For Quick Alerts
  ALLOW NOTIFICATIONS  
  For Daily Alerts

  'ಕಾಂತಾರ' ಸಿನಿಮಾ ನೋಡಿ ಮೆಚ್ಚಿದ ಹೃತಿಕ್ ರೋಷನ್, ರಿಷಬ್ ಬಗ್ಗೆ ಹೇಳಿದ್ದೇನು?

  |

  ರಿಷಬ್ ಶೆಟ್ಟಿ ನಿರ್ದೇಶಿಸಿ ನಟಿಸಿರುವ 'ಕಾಂತಾರ' ಸಿನಿಮಾ ಭಾರಿ ದೊಡ್ಡ ಹಿಟ್ ಆಗಿದೆ. ಕರ್ನಾಟಕ ಮಾತ್ರವೇ ಅಲ್ಲದೆ ವಿವಿಧ ರಾಜ್ಯಗಳಲ್ಲಿಯೂ ಸಿನಿಮಾವನ್ನು ಜನ ನೋಡಿ ಬಹುವಾಗಿ ಮೆಚ್ಚಿದ್ದಾರೆ.

  ಇದೀಗ ಎರಡು ಒಟಿಟಿಗಳಲ್ಲಿ 'ಕಾಂತಾರ' ಸಿನಿಮಾ ಬಿಡುಗಡೆ ಆಗಿದ್ದು ಎರಡೂ ಒಟಿಟಿಗಳಲ್ಲಿ ಸೂಪರ್ ಹಿಟ್ ಆಗಿದೆ. ಕಾರಣಾಂತರಗಳಿಂದ ಚಿತ್ರಮಂದಿರಗಳಲ್ಲಿ ಸಿನಿಮಾ ನೋಡಲಾಗದವರು ಇದೀಗ ಒಟಿಟಿಯಲ್ಲಿ ನೋಡುತ್ತಿದ್ದಾರೆ.

  ಇದೀಗ ಬಾಲಿವುಡ್ ಸ್ಟಾರ್ ನಟ ಹೃತಿಕ್ ರೋಷನ್, 'ಕಾಂತಾರ' ಸಿನಿಮಾವನ್ನು ಒಟಿಟಿಯಲ್ಲಿಯೇ ವೀಕ್ಷಿಸಿದ್ದಾರೆ. ಸಿನಿಮಾವನ್ನು ಬಹುವಾಗಿ ಮೆಚ್ಚಿಕೊಂಡಿರುವ ಹೃತಿಕ್ ರೋಷನ್, ರಿಷಬ್ ಶೆಟ್ಟಿಯನ್ನು ಹೊಗಳಿ ಟ್ವೀಟ್ ಮಾಡಿದ್ದಾರೆ.

  ''ಕಾಂತಾರ ಸಿನಿಮಾ ನೋಡಿ ಸಾಕಷ್ಟು ವಿಷಯ ಕಲಿತೆ. ಸಿನಿಮಾದ ಬಗೆಗಿನ ರಿಷಬ್ ಶೆಟ್ಟಿ ಅವರ ನಿಖರತೆ ಈ ಸಿನಿಮಾವನ್ನು ಅದ್ಭುತವಾಗಿಸಿದೆ. ಕತೆ ಹೇಳಿರುವ ರೀತಿ, ನಿರ್ದೇಶನ ಮತ್ತು ನಟನೆಯಂತೂ ಅತ್ಯದ್ಭುತ. ಕ್ಲೈಮ್ಯಾಕ್ಸ್‌ನಲ್ಲಿ ರಿಷಬ್ ಶೆಟ್ಟಿಯ ಪಾತ್ರ ಪರಕಾಯ ಪ್ರವೇಶವಂತೂ ನನ್ನನ್ನು ರೋಮಾಂಚಿತಗೊಳಿಸಿತು. ರಿಷಬ್‌ ಶೆಟ್ಟಿ ಹಾಗೂ 'ಕಾಂತಾರ' ತಂಡಕ್ಕೆ ಅಭಿನಂದನೆಗಳು' ಎಂದಿದ್ದಾರೆ ಹೃತಿಕ್ ರೋಷನ್.

  ವಿಶೇಷವೆಂದರೆ 'ಕಾಂತಾರ' ಹಾಗೂ ಹೃತಿಕ್ ರೋಷನ್ ನಟನೆಯ 'ವಿಕ್ರಂ ವೇದ' ಸಿನಿಮಾಗಳು ಒಂದೇ ದಿನ ಬಿಡುಗಡೆ ಆಗಿದ್ದವು. 'ವಿಕ್ರಂ ವೇದ' ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ ಮಕಾಡೆ ಮಲಗಿತು, ಅದಕ್ಕೆ ಕಾಂತಾರ ಸಹ ಪರೋಕ್ಷ ಕಾರಣವಾಗಿತ್ತು. ಆದರೂ ಸಹ ಮಾತ್ಸರ್ಯವಿಟ್ಟುಕೊಳ್ಳದೆ ಹೃತಿಕ್ ರೋಷನ್ 'ಕಾಂತಾರ' ಸಿನಿಮಾ ನೋಡಿ ಮೆಚ್ಚಿಕೊಂಡಿದ್ದಾರೆ.

  English summary
  Hrithik Roshan praised Rishab Shetty and Kantara Movie. He praised Rishab Shetty and the Kantara team.
  Monday, December 12, 2022, 9:04
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X