For Quick Alerts
  ALLOW NOTIFICATIONS  
  For Daily Alerts

  ಈ ಸೌತ್ ನಟನ ಸ್ಟೈಲ್ ಗೆ ಆಲಿಯಾ ಭಟ್ ಫಿದಾ ಆಗ್ಬಿಟ್ಟಿದ್ದಾರೆ

  |

  ಬಾಲಿವುಡ್ ಸುಂದರಿ ಆಲಿಯಾ ಭಟ್ ಸ್ಟೈಲ್ ಗೆ ಅನೇಕರು ಫ್ಯಾನ್. ಆಲಿಯಾ ತೊಡುವ ಉಡುಪು, ಹೇರ್ ಸ್ಟೈಲ್ ಎಲ್ಲವೂ ಸಖತ್ ಸ್ಟೈಲಿಷ್ ಆಗಿ ಇರುತ್ತದೆ. ಹೀಗಿರುವಾಗ, ಒಬ್ಬ ನಟನ ಸ್ಟೈಲ್ ಅಂದರೆ ನನಗೆ ತುಂಬ ಇಷ್ಟ ಎಂದು ಆಲಿಯಾ ಹೇಳಿಕೊಂಡಿದ್ದಾರೆ.

  ಇತ್ತೀಚಿಗಷ್ಟೆ ಫಿಲ್ಮ್ ಫೇರ್ ಗ್ಲಾಮರ್ ಸ್ಟೈಲ್ ಅವಾರ್ಡ್ 2019 ಕಾರ್ಯಕ್ರಮದಲ್ಲಿ ಆಲಿಯಾ ಭಟ್ ಭಾಗಿಯಾಗಿದ್ದರು. ಈ ವೇಳೆ ತಮ್ಮ ಸ್ಟೈಲ್ ಬಗ್ಗೆ ಮಾತನಾಡಿದರು. ಆಗ ನಿಮ್ಮ ಮೆಚ್ಚಿನ ಸ್ಟೈಲಿಶ್ ಆಕ್ಟರ್ ಯಾರು ಎನ್ನುವ ಪ್ರಶ್ನೆಗೆ ಉತ್ತರ ನೀಡಿದ್ದಾರೆ.

  ಅಂಡರ್ ವಾಟರ್ ನಲ್ಲಿ ಹಾಟ್ ಅವತಾರ ತಾಳಿದ ನಟಿ ಅಲಿಯಾ ಭಟ್ಅಂಡರ್ ವಾಟರ್ ನಲ್ಲಿ ಹಾಟ್ ಅವತಾರ ತಾಳಿದ ನಟಿ ಅಲಿಯಾ ಭಟ್

  ಅಮಿತಾಭ್ ಬಚ್ಚನ್ ಸೂಪರ್ ಸ್ಟೈಲಿಶ್. ಅದು ಬಿಟ್ಟರೆ, ವಿಜಯ್ ದೇವರಕೊಂಡ ಸ್ಟೈಲ್ ನನಗೆ ತುಂಬ ಇಷ್ಟ ಎಂದಿದ್ದಾರೆ. ವಿಜಯ್ ದೇವರಕೊಂಡ ಪೂರ್ಣ ಹೆಸರು ಕೂಡ ಸರಿಯಾಗಿ ಆಲಿಯಾಗೆ ಹೇಳಲು ಬರಲಿಲ್ಲ. ಆದರೆ, ಅವರ ಸ್ಟೈಲ್ ನನಗೆ ತುಂಬ ಇಷ್ಟ ಆಗುತ್ತದೆ ಎಂದು ಆಲಿಯಾ ತಿಳಿಸಿದ್ದಾರೆ. ಈ ಸಮಯದಲ್ಲಿ ಪಕ್ಕದಲ್ಲಿಯೇ ಇದ್ದ ವರಣ್ ಧವನ್ ಹೆಸರನ್ನೂ ಈ ಪಟ್ಟಿಗೆ ಸೇರಿಸಿದರು.

  ಆಲಿಯಾ ಭಟ್ ವಿಜಯ್ ದೇವರಕೊಂಡ ಹೆಸರು ಹೇಳುತ್ತಿದ್ದಂತೆ ವರಣ್ ಧವನ್ ಕೂಡ ವಿಜಯ್ ಸೂಪರ್ ಕೂಲ್ ಎಂದು ಆಲಿಯಾ ಮಾತಿಗೆ ಸಮ್ಮತಿ ಸೂಚಿಸಿದರು. ಇತ್ತೀಚಿಗಷ್ಟೆ ಆಲಿಯಾ ಭಟ್ ಹಾಗೂ ವಿಜಯ್ ದೇವರಕೊಂಡ ಒಂದು ಸಂದರ್ಶನದಲ್ಲಿ ಒಟ್ಟಿಗೆ ಕಾಣಿಸಿಕೊಂಡಿದ್ದರು. ಈ ಹಿಂದೆಯೂ ಒಂದು ಕಾರ್ಯಕ್ರಮದಲ್ಲಿ ಈ ಜೋಡಿ ಭೇಟಿ ಮಾಡಿದ್ದರು.

  'ಭಾರತಕ್ಕಿಂತ ಪಾಕಿಸ್ತಾನದಲ್ಲಿ ಸಂತೋಷವಾಗಿರುತ್ತೇನೆ' ವಿವಾದ ಸೃಷ್ಟಿಸಿದ ಅಲಿಯಾ ತಾಯಿ ಹೇಳಿಕೆ'ಭಾರತಕ್ಕಿಂತ ಪಾಕಿಸ್ತಾನದಲ್ಲಿ ಸಂತೋಷವಾಗಿರುತ್ತೇನೆ' ವಿವಾದ ಸೃಷ್ಟಿಸಿದ ಅಲಿಯಾ ತಾಯಿ ಹೇಳಿಕೆ

  ನಟ ವಿಜಯ್ ದೇವರಕೊಂಡ ಇದುವರೆಗೆ ಯಾವುದೇ ಬಾಲಿವುಡ್ ಸಿನಿಮಾ ಮಾಡಿಲ್ಲ. ಆದರೆ, ಟಾಲಿವುಡ್ ನಿಂದಲೇ ತನ್ನ ಸ್ಟೈಲ್ ಮೂಲಕ ಬಾಲಿವುಡ್ ಮಂದಿಯ ಗಮನ ಸೆಳೆಯುತ್ತಿದ್ದಾರೆ. ಬಿ ಟೌನ್ ನಟಿಯರು ತೆಲುಗು ನಟನ ಸ್ಟೈಲ್ ಗೆ ಫಿದಾ ಆಗುತ್ತಿದ್ದಾರೆ.

  English summary
  I Like Vijay Devarakonda style says Alia Bhatt.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X