For Quick Alerts
  ALLOW NOTIFICATIONS  
  For Daily Alerts

  ಅಕ್ಷಯ್ ಕುಮಾರ್ ಅಭಿನಯದ 'ಕೇಸರಿ' ಸೆಟ್ ನಲ್ಲಿ ಅಗ್ನಿ ಅವಘಡ.!

  By Harshitha
  |

  ಬಾಲಿವುಡ್ ನಟ ಅಕ್ಷಯ್ ಕುಮಾರ್ ಅಭಿನಯದ 'ಕೇಸರಿ' ಚಿತ್ರದ ಚಿತ್ರೀಕರಣದ ಸೆಟ್ ನಲ್ಲಿ ಅಗ್ನಿ ಅವಘಡ ಸಂಭವಿಸಿದೆ.

  ಮಹಾರಾಷ್ಟ್ರದ ಸಾತಾರಾ ಜಿಲ್ಲೆಯಿಂದ 30 ಕಿ.ಮಿ ದೂರದ ಪುಟ್ಟ ಹಳ್ಳಿಯಲ್ಲಿ 'ಕೇಸರಿ' ಚಿತ್ರದ ಶೂಟಿಂಗ್ ನಡೆಯುತ್ತಿತ್ತು. ಕ್ಲೈಮ್ಯಾಕ್ಸ್ ಹಾಗೂ ಕೆಲ ಸನ್ನಿವೇಶಗಳ ಚಿತ್ರೀಕರಣ ಮುಗಿದ್ಮೇಲೆ, ಸೆಟ್ ನಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಕೂಡಲೆ ಸಾತಾರಾ ಪೊಲೀಸರು ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ.

  'ಕೇಸರಿ' ಚಿತ್ರದಲ್ಲಿ ಬಾಂಬ್ ಸ್ಫೋಟದ ಕೆಲ ಸೀನ್ ಗಳಿವೆ. ಅದನ್ನ ಚಿತ್ರೀಕರಿಸಲು ಚಿತ್ರತಂಡ ತಯಾರಿ ಮಾಡಿಕೊಳ್ಳುತ್ತಿದ್ದಾಗ ಬೆಂಕಿ ಹೊತ್ತಿಕೊಂಡಿದೆ ಎನ್ನಲಾಗಿದೆ. ಅದೃಷ್ಟವಶಾತ್ ಪ್ರಾಣಹಾನಿ ಸಂಭವಿಸಿಲ್ಲ. ಶೂಟಿಂಗ್ ಮುಗಿಸಿ ಅಕ್ಷಯ್ ಕುಮಾರ್ ಹೊರಟ್ಮೇಲೆ, ಈ ಘಟನೆ ನಡೆದಿದೆ ಎಂದು ವರದಿ ಆಗಿದೆ.

  'ಕೇಸರಿ' ಫೋಟೋ ಎಡವಟ್ಟು: ಟ್ರೋಲ್ ಆದ ಕರಣ್ ಜೋಹರ್.!'ಕೇಸರಿ' ಫೋಟೋ ಎಡವಟ್ಟು: ಟ್ರೋಲ್ ಆದ ಕರಣ್ ಜೋಹರ್.!

  ಧರ್ಮ ಪ್ರೊಡಕ್ಷನ್ಸ್ ಹಾಗೂ ಕೇಪ್ ಆಫ್ ಗುಡ್ ಫಿಲ್ಮ್ಸ್ ಜಂಟಿಯಾಗಿ ನಿರ್ಮಾಣ ಮಾಡುತ್ತಿರುವ ಚಿತ್ರ 'ಕೇಸರಿ'. 1897 ರಲ್ಲಿ ನಡೆದ ಸಾರಗರ್ಹಿ ಕದನದಲ್ಲಿ 10,000 ಅಫ್ಗನ್ ಗಳ ವಿರುದ್ಧ ಹೋರಾಡಿದ 21 ಸಿಖ್ಖರ ಸುತ್ತ ಹೆಣೆದಿರುವ ಕಥೆಯೇ 'ಕೇಸರಿ'. ಅನುರಾಗ್ ಸಿಂಗ್ ಆಕ್ಷನ್ ಕಟ್ ಹೇಳುತ್ತಿರುವ ಈ ಚಿತ್ರದಲ್ಲಿ ಅಕ್ಷಯ್ ಕುಮಾರ್ ಜೊತೆಗೆ ಪರಿಣಿತಿ ಛೋಪ್ರ ಅಭಿನಯಿಸುತ್ತಿದ್ದಾರೆ.

  English summary
  Fire breaks out on the sets of Bollywood Actor Akshay Kumar starrer 'Kesari' in Satara district, Maharashtra.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X