»   » ಹೃತಿಕ್-ಸುಸಾನೆ ವಿಚ್ಛೇದನ: ಅಸಲಿ ಕಾರಣ ಏನಿತ್ತು?

ಹೃತಿಕ್-ಸುಸಾನೆ ವಿಚ್ಛೇದನ: ಅಸಲಿ ಕಾರಣ ಏನಿತ್ತು?

By: ರವಿಕಿಶೋರ್
Subscribe to Filmibeat Kannada

ಆಕೆ ಗಂಡನಿಗೆ ತಕ್ಕ ಹೆಂಡತಿಯಾಗಿದ್ದರು. ಆತನೂ ಅಷ್ಟೇ ಹೆಂಡತಿ ಹೇಳಿದರೆ ಕೇಳುತ್ತಿದ್ದ, ಪಕ್ಕಾ ಅಮ್ಮಾವ್ರ ಗಂಡ. ಆದರೆ ಏನಾಯಿತೋ ಏನೋ ತಮ್ಮ ಸುದೀರ್ಘ ಹದಿನೇಳು ವರ್ಷಗಳ ದಾಂಪತ್ಯ ಜೀವನಕ್ಕೆ ಇದ್ದಕ್ಕಿದ್ದಂತೆ ಗುಡ್ ಬೈ ಹೇಳಿದರು. ಟೈಟಾನಿಕ್ ನಂತಹ ಭಾರಿ ಹಡುಗು ಮುರಿದು ಬೀಳಲು ಒಂದು ಸಣ್ಣ ರಂಧ್ರ ಸಾಕಲ್ಲವೇ?

ಅದು ಎಷ್ಟು ಹಳೆಯ ದಾಂಪತ್ಯವಾದರೂ ಅಷ್ಟೇ ಒಬ್ಬರ ನಡುವೆ ಒಬ್ಬರಿಗೆ ಪ್ರೀತಿ ಗೌರವ ಇಲ್ಲದಿದ್ದರೆ ಅದು ಟೈಟಾನಿಕ್ ನಂತೆಯೇ ಆಗುತ್ತದೆ. ತಾವಿಬ್ಬರೂ ವಿವಾಹ ವಿಚ್ಛೇದನದ ಮೂಲಕ ಬೇರ್ಪಡುತ್ತಿದ್ದೇವೆ ಎಂದು ಡಿಸೆಂಬರ್ 13, 2013ರಲ್ಲಿ ಸುದ್ದಿ ಸ್ಫೋಟಗೊಂಡಾಗ ಹೃತಿಕ್ ಅಭಿಮಾನಿಗಳು ಶಾಕ್ ಆದರು.

ಸ್ವತಃ ಹೃತಿಕ್ ಈ ಬಗ್ಗೆ ಒಂದು ಹೇಳಿಕೆಯನ್ನೂ ಕೊಟ್ಟರು, "ನನ್ನಿಂದ ನನ್ನ ಪತ್ನಿ ಸುಸಾನೆ ದೂರವಾಗುತ್ತಿದ್ದಾರೆ. ನಮ್ಮಿಬ್ಬರ 17 ವರ್ಷಗಳ ಸಂಬಂಧ ಕೊನೆಯಾಗುತ್ತಿದೆ. ನಮ್ಮ ಕುಟುಂಬಕ್ಕೆ ತುಂಬಾ ನೋವಿನ ಸಂಗತಿ ಇದು" ಎಂದಿದ್ದರು. [ಹೃತಿಕ್ ರೋಶನ್ ಹಾಲಿನಂತಹ ಸಂಸಾರ ಒಡೆದಿದ್ದೇಕೆ?]

ಹೃತಿಕ್ ಈ ರೀತಿ ಹೇಳಿದ್ದೇ ತಡ ಸ್ವಲ್ಪ ಸಮಯಕ್ಕೇ ಸುಸಾನೆ ಸಹ ಒಂದು ಹೇಳಿಕೆ ಕೊಟ್ಟರು, "ನಮ್ಮಿಬ್ಬರ ನಡುವೆ ಗೌರವ ಮತ್ತು ಕರ್ತವ್ಯದ ಹೊಣೆ ಇದೆ. ಅದೇ ರೀತಿ ನಮ್ಮಿಬ್ಬರ ನಡುವೆ ಆಯ್ಕೆಗಳೂ ಇವೆ. ಈಗ ಉಳಿದಿರುವುದು ಮಕ್ಕಳನ್ನು ಇಬ್ಬರೂ ರಕ್ಷಿಸಿ ಅವರ ಬಗ್ಗೆ ಕಾಳಜಿವಹಿಸುವುದು. ಅದನ್ನು ಬದಲಾಯಿಸಲು ಸಾಧ್ಯವಿಲ್ಲ" ಎಂದಿದ್ದರು.

ಇವರಿಬ್ಬರ ಹೇಳಿಕೆಗಳು ಅಭಿಮಾನಿಗಳ ಮನಸ್ಸಿಗೆ ಆಘಾತ ನೀಡಿದವು, ಗೆಳೆಯರು ಶಾಕ್ ಆದರು, ಕೆಲವು ಪತ್ರಿಕೆಗಳಿಗೆ ಪುಟಗಟ್ಟಲೆ ಬರೆಯಲು ಒಳ್ಳೆಯ ಸರಕು ಸಿಕ್ಕಿತು. ಅದೇನೇ ಇರಲಿ ಇಷ್ಟಕ್ಕೂ ಇಬ್ಬರೂ ದೂರಾಗಲು ಅಸಲಿ ಕಾರಣ ಏನಿತ್ತು? ವಿವರಗಳು ಸ್ಲೈಡ್ ನಲ್ಲಿ ನೋಡಿ...

ಹೇಳಿಕೇಳಿ ಹೃತಿಕ್ ಸಂಕೋಚದ ಮುದ್ದೆ

ಸಂಜಯ್ ಖಾನ್ ಅವರ ಪುತ್ರಿ ಸುಸಾನೆ ಖಾನ್ ಅವರನ್ನು ಹೃತಿಕ್ ಮದುವೆಯಾಗಿದ್ದು ಡಿಸೆಂಬರ್ 20, 2000ನೇ ಇಸವಿಯಲ್ಲಿ. ಸುಸಾನೆ 12 ವರ್ಷ ವಯಸ್ಸಿನಿಂದಲೇ ಹೃತಿಕ್ ಗೆ ಗೊತ್ತು. ಇಬ್ಬರೂ ಜೊತೆಜೊತೆಯಲ್ಲೇ ಆಡುತ್ತಾ ಬೆಳೆದವರು. ಮುಂಬೈನ ಜುಹೂನಲ್ಲಿ ಇಬ್ಬರಿಗೂ ಕಾಮನ್ ಫ್ರೆಂಡ್ಸ್ ಇದ್ದಾರೆ. ಆದರೆ ಹೃತಿಕ್ ಸ್ವಲ್ಪ ಸಂಕೋಚ ಸ್ವಭಾವದ ಹುಡುಗ. ತನ್ನ ಭಾವನೆಗಳನ್ನು ಹಂಚಿಕೊಳ್ಳಲು ಮುಜುಗರಕ್ಕೀಡಾಗುತ್ತಿದ್ದ.

ಬಾಲ್ಯದ ಗೆಳತಿಯೇ ಪತ್ನಿಯಾದಾಗ

ತನ್ನ ಬಾಲ್ಯ ಕಾಲದ ಗೆಳತಿ ಸುಸಾನೆಯನ್ನು ವರಿಸಿದ ಹೃತಿಕ್ ಹೆಂಡಗಿ ಜೊತೆ ಕೈಕೈ ಹಿಡಿದು ನಡೆಯುತ್ತಿದ್ದ. ಇಬ್ಬರೂ ಹಚ್ಚೆ ಹಾಕಿಸಿಕೊಂಡು ತಮ್ಮಿಬ್ಬರ ನಡುವಿನ ಪ್ರೀತಿ ಪ್ರೇಮಗಳನ್ನು ಎಲ್ಲರಿಗೂ ಪ್ರದರ್ಶಿಸಿದರು. ಎಲ್ಲವೂ ಸಂತೋಷವಾಗಿಯೇ ಇತ್ತು.

ಗಂಡ ಹೆಂಡತಿ ಮಕ್ಕಳ ಆಲ್ಬಂ ಫೋಟೋ

ಇವರಿಬ್ಬರ ಅನುರೂಪ ದಾಂಪತ್ಯದ ಫಲವಾಗಿ ಎರಡು ಗಂಡು ಮಕ್ಕಳಾದರು. ಹ್ರೇಹಾನ್ ಮತ್ತು ಹ್ರಿಧಾನ್ ಎಂಬುದು ಅವರ ಹೆಸರು. ಇಲ್ಲಿದೆ ನೋಡಿ ಹೃತಿಕ್ ಫ್ಯಾಮಿಲಿ ಫೋಟೋ.

ಕೈಟ್ಸ್ ಚಿತ್ರದ ಸಮಯದಲ್ಲಿ ಹರಿದಾಡಿದ ಸುದ್ದಿ

ಯಾವಾಗ ಹೃತಿಕ್ ಬಾಳಿನಲ್ಲಿ ರೂಪದರ್ಶಿ ಬಾರ್ಬರಾ ಮೋರಿ ಎಂಟ್ರಿಕೊಟ್ಟರೋ ಅಲ್ಲಿಂದಲೇ ದಾಂಪತ್ಯದಲ್ಲಿ ಬಿರುಕು ಸಣ್ಣ ಪ್ರಮಾಣದಲ್ಲಿ ಕಾಣಿಸಿಕೊಂಡಿತ್ತು. ಅದು ದೊಡ್ಡದಾಗಲು ಬಹಳ ದಿನ ತೆಗೆದುಕೊಳ್ಳಲಿಲ್ಲ. ಯಾವಾಗ ಇಬ್ಬರೂ 'ಕೈಟ್ಸ್' ಚಿತ್ರದಲ್ಲಿ ಪ್ರೇಮಪಕ್ಷಿಗಳಂತೆ ಹಾರಾಡಿದರೋ ಆಗಲೇ ಮನೆಯಲ್ಲಿ ಹಾರಾಟ ಶುರುವಾಗಿತ್ತು. ಮೆಕ್ಸಿಕನ್ ಸುಂದರಿ ಜೊತೆಗಿನ ಸಂಬಂಧ ಬಿಗಿಯಾಗುತ್ತಾ ಸಾಗಿದಂತೆ ಸುಸಾನ್ ಜೊತೆಗಿನ ಸಂಬಂಧ ಸಡಿಲವಾಗುತ್ತಾ ಬಂತು.

ಬಾರ್ಬರಾ ಮೋರಿ ಜೊತೆಗಿನ ಜೂಟಾಟ

ಪೇಜ್ 3 ಕಾಲಂಗಳಲ್ಲಿ ಬಾರ್ಬಾರಾ ಮೋರಿ ಹಾಗೂ ಹೃತಿಕ್ ಜೊತೆಗಿನ ಜೂಟಾಟದ ಸುದ್ದಿಗಳು ಹರಿದಾಡಿದವು. ಈ ಎಲ್ಲಾ ಜಂಜಾಟಗಳ ನಡುವೆ ಮಕ್ಕಳು ದೊಡ್ಡವರಾದಂತೆ ಸಂಸಾರದ ಬಿಕ್ಕಟ್ಟು ಇನ್ನಷ್ಟು ಹೆಚ್ಚಾಗತೊಡಗಿತ್ತು ಎಂಬುದು ಎಲ್ಲರೂ ಇಷ್ಟು ದಿನ ಅಲ್ಲಿ ಇಲ್ಲಿ ಓದಿರುವ ಸಂಗತಿ.

ಸುಸಾನೆ ಸಹ ಇನ್ನೊಬ್ಬರ ಜೊತೆ ಕಣ್ಣಾಮುಚ್ಚಾಲೆ

ಆದರೆ ಅಸಲಿ ಕಾರಣ ಏನೆಂದರೆ ಸುಸಾನೆ ಸಹ ಇನ್ನೊಬ್ಬರೊಂದಿಗೆ ಕಣ್ಣಾಮುಚ್ಚಾಲೆ ಆಡುತ್ತಿದ್ದರು ಎಂಬುದು. ಇದೇ ಇಬ್ಬರ ನಡುವಿನ ಬಿರುಕಿಗೆ ಕಾರಣ ಎನ್ನಲಾಗಿದೆ. ಈ ಬಗ್ಗೆ ಸ್ವತಃ ಹೃತಿಕ್ ಟ್ವೀಟ್ ಮಾಡಿ ನನ್ನ ಬಗ್ಗೆ ಸುಖಾ ಸುಮ್ಮನೆ ಸುಳ್ಳುಗಳನ್ನು ಹಬ್ಬಿಸುವುದರಿಂದ ಏನೂ ಪ್ರಯೋಜನವಿಲ್ಲ ಎಂದಿದ್ದಾರೆ. ಅದು ಅರ್ಜುನ್ ರಾಂಪಾಲ್ ಕಣ್ಣಿಗೆ ಬಿದ್ದೇ ಬಿದ್ದಿರುತ್ತದೆ.

English summary
Hrithik Roshan and Sussanne Khan shocked everyone on December 13, 2013. They decided to get split and move on in life. Take a look at the truth behind the much-hyped Hrithik-Sussanne split.
Please Wait while comments are loading...