For Quick Alerts
  ALLOW NOTIFICATIONS  
  For Daily Alerts

  'ಧೋನಿ' ಚಿತ್ರಕ್ಕೆ ಸುಶಾಂತ್ ಗೆ ಕೊಟ್ಟ ಸಂಭಾವನೆ ಎಷ್ಟು? ಧೋನಿ ಪಡೆದಿದ್ದೆಷ್ಟು?

  By Sonu Gowda
  |

  ಬಾಲಿವುಡ್ ಚಿತ್ರರಂಗದಲ್ಲಿ ಭಾರಿ ಸಂಚಲನ ಮೂಡಿಸಿರುವ 'ಎಂ.ಎಸ್ ಧೋನಿ: ದ ಅನ್ ಟೋಲ್ಡ್ ಸ್ಟೋರಿ' ತೆರೆಗೆ ಬರಲು ಸಜ್ಜಾಗಿದೆ. ಸೆಪ್ಟೆಂಬರ್ 30ರಂದು ಈ ಸಿನಿಮಾ ದೇಶದಾದ್ಯಂತ ತೆರೆ ಕಾಣುತ್ತಿದೆ. ಈಗಾಗಲೇ ಅಸಲಿ ಧೋನಿ ಮತ್ತು ನಕಲಿ ಧೋನಿ ಸುಶಾಂತ್ ಸಿಂಗ್ ರಜಪೂತ್ ಅವರು ಚಿತ್ರದ ಬಗ್ಗೆ ಸಾಕಷ್ಟು ಪ್ರಚಾರ ನೀಡಿದ್ದಾರೆ.

  ಟ್ರೈಲರ್ ಮತ್ತು ಹಾಡುಗಳಿಗೆ ಎಲ್ಲಾ ಕಡೆಯಿಂದ ಉತ್ತಮ ರೆಸ್ಪಾನ್ಸ್ ವ್ಯಕ್ತವಾಗಿದ್ದು, ಧೋನಿ ಅಭಿಮಾನಿಗಳು ಕೂಡ ತಮ್ಮ ನೆಚ್ಚಿನ ಕ್ರಿಕೆಟ್ ದೊರೆಯ ನಿಜ ಜೀವನದ ಕಥೆಯನ್ನು ತೆರೆಯ ಮೇಲೆ ನೋಡಲು ಕಾತರದಿಂದ ಕಾದಿದ್ದಾರೆ.[ಕ್ರಿಕೆಟ್ ದಿಗ್ಗಜ ಧೋನಿಗೆ 'ಕಂಗ್ರಾಟ್ಸ್' ಎಂದ ರಜನಿ, ಬೆರಗಾದ ಕ್ಯಾಪ್ಟನ್]

  ಇದೀಗ ಈ ಚಿತ್ರದ ಕಡೆಯಿಂದ ಬಂದ ಲೇಟೆಸ್ಟ್ ಸುದ್ದಿ ಏನಪ್ಪಾ ಅಂದ್ರೆ, ಈ ಚಿತ್ರಕ್ಕಾಗಿ ಸುಶಾಂತ್ ಸಿಂಗ್ ಅವರು ಪಡೆದುಕೊಂಡ ಸಂಭಾವನೆ, ಮತ್ತು ಧೋನಿ ಅವರ ಜೀವನಾಧರಿತ ಕಥೆಯನ್ನು ಪಡೆಯಲು ಧೋನಿಗೆ ಕೊಟ್ಟ ಸಂಭಾವನೆ ಬಗ್ಗೆ ಮಾಹಿತಿ ಹೊರಬಿದ್ದಿದೆ.

  ಇಲ್ಲಿ ಧೋನಿ ಪಾತ್ರ ಮಾಡಿರುವ ಸುಶಾಂತ್ ಅವರಿಗಿಂತ ಹೆಚ್ಚಾಗಿ, ಅಸಲಿ ಧೋನಿ ಅವರೇ ಅಧಿಕ ಸಂಭಾವನೆ ಪಡೆದಿದ್ದಾರೆ. ಹೆಚ್ಚಿನ ಮಾಹಿತಿ ಸಂಗ್ರಹಿಸಲು ಮುಂದೆ ಓದಿ...

  ಧೋನಿ ಪಾತ್ರಕ್ಕಾಗಿ ಸುಶಾಂತ್ ಪಡೆದ ಸಂಭಾವನೆ

  ಧೋನಿ ಪಾತ್ರಕ್ಕಾಗಿ ಸುಶಾಂತ್ ಪಡೆದ ಸಂಭಾವನೆ

  ಕ್ರಿಕೆಟ್ ಲೋಕದಲ್ಲಿ ವಿಶೇಷ ಸಾಧನೆಗೈದಿರುವ ಮಹೇಂದ್ರ ಸಿಂಗ್ ಧೋನಿ ಅವರ ಹಿಂದಿರುವ, ಇಂಟ್ರೆಸ್ಟಿಂಗ್ ಕಹಾನಿ ಹೊರ ಬೀಳಲು ಒಂದೇ ದಿನ ಬಾಕಿ ಉಳಿದಿದ್ದು, ಕೌಂಟ್ ಡೌನ್ ಶುರುವಾಗಿದೆ. ಈ ಚಿತ್ರದ ಪ್ರಮುಖ ಕೇಂದ್ರ ಬಿಂದು ಎಂ.ಎಸ್ ಧೋನಿ. ಈ ಧೋನಿ ಪಾತ್ರ ವಹಿಸಿದ್ದು, 'ಕಾಯ್ ಪೋಚೆ' ಖ್ಯಾತಿಯ ನಟ ಸುಶಾಂತ್ ಸಿಂಗ್ ರಜಪೂತ್. ಈ ಪ್ರಮುಖ ಪಾತ್ರ ವಹಿಸಲು ಸುಶಾಂತ್ ಪಡೆದ ಸಂಭಾವನೆ ಭರ್ತಿ 2 ಕೋಟಿ ರೂಪಾಯಿ.

  ಅಸಲಿ ಧೋನಿ ಪಡೆದ ಸಂಭಾವನೆ ಎಷ್ಟು?

  ಅಸಲಿ ಧೋನಿ ಪಡೆದ ಸಂಭಾವನೆ ಎಷ್ಟು?

  ಕ್ರಿಕೆಟ್ ದಿಗ್ಗಜ ಮಹೇಂದ್ರ ಸಿಂಗ್ ಧೋನಿ ಅವರ ಬಯೋಪಿಕ್ ಸಿನಿಮಾ ಮಾಡಲು, ನಿರ್ದೇಶಕ ನೀರಜ್ ಪಾಂಡೆ ಅವರು ಧೋನಿ ಅವರಿಗೆ ನೀಡಿದ್ದು, ಬರೋಬ್ಬರಿ 45 ಕೋಟಿ ರೂಪಾಯಿ. ಇದೇ ಮೊದಲ ಬಾರಿಗೆ ಬಾಲಿವುಡ್ ನಲ್ಲಿ ಚಿತ್ರದ ನಾಯಕನಿಗಿಂತ ಚಿತ್ರಕತೆಗೆ ಅತ್ಯಂತ ದೊಡ್ಡ ಬೆಲೆ ತೆತ್ತಿರುವ ಮೂಲಕ ಇತಿಹಾಸ ಸೃಷ್ಟಿಯಾಗಿದೆ.

  ಸುಶಾಂತ್ ಶ್ರಮಕ್ಕೆ, ಮೆಚ್ಚುಗೆಯ ಮಹಾಪೂರ

  ಸುಶಾಂತ್ ಶ್ರಮಕ್ಕೆ, ಮೆಚ್ಚುಗೆಯ ಮಹಾಪೂರ

  ಕ್ರಿಕೆಟಿಗ ಧೋನಿಯವರಂತಾಗಲು ನಟ ಸುಶಾಂತ್ ಸಿಂಗ್ ರಜಪೂತ್ ಅವರ ಸಾಕಷ್ಟು ಸರ್ಕಸ್ ಮಾಡಿದ್ದು, ಅದು ಈಗಾಗಲೇ ಬಿಡುಗಡೆ ಆಗಿರುವ ಟ್ರೈಲರ್ ನಿಂದ ಸಾಬೀತಾಗಿದೆ. ಮಾತ್ರವಲ್ಲದೇ ಧೋನಿ ಅವರ ಬಾಡಿ ಲಾಂಗ್ವೇಜ್ ನ್ನು, ಸಿನಿಮಾದಲ್ಲಿ ಯಶಸ್ವಿಯಾಗಿ ನಿಭಾಯಿಸಿರುವ ನಟ ಸುಶಾಂತ್ ಅವರಿಗೆ ಎಲ್ಲಾ ಕಡೆಯಿಂದ ಮೆಚ್ಚುಗೆಯ ಸುರಿಮಳೆ ಸುರಿಯುತ್ತಿದೆ.

  ಸಂಭಾವನೆ ಬಗ್ಗೆ ಗಾಸಿಪ್

  ಸಂಭಾವನೆ ಬಗ್ಗೆ ಗಾಸಿಪ್

  ಅಂದಹಾಗೆ ಇವರಿಬ್ಬರಿಗೆ ನೀಡಿರುವ ಸಂಭಾವನೆ ಬಗ್ಗೆ ಬಾಲಿವುಡ್ ಅಂಗಳದಲ್ಲಿ ಭಾರಿ ಗುಸು-ಗುಸು ಏರ್ಪಟ್ಟಿದೆ. ಸುಶಾಂತ್ ಅವರಿಗೆ ನೀಡಿರುವ ಸಂಭಾವನೆ ಬಗ್ಗೆ ಹಲವು ಚರ್ಚೆ ಏರ್ಪಟ್ಟಿದೆ. ಯಾಕೆಂದರೆ ಭಾರತೀಯ ಕ್ರಿಕೆಟ್ ತಂಡದ ನಾಯಕನ ಪಾತ್ರಕ್ಕಾಗಿ ಸುಶಾಂತ್ ಮಾಜಿ ಕ್ರಿಕೆಟಿಗ ಕಿರಣ್ ಮೋರೆ ಅವರಿಂದ ತರಬೇತಿ ಕೂಡ ಪಡೆದಿದ್ದರು. ಆದ್ದರಿಂದ ಅವರು ಪಟ್ಟ ಶ್ರಮಕ್ಕಾದರೂ ಸ್ವಲ್ಪ ಹೆಚ್ಚಿಗೆ ಸಂಭಾವನೆ ನೀಡಬಹುದಿತ್ತು. ಬರೀ ಕತೆ ಕೊಟ್ಟ ಧೋನಿಗೆ ಅಷ್ಟೊಂದು ದುಡ್ಡು ಸುರಿಯುವ ಅವಕಾಶ ಇತ್ತೇ ಅನ್ನೋ ಮಾತು ಅಲ್ಲಲ್ಲಿ ಕೇಳಿಬರುತ್ತಿದೆ.

  English summary
  Dhoni was given Rs 45 crore for the movie-making rights to his life and access to personal information, documents and pictures, plus Dhoni’s availability for marketing and promotion of the film. In contrast Actor Sushant Singh Rajput was paid Rs 2 crore to play Dhoni.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X