For Quick Alerts
  ALLOW NOTIFICATIONS  
  For Daily Alerts

  'ಸಂಜು' ಮಾಡಿದ್ದಕ್ಕೆ ಸಂಜಯ್ ದತ್ ಗೆ ಎಷ್ಟು ಕೋಟಿ ಸಿಕ್ಕಿದೆ?

  By Bharath Kumar
  |

  ರಾಜ್ ಕುಮಾರ್ ಹಿರಾನಿ ನಿರ್ದೇಶನದಲ್ಲಿ ಮೂಡಿ ಬಂದಿರುವ 'ಸಂಜು' ಸಿನಿಮಾ ಬಾಲಿವುಡ್ ಬಾಕ್ಸ್ ಆಫೀಸ್ ನಲ್ಲಿ ಸದ್ದು ಮಾಡುತ್ತಿದೆ. ಬಿಡುಗಡೆಯಾದ ಎರಡು ವಾರದಲ್ಲೇ ಸುಮಾರು 250 ಕೋಟಿ ಗಳಿಸಿ ಮುಂದೆ ಸಾಗಿದ್ದು, 2018ನೇ ಸಾಲಿನ ಸೂಪರ್ ಹಿಟ್ ಸಿನಿಮಾ ಆಗಿದೆ.

  ರಣ್ಬೀರ್ ಕಪೂರ್ ಅವರ ಅದ್ಭುತ ನಟನೆಯಿಂದ 'ಸಂಜು' ಸಿನಿಮಾ ಪ್ರೇಕ್ಷಕರ ಮನಗೆದ್ದಿದ್ದು, ನೆಗಿಟೀವ್ ವಿರ್ಮಶೆ ಬಂದರೂ ಅದನ್ನ ಸೆಡ್ಡು ಹೊಡೆದು ಮುನ್ನುಗ್ಗುತ್ತಿದೆ.

  ಇಂತಹ ಹಿಟ್ ಚಿತ್ರಕ್ಕೆ ಸಂಜಯ್ ದತ್ ಅವರ ಬಯೋಪಿಕ್ ಎನ್ನುವುದು ವಿಶೇಷ. ತಮ್ಮ ಬಗ್ಗೆ ಬಯೋಪಿಕ್ ಸಿನಿಮಾ ಮಾಡಲು ಸಂಜಯ್ ದತ್ ಎಷ್ಟು ಹಣ ಪಡೆದಿರಬಹುದು ಎಂಬ ಕುತೂಹಲ ಈಗ ಚರ್ಚೆಯಾಗುತ್ತಿದೆ. 'ಸಂಜು' ಸಿನಿಮಾ ಮಾಡಲು ನಿರ್ಮಾಪಕರಿಂದ ಬಹುದೊಡ್ಡ ಸಂಭಾವನೆ ಪಡೆದಿದ್ದಾರಂತೆ ದತ್. ಹಾಗಿದ್ರೆ ಆ ಮೊತ್ತವೆಷ್ಟು.? ಮುಂದೆ ಓದಿ...

  ಬಯೋಪಿಕ್ ಗೆ ಸಿಕ್ಕ ಸಂಭಾವನೆ.?

  ಬಯೋಪಿಕ್ ಗೆ ಸಿಕ್ಕ ಸಂಭಾವನೆ.?

  'ಸಂಜು' ಸಿನಿಮಾ ಮಾಡಲು ನಿರ್ಮಾಪಕರಿಂದ ಸಂಜಯ್ ದತ್ ಪಡೆದಿರುವ ಮೊತ್ತ ಬರೋಬ್ಬರಿ 10 ಕೋಟಿಯಂತೆ. ರಾಜ್ ಕುಮಾರ್ ಹಿರಾನಿ ಮತ್ತು ವಿಧು ವಿನೋದ್ ಚೋಪ್ರಾ ಈ ಚಿತ್ರವನ್ನ ನಿರ್ಮಾಣ ಮಾಡಿದ್ದು, ಇವರಿಬ್ಬರಿಗೆ ಮಾತ್ರ ತಮ್ಮ ಜೀವನಕಥೆಯೊಳಗೆ ಪ್ರವೇಶ ಮಾಡಲು ಅನುಮತಿ ನೀಡಿದ್ದರಂತೆ.

  ಲಾಭದಲ್ಲಿ ಭಾಗ

  ಲಾಭದಲ್ಲಿ ಭಾಗ

  ಸಂಜಯ್ ದತ್ ಅವರ ಕಥೆಗೆ ಕೇವಲ ಸಂಭಾವನೆ ಮಾತ್ರವಲ್ಲ, ಚಿತ್ರದಿಂದ ಬರುವ ಲಾಭದಲ್ಲಿ ಶೇಕಡಾವಾರು ಲೆಕ್ಕದಲ್ಲಿ ಹಣ ನೀಡಬೇಕೆಂದು ಕೂಡ ಒಪ್ಪಂದವಾಗಿದೆಯಂತೆ. ಅಂದ್ರೆ, 10 ಕೋಟಿ ಬಿಟ್ಟು ಬರುವ ಲಾಭದಲ್ಲಿ ಭಾಗ.

  'ಸಂಜು': ನಿರ್ದೇಶಕರು ಮುಟ್ಟದ ಸಂಜಯ್ ದತ್ ಬದುಕಿನ 10 ಅಧ್ಯಾಯಗಳು'ಸಂಜು': ನಿರ್ದೇಶಕರು ಮುಟ್ಟದ ಸಂಜಯ್ ದತ್ ಬದುಕಿನ 10 ಅಧ್ಯಾಯಗಳು

  'ಸಂಜು' ಗಳಿಕೆ ಎಷ್ಟಾಗಿದೆ

  'ಸಂಜು' ಗಳಿಕೆ ಎಷ್ಟಾಗಿದೆ

  ರಣ್ಬೀರ್ ಕಪೂರ್ ಅಭಿನಯದ 'ಸಂಜು' ಮೊದಲೆರಡು ದಿನದಲ್ಲಿ 50 ಕೋಟಿ, ಮೂರು ದಿನದಲ್ಲೇ 100 ಕೋಟಿ, ಐದು ದಿನದಲ್ಲಿ 150 ಕೋಟಿ, ಮೊದಲ ವಾರದಲ್ಲಿ 200 ಕೋಟಿ, ಈಗ 250 ಕೋಟಿ ದಾಟಿ ಮುನ್ನುಗ್ಗುತ್ತಿದೆ.

  ಮಿಶ್ರಪ್ರತಿಕ್ರಿಯೆ

  ಮಿಶ್ರಪ್ರತಿಕ್ರಿಯೆ

  ಅಂದ್ಹಾಗೆ, 'ಸಂಜು' ಚಿತ್ರಕ್ಕೆ ಮಿಶ್ರಪ್ರತಿಕ್ರಿಯೆ ವ್ಯಕ್ತವಾಗಿದೆ. ನಟನೆಯಲ್ಲಿ ಎಲ್ಲವನ್ನ ಮರೆಸುವ ರಣ್ಬೀರ್ ಗೆ ಫುಲ್ ಮಾರ್ಕ್ಸ್ ಕೊಟ್ಟಿದ್ದಾರೆ. ಆದ್ರೆ, ಸಂಜಯ್ ದತ್ ನಿಜ ಜೀವನದ ಅನೇಕ ವಿಷ್ಯಗಳನ್ನ ಇಲ್ಲಿ ತೋರಿಸಿಲ್ಲ. ಮತ್ತು ದತ್ ಒಳ್ಳೆಯವನು ಮತ್ತು ಅವರ ಅಮಾಯಕತ್ವದ ಕನ್ನಡಿಯಂತೆ ಚಿತ್ರವನ್ನ ಬಿಂಬಿಸಲಾಗಿದೆ ಎಂದು ವಿರ್ಮಶಕರು ಅಭಿಪ್ರಾಯಪಟ್ಟಿದ್ದಾರೆ.

  'ಸಂಜು' ವಿಮರ್ಶೆ: ರಣ್ಬೀರ್-ರಾಜಕುಮಾರ್ ಹಿರಾನಿಯ 'ಮಾಸ್ಟರ್ ಪೀಸ್'!'ಸಂಜು' ವಿಮರ್ಶೆ: ರಣ್ಬೀರ್-ರಾಜಕುಮಾರ್ ಹಿರಾನಿಯ 'ಮಾಸ್ಟರ್ ಪೀಸ್'!

  English summary
  Whopping Rs 10 crores? What Sanjay Dutt got for his biopic Sanju has become the second highest grosser of 2018. The biopic of Sanjay Dutt has earned Rs 265 crore in two weeks.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X