For Quick Alerts
  ALLOW NOTIFICATIONS  
  For Daily Alerts

  ಡ್ರಗ್ಸ್ ಪ್ರಕರಣದಲ್ಲಿ ದೀಪಿಕಾ ಪಡುಕೋಣೆ ಹೆಸರು ಬರಲು ಕಾರಣವೇನು?

  |

  ಡ್ರಗ್ಸ್ ಪ್ರಕರಣದಲ್ಲಿ ಬಾಲಿವುಡ್ ಸ್ಟಾರ್ ನಟಿ ದೀಪಿಕಾ ಪಡುಕೋಣೆ ಹೆಸರು ಕೇಳಿಬಂದಿದೆ. ಎನ್‌ಸಿಬಿ ಅಧಿಕಾರಿಗಳು ದೀಪಿಕಾ ಪಡುಕೋಣೆಯ ವ್ಯವಸ್ಥಾಪಕಿಗೆ ಸಮನ್ಸ್ ಜಾರಿ ಮಾಡಿದ್ದು, ದೀಪಿಕಾ ಗೂ ಇದೇ ವಾರದಲ್ಲಿ ಸಮನ್ಸ್ ಜಾರಿಯಾಗುವ ಸಾಧ್ಯತೆ ಇದೆ.

  ಈಗಾಗಲೇ ಎನ್‌ಸಿಬಿಯಿಂದ ಡ್ರಗ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧನಕ್ಕೆ ಒಳಗಾಗಿರುವ ಸುಶಾಂತ್ ಸಿಂಗ್ ರ ಮಾಜಿ ವ್ಯವಸ್ಥಾಪಕ ಜಯ ಸಹಾ ವಿಚಾರಣೆ ವೇಳೆ ದೀಪಿಕಾ ಪಡುಕೋಣೆ ಹೆಸರು ಹೊರಬಂದಿದೆ ಎನ್ನಲಾಗುತ್ತಿದೆ.

  ಇದರ ಜೊತೆಗೆ ದೀಪಿಕಾ ಪಡುಕೋಣೆ ಹಾಗೂ ಜಯ ಶಾ ನಡುವೆ ನಡೆದಿದೆ ಎನ್ನಲಾಗುತ್ತಿರುವ ಮೂರು ವರ್ಷ ಹಿಂದಿನ ವಾಟ್ಸ್‌ಆಪ್ ಚಾಟ್ ಬಹಿರಂಗವಾಗಿದ್ದು, ವಾಟ್ಸ್‌ಆಪ್ ಚಾಟ್ ಆಧಾರದಲ್ಲಿಯೇ ದೀಪಿಕಾ ರ ವ್ಯವಸ್ಥಾಪಕಿ ಕರಿಶ್ಮಾ ಪ್ರಕಾಶ್‌ ಗೆ ನೊಟೀಸ್ ನೀಡಲಾಗಿದೆ.

  ಡಿ ಮತ್ತು ಕೆ ಎಂದು ಸೇವ್ ಮಾಡಿಕೊಂಡಿದ್ದ ಸಾಹಾ

  ಡಿ ಮತ್ತು ಕೆ ಎಂದು ಸೇವ್ ಮಾಡಿಕೊಂಡಿದ್ದ ಸಾಹಾ

  ಜಯ ಸಹಾ, 'ಡಿ' ಮತ್ತು 'ಕೆ' ಎಂದು ಹೆಸರು ಸೇವ್ ಮಾಡಿಕೊಂಡಿರುವ ವ್ಯಕ್ತಿಗಳೊಂದಿಗೆ ವಾಟ್ಸ್‌ಆಪ್‌ ನಲ್ಲಿ ಚರ್ಚೆ ಮಾಡಿದ್ದಾರೆ. 'ಡಿ' ಎಂಬುವರು 'ಕೆ' ಎಂಬುವರನ್ನು 'ಮಾಲು ಎಲ್ಲಿದೆ'. ಅದಕ್ಕೆ ಪ್ರತಿಕ್ರಿಯಿಸುವ 'ಕೆ' ನನ್ನ ಬಳಿ ಇದೆ ಆದರೆ ಮನೆಯಲ್ಲಿದೆ ಎಂದು ಹೇಳುತ್ತಾರೆ. ಈ ವಾಟ್ಸ್‌ಆಪ್ ಚಾಟ್ 2017 ನೇ ಇಸವಿಯದ್ದು.

