For Quick Alerts
  ALLOW NOTIFICATIONS  
  For Daily Alerts

  'ಸೂರ್ಯವಂಶಿ' ಫೋಟೋ ಶೇರ್ ಮಾಡಿದ ಅಕ್ಷಯ್ ಕುಮಾರ್‌ಗೆ ಬುದ್ದಿ ಹೇಳಿದ IPS ಅಧಿಕಾರಿ

  By ಫಿಲ್ಮಿಬೀಟ್ ಡೆಸ್ಕ್
  |

  ಬಾಲಿವುಡ್ ಖ್ಯಾತ ನಟರಾದ ಅಕ್ಷಯ್ ಕುಮಾರ್, ರಣ್ವೀರ್ ಸಿಂಗ್ ಮತ್ತು ಅಜಯ್ ದೇವಗನ್ ಒಂದೇ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಸೂರ್ಯವಂಶಿ ಎನ್ನುವ ಸಿನಿಮಾದಲ್ಲಿ ಮೂವರು ನಟರು ಒಟ್ಟಿಗೆ ನಟಿಸುತ್ತಿದ್ದು, ಮೂವರನ್ನು ನೋಡಲು ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ. ಅಂದಹಾಗೆ ಈ ಮೂರು ಸ್ಟಾರ್ ನಟರನ್ನು ಒಟ್ಟಿಗೆ ಒಂದೇ ಸಿನಿಮಾದಲ್ಲಿ ಕರೆತರುವ ಸಾಹಸ ಮಾಡಿದ್ದಾರೆ ನಿರ್ದೇಶಕ ರೋಹಿತ್ ಶೆಟ್ಟಿ.

  ಅಕ್ಷಯ್ ಕುಮಾರ್, ಅಜಯ್ ದೇವಗನ್ ಮತ್ತು ರಣ್ವೀರ್ ಸಿಂಗ್ ಒಂದೇ ಸಿನಿಮಾದಲ್ಲಿ ಒಟ್ಟಿಗೆ ಕಾಣಿಸಿಕೊಳ್ಳುತ್ತಿರುವುದು ಇದೇ ಮೊದಲು. ಚಿತ್ರದಲ್ಲಿ ನಾಯಕಿಯಾಗಿ ಕತ್ರಿನಾ ಕೈಫ್ ನಟಿಸುತ್ತಿದ್ದಾರೆ. ಅಂದಹಾಗೆ ಬಹುನಿರೀಕ್ಷೆಯ ಸೂರ್ಯವಂಶಿ ಸಿನಿಮಾದ ಬಿಡುಗಡೆ ದಿನಾಂಕ ಘೋಷಣೆಯಾಗಿದೆ. ಅಕ್ಟೋಬರ್ 22ರಂದು ಸಿನಿಮಾ ತೆರೆಗೆ ಬರುತ್ತಿದೆ. ಈ ಬಗ್ಗೆ ಸ್ವತಃ ಅಕ್ಷಯ್ ಕುಮಾರ್ ಮಾಹಿತಿ ಹಂಚಿಕೊಂಡಿದ್ದಾರೆ. ಸಿನಿಮಾ ಬಿಡುಗಡೆ ದಿನಾಂಕ ಜೊತೆಗೆ ಅಕ್ಷಯ್ ಕುಮಾರ್ ಮೇಕಿಂಗ್ ಫೋಟೋವನ್ನು ಶೇರ್ ಮಾಡಿದ್ದಾರೆ. ಅಕ್ಷಯ್ ಕುಮಾರ್ ಹಂಚಿಕೊಂಡ ಫೋಟೋ ಈಗ ವಿವಾದಕ್ಕೆ ಕಾರಣವಾಗಿದೆ. ಮುಂದೆ ಓದಿ...

  ಸೂರ್ಯವಂಶಿ ಫೋಟೋಗೆ IPS ಅಧಿಕಾರಿ ಅಸಮಾಧಾನ

  ಸೂರ್ಯವಂಶಿ ಫೋಟೋಗೆ IPS ಅಧಿಕಾರಿ ಅಸಮಾಧಾನ

  ಅಕ್ಷಯ್ ಕುಮಾರ್ ಶೇರ್ ಮಾಡಿದ ಫೋಟೋ ನೋಡಿದ ಬಳಿಕ ಐಪಿಎಸ್ ಅಧಿಕಾರಿ ಆರ್ ಕೆ ವಿಜ್ ಅಸಮಾಧಾನ ಹೊರಹಾಕಿದ್ದಾರೆ. ಈ ಫೋಟೋದಲ್ಲಿ ದೋಷಗಮನಿಸಿ ಅಕ್ಷಯ್ ಕುಮಾರ್‌ಗೆ ಬುದ್ಧಿವಾದ ಹೇಳಿದ್ದಾರೆ. ಚಿತ್ರದಲ್ಲಿ ರಣ್ವೀರ್ ಸಿಂಗ್ ಕುಳಿತಿದ್ದಾರೆ. ಅಕ್ಷಯ್ ಕುಮಾರ್ ಮತ್ತು ಅಜಯ್ ದೇವಗನ್ ನಿಂತಿದ್ದಾರೆ. ಮೂವರು ಪೊಲೀಸ್ ಸಮವಸ್ತ್ರ ಧರಿಸಿದ್ದಾರೆ. ಫೋಟೋ ನೋಡಿದ ಐಪಿಎಸ್ ಅಧಿಕಾರಿ ವಿಜ್, 'ಹಿರಿಯ ಅಧಿಕಾರಿಗಳ ಮುಂದೆ ಹಾಗೆ ಇನ್ಸ್ ಪೆಕ್ಟರ್ ಎಂದಿಗೂ ಕುಳಿತುಕೊಳ್ಳುವುದಿಲ್ಲ' ಎಂದು ಹೇಳಿದ್ದಾರೆ.

