»   » ಹೃತಿಕ್, ಪ್ರಿಯಾಂಕಾ ಮಧ್ಯೆ ಮತ್ತೆ ಮಾತುಕತೆ ಶುರು

ಹೃತಿಕ್, ಪ್ರಿಯಾಂಕಾ ಮಧ್ಯೆ ಮತ್ತೆ ಮಾತುಕತೆ ಶುರು

Posted By:
Subscribe to Filmibeat Kannada

ನಟ ಹೃತಿಕ್ ರೋಶನ್ ಹಾಗೂ ಪ್ರಿಯಾಂಕಾ ಚೋಪ್ರಾ ಮತ್ತೆ ಒಂದಾಗಿದ್ದಾರೆ. 'ತೇರಿ ಮೇರಿ ಕಹಾನಿ' ಚಿತ್ರದ ಪ್ರಚಾರ ಕಾರ್ಯಕ್ಕೆ ಬಂದಿದ್ದ ಪ್ರಿಯಾಂಕಾ ಚೋಪ್ರಾ ಹಾಗೂ ಅಲ್ಲೇ ಪಕ್ಕದ ಸ್ಟುಡಿಯೋ ಒಂದರಲ್ಲಿ ಜಾಹೀರಾತು ಚಿತ್ರೀಕರಣದಲ್ಲಿದ್ದ ಹೃತಿಕ್ ಇಬ್ಬರೂ ಪರಸ್ಪರ ಮಾತನಾಡಿಕೊಂಡಿದ್ದಾರೆ. ಇತ್ತೀಚಿಗೆ, ಅಗ್ನಿಪಥ್ ಬಿಡುಗಡೆಯ ನಂತರ ಅವರಿಬ್ಬರ ಸ್ನೇಹ ಮುರಿದುಬಿದ್ದಿದೆ ಎನ್ನಲಾಗಿತ್ತು.

ಅಗ್ನಿಪಥ್ ಯಶಸ್ವಿಯಾದ ಹಿನ್ನೆಲೆಯಲ್ಲಿ ಆಯೋಜಿಸಿದ್ದ ಪಾರ್ಟಿಗೆ ನಟ ಹೃತಿಕ್ ರೋಶನ್, ನಟಿ ಪ್ರಿಯಾಂಕಾ ಚೋಪ್ರಾರನ್ನು ಆಹ್ವಾನಿಸಿರಲೇ ಇಲ್ಲ. ಇದೇನೂ ತೀರಾ ಹಿಂದಿನ ಸುದ್ದಿಯಲ್ಲ, ಇತ್ತೀಚಿಗೆ ನಡೆದದ್ದು. ಅಗ್ನಿಪಥ್ ಚಿತ್ರದ ಜೋಡಿ ಹೃತಿಕ್ ರೋಶನ್ ಹಾಗೂ ಪ್ರಿಯಾಂಕಾ ಚೋಪ್ರಾ ಮಧ್ಯೆ ಚಿತ್ರ ಬಿಡುಗಡೆಯವರೆಗೂ ಕೆಮೆಸ್ಟ್ರಿ ಚೆನ್ನಾಗಿಯೇ ಇತ್ತು.

ಆದರೆ ಅಗ್ನಿಪಥ್ ನಂತರ ಇವರಿಬ್ಬರಿಗೂ ಅದೇನಾಯ್ತು ಎಂಬ ಪ್ರಶ್ನೆಗೆ ಬಾಲಿವುಡ್ ಸುದ್ದಿಮೂಲಗಳೇ ಉತ್ತರಿಸಿವೆ. ಇವರಿಬ್ಬರ ಮಧ್ಯೆ ಏನೂ ಆಗಿರಲಿಲ್ಲ. ಹೃತಿಕ್ ಕರೆಯದಿರುವುದಕ್ಕೆ ಕಾರಣ ಗೌರಿ ಖಾನ್ ಎನ್ನಲಾಗಿದೆ. ಶಾರುಖ್ ಖಾನ್ ಮತ್ತು ಪ್ರಿಯಾಂಕಾ ಚೋಪ್ರಾ ಮಧ್ಯೆ ಇದ್ದ ಅನಗತ್ಯ ಸಲುಗೆ ಗೌರಿ ಖಾನ್ ಕೋಪಕ್ಕೆ ಕಾರಣವಾಗಿತ್ತು.

ಹೃತಿಕ್ ರೋಶನ್ ಪತ್ನಿ ಸೂಸಾನ್ ಹಾಗೂ ಗೌರಿ ಖಾನ್ ಆತ್ಮೀಯ ಸ್ನೇಹಿತೆಯರು. ಹೀಗಾಗಿ ಅಗ್ನಿಪಥ್ ಸಂತೋಷಕೂಟಕ್ಕೆ ಪ್ರಿಯಾಂಕಾಗೆ ಕರೆ ನೀಡದಿರುವಂತೆ ಹೃತಿಕ್ ಅವರಿಗೆ ಸೂಚಿಸಿದ್ದು ಗೌರಿ ಖಾನ್ ಎನ್ನಲಾಗಿದೆ. ಒಟ್ಟಿನಲ್ಲಿ ಅಗ್ನಿಪಥ್ ಸಂತೋಷಕೂಟಕ್ಕೆ ಪ್ರಿಯಾಂಕಾರಿಗೆ ಹೃತಿಕ್ ಆಹ್ವಾನ ನೀಡದಿರುವುದು ಬಾಲಿವುಡ್ ಮಂದಿಯನ್ನು ಬೆರಗುಗೊಳಿಸಿತ್ತು.

ಆದರೆ ಈಗ ಎಲ್ಲಾ ತಣ್ಣಗಾಗಿದೆ. ಪ್ರಿಯಾಂಕಾ-ಶಾರುಖ್ ಜೋಡಿ ಒಟ್ಟಿಗೆ ಕಾಣಿಸಿಕೊಳ್ಳುವುದು ತೀರಾ ಅಪರೂಪ ಎಂಬಂತಾಗಿದೆ. ಗೌರಿ ಖಾನ್ ಕೋಪ ತಣ್ಣಗಾಗಿದೆ. ಹೃತಿಕ್ ರೋಶನ್ ಪ್ರಿಯಾಂಕಾ ಪರಸ್ಪರ ಮಾತನಾಡಿಕೊಂಡಿದ್ದಾರೆ. ಪ್ರಿಯಾಂಕಾ ಹಾಗೂ ಹೃತಿಕ್, ಮೊನ್ನೆಯ ತಮ್ಮ ಭೇಟಿಯಲ್ಲಿ ಬರಲಿರುವ ಚಿತ್ರಗಳ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ.

ಒಟ್ಟಿನಲ್ಲಿ, ಬಾಲಿವುಡ್ ಅಂಗಳದಲ್ಲಿ ಎದ್ದಿದ್ದ ಬಿರುಗಾಳಿ ಸದ್ಯ ತಣ್ಣಗಾಗಿದೆ. ಗೌರಿ ಖಾನ್ ನೆಮ್ಮದಿಯಿಂದ ನಿದ್ದೆ ಮಾಡುತ್ತಿದ್ದಾರೆ. ಶಾರುಖ್ ಹಾಗೂ ಪ್ರಿಯಾಂಕಾ ತಮ್ಮ ತಮ್ಮ ಸಿನಿಮಾಗಳ ಕೆಲಸದಲ್ಲಿ ಬಿಜಿಯಾಗಿದ್ದಾರೆ. ಹೃತಿಕ್ ಹಾಗೂ ಪ್ರಿಯಾಂಕಾ ಮೊದಲಿನಂತೆ ಮತ್ತೆ ಸ್ನೇಹಿತರಾಗಿದ್ದಾರೆ. ಬಾಲಿವುಡ್ ಇನ್ನು ಹೊಸ ಸುದ್ದಿಗಾಗಿ ಕಾಯಬೇಕಷ್ಟೇ! (ಏಜೆನ್ಸೀಸ್)

English summary
Hrithik Roshan did not invite Priyanka Chopra to the success party of Agneepath. But now it seems that Hrithik has decided to leave the past behind.
 
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada