»   » ಮಕ್ಕಳೆದುರು ಬೈದ ಶಾರುಖ್ ಮೇಲೆ ಎಫ್.ಐ.ಆರ್.!

ಮಕ್ಕಳೆದುರು ಬೈದ ಶಾರುಖ್ ಮೇಲೆ ಎಫ್.ಐ.ಆರ್.!

Posted By:
Subscribe to Filmibeat Kannada

ಬಾಲಿವುಡ್ ನ ಖತರ್ನಾಕ್ ಡಾನ್ ಆಗಿರುವ ಶಾರುಖ್, ಸಿನಿಮಾಗಳಲ್ಲಿ 'ಡಾನ್' ತರಹ ಕಾಣಿಸಿಕೊಳ್ಳುವುದೇನೋ ಮಜಾನೇ. ಆದ್ರೆ, ಅದೇ ಫೀಲು, ಅದೇ ಧಮ್ಮು ನಿಜಜೀವನದಲ್ಲಿ ತೋರಿಸುವುದಕ್ಕೆ ಬಂದ್ರೆ, ಅದು ದುರಹಂಕಾರದ ಪರಮಾವಧಿನೇ ಸರಿ. ಮೂರು ವರ್ಷಗಳ ಹಿಂದೆ ಶಾರುಖ್ ಮಾಡಿಕೊಂಡಿದ್ದು ಅದನ್ನೇ.

ಎಲ್ಲರಿಗೂ ಗೊತ್ತಿರುವ ಹಾಗೆ, ಕೋಲ್ಕತ್ತಾ ನೈಟ್ ರೈಡರ್ಸ್ ತಂಡಕ್ಕೆ ಶಾರುಖ್, ದಿ ಕಿಂಗ್. 2012 ರ ಐಪಿಎಲ್ ವೇಳೆಯಲ್ಲಿ, ಕೆ.ಕೆ.ಆರ್ ಬ್ಯಾಕ್ ಟು ಬ್ಯಾಕ್ ಗೆಲುವು ಸಾಧಿಸುತ್ತಿದ್ದರೆ, ಶಾರುಖ್ ಆಕಾಶದಲ್ಲೇ ಹಾರಾಡುತ್ತಿದ್ದರು. ಅಂತಹ ಸಮಯದಲ್ಲಿ ಮಾಡಿಕೊಂಡ ಎಡವಟ್ಟು ಈಗ ಶಾರುಖ್ ಕುತ್ತಿಗೆಗೆ ಬಂದಿದೆ.

ಶಾರುಖ್ ಖಾನ್ ವಿರುದ್ಧ ಎಫ್.ಐ.ಆರ್ ದಾಖಲಿಸುವಂತೆ ಪೊಲೀಸರಿಗೆ Maharashtra State Commission for Child Rights (MSCCR) ಸೂಚನೆ ನೀಡಿದೆ. ಮಕ್ಕಳ ಮುಂದೆ ಅಸಭ್ಯವಾಗಿ ವರ್ತಿಸಿದಲ್ಲದೇ, ಅವಾಚ್ಯ ಶಬ್ಧಗಳನ್ನ ಬಳಸಿರುವುದರಿಂದ ಶಾರುಖ್ ಗೆ ಸಂಕಷ್ಟ ಎದುರಾಗಿದೆ.

srk

ಅಸಲಿಗೆ ಆಗಿದ್ದೇನಪ್ಪಾ ಅಂದ್ರೆ, ಲೀಗ್ ಹಂತದಲ್ಲಿ ಮುಂಬೈ ಇಂಡಿಯನ್ಸ್ ವಿರುದ್ಧ ಕೆ.ಕೆ.ಆರ್ ಮ್ಯಾಚ್ ನಡೆಯುವ ವೇಳೆಯಲ್ಲಿ ಶಾರುಖ್ ವಾಂಖೆಡೆ ಸ್ಟೇಡಿಯಂಗೆ ನುಗ್ಗಿ, ಅಲ್ಲಿನ ಅಧಿಕಾರಿ ಮೇಲೆ ಹೌಹಾರಿದ್ರು. ಅದಲ್ಲದೇ, ಸೆಕ್ಯೂರಿಟಿ ರೀಸನ್ ಗೆ ತಮ್ಮ ಮಕ್ಕಳು ಆರ್ಯನ್ ಮತ್ತು ಸುಹಾನಾ ನ ತಳ್ಳಾಡಿದ್ರು ಅಂತ ಸಮಜಾಯಿಷಿ ಕೊಟ್ಟ ಶಾರುಖ್, ವಾಂಖೆಡೆ ಸ್ಟೇಡಿಯಂ ಅಧಿಕಾರಿಗಳ ಮೇಲೆ ಕೈಕೈಮಿಲಾಯಿಸುವ ಮಟ್ಟಕ್ಕೆ ಹೋಗಿದ್ದರು. ಇದಾಗಿದ್ದು 2012ರಲ್ಲಿ. [ವಾಂಖೇಡೆ ಸ್ಟೇಡಿಯಂಗೆ ಶಾರುಖ್ ಕಾಲಿಡುವಂತಿಲ್ಲ]

ಅಂದಿಗೆ ಈ ಪ್ರಕರಣ ದೊಡ್ಡ ವಿವಾದವಾಗಿದ್ದರ ಪರಿಣಾಮ ವಾಂಖೆಡೆ ಸ್ಟೇಡಿಯಂ ನಿಂದ ಶಾರುಖ್ 5 ವರ್ಷ ಬ್ಯಾನ್ ಆಗಿದ್ರು. ಕಳೆದ ವರ್ಷ ಅದನ್ನ ಹಿಂಪಡೆಯಲಾಗಿತ್ತು ಕೂಡ. ಈಗ ಈ ಪ್ರಕರಣಕ್ಕೆ MSCCR ಹೊಸ ಟ್ವಿಸ್ಟ್ ನೀಡಿದೆ.

ಮಕ್ಕಳ ಮುಂದೆ ಅವಾಚ್ಯ ಶಬ್ಧಗಳನ್ನ ಬಳಸಿರುವುದಕ್ಕೆ ಎಫ್.ಐ.ಆರ್ ದಾಖಲಿಸುವಂತೆ MSCCR ಸೂಚಿಸಿದೆ. ಅಲ್ಲದೇ, ಇಲ್ಲಿವರೆಗೂ ಈ ಬಗ್ಗೆ ಯಾವುದೇ ದೂರು ದಾಖಲಾಗದಿರುವುದಕ್ಕೆ ಕಾರಣವೇನು ಎಂಬುದರ ಬಗ್ಗೆಯೂ ತನಿಖೆ ನಡೆಸುವಂತೆ ಪೊಲೀಸರಿಗೆ ಆದೇಶಿಸಿದೆ. ಹಳೆಯದ್ದನ್ನೆಲ್ಲಾ ಮರೆತುಬಿಟ್ಟಿದ್ದ ಖಾನ್ ಗೆ MSCCR ಕಡೆಯಿಂದ ಬಂದಿರುವ ಆದೇಶ ಹೊಸ ತಲೆನೋವು ತಂದೊಡ್ಡಿದೆ. (ಏಜೆನ್ಸೀಸ್)

English summary
The controversy, which Bollywood Actor Shahrukh Khan created during Mumbai Indians v/s Kolkata Knight Riders match in Wankhede Stadium, 2012 has raised up again. Maharashtra State Commission for Child Rights (MSCCR) has asked the Police to file a FIR against the Actor for using foul language in the presence of children.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada