For Quick Alerts
  ALLOW NOTIFICATIONS  
  For Daily Alerts

  ವಿಡಿಯೋ: ಮಾಧುರಿ ದೀಕ್ಷಿತ್ ಹಾಡಿಗೆ ಕ್ಯೂಟ್ ಆಗಿ ಹೆಜ್ಜೆ ಹಾಕಿದ ವಿದೇಶಿ ಮಹಿಳೆ

  |

  ಮಾಧುರಿ ದೀಕ್ಷಿತ್ ಭಾರತದಲ್ಲಿ ಮಾತ್ರವಲ್ಲ ವಿದೇಶದಲ್ಲೂ ಲಕ್ಷಾಂತರ ಅಭಿಮಾನಿಗಳನ್ನು ಹೊಂದಿರುವವರು. ಅವರ ನೃತ್ಯಕ್ಕೆ ಫಿದಾ ಆಗದವರೇ ಇಲ್ಲ.

  ಧಕ್, ಧಕ್ ಹುಡುಗಿಯ ಹಾಡುಗಳು ಅವರ ಸಿಗ್ನೇಚರ್‌ ಸ್ಟೆಪ್‌ಗಳು ಇಂದಿಗೂ ಫೇಮಸ್, ವಿದೇಶಗಳಲ್ಲೂ ಮಾಧುರಿಯ ಸ್ಟೆಪ್‌ಗಳನ್ನು ನಕಲು ಮಾಡುತ್ತಾರೆ ಈಗಲೂ.

  ಗ್ರೀಕ್‌ ಮಹಿಳೆಯರೊಬ್ಬರು ಮಾಧುರಿ ದೀಕ್ಷಿತ್ ಅವರ ಹಾಡಿಗೆ ಹೆಜ್ಜೆ ಹಾಕಿರುವ ವಿಡಿಯೋ ಸಖತ್ ವೈರಲ್ ಆಗಿದೆ.

  ಕೊರೊನಾ ಭೀತಿಯಿಂದಾಗಿ ಮನೆಯಿಂದಲೇ ಕೆಲಸ ಮಾಡುತ್ತಿದ್ದ ಗ್ರೀಕ್ ಮಹಿಳೆ ಕೇಟ್ರಿಯಾನಾ ಕೊರುಸೀಡೋ ಎಂಬುವರು ಮಾಧುರಿ ಅವರ 'ಎಕ್‌ ದೋ ತೀನ್...' ಹಾಡಿಗೆ ದಿಲ್ ಖುಷ್‌ ಆಗಿ ಹೆಜ್ಜೆ ಹಾಕಿದ್ದಾರೆ.

  ಸಹೋದ್ಯೋಗಿ ವಿಡಿಯೋ ಮಾಡಿ ಹರಿಬಿಟ್ಟಿದ್ದಾರೆ

  ಕ್ಯೂಟ್ ಆಗಿ ಅವರು ಮಾಡಿರುವ ನೃತ್ಯವನ್ನು ಸಹೋದ್ಯೋಗಿ ವಿಡಿಯೋ ರೆಕಾರ್ಡ್ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾರೆ.

  ಕೆಲವೇ ಗಂಟೆಗಳಲ್ಲಿ ವಿಡಿಯೋ ವೈರಲ್

  ಕೆಲವೇ ಗಂಟೆಗಳಲ್ಲಿ ವಿಡಿಯೋ ವೈರಲ್

  ಮಾಧುರಿ ದೀಕ್ಷಿತ್ ಹಾಡಿಗೆ ಕೇಟ್ರಿಯಾನಾ ಮಾಡಿರುವ ಡಾನ್ಸ್ ಕೆಲವೇ ಗಂಟೆಗಳಲ್ಲಿ ವೈರಲ್ ಆಗಿದ್ದು, ಕೋಟ್ಯಂತರ ಮಂದಿ ವೀಕ್ಷಿಸಿದ್ದಾರೆ. ಮೆಚ್ಚುಗೆಯನ್ನೂ ವ್ಯಕ್ತಪಡಿಸಿದ್ದಾರೆ. ಮಾರ್ಚ್‌ 16 ರಂದು ಟ್ವೀಟ್‌ ಮಾಡಲಾಗಿರುವ ಈ ವಿಡಿಯೋವನ್ನು ಸಹಸ್ರಾರು ಮಂದಿ ವೀಕ್ಷಿಸಿದ್ದಾರೆ, ಶೇರ್ ಮಾಡಿದ್ದಾರೆ ಮತ್ತು ಕಮೆಂಟ್ ಸಹ ಮಾಡಿದ್ದಾರೆ.

  ಕೆಲ ಕಾಲ ಸಿನಿಮಾದಿಂದ ದೂರ ಉಳಿದಿದ್ದ ಮಾಧುರಿ

  ಕೆಲ ಕಾಲ ಸಿನಿಮಾದಿಂದ ದೂರ ಉಳಿದಿದ್ದ ಮಾಧುರಿ

  ವೈದ್ಯ ನೇನೆ ಅವರೊಂದಿಗೆ ಸಿನಿಮಾದಿಂದ ದೂರ ಉಳಿದಿದ್ದ ಮಾಧುರಿ ದೀಕ್ಷಿತ್ ನಂತರ ಮತ್ತೆ ಸಿನಿಮಾದಲ್ಲಿ ನಟಿಸಲು ಆರಂಭಿಸಿದರು. ಈಗ ಡಾನ್ಸ್‌ ರಿಯಾಲಿಟಿ ಶೋ, ಸಿನಿಮಾ, ಜಾಹೀರಾತು, ವೆಬ್‌ ಸೀರಿಸ್‌ಗಳಲ್ಲಿ ಬ್ಯುಸಿಯಾಗಿದ್ದಾರೆ.

  ಮಾಧುರಿ ನೃತ್ಯ ಈಗಲೂ ಫೇಮಸ್‌

  ಮಾಧುರಿ ನೃತ್ಯ ಈಗಲೂ ಫೇಮಸ್‌

  ದಿಲ್‌ ತೋ ಪಾಗಲ್ ಹೇ, ಹಮ್ ಆಪ್ಕೆ ಹೇ ಕೋನ್, ತೇಜಾಬ್, ಸಾಜನ್, ದಿಲ್, ಖಲ್ ನಾಯಕ್, ಬೇಟ, ಪುಕಾರ್ ಸೇರಿ ಹಲವು ಸೇರಿದಂತೆ ಹಲವು ಸಿನಿಮಾಗಳಲ್ಲಿ ಮಾಧುರಿ ಅವರ ನೃತ್ಯ ಜನಮಾನಸದಲ್ಲಿದೆ.

  English summary
  Greek woman dances for Madhuri Dixit's song. Video went viral in social media.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X