  'ಗಾಂಜಾ ಬೇಡ ಹಶ್ ಬೇಕು' ಎಂದು ಸಂದೇಶ

  'ಗಾಂಜಾ ಬೇಡ ಹಶ್ ಬೇಕು' ಎಂದು ಸಂದೇಶ

  'ಡಿ' ಎಂಬುವರು ನನಗೆ ಗಾಂಜಾ ಬೇಡ 'ಹಶ್' ಬೇಕು ಎಂದು ಸ್ಪಷ್ಟವಾಗಿ ಕೇಳುತ್ತಾರೆ. ಇದಕ್ಕೆ 'ಕೆ' ಪ್ರತಿಕ್ರಿಯಿಸುತ್ತಾರೆ. ಚರ್ಚೆ ಹೀಗೆಯೇ ಸಾಗುತ್ತದೆ. ಮಾಧ್ಯಮಗಳ ಪ್ರಕಾರ 'ಡಿ' ಎಂಬ ವ್ಯಕ್ತಿ ದೀಪಿಕಾ ಪಡುಕೋಣೆ ಆಗಿದ್ದಾರೆ! 'ಕೆ' ಎಂಬ ವ್ಯಕ್ತಿ ದೀಪಿಕಾರ ವ್ಯವಸ್ಥಾಪಕಿ ಕರಿಶ್ಮಾ ಆಗಿದ್ದಾರೆ!

  ಜಯ ಸಾಹಾ ಜೊತೆಗೆ ಇನ್ನೂ ಹಲವರು ಮಾತನಾಡಿದ್ದಾರೆ

  ಜಯ ಸಾಹಾ ಜೊತೆಗೆ ಇನ್ನೂ ಹಲವರು ಮಾತನಾಡಿದ್ದಾರೆ

  ಜಯ ಸಾಹಾ ಜೊತೆ ಇನ್ನೂ ಹಲವರು ಡ್ರಗ್ಸ್ ಕುರಿತು ಮಾತನಾಡಿದ್ದಾರೆ ಎನ್ನಲಾಗುತ್ತಿದ್ದು, ಎನ್‌ಸಿಬಿ ಅಧಿಕಾರಿಗಳು ಇದೇ ವಿಷಯದ ಕುರಿತಾಗಿ ತನಿಖೆ ನಡೆಸುತ್ತಿದ್ದಾರೆ. ದೀಪಿಕಾ ಪಡುಕೋಣೆ ಹಾಗೂ ಇನ್ನೂ ಹಲವರಿಗೆ ಎನ್‌ಸಿಬಿ ನೊಟೀಸ್ ನೀಡುವ ಸಾಧ್ಯತೆ ಇದೆ.

  ಗಾಂಜಾ ಕೇಳಿ ತಗಲಕೊಂಡ Deepika Padukone..!? | Filmibeat Kannada
  ಜೈಲಿನಲ್ಲಿರುವ ರಿಯಾ ಚಕ್ರವರ್ತಿ

  ಜೈಲಿನಲ್ಲಿರುವ ರಿಯಾ ಚಕ್ರವರ್ತಿ

  ಸುಶಾಂತ್‌ ಪ್ರೇಯಸಿ ರಿಯಾ ಈಗಾಗಲೇ ಬಂಧನದಲ್ಲಿದ್ದು, ಜಯ ಸಾಹಾ ಇಂದ ಸುಶಾಂತ್‌ ಗಾಗಿ ಗಾಂಜಾ ತರಿಸುತ್ತಿದ್ದುದಾಗಿ ರಿಯಾ ಒಪ್ಪಿಕೊಂಡಿದ್ದಾರೆ ಎನ್ನಲಾಗಿದೆ. ಎನ್‌ಸಿಬಿ ಸಹ ಇದನ್ನೇ ನ್ಯಾಯಾಲಯದಲ್ಲಿ ಸಹ ಹೇಳಿದೆ.

  English summary
  Deepika Padukone's name appeared in drugs case. NCB sommons Deepika's manager Karishma.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X