»   » ಚಿತ್ರಗಳಲ್ಲಿ ಹೇಮಾ ಮಾಲಿನಿ ಪುತ್ರಿ ಮೆಹಂದಿ ಸಂಭ್ರಮ

ಚಿತ್ರಗಳಲ್ಲಿ ಹೇಮಾ ಮಾಲಿನಿ ಪುತ್ರಿ ಮೆಹಂದಿ ಸಂಭ್ರಮ

Posted By:
Subscribe to Filmibeat Kannada

ಕನಸಿನ ಕನ್ಯೆ ಹೇಮಾ ಮಾಲಿನಿ ಹಾಗೂ ಧರ್ಮೇಂದ್ರ ಅವರ ಕಿರಿಯ ಪುತ್ರಿ ಅಹನಾ ಡಿಯೋಲ್ ಮದುವೆ ಇದೇ ಭಾನುವಾರ (ಫೆ.2) ನೆರವೇರುತ್ತಿದೆ. ಶುಕ್ರವಾರ ಮುಂಬೈನ ಜುಹು ಬಂಗಲೆಯಲ್ಲಿ ಅಹಾನಾ ಡಿಯೋಲ್ ಅವರಿಗೆ ಮೆಹಂದಿ ಹಚ್ಚುವ ಕಾರ್ಯಕ್ರಮ ನಡೆಯಿತು.

ಈ ಶುಭ ಸಮಾರಂಭಕ್ಕೆ ಸಾಕಷ್ಟು ಸಂಖ್ಯೆಯಲ್ಲಿ ಬಾಲಿವುಡ್ ತಾರೆಗಳು ಆಗಮಿಸಿದ್ದರು. ಇಲ್ಲಿವೆ ನೋಡಿ ಮೆಹಂದಿಯಷ್ಟೇ ಬಣ್ಣಬಣ್ಣದ ಫೋಟೋಗಳು. ದೆಹಲಿ ಮೂಲದ ಬಿಜಿನೆಸ್ ಮ್ಯಾನ್ ವೈಭವ್ ವೋರಾ ಅವರ ಕೈಹಿಡಿಯುತ್ತಿದ್ದಾರೆ ಅಹಾನಾ. [ಆ ಪಾತ್ರಕ್ಕೆ ಹೇಮಾ ಮಾಲಿನಿ ಕೇಳಿದ್ದು 1 ಕೋಟಿ]

ನಿಶ್ಚಿತಾರ್ಥಕ್ಕೂ ಮೊದಲು ಕೆಲ ತಿಂಗಳ ಕಾಲ ವೈಭವ್ ಜೊತೆ ಅಹಾನಾ ಡೇಟಿಂಗ್ ಮಾಡಿದ್ದರು. ಅಕ್ಕ ಇಷಾ ಡಿಯೋಲ್ ಮದುವೆ ಸಮಯದಲ್ಲಿ ಅಹಾನಾಗೆ ವೈಭವ್ ಪರಿಚಯವಾಗಿದ್ದ. ಅಲ್ಲಿಂದ ಇಬ್ಬರ ನಡುವೆ ಲವ್ ಶುರುವಾಗಿತ್ತು. ಈಗ ಸಪ್ತಪದಿ ಮೂಲಕ ಒಂದಾಗುತ್ತಿದ್ದಾರೆ. ಸ್ಲೈಡ್ ನಲ್ಲಿ ನೋಡಿ ಮೆಹಂದಿ ಸಂಭ್ರಮ...

ಅಹಾನಾ ಕೈಹಿಡಿಯುತ್ತಿರುವ ವರ ಆಜಾನುಬಾಹು

ಅಹಾನಾ ಕೈಹಿಡಿಯುತ್ತಿರುವ ವರ ಆಜಾನುಬಾಹು ಎಂಬುದು ಈ ಫೋಟೋ ನೋಡಿದರೆ ಗೊತ್ತಾಗುತ್ತದೆ. ಮೆಹಂದಿ ಸಂಭ್ರಮದಲ್ಲಿ ಹೊಸ ಜೋಡಿ ಕಾಣಿಸಿಕೊಂಡಿದ್ದು ಹೀಗೆ.

ಇಷಾ ಡಿಯೋಲ್ ಕೈಗೆ ಏನಾಗಿದೆ?

ಅಹಾನಾ ಡಿಯೋಲ್ ಅಕ್ಕ ಇಷಾ ಡಿಯೋಲ್ ತಮ್ಮ ಪತಿ ಭರತ್ ತಕ್ತಾನಿಯೊಂದಿಗೆ ಕಾಣಿಸಿಕೊಂಡಿದ್ದು ಹೀಗೆ. ಇಷಾ ಡಿಯೋಲ್ ಕೈಗೆ ಪೆಟ್ಟು ಬಿದ್ದಿದ್ದು ಬ್ಯಾಂಡೇಜ್ ಮಾಡಿಕೊಂಡಿರುವುದನ್ನೂ ಚಿತ್ರದಲ್ಲಿ ಕಾಣಬಹುದು.

ಅಕ್ಕತಂಗಿಯರು ಎತ್ತರ, ಬಣ್ಣ ಒಂದೇ

ಅಕ್ಕನ ಜೊತೆ ತಂಗಿ ಕಾಣಿಸಿಕೊಂಡಿದ ಬಗೆ. ಇಬ್ಬರೂ ಎತ್ತರ,ಬಣ್ಣ, ಅಂದಚೆಂದಲ್ಲಿ ಸಮನಾಗಿದ್ದಾರೆ. ಅಕ್ಕನಿಗಿಂತ ತಂಗಿ ಯಾವುದರಲ್ಲೂ ಕಮ್ಮಿ ಇಲ್ಲ ಅನ್ನಿಸುವುದಿಲ್ಲವೇ?

ಗ್ರೂಫ್ ಫೋಟೋದಲ್ಲಿ ಹೇಮಾ ಮಾಲಿನಿ

ಗ್ರೂಫ್ ಫೋಟೋದಲ್ಲಿ ಎಡದಿಂದ ಬಲಕ್ಕೆ...ಅಹಾನಾ ಡಿಯೋಲ್ ಭಾವಿ ಪತಿ ವೈಭವ್ ವೋರಾ, ಅಹನಾ, ಹೇಮಾ ಮಾಲಿನಿ, ಇಷಾ ಡಿಯೋಲ್, ಭರತ್ ತಕ್ತಾನಿ.

ಇನ್ನೂ ಮಾಸದ ಗ್ಲಾಮರ್

ಹೇಮಾ ಮುಖದಲ್ಲಿ ಇನ್ನೂ ಮಾಸದ ಗ್ಲಾಮರ್. ತನ್ನ ಎರಡು ಕಣ್ಣುಗಳು ಅಹನಾ ಹಾಗೂ ಇಷಾ ಜೊತೆಗೆ ಹೇಮಾ ಮಾಲಿನಿಯೇ ಸೊಗಸಾಗಿ ಕಾಣುತ್ತಾರೆ.

ಸದಾ ಬಣ್ಣದ ಜಗತ್ತಿನಿಂದ ದೂರ

ಮೆಹಂದಿ ಸಂಭ್ರಮದಲ್ಲಿ ಎಲ್ಲರೂ ಕಾಣಿಸಿಕೊಂಡರೂ ಅಪ್ಪ ಧರ್ಮೇಂದ್ರ ಮಾತ್ರ ಫೊಟೋ ಕಣ್ಣಿಗೆ ಸಿಗಲಿಲ್ಲ. ಇನ್ನು ಅಹಾನಾ ವಿಚಾರಕ್ಕೆ ಬರುವುದಾದರೆ, ಅಪ್ಪ ಅಮ್ಮ ಬಾಲಿವುಡ್ ಚಿತ್ರರಂಗದಲ್ಲಿದ್ದರೂ ಸದಾ ಬಣ್ಣದ ಜಗತ್ತಿನಿಂದ ದೂರ ಉಳಿದಿದ್ದಾರೆ.

English summary
Ahana Deol, Dharmendra and Hema Malini's younger daughter and Esha Deol's younger sister is all set to tie the knot this Sunday. The Mehendi ceremony kickstarted today at Hema Malini's bungalow in Juhu, Mumbai, with the who's who of the Bollywood industry making their presence felt. 
 
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada