಿಖೆಯಾಗಬೇಕು ಎಂದು ಆಗ್ರಹಿಸಲಾಗಿದೆ.

    ಸುಶಾಂತ್ ಸಿಂಗ್ ನಿಧನದ ಮರುದಿನ ಪೊಲೀಸರ ಕೈ ಸೇರಿದ್ದ ಮರಣೋತ್ತರ ಪರೀಕ್ಷೆಯ ವರದಿಯ ಪ್ರಕಾರ ಸುಶಾಂತ್ ಅವರು ಉಸಿರುಗಟ್ಟಿ ಸತ್ತಿದ್ದಾರೆ. ಇಲ್ಲಿ ಬೇರೆ ಯಾವುದೇ ರೀತಿಯ ಕೃತ್ಯಗಳು ಕಾಣಿಸುವುದಿಲ್ಲ. ಡಾ. ಆರ್ ಎನ್ ಕೂಪರ್ ಮುನಿಸಿಪಲ್ ಜನರಲ್ ಆಸ್ಪತ್ರೆಯ ವೈದ್ಯರು ನಡೆಸಿದ ಪರೀಕ್ಷೆಯು ಅದು 'ಆಸ್ಫಿಕ್ಸಿಯೇಷನ್' (ಉಸಿರುಗಟ್ಟುವಿಕೆ) ಮೂಲಕ ಆದ ಸಾವು ಎಂದು ತಿಳಿಸಿತ್ತು. ಹೀಗಾಗಿ ಇದು ಆತ್ಮಹತ್ಯೆಯೇ ಎಂದು ವರದಿಯಲ್ಲಿ ಹೇಳಲಾಗಿತ್ತು. ಮುಂದೆ ಓದಿ...

    ಸ್ವಜನಪಕ್ಷಪಾತದ ಆರೋಪ: ಟೀಕಾಕಾರರಿಗೆ ಆಲಿಯಾ ಭಟ್ ತಾಯಿ ತಿರುಗೇಟುಸ್ವಜನಪಕ್ಷಪಾತದ ಆರೋಪ: ಟೀಕಾಕಾರರಿಗೆ ಆಲಿಯಾ ಭಟ್ ತಾಯಿ ತಿರುಗೇಟು

    ಒಳಾಂಗಗಳ ರಾಸಾಯನಿಕ ವಿಶ್ಲೇಷಣೆ

    ಒಳಾಂಗಗಳ ರಾಸಾಯನಿಕ ವಿಶ್ಲೇಷಣೆ

    ಆದರೆ ಅದರ ಬಗ್ಗೆ ಮತ್ತಷ್ಟು ಆಳವಾದ ಪರೀಕ್ಷೆ ನಡೆಸುವ ಮೂಲಕ ಸುಶಾಂತ್ ಅವರ ದೇಹದಲ್ಲಿ ವಿಷ ಅಥವಾ ಬೇರೆ ಅಂಶಗಳು ಇರಬಹುದೇ ಎಂಬುದನ್ನು ಕೂಡ ತಿಳಿಸಿದುಕೊಳ್ಳಲು ಅವರ ದೇಹದ ಒಳಾಂಗಗಳನ್ನು ಸಂರಕ್ಷಿಸಿ ರಾಸಾಯನಿಕ ವಿಶ್ಲೇಷಣೆಗೆ ರವಾನಿಸಲಾಗಿತ್ತು.

    ಇದು ಆತ್ಮಹತ್ಯೆ

    ಇದು ಆತ್ಮಹತ್ಯೆ

    ಐವರು ತಜ್ಞವೈದ್ಯರ ತಂಡ ಸುಶಾಂತ್ ಸಿಂಗ್ ರಜಪೂತ್ ಸಾವಿನ ಪ್ರಕರಣದ ಅಂತಿಮ ಮರಣೋತ್ತರ ಪರೀಕ್ಷೆಯ ವರದಿಯನ್ನು ಮುಂಬೈ ಪೊಲೀಸರಿಗೆ ಸಲ್ಲಿಸಿದ್ದು, ಇದು 'ನೇಣು ಹಾಕಿಕೊಂಡ ಕಾರಣದಿಂದ ಉಸಿರುಗಟ್ಟಿ ಸಂಭವಿಸಿದ ಸಾವು' ಎಂದೇ ಹೇಳಿದ್ದಾರೆ.

    ನನ್ನ ಗಂಡ ನೆಪೋಟಿಸಂ ಬಲಿಪಶು: ಕರಣ್, ಶಾರುಖ್ ವಿರುದ್ಧ ನಟ ಇಂದರ್ ಕುಮಾರ್ ಪತ್ನಿ ಆರೋಪನನ್ನ ಗಂಡ ನೆಪೋಟಿಸಂ ಬಲಿಪಶು: ಕರಣ್, ಶಾರುಖ್ ವಿರುದ್ಧ ನಟ ಇಂದರ್ ಕುಮಾರ್ ಪತ್ನಿ ಆರೋಪ

    ಬೇರೆ ಕೈವಾಡಗಳು ನಡೆದಿಲ್ಲ

    ಬೇರೆ ಕೈವಾಡಗಳು ನಡೆದಿಲ್ಲ

    ಸುಶಾಂತ್ ಸಿಂಗ್ ರಜಪೂತ್ ಅವರ ದೇಹದಲ್ಲಿ ಯಾವುದೇ ಒದ್ದಾಟದ ಕುರುಹು ಅಥವಾ ಹೊರ ಭಾಗದ ಗಾಯಗಳಿಲ್ಲ. ಅವರ ಉಗುರುಗಳು ಸಹ ಸ್ವಚ್ಛವಾಗಿವೆ. ಇದು ಸ್ಪಷ್ಟವಾಗಿ ಆತ್ಮಹತ್ಯೆಯ ಪ್ರಕರಣ. ಇದರಲ್ಲಿ ಯಾವುದೇ ಬೇರೆ ಕೈವಾಡಗಳು ಇಲ್ಲ ಎಂದು ವೈದ್ಯರ ತಂಡ ತಿಳಿಸಿದೆ.

    23 ಮಂದಿಯಿಂದ ಹೇಳಿಕೆ ದಾಖಲು

    23 ಮಂದಿಯಿಂದ ಹೇಳಿಕೆ ದಾಖಲು

    ಸುಶಾಂತ್ ಅವರ ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ ಅವರ ತಂದೆ ಮತ್ತು ಮೂವರು ಸಹೋದರಿಯರು, ಸುಶಾಂತ್ ಅವರ ಲೆಕ್ಕ ಪರಿಶೋಧಕ ಸಂಜಯ್ ಶ್ರೀಧರ್, ಸುಶಾಂತ್ ಸ್ನೇಹಿತರಾದ ಸಿದ್ಧಾರ್ಥ್ ಪಿಠಾಣಿ, ರಿಯಾ ಚಕ್ರಬೊರ್ತಿ, ರೋಹಿಣಿ ಅಯ್ಯರ್, ಸುಶಾಂತ್ ಸಿಂಗ್ ಬಿಜಿನೆಸ್ ಮ್ಯಾನೇಜರ್ ಉದಯ್ ಸಿಂಗ್ ಗೌರಿ, ಅವರ ಮನೆಯ ಕೆಲಸದವರು ಸರಿದಂತೆ ಸುಮಾರು 23 ಮಂದಿಯಿಂದ ಹೇಳಿಕೆ ಪಡೆದುಕೊಂಡಿದ್ದಾರೆ.

    ಜಸ್ಟೀಸ್ ಫಾರ್ ಸುಶಾಂತ್ ಫೋರಂ

    ಜಸ್ಟೀಸ್ ಫಾರ್ ಸುಶಾಂತ್ ಫೋರಂ

    ಸುಶಾಂತ್ ಸಾವಿನ ತನಿಖೆಯನ್ನು ಸಿಬಿಐಗೆ ಒಪ್ಪಿಸಬೇಕು. ಇದು ಪೂರ್ವನಿಯೋಜಿತ ಸಂಚು. ಇದರ ಸುತ್ತಲೂ ಅನೇಕರು ಭಾಗಿಯಾಗಿರುವ ಅನುಮಾನವಿದೆ. ನಮಗೆ ನ್ಯಾಯ ಬೇಕು ಎಂದು ಸಾಮಾಜಿಕ ಜಾಲತಾಣದಲ್ಲಿ ಚಳವಳಿ ಶುರುವಾಗಿದೆ. ಸುಶಾಂತ್ ಸಾವಿನ ಪ್ರಕರಣದಲ್ಲಿ ಹೋರಾಟ ನಡೆಸಲು ಜಸ್ಟೀಸ್ ಫಾರ್ ಸುಶಾಂತ್ ಫೋರಂ ಕೂಡ ಸೃಷ್ಟಿಯಾಗಿದೆ.

    English summary
    Final post mortem reporst of Sushant Singh Rajput's death case was received by Mumbai police. Doctors clarified that death was clearly a suicide.
    Thursday, June 25, 2020, 10:13
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X