For Quick Alerts
  ALLOW NOTIFICATIONS  
  For Daily Alerts

  'ಬಾಲಿವುಡ್‌ನಲ್ಲಿ ರಣ್‌ವೀರ್ ಸಿಂಗ್ ಕಥೆ ಮುಗಿದ ಅದ್ಯಾಯ': ಮತ್ತೆ ವಿವಾದಾತ್ಮಕ ಹೇಳಿಕೆ ಕೊಟ್ಟ ಕೆಆರ್‌ಕೆ!

  |

  ಬಾಲಿವುಡ್‌ ಸಿನಿಮಾಗಳು ಬಾಕ್ಸಾಫೀಸ್‌ನಲ್ಲಿ ಸದ್ದು ಮಾಡುತ್ತಿಲ್ಲ. ಒಂದರ ಹಿಂದೊಂದು ಸಿನಿಮಾಗಳು ನಷ್ಟ ಅನುಭವಿಸುತ್ತಿವೆ. ಸೂಪರ್‌ಸ್ಟಾರ್ ಸಿನಿಮಾಗಳನ್ನು ನೋಡುವುದಕ್ಕೆ ಜನರು ಥಿಯೇಟರ್‌ಗೆ ಬರುತ್ತಿಲ್ಲ. ವರ್ಷದ ಕೊನೆಯಲ್ಲಿದ್ದ ಒಂದೇ ಒಂದು ನಿರೀಕ್ಷೆ ಕೂಡ ಹುಸಿಯಾಗಿದೆ.

  ಈ ವರ್ಷದ ಕೊನೆಯ ತಿಂಗಳಿನಲ್ಲೂ ಬಾಲಿವುಡ್ ಸಿನಿಮಾಗಳನ್ನು ನೋಡುವುದಕ್ಕೆ ಪ್ರೇಕ್ಷಕರು ಇಷ್ಟ ಪಡುತ್ತಿಲ್ಲ. ಅದಕ್ಕೆ ರಣ್‌ವೀರ್ ಸಿಂಗ್ ಅಭಿನಯದ 'ಸರ್ಕಸ್' ಸಿನಿಮಾನೇ ಸಾಕ್ಷಿ. ರೋಹಿತ್ ಶೆಟ್ಟಿ ಹಾಗೂ ರಣ್‌ವೀರ್ ಸಿಂಗ್ ಕಾಂಬಿನೇಷನ್ ಬಂದ ಬಿಗ್ ಬಜೆಟ್ ಸಿನಿಮಾ ಬಾಕ್ಸಾಫೀಸ್‌ನಲ್ಲಿ ಸೋತು ಸುಣ್ಣವಾಗಿದೆ.

  ಹೀಗಾಗಿ ಬಾಲಿವುಡ್‌ನ ವಿವಾದಾತ್ಮಕ ವಿಮರ್ಶಕ ಕಮಾಲ್ ಆರ್‌ ಖಾನ್ ಮತ್ತೆ ಬಾಲಿವುಡ್ ನಟರ ವಿರುದ್ಧ ತಿರುಗಿಬಿದ್ದಿದ್ದಾರೆ. ಅದರಲ್ಲೂ ರಣ್‌ವೀರ್ ಸಿಂಗ್, ಶಾಹಿದ್ ಕಪೂರ್, ವಿಕ್ಕಿ ಕೌಶಾಲ್, ವರುಣ್ ಧವನ್ ಹಾಗೂ ಜಾನ್ ಅಬ್ರಾಹಂ ಬಗ್ಗೆ ಖಾರವಾಗಿ ಟ್ವೀಟ್ ಮಾಡಿದ್ದಾರೆ. ಅಷ್ಟಕ್ಕೂ ಬಾಲಿವುಡ್‌ ನಟರ ಬಗ್ಗೆ ಕಮಲ್ ಆರ್ ಖಾನ್ ಹೇಳಿದ್ದೇನು? ಅಂತ ತಿಳಿಯಲು ಮುಂದೆ ಓದಿ.

  ರಣ್‌ವೀರ್ 'ಸರ್ಕಸ್' ಕಥೆಯೇನು?

  ರಣ್‌ವೀರ್ 'ಸರ್ಕಸ್' ಕಥೆಯೇನು?

  ಬಾಲಿವುಡ್‌ನ ಮೋಸ್ಟ್ ಎನರ್ಜೆಟಿಕ್ ಆಕ್ಟರ್ ರಣ್‌ವೀರ ಸಿಂಗ್ ಹೊಸ ಸಿನಿಮಾ 'ಸರ್ಕಸ್' ರಿಲೀಸ್ ಆಗಿದೆ. ರಣ್‌ವೀರ್ ಸಿಂಗ್ ಹಾಗೂ ರೋಹಿತ್ ಶೆಟ್ಟಿ ಕಾಂಬಿನೇಷನ್‌ನಲ್ಲಿ ಸಿನಿಮಾ ನಿರ್ಮಾಣ ಆಗಿದೆ. ಹೀಗಿದ್ದರೂ, 'ಸರ್ಕಸ್' ಸಿನಿಮಾ ನೋಡುವುದಕ್ಕೆ ಜನರು ಆಸಕ್ತಿವಹಿಸುತ್ತಿಲ್ಲ ಎಂದು ವರದಿಯಾಗಿದೆ. ಅಲ್ಲದೆ ರಣ್‌ವೀರ್ ಸಿಂಗ್ ಕರಿಯರ್‌ನಲ್ಲಿ ಮತ್ತೊಂದು ಸೋಲು ಗ್ಯಾರಂಟಿ ಅನ್ನೋ ಅಭಿಪ್ರಾಯ ವ್ಯಕ್ತವಾಗುತ್ತಿದೆ. ಈ ಮಧ್ಯೆ ವಿವಾದಗಳನ್ನು ಮೈಮೇಲೆ ಎಳೆದುಕೊಳ್ಳೊ ಕೆಆರ್‌ಕೆ ರಣ್‌ವೀರ್ ಸಿಂಗ್ ಬಗ್ಗೆ ಕಿಡಿಕಾರಿದ್ದಾರೆ.

  ರಣ್‌ವೀರ್ ಸಿಂಗ್ ಕಥೆ ಮುಗೀತು

  ರಣ್‌ವೀರ್ ಸಿಂಗ್ ಕಥೆ ಮುಗೀತು

  ರಣ್‌ವೀರ್ ಸಿಂಗ್ ಸಿನಿಮಾ 'ಸರ್ಕಸ್‌'ಗೆ ನೆಗೆಟಿವ್ ಕಮೆಂಟ್‌ಗಳು ಬರುತ್ತಿದೆ. ಈ ಹಿನ್ನೆಲೆಯಲ್ಲಿ ಕಮಾಲ್ ಆರ್ ಖಾನ್ ಬಾಲಿವುಡ್ ಬಗ್ಗೆ ಕಳವಳ ವ್ಯಕ್ತಪಡಿಸಿ ಟ್ವೀಟ್ ಮಾಡಿದ್ದಾರೆ. ಈ ಟ್ವೀಟ್‌ನಲ್ಲಿ ರಣ್‌ವೀರ್ ಸಿಂಗ್‌ರನ್ನು ಟಾರ್ಗೆಟ್ ಮಾಡಿದ್ದು, " ಬಾಲಿವುಡ್‌ನಲ್ಲಿ ರಣ್‌ವೀರ್ ಸಿಂಗ್ ಕರಿಯರ್ ಮುಗಿದ ಅಧ್ಯಾಯ' ಎಂದು ಟ್ವೀಟ್ ಮಾಡಿದ್ದಾರೆ. ಇದು ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾ ಪಟ್ಟೆ ವೈರಲ್ ಆಗುತ್ತಿದೆ.

  ಕೆಆರ್‌ಕೆ ಟ್ವೀಟ್‌ನಲ್ಲಿ ಹೇಳಿದ್ದೇನು?

  ಕೆಆರ್‌ಕೆ ಟ್ವೀಟ್‌ನಲ್ಲಿ ಹೇಳಿದ್ದೇನು?

  ಕಮಾರ್ ಆರ್ ಖಾನ್ ಟ್ವೀಟ್‌ನಲ್ಲಿ ಕೇವಲ ರಣ್‌ವೀರ್ ಸಿಂಗ್ ಅಷ್ಟೇ ಅಲ್ಲ. ವರುಣ್ ಧವನ್, ವಿಕ್ಕಿ ಕೌಶಲ್, ಜಾನ್ ಅಬ್ರಾಹಂ ಹಾಗೂ ಬಾಲಿವುಡ್‌ ಖಾನ್‌ಗಳು ಕೂಡ ಸೇರಿಕೊಂಡಿದ್ದಾರೆ. " ಬಾಲಿವುಡ್ ಈಗ ದೊಡ್ಡ ಸಮಸ್ಯೆಯಲ್ಲಿ ಸಿಕ್ಕಿಕೊಂಡಿದೆ. ವರುಣ್ ಧವನ್ ಈಗ ವೆಬ್ ಸಿರೀಸ್ ನಟನಾಗಿದ್ದಾರೆ. ವಿಕ್ಕಿ ಕೌಶಲ್ ಓಟಿಟಿ ನಟ. ರಣ್‌ವೀರ್ ಸಿಂಗ್ ವೃತ್ತಿ ಬದುಕು ಮುಗಿದ ಅಧ್ಯಾಯ. ಫ್ಲಾಪ್ ಸ್ಟಾರ್ ಶಾಹಿದ್ ಕಪೂರ್ 50 ಕೋಟಿ ರೂ. ಕೇಳುತ್ತಿದ್ದಾರೆ. ಬಾಲಿವುಡ್ ಖಾನ್‌ಗಳ ಕಥೆ ಮುಗಿದಿದೆ. ಬಾಲಿವುಡ್‌ ನಂಬಿಕೆ ಕಾರ್ತಿಕ್ ಆರ್ಯನ್ ಅಷ್ಟೇ ಎಂದು ಹೇಳಿದೆ.

  ಕಾರ್ತಿಕ್ ಆರ್ಯನ್ ಮೇಲೆ ಹೋಪ್

  ಕಾರ್ತಿಕ್ ಆರ್ಯನ್ ಮೇಲೆ ಹೋಪ್

  ಕಾರ್ತಿಕ್ ಆರ್ಯನ್ ಈ ವರ್ಷ ಸಕ್ಸಸ್‌ಫುಲ್ ಸಿನಿಮಾಗಳನ್ನು ನೀಡಿದ್ದಾರೆ. ಈ ವರ್ಷ ರಿಲೀಸ್ ಆದ 'ಭೂಲ್‌ಭುಲಯ್ಯ 2' ಹಾಗೂ 'ಫ್ರೆಡ್ಡಿ' ಎರಡೂ ಸಿನಿಮಾಗಳಿಗೆ ಸಿನಿಪ್ರಿಯರು ಮೆಚ್ಚುಗೆ ಸೂಚಿಸಿದ್ದಾರೆ. 'ಭೂಲ್‌ಭುಲಯ್ಯ 2' 200 ಕೋಟಿ ರೂ. ಕಲೆ ಹಾಕಿದ್ದರೆ, ಫ್ರಿಡ್ಡಿ ಓಟಿಟಿಯಲ್ಲಿ ರಿಲೀಸ್ ಆಗಿತ್ತು. ಈ ಕಾರಣಕ್ಕೆ ಕಾರ್ತಿಕ್ ಆರ್ಯನ್ ಮೇಲೆ ಬಾಲಿವುಡ್‌ ಹೆಚ್ಚು ನಿರೀಕ್ಷೆಯನ್ನು ಇಟ್ಟುಕೊಂಡಿದೆ ಎಂದು ಕೆಆರ್‌ಕೆ ಟ್ವೀಟ್ ಮಾಡಿದ್ದಾರೆ. ಇದಕ್ಕೆ ಬಾಲಿವುಡ್‌ ನಟರು ಯಾವ ರೀತಿ ಪ್ರತಿಕ್ರಿಯೆ ನೀಡಬಹುದು ಅನ್ನೋ ಕುತೂಹಲ ಅಭಿಮಾನಿಗಳಲ್ಲಿದೆ.

  English summary
  Kamaal R Khan Says Ranveer Singh’s Career is over Shahid Kapoor Is Flopster
  Sunday, December 25, 2022, 18:47
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X