  ಅಕ್ಷಯ್ ಕುಮಾರ್ ಪ್ರತಿಕ್ರಿಯೆ

  ಅಕ್ಷಯ್ ಕುಮಾರ್ ಪ್ರತಿಕ್ರಿಯೆ

  ಈ ಟ್ವೀಟ್ ವೈರಲ್ ಆಗುತ್ತಿದ್ದಂತೆ ನಟ ಅಕ್ಷಯ್ ಕುಮಾರ್ ಪ್ರತಿಕ್ರಿಯೆ ನೀಡಿದ್ದಾರೆ. ಕ್ಯಾಮರಾ ಆನ್ ಇದ್ದಾಗ ಎಲ್ಲಾ ಪ್ರೋಟೋಕಾಲ್ ಅನುಸರಿಸುವುದಾಗಿ ಹೇಳಿದ್ದಾರೆ. "ಸರ್, ಕ್ಯಾಮರಾ ಆನ್ ಮಾಡಿದಾಗ ನಟರು ಎಲ್ಲಾ ಪ್ರೋಟೋಕಾಲ್ ಅನುಸರಿಸುತ್ತೇವೆ. ಇದು ತೆರೆ ಹಿಂದಿನ ಫೋಟೋ. ನಮ್ಮ ಪೊಲೀಸ್ ಪಡೆಗೆ ಎಂದಿಗೂ ಅಭಿನಂದನೆಗಳು. ನೀವು ಈ ಸಿನಿಮಾವನ್ನು ನೋಡಿದಾಗ ಖಂಡಿತವಾಗುತ್ತದೆ ಎಂದು ಭಾವಿಸುತ್ತೇವೆ" ಎಂದು ಅಕ್ಷಯ್ ಹೇಳಿದ್ದಾರೆ.

  ವೈರಲ್ ಆದ ಟ್ವೀಟ್

  ವೈರಲ್ ಆದ ಟ್ವೀಟ್

  ಈ ಟ್ವೀಟ್ ಈಗ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಐಪಿಎಸ್ ಅಧಿಕಾರಿ ಅವರ ಟ್ವೀಟ್ ಸಿಕ್ಕಾಪಟ್ಟೆ ಲೈಕ್ಸ್ ಗಿಟ್ಟಿಸಿಕೊಂಡಿದೆ. ಇನ್ನು ಅಕ್ಷಯ್ ಕುಮಾರ್ ಅಭಿಮಾನಿಗಳು ನೆಚ್ಚಿನ ನಟನ ಪ್ರತಿಕ್ರಿಯೆಯನ್ನು ಇಷ್ಟಪಟ್ಟಿದ್ದಾರೆ.

  ಸೂರ್ಯವಂಶಿ ಸಿನಿಮಾ ಬಗ್ಗೆ

  ಸೂರ್ಯವಂಶಿ ಸಿನಿಮಾ ಬಗ್ಗೆ

  ಇನ್ನು ಸೂರ್ಯವಂಶಿ ಸಿನಿಮಾ ಅಂದುಕೊಂಡಂತೆ ಆಗಿದ್ದರೆ ಕಳೆದ ವರ್ಷವೇ ತೆರೆಗೆ ಬರಬೇಕಿತ್ತು. ಮಾರ್ಚ್ ತಿಂಗಳಲ್ಲೆ ಬಿಡುಗಡೆಗೆ ಸಿದ್ಧವಾಗಿತ್ತು. ಆದರೆ ಕೊರೊನಾ ಕಾರಣದಿಂದ ಸಿನಿಮಾ ಬಿಡುಗಡೆ ವಿಳಂಬವಾಗುತ್ತಿದೆ. ಈ ಸಿನಿಮಾ ಕೂಡ ಚಿತ್ರಮಂದಿರಗಳಲ್ಲೇ ರಿಲೀಸ್ ಆಗುತ್ತಿದೆ. ಇನ್ನು ಅಕ್ಷಯ್ ಕುಮಾರ್ ನಟನೆಯ ಅನೇಕ ಸಿನಿಮಾಗಳು ಬಿಡುಗಡೆಗೆ ಸಿದ್ಧವಾಗಿವೆ. ಸೂರ್ವಂಶಿ, ಬಚ್ಚನ್ ಪಾಂಡೆ, ರಕ್ಷಾ ಬಂಧನ್. ರಾಮ್ ಸೇತು, ಅತ್ರಂಗಿ ರೇ ಸೇರಿದಂತೆ ಅನೇಕ ಸಿನಿಮಾಗಳು ಬಿಡುಗಡೆ ಸಜ್ಜಾಗಿವೆ. ಅಕ್ಷಯ್ ಕುಮಾರ್ ಕೊನೆಯದಾಗಿ ಬೆಲ್ ಬಾಟಮ್ ಸಿನಿಮಾ ಮೂಲಕ ಅಭಿಮಾನಿಗಳ ಮುಂದೆ ಬಂದಿದ್ದಾರೆ.

  English summary
  IPS officer points out mistake in Akshay Kumar shared photo of Sooryavanshi.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X