»   » ರಣವೀರ್ ಮತ್ತು ದೀಪಿಕಾ ದೂರವಾಗಲು ಬನ್ಸಾಲಿ'ಯೇ ಕಾರಣ..

ರಣವೀರ್ ಮತ್ತು ದೀಪಿಕಾ ದೂರವಾಗಲು ಬನ್ಸಾಲಿ'ಯೇ ಕಾರಣ..

Posted By:
Subscribe to Filmibeat Kannada

ಬಾಲಿವುಡ್ ಹಾಟ್ ಬಾಯ್ ನಟ ರಣವೀರ್ ಸಿಂಗ್ ತಮ್ಮ ಬಿಂದಾಸ್ ನೇಚರ್ ನಿಂದಲೇ ಎಲ್ಲರ ಗಮನಸೆಳೆಯುತ್ತಾರೆ. ಅದಕ್ಕೆ ದೀಪಿಕಾ ಪಡುಕೋಣೆ ಅಂತಹ ಹಾಟ್ ಬ್ಯೂಟಿ ಗರ್ಲ್ ಫ್ರೆಂಡ್ ಆಗಿರುವುದೇ ಸಾಕ್ಷಿ. ಅಂದಹಾಗೆ ರಣವೀರ್ ಈ ಹಿಂದೆ ಎಲ್ಲೇ ಹೋದ್ರು ತಮ್ಮ ಲವ್ಲಿ ಲೇಡಿ ಬಗ್ಗೆ ತುಟಿ ಬಿಚ್ಚದೇ ಇರುತ್ತಿರಲಿಲ್ಲ. ಆದ್ರೆ ಈಗ ಈ ರೀತಿ ಮಾತುಕತೆಗಳಿಗೆಲ್ಲಾ ಬ್ರೇಕ್ ಬಿದ್ದಿದೆಯಂತೆ.[ದೀಪಿಕಾ ಧರಿಸಿದ್ದ ಉಡುಗೆ ಬಗ್ಗೆ ಈಗ ಭಾರೀ ಚರ್ಚೆ]

ಹೌದು, ಬಾಲಿವುಡ್ ಲವ್ ಬರ್ಡ್ಸ್ ಗಳಾದ ರಣವೀರ್ ಸಿಂಗ್ ಮತ್ತು ದೀಪಿಕಾ ಪಡುಕೋಣೆ ಬಗ್ಗೆ ಈಗೊಂದು ಲೇಟೆಸ್ಟ್ ಸುದ್ದಿ ಹರಿದಾಡುತ್ತಿದ್ದು, ರಣವೀರ್ ಈಗ ದೀಪಿಕಾ ಜೊತೆ ಯಾವುದೇ ಫೋಟೋ ಸಹ ತೆಗೆಸಿಕೊಳ್ಳಲು ನೋ ಎನ್ನುತ್ತಿದ್ದಾರಂತೆ. ಅಲ್ಲದೇ ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ಮೀಟ್ ಮಾಡುವುದನ್ನು ಅವಾಯ್ಡ್ ಮಾಡುತ್ತಿದ್ದಾರಂತೆ. ಅಸಲಿ ಇಬ್ಬರ ನಡುವೆ ಹೀಗೆಲ್ಲಾ ಆಗ್ತಿರೋದು ಯಾಕೆ? ತಿಳಿಯಲು ಮುಂದೆ ಓದಿ...

ಅವಾಯ್ಡ್ ಮಾಡ್ತಿರೋದು ರಣವೀರ್ ಒಬ್ಬರೇ ಅಲ್ಲಾ..

"ಇಬ್ಬರು ಜೊತೆಯಲ್ಲಿ ಫೋಟೋ ತೆಗೆಸಿಕೊಳ್ಳಲು ರಣವೀರ್ ಮಾತ್ರವಲ್ಲದೇ ದೀಪಿಕಾ ಸಹ ಅವಾಯ್ಡ್ ಮಾಡುತ್ತಿದ್ದಾರಂತೆ' ಈಗಂತ Spotboye.com ವರದಿಮಾಡಿದೆ.['ಡಿಡಿಎಲ್ ಜೆ' ಸೀನ್ ರೀಕ್ರಿಯೇಟ್ ಮಾಡಿ ಶಾರುಖ್ ಅಣಕಿಸಿದ ಹಾಟ್ ಬಾಯ್]

ರಣವೀರ್ ತಪ್ಪಿಸಿಕೊಳ್ಳುತ್ತಿರುವುದು ಏಕೆ?

ರಣವೀರ್ ಸಿಂಗ್ ಸಾಮಾನ್ಯವಾಗಿ ತಮ್ಮ ಫ್ಯಾಷನ್ ಸ್ಟೈಲ್ ನಿಂದ ಎಚ್ ಟಿ ಸ್ಟೈಲ್ ಪ್ರಶಸ್ತಿಯನ್ನು ಗೆದ್ದುಕೊಳ್ಳಬಹುದಿತ್ತು. ಆದರೆ ಎಚ್ ಟಿ ಸ್ಟೈಲ್ ಅವಾರ್ಡ್ ಸಂಭ್ರಮದಲ್ಲಿ ಅವರ ಸುಳಿವು ಇರಲಿಲ್ಲ. ಇತ್ತ ದೀಪಿಕಾ ಜೊತೆಯಲ್ಲೂ ಕಾಣಿಸಿಕೊಳ್ಳಲಿಲ್ಲ.[ರಣವೀರ್-ದೀಪಿಕಾ ನಡುವೆ ಇದ್ದಕ್ಕಿದ್ದಂತೆ ಏನಾಯ್ತು?]

ಶಾಹಿದ್ ಪಾರ್ಟಿಯಲ್ಲೂ ಜೊತೆಗೆ ಕಾಣದ ಲವ್ ಬರ್ಡ್ಸ್

ಅಲ್ಲದೇ ಇತ್ತೀಚೆಗೆ ನಡೆದ ಶಾಹಿದ್ ಕಪೂರ್ ಬರ್ತ್ ಡೇ ಪಾರ್ಟಿಯಲ್ಲೂ ಇಬ್ಬರು ಸಹ ಒಬ್ಬರನ್ನೊಬ್ಬರು ಅವಾಯ್ಡ್ ಮಾಡುತ್ತಿರುವ ಕಾರಣ ಸರಿಯಾದ ಸಮಯಕ್ಕೆ ಇಬ್ಬರು ನಿರ್ಗಮನ ಆಗಿದ್ದರು.

ಅವರು ದೂರ ಆಗಲು ಕಾರಣ..

ಅಂದಹಾಗೆ 'ಪದ್ಮಾವತಿ' ನಿರ್ದೇಶಕರಾದ ಸಂಜಯ್ ಲೀಲಾ ಬನ್ಸಾಲಿ ಅವರು ರಣವೀರ್ ಸಿಂಗ್ ಮತ್ತು ದೀಪಿಕಾ ಪಡುಕೋಣೆಯನ್ನು ದೂರ ಇರಿಸಿದ್ದಾರಂತೆ.

ಸಂಜಯ್ ಲೀಲಾ ಬನ್ಸಾಲಿ ನಿರ್ಬಂಧನೆ..

ಹೌದು, ರಣವೀರ್ ಸಿಂಗ್ ಮತ್ತು ದೀಪಿಕಾ ಪಡುಕೋಣೆ, ನಿರ್ದೇಶಕ ಸಂಜಯ್ ಲೀಲಾ ಬನ್ಸಾಲಿ ಅವರಿಂದ ಕೆಲವು ಸೂಚನೆಗಳನ್ನು ಪಡೆದಿದ್ದು, 'ಪದ್ಮಾವತಿ' ಚಿತ್ರ ಪ್ರಮೋಷನ್ ಆರಂಭ ಆಗುವುದಕ್ಕೂ ಮುನ್ನ ಜೊತೆಯಲ್ಲಿ ಫೋಟೋ ಕ್ಲಿಕ್ಕಿಸಿಕೊಳ್ಳಬೇಡಿ ಎಂದು ನಿರ್ಬಂಧನೆ ಹೇರಿದ್ದಾರಂತೆ.

ಆದ್ರೆ ಏಕೆ?

'ಪದ್ಮಾವತಿ' ಚಿತ್ರೀಕರಣಕ್ಕೆ ಕೆಲವು ಅಡೆ-ತಡೆಗಳು ಉಂಟಾಗುತ್ತವೆ ಎಂಬ ಕಾರಣದಿಂದ ಬನ್ಸಾಲಿ ಈ ರೀತಿಯ ಒಪ್ಪಂದ ಮಾಡಿಕೊಂಡಿದ್ದಾರಂತೆ.

ಸ್ಟೈಲ್ ಅವಾರ್ಡ್ ಮಿಸ್ ಮಾಡಿದ್ದು ಆ ಕಾರಣಕ್ಕಾಗಿಯೇ!

ಅಂದಹಾಗೆ ರಣವೀರ್ ಎಚ್ ಟಿ ಸ್ಟೈಲ್ ಅವಾರ್ಡ್ ನಿಂದ ವಿಶೇಷ ಆಹ್ವಾನ ಪಡೆದಿದ್ದರಂತೆ. ಆದರೆ ಬನ್ಸಾಲಿ ಅವರ ಒಪ್ಪಂದದ ಕಾರಣ ಸ್ಟೈಲ್ ಅವಾರ್ಡ್ ಪ್ರಶಸ್ತಿ ಸಮಾರಂಭಕ್ಕೆ ಭೇಟಿ ನೀಡುವುದನ್ನು ತ್ಯಜಿಸಿದರಂತೆ ರಣವೀರ್.

ಹಾಗಾಗಿ ಯಾವುದೇ ಬ್ರೇಕಪ್ ಇಲ್ಲ

ದೀಪಿಕಾ ಮತ್ತು ರಣವೀರ್ ಯಾವುದೇ ಕಾರ್ಯಕ್ರಮಗಳಲ್ಲಿ ಹಲವು ದಿನಗಳಿಂದ ಒಟ್ಟಾಗಿ ಕಾಣಿಸಿಕೊಳ್ಳುವುದು ಮತ್ತು ಜೊತೆಯಲ್ಲಿ ಫೋಟೋ ತೆಗೆಸಿಕೊಳ್ಳುವುದು ಯಾವುದು ಕಂಡುಬಂದಿರಲಿಲ್ಲ. ಹೀಗಾಗಿಯೇ ಸಾಮಾನ್ಯವಾಗಿ 'ಹೋ...ಇಬ್ಬರ ನಡುವೆ ಲವ್ ಬ್ರೇಕಪ್ ಆಗಿರಬಹುದು' ಎಂಬ ರೂಮರ್ಸ್ ಹಬ್ಬಿತ್ತು. ಆದರೆ ಅದೆಲ್ಲಾ ಸುಳ್ಳು ಅನ್ನೋದು ಗೊತ್ತಾಗಿದೆ.

English summary
Ranveer Singh, who is known for his bindass nature, never shied away from speaking about his lady love Deepika Padukone in the past. But now the actor does not even want to get clicked with Deepika Padukone and is avoiding meeting her at public events. Here is why?

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada