For Quick Alerts
  ALLOW NOTIFICATIONS  
  For Daily Alerts

  'ದಬಾಂಗ್' ನಟಿ ಸೋನಾಕ್ಷಿ ವಿರುದ್ಧ ವಂಚನೆ ಆರೋಪ

  |

  ಬಾಲಿವುಡ್ ನಟಿ ಸೋನಾಕ್ಷಿ ಸಿನ್ಹಾ ವಿರುದ್ಧ ವಂಚನೆ ಆರೋಪ ಕೇಳಿಬಂದಿದ್ದು ಉತ್ತರ ಪ್ರದೇಶದ ಪೊಲೀಸರು ಎಫ್.ಐ.ಆರ್ ದಾಖಲಿಸಿಕೊಂಡಿದ್ದಾರೆ ಎಂಬ ಮಾಹಿತಿ ಸಿಕ್ಕಿದೆ.

  ದೆಹಲಿ ಕಾರ್ಯಕ್ರಮವೊಂದರಲ್ಲಿ ಭಾಗವಹಿಸುವ ಸಲುವಾಗಿ ನಟಿ ಸೋನಾಕ್ಷಿ 24 ಲಕ್ಷ ರೂಪಾಯಿ ಮುಂಗಡ ಹಣ ಪಡೆದುಕೊಂಡಿದ್ದರು. ಆದರೆ, ಕಾರ್ಯಕ್ರಮಕ್ಕೆ ಹಾಜರಾಗಿಲ್ಲ ಎಂದು ಆರೋಪಿಸಿ ಕಾರ್ಯಕ್ರಮ ಆಯೋಜಕರು ನಟಿ ವಿರುದ್ಧ ಕ್ರಮ ಜರುಗಿಸುವಂತೆ ಪೊಲೀಸರ ಮೊರೆ ಹೋಗಿದ್ದಾರೆ.

  ಆಯೋಜಕರ ದೂರು ಸ್ವೀಕರಿಸಿದ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ. ಈ ಸಂಬಂಧ ನಟಿ ಸೋನಾಕ್ಷಿ ಸಿನ್ಹಾ ಅವರ ಹೇಳಿಕೆ ಪಡೆಯಲು ಮುಂಬೈನಲ್ಲಿರುವ ಅವರ ಮನೆಗೆ ಹೋಗಿದ್ದರು. ಈ ವೇಳೆ ಸೋನಾಕ್ಷಿ ಇಲ್ಲದ ಕಾರಣ ಸ್ವಲ್ಪ ಸಮಯ ಕಾದು ವಾಪಸ್ ಆಗಿದ್ದಾರೆ.

  ಸೋನಾಕ್ಷಿ ಮೊದಲ ಪ್ರೇಮ ಕಹಾನಿಗೆ ತಂದೆಯೇ ವಿಲನ್..!

  ಗುರುವಾರ ಮತ್ತು ಶುಕ್ರವಾರ ಎರಡೂ ದಿನವೂ ಸೋನಾಕ್ಷಿ ಸಿನ್ಹಾ ಮನೆಗೆ ಪೊಲೀಸರು ಹೋಗಿದ್ದರೂ, ಎರಡೂ ದಿನವೂ ಅವರು ಸಿಗಲಿಲ್ಲ. ಈ ಸಂಬಂಧ ಟ್ವಿಟ್ಟರ್ ನಲ್ಲಿ ಪ್ರತಿಕ್ರಿಯೆ ನೀಡಿರುವ ಸೋನಾಕ್ಷಿ, ''ಇದೆಲ್ಲ ಸುಳ್ಳು, ನನ್ನ ಹೆಸರಿಗೆ ಮಸಿ ಬಳಿಯುವ ಪ್ರಯತ್ನ'' ಎಂದು ಸ್ಪಷ್ಟನೆ ನೀಡಿದ್ದಾರೆ.

  ''ಇಂತಹ ಆರೋಪಗಳಿಂದ ಮಾಧ್ಯಮಗಳಲ್ಲಿ ನನ್ನ ಹೆಸರಿಗೆ ಮಸಿ ಬಳಿಯಬಹುದು ಎಂದು ಆಯೋಜಕರು ನಿರ್ಧರಿಸಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಪಟ್ಟಂತೆ ನಾನು ಪೊಲೀಸರಿಗೆ ಸಂಪೂರ್ಣವಾಗಿ ಸಹಕರಿಸುತ್ತೇನೆ. ದಯವಿಟ್ಟು ಮಾಧ್ಯಮದವರು ಈ ಸುದ್ದಿಯನ್ನ ಪ್ರಸಾರ ಮಾಡಬಾರದೆಂದು'' ಪೋಸ್ಟ್ ಹಾಕಿದ್ದಾರೆ.

  ಸೋನಾಕ್ಷಿ ಸಿನ್ಹಾ ಹೊಸ ಬಯಕೆ ಈಡೇರುತ್ತಾ..!

  ಸೋನಾಕ್ಷಿ ಸಿನ್ಹಾ ಬಾಲಿವುಡ್ ಖ್ಯಾತ ನಟ ಹಾಗೂ ರಾಜಕಾರಣಿ ಶತ್ರುಜ್ಞ ಸಿನ್ಹಾ ಅವರ ಮಗಳು. ತಮ್ಮ ತಂದೆಯ ಹಣ ಬಲ ಮತ್ತು ರಾಜಕೀಯ ಬಲದಿಂದ ನಮಗೆ ವಂಚಿಸಿದ್ದಾರೆ ಎಂದು ಕಾರ್ಯಕ್ರಮ ಆಯೋಜಕರು ಹೇಳುತ್ತಿದ್ದಾರೆ.

  ಸಲ್ಮಾನ್ ಖಾನ್ ಅಭಿನಯದ ದಬಾಂಗ್ ಚಿತ್ರದ ಮೂಲಕ ಸಿನಿಇಂಡಸ್ಟ್ರಿಗೆ ಬಂದ ಸೋನಾಕ್ಷಿ ಸದ್ಯ ಮಿಷನ್ ಮಂಗಲ್, ದಬಾಂಗ್ 3 ಹಾಗೂ ಭುಜ್: ದಿ ಪ್ರೈಡ್ ಆಫ್ ಇಂಡಿಯಾ ಚಿತ್ರಗಳಲ್ಲಿ ನಟಿಸುತ್ತಿದ್ದಾರೆ.

  English summary
  Uttar pradesh police are filed fir against actress sonakshi sinha for cheating case. she responds To FIR rumours in social media. what she said? read more.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X