For Quick Alerts
  ALLOW NOTIFICATIONS  
  For Daily Alerts

  ಅತ್ಯಂತ ಕೆಟ್ಟ ನಟ: ಅಜಯ್ ದೇವಗನ್ ಜಯಭೇರಿ

  |

  ಬಾಲಿವುಡ್ ಜಗತ್ತಿಗೆ ಕನಸಿನಲ್ಲೂ ಬೇಡವಾದ ಪ್ರಶಸ್ತಿಯೆಂದರೆ 'ಗೋಲ್ಡನ್ ಖೇಲಾ ಪ್ರಶಸ್ತಿ". ಟ್ವೆಂಟಿ ಆನ್ವರ್ಡ್ಸ್ ಮೀಡಿಯಾ ಪ್ರೈ. ಲಿಮಿಟೆಡ್ಸ್ ಪ್ರತಿ ವರ್ಷ ಸಾದರ ಪಡಿಸುವ ಈ ಪ್ರಶಸ್ತಿ ಹಿಂದಿ ಚಿತ್ರರಂಗದ ಅತ್ಯಂತ ಕೆಟ್ಟ ಚಿತ್ರ, ನಟ, ನಟಿ ಇತ್ಯಾದಿ ವಿಭಾಗಗಳಿಗೆ ನೀಡುವ ಪ್ರಶಸ್ತಿ.

  ಬಾಲಿವುಡ್ ಕೆಟ್ಟ ಚಿತ್ರಗಳ ಮಾನ ಕಳೆಯುವ ಪ್ರಶಸ್ತಿ ಇದಾಗಿದ್ದು ಚಿತ್ರ ನಿರ್ಮಿಸುವವರು ಇನ್ನು ಮುಂದೆಯಾದರೂ ಒಳ್ಳೆ ಸದಭಿರುಚಿಯ ಚಿತ್ರಗಳನ್ನು ನೀಡಲಿ ಎನ್ನುವ ಉದ್ದೇಶದಿಂದ ಈ ಪ್ರಶಸ್ತಿ ನೀಡುತ್ತಿದ್ದೇವೆ ಎನ್ನುತ್ತಾರೆ ಟ್ವೆಂಟಿ ಆನ್ವರ್ಡ್ಸ್ ಮೀಡಿಯಾ ಸಂಸ್ಥೆಯ ಅಧಿಕಾರಿಗಳು.

  ಚಿತ್ರರಸಿಕರ ಅಮೂಲ್ಯವಾದ ಹಣ ಮತ್ತು ಸಮಯವನ್ನು ಹಾಳು ಮಾಡುವ ಇಂಥಹ ಚಿತ್ರಗಳಿಂದ ಭಾರತೀಯ ಸಿನಿಮಾದ ಮಾನ, ಮರುವಾದೆ ಹಾಳಾಗುತ್ತಿದೆ. ಈ ಪ್ರಶಸ್ತಿ ನೀಡುವ ಮೂಲಕ ಚಿತ್ರ ನಿರ್ಮಿಸುವ ಮುನ್ನ ಒಳ್ಳೆ ಕಥೆ, ಚಿತ್ರಕಥೆಯ ಬಗ್ಗೆ ಗಮನ ನೀಡಲಿ. ಹಾಗೇ ಕಲಾವಿದರು ಹಣದ ಆಸೆಗೆ ಬಿದ್ದು ಸಿಕ್ಕ ಸಿಕ್ಕ ಚಿತ್ರಗಳಿಗೆ ಕಾಲ್ಶೀಟ್ ನೀಡುವುದನ್ನು ನಿಲ್ಲಿಸಲಿ ಎನ್ನುತ್ತಾರೆ ಸಂಸ್ಥೆಯ ಅಧಿಕಾರಿಗಳು.

  ಸದ್ಯ ನಮ್ಮ ಕನ್ನಡ ಚಿತ್ರಗಳಿಗೆ ಇಂಥಹಾ ಪ್ರಶಸ್ತಿ ಯಾವುದೇ ಮೀಡಿಯಾ ಸಂಸ್ಥೆ ನೀಡುತ್ತಿಲ್ಲಾ ಎಂದು ನಿಟ್ಟುಸಿರು ಬಿಡುತ್ತಾ 2012ರ ಸಾಲಿನ ಅತ್ಯಂತ ಕೆಟ್ಟ ಚಿತ್ರಗಳ ಮಾನವನ್ನು ಜಗಜ್ಜಾಹೀರು ಮಾಡುವ ಪ್ರಶಸ್ತಿ ಪಟ್ಟಿ ಸ್ಲೈಡಿನಲ್ಲಿದೆ ನೋಡಿ.

  ಹೆಚ್ಚಿನ ಮಾಹಿತಿಗಾಗಿ ಈ ಕೊಂಡಿ ಕ್ಲಿಕ್ಕಿಸಿ

  ಅತ್ಯಂತ ಕೆಟ್ಟ ಚಿತ್ರ

  ಅತ್ಯಂತ ಕೆಟ್ಟ ಚಿತ್ರ

  ಜೋಕರ್

  ಫರಾ ಖಾನ್ ನಿರ್ಮಿಸಿದ್ದ ಈ ಚಿತ್ರದಲ್ಲಿ ಅಕ್ಷಯ್ ಕುಮಾರ್, ಸೋನಾಕ್ಷಿ ಸಿನ್ಹಾ ಪ್ರಮುಖ ಭೂಮಿಕೆಯಲ್ಲಿದ್ದರು.

  ಅತಿ ಕೆಟ್ಟ ನಿರ್ದೇಶಕ

  ಅತಿ ಕೆಟ್ಟ ನಿರ್ದೇಶಕ

  ಶಿರಿಸ್ ಕುಂದರ್

  ಜೋಕರ್ ಚಿತ್ರ ನಿರ್ದೇಶಿದ್ದಕ್ಕಾಗಿ ಶಿರಿಸ್ ಕುಂದರ್ ಅವರಿಗೆ ಪ್ರಶಸ್ತಿ ಲಭಿಸಿದೆ.

  ಅತ್ಯಂತ ಕೆಟ್ಟ ನಟ

  ಅತ್ಯಂತ ಕೆಟ್ಟ ನಟ

  ಅಜಯ್ ದೇವಗನ್ ( ಸನ್ ಆಫ್ ಸರ್ದಾರ್ ಮತ್ತು ಬೋಲ್ ಬಚ್ಚನ್)

  ಅಶ್ವಿನಿ ಧೀರ್ ನಿರ್ದೇಶಿದ್ದ ಸನ್ ಆಫ್ ಸರ್ದಾರ್ ಮತ್ತು ರೋಹಿತ್ ಶೆಟ್ಟಿ ನಿರ್ದೇಶನದ ಬೋಲ್ ಬಚ್ಚನ್

  ಅತಿ ಕೆಟ್ಟ ನಟಿ

  ಅತಿ ಕೆಟ್ಟ ನಟಿ

  ಸೋನಾಕ್ಷಿ ಸಿನ್ಹಾ

  (2012ರ ಸಾಲಿನಲ್ಲಿ ನಟಿಸಿದ ಎಲ್ಲಾ ಚಿತ್ರಗಳಿಗೆ)

  ಅತಿ ಕೆಟ್ಟ ಸಾಹಿತಿ

  ಅತಿ ಕೆಟ್ಟ ಸಾಹಿತಿ

  ಅನ್ವಿತಾ ದತ್ (ಇಸ್ಕ್ ವಾಲಾ ಲವ್, Student of the Year)

  ವಿಶಾಲ್ - ಶೇಖರ್ ಸಂಗೀತ ನೀಡಿದ್ದ ಈ ಚಿತ್ರವನ್ನು ಕರಣ್ ಜೋಹರ್ ನಿರ್ದೇಶಿಸಿದ್ದರು.

  ಅತ್ಯಂತ ಕಿರಿಕಿರಿ ತರುವ ಹಾಡು

  ಅತ್ಯಂತ ಕಿರಿಕಿರಿ ತರುವ ಹಾಡು

  ಚಿಂತಾತ ಚಿತಾ ಚಿತಾ (ರೌಡಿ ರಾಥೋರ್)

  ಅಕ್ಷಯ್ ಕುಮಾರ್, ಸೋನಾಕ್ಷಿ ಸಿನ್ಹಾ ಪ್ರಮುಖ ಭೂಮಿಕೆಯಲ್ಲಿರುವ ಚಿತ್ರದ ಈ ಹಾಡಿಗೆ ಸಮೀರ್ ಅಂಜಾನ್ ಸಾಹಿತ್ಯ ಬರೆದಿದ್ದರು.

  ಅತಿ ಕೆಟ್ಟ sequel ಚಿತ್ರ

  ಅತಿ ಕೆಟ್ಟ sequel ಚಿತ್ರ

  ದಬಾಂಗ್ 2

  ಆರ್ಬಾಜ್ ಖಾನ್ ನಿರ್ದೇಶನದ ಈ ಚಿತ್ರದ ಪ್ರಮುಖ ಭೂಮಿಕೆಯಲ್ಲಿ ಸಲ್ಮಾನ್ ಖಾನ್, ಸೋನಾಕ್ಷಿ ಸಿನ್ಹಾ ಪ್ರಮುಖ ಭೂಮಿಕೆಯಲ್ಲಿದ್ದಾರೆ.

  English summary
  Twenty Onwards Media Private Limited presents "Golden Kela Award" best of the worst cinemas in the year 2012. 

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X