Just In
Don't Miss!
- Sports
ಸಯ್ಯದ್ ಮುಷ್ತಾಕ್ ಅಲಿ: ಹಿಮಾಚಲ ಪ್ರದೇಶ ಮಣಿಸಿದ ತಮಿಳುನಾಡು
- News
ಪರಮವೀರ ಚಕ್ರ ಪ್ರಶಸ್ತಿ ನೀಡಿದರೆ ಸಾಕೇ: ಕರ್ನಲ್ ಸಂತೋಷ್ ತಂದೆ
- Education
ECIL Recruitment 2021: 3 ಟೆಕ್ನಿಕಲ್ ಅಧಿಕಾರಿ ಹುದ್ದೆಗಳಿಗೆ ನೇರ ಸಂದರ್ಶನ
- Automobiles
ವಿನೂತನ ಫೀಚರ್ಸ್ಗಳೊಂದಿಗೆ ನ್ಯೂ ಜನರೇಷನ್ ಟಾಟಾ ಸಫಾರಿ ಎಸ್ಯುವಿ ಅನಾವರಣ
- Finance
ಗಣರಾಜ್ಯೋತ್ಸವಕ್ಕೆ ಬಿಎಸ್ಎನ್ಎಲ್ನಿಂದ ವಿಶೇಷ ಆಫರ್
- Lifestyle
ನೀವು ಬಳಸಬಹುದಾದ ಡೈರಿ ಉತ್ಪನ್ನವಲ್ಲದ ಹಾಲುಗಳ ಬಗ್ಗೆ ಇಲ್ಲಿದೆ ಮಾಹಿತಿ
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ನೋವಿನಲ್ಲಿರುವ ಜಾಹ್ನವಿಗೆ ಸಂತಸ ತಂದ ಕಪೂರ್ ಸಹೋದರಿಯರು

ದಿವಂಗತ ನಟಿ ಶ್ರೀದೇವಿ ಅವರ ಪುತ್ರಿ ಜಾಹ್ನವಿ ಕಪೂರ್ ಇಂದು (ಮಾರ್ಚ್ 7) 21ನೇ ವರ್ಷಕ್ಕೆ ಕಾಲಿಟ್ಟಿದ್ದಾರೆ. ಅಮ್ಮನೊಂದಿಗೆ 20 ವರ್ಷಗಳ ಹುಟ್ಟುಹಬ್ಬ ಆಚರಿಸಿಕೊಂಡಿದ್ದ ಜಾಹ್ನವಿ ಇದೇ ಮೊದಲ ಭಾರಿಗೆ ಅಮ್ಮನಿಲ್ಲದ ಬರ್ತಡೇಯನ್ನ ಸೆಲೆಬ್ರೆಟ್ ಮಾಡಿಕೊಂಡಿದ್ದಾರೆ.
ಜಾಹ್ನವಿ ಕಪೂರ್ ತನ್ನ 21ನೇ ಹುಟ್ಟುಹಬ್ಬವನ್ನ ವೃದ್ಧಾಶ್ರಮದಲ್ಲಿ ಆಚರಿಸಿಕೊಂಡಿರುವುದು ವಿಶೇಷ. ಅಮ್ಮನನ್ನ ಕಳೆದುಕೊಂಡ ಜಾಹ್ನವಿಗೆ ಹಲವು ಅಮ್ಮಂದಿರು ಶುಭಕೋರಿರುವ ವಿಡಿಯೋ ಈಗ ವೈರಲ್ ಆಗಿದೆ. ಈ ಪ್ರೀತಿಯನ್ನ ನೋಡಿದ ಜಾಹ್ನವಿ ಒಂದು ಕ್ಷಣ ಭಾವುಕರಾದಂತೆ ಕಂಡಿದೆ.
ಶ್ರೀದೇವಿ ಪಾರ್ಥಿವ ಶರೀರ ಭಾರತಕ್ಕೆ ತರಲು ಈ ವ್ಯಕ್ತಿಯೇ ಕಾರಣ
ಇನ್ನು ಮನಸ್ತಾಪಗಳಿಂದ ದೂರವಾಗಿದ್ದ ಕಪೂರ್ ಕುಟುಂಬ ಶ್ರೀದೇವಿ ಸಾವಿನ ಬಳಿಕ ಒಂದಾಗಿದ್ದರು. ಅದರ ಮುಂದುವರೆದ ಭಾಗದಂತೆ ಶ್ರೀದೇವಿ ಮಗಳ ಹುಟ್ಟುಹಬ್ಬವನ್ನ ಕಪೂರ್ ಕುಟುಂಬದ ಕುಡಿಗಳೆಲ್ಲ ಒಟ್ಟಿಗೆ ಸೇರಿ ವಿಶೇಷವಾಗಿರಿಸಿದ್ದಾರೆ. ಮುಂದೆ ಓದಿ....

ವೃದ್ಧಾಶ್ರಮದಲ್ಲಿ ಹುಟ್ಟುಹಬ್ಬ ಆಚರಣೆ
ಜಾಹ್ನವಿ ಕಪೂರ್ ವೃದ್ಧಾಶ್ರಮದಲ್ಲಿ ತಮ್ಮ 21ನೇ ಹುಟ್ಟುಹಬ್ಬ ಆಚರಣೆ ಮಾಡಿಕೊಂಡಿದ್ದು, ಮೂರು ವಿಭಿನ್ನ ಬಗೆಯ ಕೇಕ್ ಕತ್ತರಿಸಿ ಸಂಭ್ರಮಿಸಿದ್ದಾರೆ.

ಸಹೋದರಿ ಬರ್ತಡೇ ಸಂಭ್ರಮಿಸಿದ ಕಪೂರ್ ಸಿಸ್ಟರ್ಸ್
ಜಾಹ್ನವಿ ಕಪೂರ್ ಹುಟ್ಟುಹಬ್ಬವನ್ನ ಆಚರಿಸಿಲು ಇಡೀ ಕಪೂರ್ ಕುಟುಂಬದ ಕುಡಿಗಳು ಒಟ್ಟಾಗಿದ್ದಾರೆ. ಜಾಹ್ನವಿ ಸಹೋದರಿಯರೆಲ್ಲ ಸೇರಿ ಹಲವು ಕೇಕ್ ಗಳನ್ನ ಕತ್ತರಿಸಿ ಸಂಭ್ರಸಿದ್ದಾರೆ.
ಶ್ರೀದೇವಿ ರೂಮಿನಲ್ಲಿ ಆ ದಿನ ಏನಾಯ್ತು.? ಕೋಮಲ್ ನೆಹ್ತಾ ಬಿಚ್ಚಿಟ್ಟ ಅಸಲಿ ಕಥೆ.!

ಕಪೂರ್ ಸಹೋದರಿಯರು
ಜಾಹ್ನವಿ ಕಪೂರ್ ಸಹೋದರಿ ಖುಷಿ ಕಪೂರ್, ಸೋನಂ ಕಪೂರ್, ಬೋನಿ ಕಪೂರ್ ಮೊದಲ ಪತ್ನಿಯ ಮಗಳು ಅನ್ಷುಲಾ ಕಪೂರ್, ಶನಾಯಾ ಕಪೂರ್, ಜಹಾನ ಕಪೂರ್, ರಿಯಾ ಕಪೂರ್ ಎಲ್ಲರೂ ಸೇರಿ ಜನುಮದಿನ ಕೊಂಡಾಡಿದ್ದಾರೆ.

ಮಗಳ ಸಂಭ್ರಮಕ್ಕೆ ತಂದೆ ಸಾಕ್ಷಿ
ಇನ್ನು ಶ್ರೀದೇವಿ ಅಗಲಿಕೆಯಿಂದ ನೋವಿನಲ್ಲಿರುವ ಕುಟುಂಬದಲ್ಲಿ ಜಾಹ್ನವಿ ಕಪೂರ್ ಹುಟ್ಟುಹಬ್ಬ ಸಂತಸ ತಂದಿದೆ. ಮಗಳ ಈ ಸಂತಸದ ಕ್ಷಣಕ್ಕೆ ತಂದೆ ಬೋನಿ ಕಪೂರ್ ಕೂಡ ಸಾಕ್ಷಿಯಾಗಿದ್ದಾರೆ.

ಮನಸ್ತಾಪ ಮರೆತು ಒಂದಾದ ಕುಟುಂಬ
ಬೋನಿ ಕಪೂರ್ ಮೊದಲ ಪತ್ನಿಯ ಮಕ್ಕಳು ಅರ್ಜುನ್ ಕಪೂರ್ ಮತ್ತು ಅಕ್ಷುಲಾ, ತಮ್ಮ ತಾಯಿಯ ನಿಧನದ ನಂತರ ಬೋನಿ ಕಪೂರ್ ಅವರ ನೆರವು ಪಡೆಯಲಿಲ್ಲ. ಆದ್ರೆ, ಶ್ರೀದೇವಿ ನಿಧನದ ನಂತರ ಈಗ ಎಲ್ಲರೂ ಒಂದಾಗಿದ್ದಾರೆ. ಬೋನಿ ಕಪೂರ್ ಗೆ ಸಹಾಯವಾಗಿ ನಿಂತಿದ್ದಾರೆ. ಮಕ್ಕಳು ಎಲ್ಲರೂ ಒಟ್ಟಿಗೆ ಇರುವುದು ಬೋನಿಗೆ ಖುಷಿಕೊಟ್ಟಿದೆ.
ಒಡೆದ ಕಪೂರ್ ಕುಟುಂಬ ಒಂದಾಗಿಸಿದ ಶ್ರೀದೇವಿ ಸಾವು!

ಅಮ್ಮನ ಕೊನೆ ಕ್ಷಣದಲ್ಲಿ ಮಗಳು ಇರಲಿಲ್ಲ
ಶ್ರೀದೇವಿ ಅವರು ಫೆಬ್ರವರಿ 24ರಂದು ದುಬೈನ ಹೋಟೆಲ್ ನಲ್ಲಿ ಅಕಾಲಿಕ ಮರಣ ಹೊಂದಿದ್ದರು. 54 ವರ್ಷದ ಶ್ರೀದೇವಿ ಸಂಬಂಧಿಕರ ಮದುವೆಗೆ ಹೋಗಿ ಅಲ್ಲಿಯೇ ಕೊನೆಯುಸಿರೆಳೆದರು. ಆ ವೇಳೆ ಜಾಹ್ನವಿ ಕಪೂರ್ ಅಮ್ಮನ ಜೊತೆಯಲ್ಲಿ ಇರಲಿಲ್ಲ. ಯಾಕಂದ್ರೆ ಜಾಹ್ನವಿ ಅಭಿನಯದ ಚೊಚ್ಚಲ ಸಿನಿಮಾ 'ದಡಕ್' ಚಿತ್ರದ ಚಿತ್ರೀಕರಣದಲ್ಲಿ ಭಾಗಯಾಗಿದ್ದರು. ಹೀಗಾಗಿ, ಅಮ್ಮನ ಕೊನೆಯ ಕ್ಷಣಗಳು ಜಾಹ್ನವಿ ನೋಡಲು ಸಾಧ್ಯವಾಗಲಿಲ್ಲ.