For Quick Alerts
  ALLOW NOTIFICATIONS  
  For Daily Alerts

  'ಉಗ್ರ ವೀರಂ' ಆದ ಹಾರ್ದಿಕ್ ಪಾಂಡ್ಯ- ನತಾಶಾ ಜೋಡಿಯ ಮಗ!

  |

  ಕ್ರಿಕೆಟಿಗ ಹಾರ್ದಿಕ್ ಪಾಂಡ್ಯ ಮತ್ತು ನಟಿ ನತಾಶಾ ಸ್ಟ್ಯಾಂಕೋವಿಚ್ ಜೋಡಿ ಮುದ್ದಾದ ಗಂಡು ಮಗುವಿಗೆ ಜನ್ಮನೀಡಿದ ಸಂಭ್ರಮದಲ್ಲಿದ್ದಾರೆ. ಜುಲೈ 30ರಂದು ತಾವು ಗಂಡು ಮಗುವಿನ ತಂದೆಯಾದ ಖುಷಿಯನ್ನು ಹಾರ್ದಿಕ್ ಪಾಂಡ್ಯ ಹಂಚಿಕೊಂಡಿದ್ದರು. ಮದುವೆಗೂ ಮುನ್ನವೇ, ನಿಶ್ಚಿತಾರ್ಥವಾದ ಏಳೇ ತಿಂಗಳಲ್ಲಿ ಮಗು ಜನಿಸಿರುವುದರಿಂದ ಹಾರ್ದಿಕ್ ಪಾಂಡ್ಯ ನತಾಶಾ ಅವರನ್ನು ಸಾಮಾಜಿಕ ಜಾಲತಾಣದಲ್ಲಿ ಟ್ರೋಲ್ ಮಾಡಲಾಗಿತ್ತು.

  ಅದರ ಜತೆಗೆ ಸಾಮಾಜಿಕ ಜಾಲತಾಣಗಳಲ್ಲಿ ಇಬ್ಬರಿಗೂ ಶುಭಾಶಯಗಳ ಮಹಾಪೂರವೇ ಹರಿದುಬರುತ್ತಿದೆ. ಕ್ರಿಕೆಟಿಗ ಹಾರ್ದಿಕ್ ಪಾಂಡ್ಯಗೆ ಅಪಾರ ಅಭಿಮಾನಿಗಳಿದ್ದಾರೆ. ಇನ್ನು ಸರ್ಬಿಯಾ ಮೂಲದ ನಟಿ ನತಾಶಾ ಕನ್ನಡದ 'ದನ ಕಾಯೋನು' ಚಿತ್ರದ ಸೇರಿದಂತೆ ವಿವಿಧ ಸಿನಿಮಾಗಳಲ್ಲಿ ನಟಿಸಿದ್ದಾರೆ. ರಿಯಾಲಿಟಿ ಶೋ ಮತ್ತು ಕಿರುತೆರೆ ಕಾರ್ಯಕ್ರಮಗಳ ಮೂಲಕ ಅವರು ಜನರಿಗೆ ಪರಿಚಿತರಾಗಿದ್ದಾರೆ. ಹೀಗಾಗಿ ಇಬ್ಬರಿಗೂ ಅಭಿಮಾನಿಗಳ ವಲಯ ದೊಡ್ಡದು. ಮಗು ಹುಟ್ಟಿದ ವಾರದಲ್ಲಿಯೇ ಹಾರ್ದಿಕ್ ಪಾಂಡ್ಯ ನಾಮಕರಣ ಮಾಡಿದ್ದಾರೆ. ಮಗುವಿಗೆ ಮಹರ್ಷಿಯೊಬ್ಬರ ಹೆಸರನ್ನು ಇರಿಸಿದ್ದಾರೆ.

  ತಂದೆಯಾದ ಖುಷಿಯಲ್ಲಿ ಹಾರ್ದಿಕ್ ಪಾಂಡ್ಯ: ಸಂತಸ ಹಂಚಿಕೊಂಡ ದಂಪತಿ

  ಅಧಿಕೃತವಾಗಿ ಬಹಿರಂಗವಿಲ್ಲ

  ಅಧಿಕೃತವಾಗಿ ಬಹಿರಂಗವಿಲ್ಲ

  ಅಂದಹಾಗೆ, ಹಾರ್ದಿಕ್ ಪಾಂಡ್ಯ ಅಥವಾ ನತಾಶಾ ಮಗುವಿನ ಹೆಸರನ್ನು ಅಧಿಕೃತವಾಗಿ ಬಹಿರಂಗಪಡಿಸಿಲ್ಲ. ಆದರೆ ಅವರು ಸಾಮಾಜಿಕ ಜಾಲತಾಣದಲ್ಲಿ ಹಾಕಿಕೊಂಡಿರುವ ಫೋಟೊಗಳನ್ನು ಸೂಕ್ಷ್ಮವಾಗಿ ಗಮನಿಸಿರುವ ಅಭಿಮಾನಿಗಳು ಅಲ್ಲಿಯೇ ಮಗುವಿನ ಹೆಸರು ಇರುವುದನ್ನು ಕಂಡು ಹಿಡಿದಿದ್ದಾರೆ. ಮಗು ಹುಟ್ಟಿದ ಸಂಭ್ರಮದಲ್ಲಿ ಆಸ್ಪತ್ರೆ ಸಿಬ್ಬಂದಿ ಕೇಕ್ ಹಂಚಿ ಶುಭ ಕೋರಿದ್ದರು. ನತಾಶಾ ಕೇಕ್ ಕತ್ತರಿಸುವ ಫೋಟೊವನ್ನು ಪಾಂಡ್ಯ ಹಂಚಿಕೊಂಡಿದ್ದಾರೆ. ಆ ಕೇಕ್ ಮೇಲೆ ಮಗುವಿನ ಹೆಸರು ಬರೆಯಲಾಗಿದೆ.

  ಪಾಂಡ್ಯ ಜೂನಿಯರ್ ಅಗಸ್ತ್ಯ

  ಪಾಂಡ್ಯ ಜೂನಿಯರ್ ಅಗಸ್ತ್ಯ

  ಹಾರ್ದಿಕ್ ಮತ್ತು ನತಾಶಾ ದಂಪತಿ ತಮ್ಮ ಮುದ್ದಾದ ಮಗುವಿಗೆ, ಅಗಸ್ತ್ಯ ಮಹಾಮುನಿಗಳ ಹೆಸರು ಇರಿಸಿದ್ದಾರೆ. ಇದು ಕನ್ನಡದ 'ಉಗ್ರಂ' ಚಿತ್ರದ ಹೀರೋ 'ಅಗಸ್ತ್ಯ'ನನ್ನೂ ನೆನಪಿಸುತ್ತದೆ. 'ವೆಲ್‌ಕಮ್ ಪಾಂಡ್ಯ ಜೂನಿಯರ್ ಅಗಸ್ತ್ಯ' ಎಂದು ಹೆಸರಿನ ಟ್ಯಾಗ್ ಆ ಕೇಕ್‌ನಲ್ಲಿತ್ತು. ಹೀಗಾಗಿ ಪಾಂಡ್ಯ ಜೂನಿಯರ್‌ಗೆ 'ಅಗಸ್ತ್ಯ' ಹೆಸರು ಇರಿಸಿರುವುದು ಖಾತರಿಯಾಗಿದೆ.

  ಮದುವೆಗೂ ಮುನ್ನ ತಂದೆಯಾಗುತ್ತಿರುವ ಹಾರ್ದಿಕ್ ಪಾಂಡ್ಯಗೆ ಶುಭಾಶಯಗಳ ಮಹಾಪೂರ

  ಮನೆಗೆ ಬಂದ ಅಗಸ್ತ್ಯ ಪಾಂಡ್ಯ

  ಮನೆಗೆ ಬಂದ ಅಗಸ್ತ್ಯ ಪಾಂಡ್ಯ

  ವಾರದ ಬಳಿಕ ನತಾಶಾ ಮತ್ತು ಹಾರ್ದಿಕ್ ಪಾಂಡ್ಯ, ಅಗಸ್ತ್ಯ ಪಾಂಡ್ಯನ ಜತೆಗೆ ಮನೆಗೆ ಮರಳಿದ್ದಾರೆ. ಈ ಖುಷಿಯನ್ನು ಹಾರ್ದಿಕ್ ಆಸ್ಪತ್ರೆ ಸಿಬ್ಬಂದಿ ಜತೆ ಫೋಟೊಗಳನ್ನು ತೆಗೆಸಿಕೊಂಡು ಹಂಚಿಕೊಂಡಿದ್ದಾರೆ. ನನ್ನ ಮಗುವನ್ನು ಈ ಜಗತ್ತಿಗೆ ತಂದ ನಿಮಗೆ ಎಂದೆಂದಿಗೂ ಋಣಿಯಾಗಿರುತ್ತೇನೆ ಎಂದು ವೈದ್ಯರು ಮತ್ತು ಇತರೆ ಸಿಬ್ಬಂದಿಗೆ ಧನ್ಯವಾದ ಸಲ್ಲಿಸಿದ್ದಾರೆ.

  ಮಗುವಿಗೆ ಮದುವೆ ನೋಡುವ ಭಾಗ್ಯ!

  ಮಗುವಿಗೆ ಮದುವೆ ನೋಡುವ ಭಾಗ್ಯ!

  2020ರ ಹೊಸ ವರ್ಷದ ಮೊದಲ ದಿನವೇ ಹಾರ್ದಿಕ್ ಪಾಂಡ್ಯ ಮತ್ತು ನತಾಶಾ ಎಂಗೇಜ್ಮೆಂಟ್ ಮಾಡಿಕೊಂಡಿದ್ದರು. ನಂತರ ಆರು ತಿಂಗಳಿನಲ್ಲಿಯೇ ತಾವು ತಂದೆಯಾಗುತ್ತಿರುವ ಸುದ್ದಿಯನ್ನು ಹೇಳುವ ಮೂಲಕ ಹಾರ್ದಿಕ್ ಅಚ್ಚರಿ ಮೂಡಿಸಿದ್ದರು. ಇದೀಗ ಗಂಡು ಮಗುವಿನ ತಂದೆಯಾಗಿದ್ದಾರೆ. ಮದುವೆ ಯಾವಾಗ ಆಗುತ್ತೀರಿ ಎಂದು ಅನೇಕರು ಹಾರ್ದಿಕ್ ಪಾಂಡ್ಯ ಕಾಲೆಳೆಯುತ್ತಿದ್ದರೆ, ಮಗುವಿಗೆ ಅಪ್ಪ ಅಮ್ಮನ ಮದುವೆ ನೋಡುವ ಭಾಗ್ಯ ಕರುಣಿಸಿದ ಅಪರೂಪದ ಜೋಡಿ ಎಂದೂ ಟ್ರೋಲ್ ಮಾಡುತ್ತಿದ್ದಾರೆ.

  ಕ್ರಿಕೆಟರ್ ಹಾರ್ದಿಕ್ ಪಾಂಡ್ಯ ಹುಡ್ಗಿ ನತಾಶಾ ಬಗ್ಗೆ ನಿಮಗೆಷ್ಟು ಗೊತ್ತು.?

  English summary
  Cricketer Hardik Pandya and actress Natasa Stankovic has named their baby boy as Agastya. A cake cutting photo of the pair has revealed the name.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X