Don't Miss!
- Sports
U-19 Women's T20 World Cup 2023: ಇಂಗ್ಲೆಂಡ್ ಮಣಿಸಿದರೆ ಭಾರತದ ವನಿತೆಯರೇ ವಿಶ್ವ ಚಾಂಪಿಯನ್
- Finance
ಅಭ್ಯರ್ಥಿಯ ಸಂದರ್ಶನ ಮಾಡುತ್ತಿದ್ದಾಗಲೇ ಗೂಗಲ್ ಎಚ್ಆರ್ ವಜಾ!
- Technology
ಒಪ್ಪೋ ಕಂಪೆನಿಯ ಈ ಸ್ಮಾರ್ಟ್ಫೋನ್ ಮೇಲೆ ಭಾರಿ ನಿರೀಕ್ಷೆ? ಲಾಂಚ್ ಯಾವಾಗ?
- Automobiles
ಭಾರತದಲ್ಲಿ ಶೀಘ್ರ ಬಿಡುಗಡೆಯಾಗಲಿದೆ ಬಹುನಿರೀಕ್ಷಿತ ಹೀರೋ ಮೆಸ್ಟ್ರೋ Xoom: ಹೇಗಿದೆ ಗೋತ್ತಾ?
- Lifestyle
ವೃತ್ತಿ ಬದುಕಿನಲ್ಲಿ ಯಸಸ್ಸು ಪಡೆಯಲು ಚಾಣಕ್ಯ ಹೇಳಿದ ಸಪ್ತ ಸೂತ್ರಗಳು
- News
ಪುಲ್ವಾಮಾಕ್ಕೆ ಭೇಟಿ ನೀಡಿದ ರಾಹುಲ್ ಗಾಂಧಿ
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ಆಸ್ಕರ್ ರೇಸ್‌ಗೆ ಆಯ್ಕೆಯಾದ ಭಾರತೀಯ ಕಿರುಚಿತ್ರ 'ಪಾಷ್'
'ಸ್ಕೂಲ್ ಬ್ಯಾಗ್' ಕಿರುಚಿತ್ರ ನಿರ್ದೇಶಿಸಿ ಖ್ಯಾತಿ ಗಳಿಸಿಕೊಂಡಿದ್ದ ಧೀರಜ್ ಜಿಂದಾಲ್ ಈಗ ಮತ್ತೊಂದು ಕಿರುಚಿತ್ರ ಮೂಲಕ ಗಮನ ಸೆಳೆಯುತ್ತಿದ್ದಾರೆ. ಪಾಷ್ ಎಂಬ ಕಿರುಚಿತ್ರ ನಿರ್ದೇಶಿಸಿರುವ ಧೀರಜ್ ಈ ಸಲ ಆಸ್ಕರ್ ಪ್ರಶಸ್ತಿ ಮೇಲೆ ಕಣ್ಣಿಟ್ಟಿದ್ದಾರೆ.
ಭಾರತದಿಂದ ಆಸ್ಕರ್ ಪ್ರಶಸ್ತಿಗೆ ನಾಮಿನೇಟ್ ಆಗುವ ಕಿರುಚಿತ್ರಗಳ ಪೈಕಿ ಧೀರಜ್ ಜಿಂದಾಲ್ ಅವರು ಪಾಷ್ ಚಿತ್ರ ಸ್ಥಾನ ಪಡೆದುಕೊಂಡಿದೆ ಎಂದು ಎಎನ್‌ಐ ವರದಿ ಮಾಡಿದೆ. ಭಾರತೀಯ ಕಿರುಚಿತ್ರೋತ್ಸವದಲ್ಲಿ ಪಾಷ್ ಸಿನಿಮಾವೂ ಟಾಪ್ ಐದರಲ್ಲಿ ಸ್ಥಾನ ಪಡೆದುಕೊಂಡಿತ್ತು. ಈಗ ಆಸ್ಕರ್ ಪ್ರಶಸ್ತಿಗೆ ಹೋಗಲು ಸಜ್ಜಾಗಿದೆ.
ಜೀವನದಲ್ಲಿ
ಯಾವಾಗಲೂ
'ಪಾಸಿಟಿವ್'
ಆಗಿರಲು
ಸಾಧ್ಯವೇ?:
ನೋಡಿ
'ಪಾಸಿಟಿವ್'
ಕಿರುಚಿತ್ರ
13 ನಿಮಿಷಗಳ ಈ ಕಿರುಚಿತ್ರದಲ್ಲಿ ಅಭಿಷೇಕ್ ಬ್ಯಾಜರ್ನಿ ಮುಖ್ಯ ಪಾತ್ರದಲ್ಲಿ ನಟಿಸಿದ್ದಾರೆ. ಚಿತ್ರದಲ್ಲಿ ಬ್ಯಾನರ್ಜಿ ಟ್ರಕ್ ಡ್ರೈವರ್ ಪಾತ್ರವನ್ನು ನಿರ್ವಹಿಸುತ್ತಿದ್ದಾರೆ.
ಈ ಕುರಿತು ಪ್ರತಿಕ್ರಿಯೆ ನೀಡಿರುವ ಧೀರಜ್ ಜಿಂದಾಲ್ ''ಈ ಸುದ್ದಿಯಿಂದ ನಾವೆಲ್ಲರೂ ಸಂತಸಗೊಂಡಿದ್ದೇವೆ. ಇಲ್ಲಿಂದ ಹಬ್ಬ ಆರಂಭವಾಗಿದೆ'' ಧೀರಜ್ ಜಿಂದಾಲ್ ಹರ್ಷ ವ್ಯಕ್ತಪಡಿಸಿದ್ದಾರೆ. ''ಕೆಲವು ವರ್ಷಗಳ ಹಿಂದೆ ಸಾರಿಗೆ ಕಾರ್ಮಿಕರ ಬಗ್ಗೆ ಸಾಕ್ಷ್ಯಚಿತ್ರವನ್ನು ಮಾಡುತ್ತಿದ್ದೆ. ಆಗ ಟ್ರಕ್ ಚಾಲಕರನ್ನು ಭೇಟಿ ಮಾಡಿದಾಗ ಅವರು ಹೇಳಿದ ಕಥೆ ನನ್ನೊಳಗೆ ಉಳಿಯಿತು. ಯಾವಾಗಲೂ ಅವರ ನೋವು ಮತ್ತು ಅಸಹಾಯಕತೆಯ ಕಥೆಯನ್ನು ನಿರೂಪಿಸಲು ನಾನು ಇಷ್ಟಪಡುತ್ತೇನೆ'' ಎಂದು ಹೇಳಿದ್ದಾರೆ.
Recommended Video
ಜಿಂದಾಲ್ ಈ ಹಿಂದೆ 'ದಿ ಸ್ಕೂಲ್ ಬ್ಯಾಗ್' ಕಿರುಚಿತ್ರವನ್ನು ನಿರ್ದೇಶಿಸಿದ್ದರು. 40ಕ್ಕೂ ಹೆಚ್ಚು ಪ್ರಶಸ್ತಿಗಳನ್ನು ಗೆದ್ದಿದ್ದಾರೆ ಮತ್ತು 100ಕ್ಕೂ ಹೆಚ್ಚು ಅಂತರರಾಷ್ಟ್ರೀಯ ಚಲನಚಿತ್ರೋತ್ಸವಗಳಲ್ಲಿ ಪ್ರದರ್ಶನಗೊಂಡಿದೆ.