»   » ಮೊಮ್ಮಗಳು ಆರಾಧ್ಯಾ ಸ್ಟ್ರಾಬೆರಿ: ಜಯಾ ಬಚ್ಚನ್

ಮೊಮ್ಮಗಳು ಆರಾಧ್ಯಾ ಸ್ಟ್ರಾಬೆರಿ: ಜಯಾ ಬಚ್ಚನ್

Posted By:
Subscribe to Filmibeat Kannada

ಐಶ್ವರ್ಯಾ ರೈ ಮಗು ಹೇಗಿದೆ ಎಂಬ ಬಗ್ಗೆ ಇಡೀ ಜಗತ್ತೇ ಕುತೂಹಲಗೊಂಡಿದೆ. ಐಶ್ವರ್ಯಾ ರೈ ಮಗು ಆರಾಧ್ಯಾ ಹುಟ್ಟಿದಾಗಿನಿಂದಲೂ ಆಕೆಯ ಅಮ್ಮ ಐಶ್ವರ್ಯಾರನ್ನು ಹೋಲುತ್ತಾರೋ ಅಥವಾ ಹೇಗಿದ್ದಾರೆ ಎಂಬುದರ ಕುರಿತು ಇಡೀ ಜಗತ್ತೇ ಚರ್ಚಿಸುತ್ತಿದೆ. ಆದರೆ ಬಂದ ಮಾಹಿತಿಯಂತೆ ಆರಾಧ್ಯಾ, ತಾಯಿ ಐಶ್ವರ್ಯಾರನ್ನು ಹೋಲುತ್ತಾರೆ ಎಂಬುದೇ ಆಗಿತ್ತು.

ಆದರೆ ಖುದ್ದು ನೋಡಿದವರು ತೀರಾ ಕಡಿಮೆಯೇ ಆಗಿದ್ದರಿಂದ ಈ ಬಗ್ಗೆ ಇನ್ನೂ ಎಲ್ಲರಿಗೂ ಸಂಶಯ ಇದ್ದೇ ಇದೆ. ಏಕೆಂದರೆ ಎಲ್ಲರೂ ತಮ್ಮ ತಮ್ಮ ಕಣ್ಣುಗಳನ್ನೇ ನಂಬುವುದು ಜಾಸ್ತಿ ಹಾಗೂ ಐಶ್ವರ್ಯಾ ರೈ ಆಗಲಿ ಅಥವಾ ಬಚ್ಚನ್ ಕುಟುಂಬದಿಂದಾಗಲೀ ಇತ್ತೀಚಿಗೆ ಯಾವುದೇ ಪಕ್ಕಾ ಹೇಳಿಕೆ ನೀಡಿರಲಿಲ್ಲ. ಆದರೆ ಈಗ ಆರಾಧ್ಯಾ ಅಜ್ಜಿ ಜಯಾ ಬಚ್ಚನ್ ಮಗು ಯಾರಂತಿದೆ ಎಂಬುದನ್ನು ಬಹಿರಂಗಗೊಳಿಸಿದ್ದಾರೆ.

ಬಚ್ಚನ್ ಕುಟುಂಬದ ಮಾತನ್ನು ನಂಬದಿರಲೇ ಸಾಧ್ಯವೇ? 24 ಗಂಟೆಯೂ ಆರಾಧ್ಯಾಳನ್ನು ನೋಡುತ್ತಿರುವ ಕುಟುಂಬ ಅದೊಂದೇ ಆದ್ದರಿಂದ ಜಯಾ ಬಚ್ಚನ್ ಹೇಳಿಕೆ ತೀರಾ ಪ್ರಾಮುಖ್ಯತೆ ಪಡೆದಿದೆ. ಈ ಕುರಿತು ಜಯಾ ಬಚ್ಚನ್ " ಮಗು ಆರಾಧ್ಯಾ ಸಂಪೂರ್ಣವಾಗಿ ಯಾರಂತಿಲ್ಲ, ಅಮ್ಮ ಐಶ್ವರ್ಯಾ ಹಾಗೂ ಅಪ್ಪ ಅಭಿಷೇಕ್ ಇಬ್ಬರನ್ನೂ ಸ್ವಲ್ಪ ಸ್ವಲ್ಪ ಹೋಲುತ್ತಿದೆ. ಆದರೆ ತುಂಬಾ ಸುಂದರವಾಗಿದೆ" ಎಂದಿದ್ದಾರೆ.

ಮುಂದುವರಿದ ಜಯಾ ಬಚ್ಚನ್, "ಅವಳು ಸ್ಟ್ರಾಬೆರಿಯಂತಿದ್ದಾಳೆ. ಅವಳು ಹುಟ್ಟಿದ ತಕ್ಷಣ ನೋಡಿದ ನನಗೆ ಸ್ಟ್ರಾಬೆರಿ ನೆನಪಾಗಿದೆ. ಹೀಗಾಗಿ ನಾನು ಆಕೆಯನ್ನು ಸ್ಟ್ರಾಬೆರಿ ಎಂದೇ ಕರೆಯುತ್ತೇನೆ" ಎಂದಿದ್ದಾರೆ. ಸುಂದರವಾಗಿದೆ, ಆದರೆ ಸಂಪೂರ್ಣವಾಗಿ ಯಾರಂತಲ್ಲ ಎನ್ನುವ ಮೂಲಕ ಎಲ್ಲರಲ್ಲಿದ್ದ ಕುತೂಹಲವನ್ನು ತಣಿಸಿದ್ದಾರೆ.

"ಆರಾಧ್ಯಾ ತುಂಬಾ ಲಕ್ಕಿ. ಅವಳಿಗೆ ಗ್ರೇಟ್ ಮಿಸ್ ವರ್ಲ್ಡ್ ಐಶ್ವರ್ಯಾ ರೈ, ನರ್ಸ್ ಆಗಿದ್ದಾಳೆ. ಹೀಗೆಂದು ಅವಳಮ್ಮ ಐಶ್ವರ್ಯಾರನ್ನು ನಾನು ಕೆಲವೊಮ್ಮೆ ಕಾಲೆಳೆಯುತ್ತೇನೆ. ಐಶೂ ಯಾವಾಗಲೂ ಮಗುವನ್ನು ಎತ್ತಿಕೊಂಡೇ ಇರುತ್ತಾಳೆ. ಆದರೆ ಮಗುವಿನೊಟ್ಟಿಗೆ ಹೊರಹೋಗಲು ಬಯಸುವುದಿಲ್ಲ" ಎಂದಿದ್ದಾರೆ ಜಯಾ ಬಚ್ಚನ್. (ಏಜೆನ್ಸೀಸ್)

English summary
Jaya Bachchan reveals Aishwarya Rai daughter Aaradhya Bachchan looks as she looks like a strawberry.
 
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada