For Quick Alerts
  ALLOW NOTIFICATIONS  
  For Daily Alerts

  ಕತ್ರಿನಾ ಅಳುವಂತೆ ಜಾನ್ ಅಬ್ರಹಾಂ ಮಾಡಿದ್ದೇಕೆ?

  |

  ನಟಿ ಕತ್ರಿನಾ ಕೈಫ್ ಒಂದು ಕಾಲದಲ್ಲಿ 'ಗೋಳೋ' ಎಂದು ಅತ್ತುಬಿಟ್ಟಿದ್ದರು. ಅವರ ಅಳುವಿಗೆ ಕಾರಣರಾಗಿದ್ದು ನಟ ಜಾನ್ ಅಬ್ರಹಾಂ. ಇಂಗ್ಲೆಂಡ್ ಮೂಲದ ಕತ್ರಿನಾಗೆ ಇಂಗ್ಲಿಷ್ ಬಿಟ್ಟರೆ ಬೇರೆ ಭಾಷೆ ಬರುವುದು ಅಷ್ಟಕಷ್ಟೇ ಎಂಬಂತಿತ್ತು. ಹೀಗಿರುವ ಕತ್ರಿನಾ ಬಾಲಿವುಡ್ ಚಿತ್ರರಂಗದಲ್ಲಿ ಅವಕಾಶ ಅರಸಿ ಬಂದಿದ್ದರು. ಜಾನ್ ಅಬ್ರಹಾಂ ನಾಯಕರಾಗಿದ್ದ 'ಸಾಯಾ' ಚಿತ್ರದ ನಾಯಕಿಯಾಗಿ ಆಯ್ಕೆಯಾಗಿದ್ದರು, ಆದರೆ ಕೈಗೆ ಬಂದ ತುತ್ತು ಬಾಯಿಗೆ ಬೀಳಲಿಲ್ಲ.

  ನಾಯಕಿ ನಟಿಸಬೇಕಿದ್ದ ಕತ್ರಿನಾಗೆ ಆಗಿದ್ದೇ ಬೇರೆ. ಹಿಂದಿ ಭಾಷೆಯಲ್ಲಿ 'ಹೋಲ್ಡ್' ಇಲ್ಲದ ಕತ್ರಿನಾರನ್ನು ಜಾನ್ ಅಬ್ರಹಾಂ ಆ ಚಿತ್ರದಿಂದ ಹೊರಹಾಕಿದ್ದರು. ಅವಕಾಶ ಕಳೆದುಕೊಂಡ ಕತ್ರಿನಾ, ಗೋಳೋ ಎಂದು ಸಲ್ಲು ಮುಂದೆ ಅತ್ತುಬಿಟ್ಟಿದ್ದರು. ಅದನ್ನು ಸಲ್ಲೂ ಇನ್ನೂ ಮರೆತಿಲ್ಲ. ಆ ವಿಷಯವನ್ನು ಇತ್ತೀಚಿಗೆ ಸ್ವತಃ ಸಲ್ಲೂ ಬಾಯ್ಬಿಟ್ಟಿದ್ದಾರೆ.

  ಇತ್ತೀಚಿಗೆ ಸಂದರ್ಶನವೊಂದರಲ್ಲಿ ಸಲ್ಮಾನ್, "ಸಾಯಾ ಚಿತ್ರದಿಂದ ಹೊರಬಿದ್ದ ಕತ್ರಿನಾ ಅಳುತ್ತಿದ್ದರು. ಯಾಕೆ ಅಳುತ್ತಿ? ಆಗಿದ್ದೆಲ್ಲಾ ಒಳ್ಳೆಯದಾಗುವುದಕ್ಕೇ ಆಗಿದೆ. ನಿನಗೆ ಜಾನ್ ಹೀಗೆ ಮಾಡಿದ್ದರಿಂದ ಒಳ್ಳೆಯದೇ ಆಗುತ್ತೆ. ಮುಂದೊಂದು ದಿನ ನೀನೆ ಆತನನ್ನು ನಿನ್ನ ಚಿತ್ರದಿಂದ ಹೊರಹಾಕುವ ಸಮಯ ಬರಬಹುದು. ಆದರೆ ಆಗ ನೀನು ಹಾಗೆ ಮಾಡಬೇಡ" ಎಂದಿದ್ದೆ" ಎಂದು ಕತ್ರಿನಾ ಅನುಭವಿಸಿದ ಕೆಟ್ಟ ಸಮಯವನ್ನು ನೆನಪಿಸಿಕೊಂಡಿದ್ದಾರೆ.

  ಅವಕಾಶ ಅರಸಿ ಬಾಲಿವುಡ್ ಬಾಗಿಲಲ್ಲಿ ಬಂದು ನಿಂತ ಕತ್ರಿನಾಗೆ ಆಗಿನಿಂದ ಈಗಿನವರೆಗೂ ಫ್ರೆಂಡ್ ಹಾಗೂ ಗೈಡ್ ಆಗಿ ಸಲ್ಮಾನ್ ನಿರಂತರ ಜೊತೆಯಾಗಿ ನಿಂತಿದ್ದಾರೆ. ಅದೆಷ್ಟೋ ಬಾರಿ ಕತ್ರಿನಾ ಬಾಡಿಗಾರ್ಡ್ ಆಗಿ ಕೂಡ ಸಲ್ಲೂ ಸಪೋರ್ಟ್ ಮಾಡಿದ್ದಾರೆ ಎಂಬ ಸುದ್ದಿಯೂ ಇದೆ. ಅದೇನೆ ಇರಲಿ, ಇಂದು ಕತ್ರಿನಾ ಬಾಲಿವುಡ್ ಹಾಟ್ ಫೇವರೆಟ್ ನಟಿ. ಈ ಮೊದಲು ಕತ್ರಿನಾ ಅತ್ತಿದ್ದು, ಅವಕಾಶಕ್ಕಾಗಿ ಪರದಾಡಿದ್ದು ಈಗ ಇತಿಹಾಸ ಸೇರಿದೆ. (ಏಜೆನ್ಸೀಸ್)

  English summary
  John Abraham made Katrina Kaif cry as she was ousted from the film Saaya for poor hindi. Salman Khan pacified her.
 
  Tuesday, August 14, 2012, 12:52
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X