»   » ಜಾಹ್ನವಿ-ಖುಷಿ ಕಪೂರ್ ಬಗ್ಗೆ ಕೆಟ್ಟ ಬೈಗುಳ: ನೆಟ್ಟಿಗರಿಗೆ ಪಾಠ ಕಲಿಸಿದ ಅನ್ಷುಲಾ!

ಜಾಹ್ನವಿ-ಖುಷಿ ಕಪೂರ್ ಬಗ್ಗೆ ಕೆಟ್ಟ ಬೈಗುಳ: ನೆಟ್ಟಿಗರಿಗೆ ಪಾಠ ಕಲಿಸಿದ ಅನ್ಷುಲಾ!

Posted By:
Subscribe to Filmibeat Kannada

ಶ್ರೀದೇವಿಯ ಹಠಾತ್ ನಿಧನದಿಂದ ಇಡೀ ಕಪೂರ್ ಕುಟುಂಬ ದಿಗ್ಭ್ರಮೆಗೊಂಡಿದೆ. ಪತಿ ಬೋನಿ ಕಪೂರ್, ಪುತ್ರಿಯರಾದ ಜಾಹ್ನವಿ ಹಾಗೂ ಖುಷಿ ಇನ್ನೂ ದುಃಖದ ಮಡುವಿನಲ್ಲಿದ್ದಾರೆ.

ಶ್ರೀದೇವಿ ಪುತ್ರಿಯರಾದ ಜಾಹ್ನವಿ ಹಾಗೂ ಖುಷಿ ಕಪೂರ್ ಗೆ ಬೋನಿ ಕಪೂರ್ ಮೊದಲ ಪತ್ನಿಯ ಮಕ್ಕಳಾದ ಅರ್ಜುನ್ ಕಪೂರ್ ಹಾಗೂ ಅನ್ಷುಲಾ ಕಪೂರ್ ಮಾನಸಿಕ ಸ್ಥೈರ್ಯ ತುಂಬುತ್ತಿದ್ದಾರೆ.

ಶ್ರೀದೇವಿಯ ನಿಧನದಿಂದ ಬೋನಿ ಕಪೂರ್ ಮಕ್ಕಳೆಲ್ಲ ಒಂದಾಗಿದ್ದಾರೆ. ಒಡಕು ಮೂಡಿದ್ದ ಬೋನಿ ಕಪೂರ್ ಕುಟುಂಬದಲ್ಲಿ ಸದ್ಯ ಒಗ್ಗಟ್ಟು ಮೂಡಿದ್ದರೂ, ನೆಟ್ಟಿಗರು ಮಾತ್ರ ಜಾಹ್ನವಿ ಹಾಗೂ ಖುಷಿ ಕಪೂರ್ ಬಗ್ಗೆ ಕೆಟ್ಟದಾಗಿ ಕಾಮೆಂಟ್ ಮಾಡುತ್ತಿದ್ದಾರೆ.

ಸಹೋದರಿಯರಾದ ಜಾಹ್ನವಿ ಹಾಗೂ ಖುಷಿ ಬಗ್ಗೆ ಕೆಟ್ಟದಾಗಿ ಕಾಮೆಂಟ್ ಮಾಡಿದವನಿಗೆ ಅನ್ಷುಲಾ ಕಪೂರ್ ತಮ್ಮ ಮಾತಲ್ಲೇ ಪಾಠ ಕಲಿಸಿದ್ದಾರೆ. ಮುಂದೆ ಓದಿರಿ...

ಶುರು ಆಗಿದ್ದು ಹೇಗೆ.?

''No matter how chaotic it is, wild flowers will still spring up in the middle of nowhere'' ಎಂದು ತಮ್ಮ ಇನ್ಸ್ಟಾಗ್ರಾಮ್ ನಲ್ಲಿ ಬೋನಿ ಕಪೂರ್-ಮೋನಾ ಕಪೂರ್ ಪುತ್ರಿ ಅನ್ಷುಲಾ ಕಪೂರ್ ಪೋಸ್ಟ್ ಮಾಡಿದರು.

ಶ್ರೀದೇವಿ ಮಗಳು ಬರೆದಿರುವ ಪತ್ರವನ್ನ ಓದಿದರೆ ಮನ ಕಲಕುತ್ತೆ.!

ಕಾಮೆಂಟ್ ಗಳ ಸುರಿಮಳೆ

ಅನ್ಷುಲಾ ಪೋಸ್ಟ್ ಗೆ ಕಾಮೆಂಟ್ ಗಳ ಸುರಿಮಳೆಯೇ ಬರತೊಡಗಿತು. ಅದರ ಮಧ್ಯೆ ಕಲವರು ಜಾಹ್ನವಿ ಹಾಗೂ ಖುಷಿ ಬಗ್ಗೆ ಕೆಟ್ಟಕೆಟ್ಟದಾಗಿ ಬರೆಯಲು ಆರಂಭಿಸಿದರು.

ತಾಯಿಯನ್ನ ಕಳೆದುಕೊಂಡ ಬೋನಿ ಮೊದಲ ಪತ್ನಿಯ ಪುತ್ರ ಅಂದು ಆಡಿದ್ದ ಮಾತೇನು.?

ಅಪ್ ಸೆಟ್ ಆದ ಅನ್ಷುಲಾ

ಜಾಹ್ನವಿ ಹಾಗೂ ಖುಷಿ ಬಗ್ಗೆ ಕೆಟ್ಟ ಬೈಗುಳಗಳು ಶುರು ಆದಾಗ, ಅಪ್ ಸೆಟ್ ಆದ ಅನ್ಷುಲಾ ಆ ಎಲ್ಲ ಕಾಮೆಂಟ್ ಗಳನ್ನ ಡಿಲೀಟ್ ಮಾಡಿದರು.

ಶ್ರೀದೇವಿಯನ್ನ ಬೋನಿ ಕೈಹಿಡಿದಾಗ, ಮೊದಲ ಪತ್ನಿ ಮೋನಾಗಾದ ಆಘಾತ ಅಷ್ಟಿಷ್ಟಲ್ಲ.!

ನೆಟ್ಟಿಗರಿಗೆ ಮಾತಲ್ಲೇ ಪೆಟ್ಟು ಕೊಟ್ಟ ಅನ್ಷುಲಾ

''ದಯವಿಟ್ಟು ಕೆಟ್ಟ ಪದ ಪ್ರಯೋಗ ಮಾಡಬೇಡಿ. ಅದರಲ್ಲೂ ನನ್ನ ಸಹೋದರಿಯರ ಬಗ್ಗೆ. ಇದನ್ನ ನಾನು ಪ್ರಶಂಸಿಸುವುದಿಲ್ಲ. ಹೀಗಾಗಿ ಅಂತಹ ಎಲ್ಲ ಕಾಮೆಂಟ್ ಗಳನ್ನು ನಾನು ಡಿಲೇಟ್ ಮಾಡಿದ್ದೇನೆ'' ಎಂದು ಅನ್ಷುಲಾ ಕಪೂರ್ ಬರೆದುಕೊಂಡರು.

ಒಡೆದ ಕಪೂರ್ ಕುಟುಂಬ ಒಂದಾಗಿಸಿದ ಶ್ರೀದೇವಿ ಸಾವು!

ಎಚ್ಚೆತ್ತ ನೆಟ್ಟಿಗರು

ಅನ್ಷುಲಾರ ಈ ಕಾಮೆಂಟ್ ನೋಡಿದ್ಮೇಲೆ, ಬಾಯಿಗೆ ಬಂದಂತೆ ಕಾಮೆಂಟ್ ಮಾಡುತ್ತಿದ್ದ ನೆಟ್ಟಿಗರು ಎಚ್ಚೆತ್ತುಕೊಂಡರು. ಅನ್ಷುಲಾರ ನೇರ ನುಡಿಯಿಂದ ಕೆಟ್ಟದಾಗಿ ಕಾಮೆಂಟ್ ಮಾಡುವವರ ಸಂಖ್ಯೆ ಕೂಡ ಕಮ್ಮಿ ಆಯ್ತು.

ಶ್ರೀದೇವಿಗೆ ಅಂತಿಮ ನಮನ ಸಲ್ಲಿಸಲು ಮೊದಲ ಪತಿ(?) ಬರಲೇ ಇಲ್ಲ!

English summary
After Sridevi's demise, Janhvi and Khushi Kapoor get abused. Here is how step sister Anshula Kapoor reacted.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada