For Quick Alerts
  ALLOW NOTIFICATIONS  
  For Daily Alerts

  ಹೃತಿಕ್ ರೋಶನ್ ಹಾಲಿನಂತಹ ಸಂಸಾರ ಒಡೆದಿದ್ದೇಕೆ?

  By ಉದಯರವಿ
  |

  ಬಾಲಿವುಡ್ ಸ್ಪೈಡರ್ ಮ್ಯಾನ್, ಹೀಮ್ಯಾನ್ ಹೃತಿಕ್ ರೋಷನ್ ಅಭಿಮಾನಿಗಳಿಗೆ ನಿಜಕ್ಕೂ ಇದು ಆಘಾತಕಾರಿ ಸುದ್ದಿ. ತಮ್ಮ ಹದಿಮೂರು ವರ್ಷಗಳ ದಾಂಪತ್ಯ ಜೀವನ ಮುರಿದುಬಿದ್ದಿದೆ. ಆದರ್ಶ ದಂಪತಿಗಳಂತಿದ್ದ ಈ ಜೋಡಿ ಈಗ ವಿಚ್ಛೇದನ ಮೂಲಕ ದೂರವಾಗುತ್ತಿದ್ದಾರೆ.

  ಇಷ್ಟಕ್ಕೂ ಹಾಲು ಜೇನಿನಂತಿದ್ದ ಸಂಸಾರದಲ್ಲಿ ಯಾರಾದರೂ ಹುಳಿ ಹಿಂಡಿದರೇ? ಹಾಲಿನಂತಹಾ ಸಂಸಾರ ಒಡೆಯಲು ಕಾರಣವೇನು? ಹೃತಿಕ್ ಆಗಷ್ಟೇ 'ಕಹೋನಾ ಪ್ಯಾರ್ ಹೈ' ಚಿತ್ರದ ಮೂಲಕ ಬಾಲಿವುಡ್ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದರು. ಚಿತ್ರ ಬಾಕ್ಸ್ ಆಫೀಸಲ್ಲಿ ಸದ್ದು ಮಾಡಿತ್ತು. ಸುಸಾನ್ ಖಾನ್ ಜೊತೆಗೆ ಗಟ್ಟಿಮೇಳ ಸಹ ಆಗಲೇ ಮೊಳಗಿದ್ದು.

  ಆರಂಭದಲ್ಲಿ ಎಲ್ಲಾ ದಂಪತಿಗಳಂತೆ ಕೈಕೈಹಿಡಿದು ಸಭೆ ಸಮಾರಂಭಗಳಲ್ಲಿ ಇಬ್ಬರೂ ಭಾಗಿಯಾದರು. ಆದರೆ ಈ ಪ್ರೀತಿ ಪ್ರೇಮ ಪ್ರಯಣ ಬಹಳ ದಿನ ಉಳಿಯಲಿಲ್ಲ. ಯಾವಾಗ ಹೃತಿಕ್ ಬಾಳಿನಲ್ಲಿ ರೂಪದರ್ಶಿ ಬಾರ್ಬರಾ ಮೋರಿ ಎಂಟ್ರಿಕೊಟ್ಟರೋ ಅಲ್ಲಿಂದಲೇ ದಾಂಪತ್ಯದಲ್ಲಿ ಬಿರುಕು ಸಣ್ಣ ಪ್ರಮಾಣದಲ್ಲಿ ಕಾಣಿಸಿಕೊಂಡಿತ್ತು.

  ಅದು ದೊಡ್ಡದಾಗಲು ಬಹಳ ದಿನ ತೆಗೆದುಕೊಳ್ಳಲಿಲ್ಲ. ಯಾವಾಗ ಇಬ್ಬರೂ 'ಕೈಟ್ಸ್' ಚಿತ್ರದಲ್ಲಿ ಪ್ರೇಮಪಕ್ಷಿಗಳಂತೆ ಹಾರಾಡಿದರೋ ಆಗಲೇ ಮನೆಯಲ್ಲಿ ಹಾರಾಟ ಶುರುವಾಗಿತ್ತು. ಮೆಕ್ಸಿನ್ ಸುಂದರಿ ಜೊತೆಗಿನ ಸಂಬಂಧ ಬಿಗಿಯಾಗುತ್ತಾ ಸಾಗಿದಂತೆ ಸುಸಾನ್ ಜೊತೆಗಿನ ಸಂಬಂಧ ಸಡಿಲವಾಗುತ್ತಾ ಬಂತು.

  ಪೇಜ್ 3 ಕಾಲಂಗಳಲ್ಲಿ ಬಾರ್ಬಾರಾ ಮೋರಿ ಹಾಗೂ ಹೃತಿಕ್ ಜೊತೆಗಿನ ಜೂಟಾಟದ ಸುದ್ದಿಗಳು ಹರಿದಾಡಿದವು. ಈ ಎಲ್ಲಾ ಜಂಜಾಟಗಳ ನಡುವೆ ಹೃತಿಗ್ ಹಾಗೂ ಸುಸಾನ್ ಗೆ ಇಬ್ಬರು ಮಕ್ಕಳೂ ಆಗಿದ್ದರು. ಮಕ್ಕಳು ದೊಡ್ಡವರಾದಂತೆ ಸಂಸಾರದ ಬಿಕ್ಕಟ್ಟು ಇನ್ನಷ್ಟು ಹೆಚ್ಚಾಗತೊಡಗಿತ್ತು.

  ಇದೇ ಒತ್ತಡದಲ್ಲಿ ಹೃತಿಕ್ ಆರೋಗ್ಯ ಕೈಕೊಡ್ತು. ಮಿದುಳಿನಲ್ಲಿ ರಕ್ತ ಹೆಪ್ಪುಗಟ್ಟಿದ್ದ ಕಾರಣ ಶಸ್ತ್ರಚಿಕಿತ್ಸೆಗೆ ಒಳಗಾಗಬೇಕಾಯಿತು. ಕೆಲದಿನಗಳು ಉರುಳಿದ ಮೇಲೆ ಹೃತಿಕ್ ಹಾಗೂ ಸುಸಾನ್ ಬೇರೆಬೇರೆಯಾಗಿ ಇರತೊಡಗಿದರು. ಆಗ ಹೃತಿಕ್ ಹೆಸರು ಕರೀನಾ ಕಪೂರ್ ಜೊತೆಗೂ ಥಳುಕು ಹಾಕಿಕೊಳ್ತು.

  ಮೊದಲೇ ಬಿರುಕು ಬಿಟ್ಟಿದ್ದ ಸಂಸಾರದ ಗೋಡೆ ಕರೀನಾ ಕಪೂರ್ ಪ್ರವೇಶದ ಮೂಲಕ ದೊಪ್ಪೆಂದು ಉರುಳಿಬಿತ್ತು. ಈಗ ಮತ್ತೆ ಬಿದ್ದ ಗೋಡೆಯನ್ನು ಸರಿಮಾಡಲು ಯಾವ ಇಂಜಿನಿಯರ್ ಗೂ ಸಾಧ್ಯವಿಲ್ಲ. ಅವರವರೇ ಸರಿಪಡಿಸಿಕೊಳ್ಳಬೇಕು. ಅದು ಆಗದ ಮಾತು.

  English summary
  Hrithik and Sussanne's marriage survived storms just because of their kids and families. Sussanne Khan, an interior designer by proffession, has been living separately from Hrithik for almost four months.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X