»   » ಚಿತ್ರೀಕರಣ ವೇಳೆ ರಣವೀರ್ ತಲೆಗೆ ಗಾಯ, ನೋವಿನಲ್ಲೂ ಅಭಿನಯಿಸಿದ ನಟ

ಚಿತ್ರೀಕರಣ ವೇಳೆ ರಣವೀರ್ ತಲೆಗೆ ಗಾಯ, ನೋವಿನಲ್ಲೂ ಅಭಿನಯಿಸಿದ ನಟ

Posted By:
Subscribe to Filmibeat Kannada

'ಪದ್ಮಾವತಿ' ಚಿತ್ರದ ಕ್ಲೈಮ್ಯಾಕ್ಸ್ ಚಿತ್ರೀಕರಣ ವೇಳೆ ಬಾಲಿವುಡ್ ನಟ ರಣವೀರ್ ಸಿಂಗ್ ತಲೆಗೆ ಪೆಟ್ಟಾಗಿದೆ. ಆದರೂ ಸಹ ನಟ ತಲೆಗೆ ಗಾಯವಾದ ನೋವಿನಲ್ಲಿಯೂ ಚಿತ್ರೀಕರಣದಲ್ಲಿ ಭಾಗವಹಿಸಿ, ಕ್ಲೈಮ್ಯಾಕ್ಸ್ ಶೂಟಿಂಗ್ ನಲ್ಲಿ ಪಾಲ್ಗೊಂಡಿದ್ದಾರೆ.[ರಣವೀರ್ ಮತ್ತು ದೀಪಿಕಾ ದೂರವಾಗಲು ಬನ್ಸಾಲಿ'ಯೇ ಕಾರಣ..]

ನಿನ್ನೆ (ಮೇ 26) ರಾತ್ರಿ ಮುಂಬೈನಲ್ಲಿ ಸಂಜಯ್ ಲೀಲಾ ಬನ್ಸಾಲಿ ನಿರ್ದೇಶನದ 'ಪದ್ಮಾವತಿ' ಸಿನಿಮಾ ಶೂಟಿಂಗ್ ವೇಳೆ ರಣವೀರ್ ಸಿಂಗ್ ತಲೆಗೆ ಗಾಯವಾದ ಘಟನೆ ನಡೆದಿದೆ. ಈ ಬಗ್ಗೆ ಹೆಚ್ಚಿನ ಮಾಹಿತಿ ತಿಳಿಯಲು ಮುಂದೆ ಓದಿ.

ಸ್ವತಃ ತಲೆಗೆ ಪೆಟ್ಟು ಮಾಡಿಕೊಂಡ ರಣವೀರ್ ಸಿಂಗ್

ರಣವೀರ್ ಸಿಂಗ್ 'ಪದ್ಮಾವತಿ' ಚಿತ್ರದ ನಿರ್ದಿಷ್ಟ ದೃಶ್ಯದ ಶೂಟಿಂಗ್ ವೇಳೆ ಸ್ವತಃ ತಾವೇ ತಮ್ಮ ತಲೆಗೆ ಪೆಟ್ಟುಮಾಡಿಕೊಂಡಿದ್ದಾರೆ. ಆದರೆ ಅವರು ಅಭಿನಯದಲ್ಲಿ ಮುಳುಗಿಹೋಗಿದ್ದ ಕಾರಣ ಮೊದಲು ಅವರ ಗಮನಕ್ಕೆ ಬಂದಿರಲಿಲ್ಲ.

ಗಾಬರಿಗೊಂಡ ಚಿತ್ರತಂಡ

"ಸ್ವತಃ ರಣವೀರ್ ಸಿಂಗ್ ಗೆ ತಲೆಗೆ ಪೆಟ್ಟಾಗಿರುವುದು ತಿಳಿದಿರಲಿಲ್ಲ. ಆದರೆ ದೃಶ್ಯವೊಂದಕ್ಕೆ ಕಟ್ ಹೇಳಿದ ಸಂದರ್ಭದಲ್ಲಿ ರಣವೀರ್ ತಲೆಯಿಂದ ರಕ್ತ ಸುರಿಯಲು ಆರಂಭವಾದ ನಂತರ ಅವರಿಗೆ ತಿಳಿಯಿತು. ಇದನ್ನು ನೋಡಿದ ಚಿತ್ರತಂಡದವರು ಗಾಬರಿಗೊಂಡು ತಕ್ಷಣ ಚಿತ್ರ ಸೆಟ್ ನಲ್ಲೇ ಚಿಕಿತ್ಸೆ ನೀಡಿದರು' ಎಂದು ಮೂಲಗಳಿಂದ ತಿಳಿದಿದೆ.

ಲೀಲಾವತಿ ಆಸ್ಪತ್ರೆಯಲ್ಲಿ ರಣವೀರ್ ಗೆ ಚಿಕಿತ್ಸೆ

ರಣವೀರ್ ಸಿಂಗ್ ಗೆ ಚಿತ್ರ ಸೆಟ್ ನಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಿ ನಂತರ ಹತ್ತಿರದ ಲೀಲಾವತಿ ಆಸ್ತತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ.

ತಲೆಗೆ ಪೆಟ್ಟಾದರು ಶೂಟಿಂಗ್ ಮುಗಿಸಿದ ರಣವೀರ್

ತಲೆಗೆ ಪೆಟ್ಟಾದರೂ ರಣವೀರ್ ಸಿಂಗ್ ಚಿಕಿತ್ಸೆ ಪಡೆದ ನಂತರ ಶೀಘ್ರವಾಗಿ ಪುನಃ ಚಿತ್ರಸೆಟ್ ಗೆ ಭೇಟಿ ನೀಡಿ ಕ್ಲೈಮ್ಯಾಕ್ಸ್ ಶೂಟಿಂಗ್ ನಲ್ಲಿ ಪಾಲ್ಗೊಂಡರಂತೆ. ಅಲ್ಲದೇ ಅಂದಿನ ಕಂಪ್ಲೀಟ್ ಕೆಲಸ ಮುಗಿಸಿಕೊಟ್ಟರು. ಅವರ ತಲೆಯ ಪೆಟ್ಟಾದ ಭಾಗಕ್ಕೆ ಹೊಲಿಕೆ ಹಾಕಿಸುವ ಅಗತ್ಯವಿದೆ ಎಂದು ಚಿತ್ರತಂಡ ಮಾಧ್ಯಮಗಳಿಗೆ ಮಾಹಿತಿ ನೀಡಿದೆ.

ಅಲ್ಲಾವುದ್ದೀನ್ ಖಿಲ್ಜಿ ಪಾತ್ರದಲ್ಲಿ ರಣವೀರ್

ರಣವೀರ್ ಸಿಂಗ್ ರವರು ಸಂಜಯ್ ಲೀಲಾ ಬನ್ಸಾಲಿ ನಿರ್ದೇಶನದ 'ಪದ್ಮಾವತಿ' ಚಿತ್ರದಲ್ಲಿ ಅಲ್ಲಾವುದ್ದೀನ್ ಖಿಲ್ಜಿ ಪಾತ್ರದಲ್ಲಿ ಅಭಿನಯಿಸುತ್ತಿದ್ದಾರೆ. ಈ ಚಿತ್ರದಲ್ಲಿ ದೀಪಿಕಾ ಪಡುಕೋಣೆ ರಾಣಿ ಪದ್ಮಾವತಿಯಾಗಿ ನಟಿಸಿದ್ದಾರೆ.

English summary
Yesterday night (May 26, 2017), Ranveer Singh got injured on the head while shooting the climax of Padmavati in Mumbai. Here's what a source close to the project revealed about the entire accident..

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada