For Quick Alerts
  ALLOW NOTIFICATIONS  
  For Daily Alerts

  ನಿರ್ದೇಶಕ ಅನುರಾಗ್ ಕಶ್ಯಪ್ 'ಮಿನಿ ಮಹೇಶ್ ಭಟ್' ಎಂದು ಟೀಕಿಸಿದ ಕಂಗನಾ ರಣಾವತ್

  |

  ಒಂದು ಕಾಲದಲ್ಲಿ ತಮಗೆ ಉತ್ತಮ ಸ್ನೇಹಿತೆಯಾಗಿದ್ದ ಈ ಹೊಸ ಕಂಗನಾ ರಣಾವತ್ ಬಗ್ಗೆ ತಮಗೆ ತಿಳಿದಿಲ್ಲ ಎಂದು ಇತ್ತೀಚೆಗೆ ನಿರ್ದೇಶಕ ಅನುರಾಗ್ ಕಶ್ಯಪ್ ಟ್ವೀಟ್ ಮಾಡಿದ್ದರು. ಜತೆಗೆ ಕಂಗನಾ ಅವರ 'ಮಣಿಕರ್ಣಿಕಾ' ಚಿತ್ರದ ಕುರಿತಾದ ಅವರ ಸಂದರ್ಶನದ ವಿಡಿಯೋ ಶೇರ್ ಮಾಡಿದ್ದ ಅನುರಾಗ್ ಕಶ್ಯಪ್, ಇದು ಭಯ ಹುಟ್ಟಿಸುವಂತಿದೆ ಎಂದಿದ್ದರು.

  ತಾಯಿಯನ್ನು ಕಳೆದುಕೊಂಡ ಜೋಗಿ ಪ್ರೇಮ್! | Filmibeat Kannada

  ಕಂಗನಾ ಅವರ ಹತ್ತಿರದ ಕುಟುಂಬ ಮತ್ತು ಸ್ನೇಹಿತರಿಗೆ ಆಕೆ ಏನು ಮಾಡುತ್ತಿದ್ದಾರೆ ಎನ್ನುವುದು ಕಾಣಿಸುತ್ತಿಲ್ಲ ಎಂದಾದಲ್ಲಿ, ಬಹುಶಃ ಕಂಗನಾ ತಮ್ಮ ಪರ ಯಾರನ್ನೂ ಹೊಂದಿಲ್ಲ ಎಂದರ್ಥ ಎಂದು ಹೇಳಿದ್ದರು. ಕಂಗನಾ ತಮ್ಮ ನಿರ್ದೇಶಕರ ವಿರುದ್ಧ ಕೆಟ್ಟ ಮಾತುಗಳನ್ನಾಡುತ್ತಾರೆ. ಎಡಿಟಿಂಗ್ ಸಂದರ್ಭದಲ್ಲಿ ಕುಳಿತು ಸಹನಟರ ಪಾತ್ರಗಳಿಗೆ ಕತ್ತರಿ ಹಾಕಿಸುತ್ತಾರೆ. ಅವರ ಜತೆ ಈ ಹಿಂದೆ ಕೆಲಸ ಮಾಡಿದವರು ಆಕೆಯಿಂದ ದೂರ ಓಡಿ ಹೋಗುತ್ತಿದ್ದಾರೆ. ತಾನು ಪಡೆದಿರುವ ಅಧಿಕಾರವನ್ನು ಬೇರೆಯವರನ್ನು ಹತ್ತಿಕ್ಕಲು ಇರುವುದು ಎಂದೇ ಆಕೆ ಭಾವಿಸಿದ್ದಾರೆ ಎಂದು ಅನುರಾಗ್ ಕಶ್ಯಪ್ ಟೀಕಿಸಿದ್ದಾರೆ.

  ಸಾವನ್ನು ಸ್ವಂತ ಲಾಭಕ್ಕೆ ಬಳಸಿಕೊಳ್ಳೊಲ್ಲ: ಕಂಗನಾ ರಣಾವತ್‌ಗೆ ತಾಪ್ಸಿ ಪನ್ನು ತಿರುಗೇಟುಸಾವನ್ನು ಸ್ವಂತ ಲಾಭಕ್ಕೆ ಬಳಸಿಕೊಳ್ಳೊಲ್ಲ: ಕಂಗನಾ ರಣಾವತ್‌ಗೆ ತಾಪ್ಸಿ ಪನ್ನು ತಿರುಗೇಟು

  ಅನುರಾಗ್ ಕಶ್ಯಪ್ ಹೇಳಿಕೆಗೆ ಪ್ರತಿಕ್ರಿಯಿಸಿರುವ ಕಂಗನಾ ತಂಡ ತೀಕ್ಷ್ಣ ಉತ್ತರ ನೀಡಿದೆ. ಮುಂದೆ ಓದಿ...

  ಮಿನಿ ಮಹೇಶ್ ಭಟ್

  ಮಿನಿ ಮಹೇಶ್ ಭಟ್

  'ಮಿನಿ ಮಹೇಶ್ ಭಟ್ ಇಲ್ಲಿದ್ದಾರೆ ನೋಡಿ. ಕಂಗನಾ ಏಕಾಂಗಿಯಾಗಿದ್ದು, ಆಕೆಯನ್ನು ಬಳಸಿಕೊಳ್ಳುತ್ತಿರುವ ನಕಲಿ ಜನರಿಂದ, ಈ ಮುಂಚೆ ಭಯೋತ್ಪಾದಕರನ್ನು ರಕ್ಷಿಸುತ್ತಿದ್ದು, ಈಗ ಮೂವಿ ಮಾಫಿಯಾವನ್ನು ರಕ್ಷಿಸುತ್ತಿರುವ ದೇಶದ್ರೋಹಿಗಳಿಂದ, ನಗರ ನಕ್ಸಲರಿಂದ ಸುತ್ತುವರಿದಿದ್ದಾರೆ' ಎಂದು ಕಂಗನಾ ಟೀಕಿಸಿದ್ದಾರೆ.

  ಸುಶಾಂತ್ ವಿಚಾರದಲ್ಲಿ ಮಾತಾಡಿದ್ದಾರೆಯೇ?

  ಸುಶಾಂತ್ ವಿಚಾರದಲ್ಲಿ ಮಾತಾಡಿದ್ದಾರೆಯೇ?

  ನೀಚ ಭಯೋತ್ಪಾದನಾ ಬೆಂಬಲಿಗರು, ನಗರ ನಕ್ಸಲರು ಮತ್ತು ದೇಶದ್ರೋಹಿಗಳು ತಂಡಕಟ್ಟಿಕೊಂಡು ಬರುತ್ತಿದ್ದಾರೆ. ತಮ್ಮನ್ನು ತಾವೇ ವಿರೋಧಿ ಸಂಘಟನೆ ಎಂದು ಕರೆದುಕೊಳ್ಳುತ್ತಾರೆ. ಆದರೆ ಈಗ ಸುಶಾಂತ್ ಅವರನ್ನು ಮಾನಸಿಕವಾಗಿ ಹಾಗೂ ಭಾವನಾತ್ಮಕವಾಗಿ ಕೊಂದು ಹಾಕಿದ ಜನರನ್ನು ರಕ್ಷಿಸಲು ಗುಂಪುಗಟ್ಟಿದ್ದಾರೆ. ಸುಶಾಂತ್ ಅವರಿಗೆ ಕಿರುಕುಳ ನೀಡುವಾಗ ಮತ್ತು ಕೊಂದಾಗ ಈ ಜನರು ಒಂದಾದರೂ ಮಾತನ್ನಾಡಿದ್ದರೇ? ಎಂದು ಪ್ರಶ್ನಿಸಿದ್ದಾರೆ.

  ಕ್ವೀನ್ ಒಂದೇ ಹಿಟ್ ಚಿತ್ರ

  ಕ್ವೀನ್ ಒಂದೇ ಹಿಟ್ ಚಿತ್ರ

  ಕಂಗನಾಗೆ ಸಿನಿಮಾ ಇಲ್ಲದೆ ಇರುವಾಗ ಕ್ವೀನ್ ಚಿತ್ರಕ್ಕಾಗಿ ಸೇರಿಕೊಂಡಿದ್ದು, ತನು ವೆಡ್ಸ್ ಮನು ಚಿತ್ರಕ್ಕೆ ಆರ್ಥಿಕ ಕೊರತೆ ಉಂಟಾದಾಗ ಸಹಾಯ ಮಾಡಿದ್ದನ್ನು ಅನುರಾಗ್ ಹೇಳಿಕೊಂಡಿದ್ದರು. ಇದಕ್ಕೆ ಪ್ರತಿಕ್ರಿಯಿಸಿರುವ ಕಂಗನಾ ತಂಡ, ಹೌದು ಅದು ನಿಜ. ಮತ್ತೊಂದು ವಾಸ್ತವವೆಂದರೆ ನಿಮ್ಮ ಇಡೀ ವೃತ್ತಿ ಹಾಗೂ ನೀವು ನಾಲ್ವರು ಸೇರಿ ಮಾಡಿದ ಫ್ಯಾಂಟಮ್ ನಿರ್ಮಾಣ ಸಂಸ್ಥೆಗೆ ಕ್ವೀನ್ ಏಕೈಕ ಹಿಟ್ ಚಿತ್ರವಾಗಿದೆ. ಇದಕ್ಕಾಗಿ ನೀವು ಆಕೆಗೆ ಕೃತಜ್ಞರಾಗಿರಬೇಕು ಎಂದಿದೆ.

  ಈ ರೀತಿ ಮಾತು ಕೇಳಿರಲಿಲ್ಲ

  ಈ ರೀತಿ ಮಾತು ಕೇಳಿರಲಿಲ್ಲ

  ಯಶಸ್ಸಿನ ಅಮಲು ಒಳಗಿನವರು ಅಥವಾ ಹೊರಗಿನವರು ಪ್ರತಿಯೊಬ್ಬರನ್ನೂ ತೀವ್ರವಾಗಿ ಕಾಡುತ್ತದೆ. ನನ್ನಿಂದ ಕಲಿಯಿರಿ, ನನ್ನಂತೆ ಇರಿ- ಈ ಮಾತುಗಳನ್ನು 2015ಕ್ಕೂ ಮೊದಲು ಕಂಗನಾ ಬಾಯಲ್ಲಿ ಕೇಳಿರಲಿಲ್ಲ. ನನ್ನ ಜತೆ ಇಲ್ಲದೆ ಇರುವವರೆಲ್ಲರೂ ಕೆಟ್ಟವರು ಎಂಬಂತೆ ಕಂಗನಾ ಮಾತನಾಡುತ್ತಿದ್ದಾರೆ ಎಂದು ಅನುರಾಗ್ ಕಿಡಿಕಾರಿದ್ದಾರೆ.

  'ಬಿ' ಗ್ರೇಡ್ ನಟಿ ಎಂದ ಕಂಗನಾಗೆ ತಾಪ್ಸಿ ತಿರುಗೇಟು: ತಾಪ್ಸಿ ಬೆಂಬಲಕ್ಕೆ ನಿಂತ ಬಾಲಿವುಡ್ ಸ್ಟಾರ್ಸ್'ಬಿ' ಗ್ರೇಡ್ ನಟಿ ಎಂದ ಕಂಗನಾಗೆ ತಾಪ್ಸಿ ತಿರುಗೇಟು: ತಾಪ್ಸಿ ಬೆಂಬಲಕ್ಕೆ ನಿಂತ ಬಾಲಿವುಡ್ ಸ್ಟಾರ್ಸ್

  ರಣವೀರಿ ಶೋರಿ ಟ್ವೀಟ್‌ಗೆ ಬೆಚ್ಚಿದ ಅನುರಾಗ್

  ರಣವೀರಿ ಶೋರಿ ಟ್ವೀಟ್‌ಗೆ ಬೆಚ್ಚಿದ ಅನುರಾಗ್

  ಅನೇಕ ಸ್ವತಂತ್ರ ಸಿನಿಮಾ ಯೋಧರು ಈಗ ಬಾಲಿವುಡ್‌ನ ಮುಖ್ಯವಾಹಿನಿಯ ಜವಾನರಾಗಿದ್ದಾರೆ. ಇದೇ ವ್ಯಕ್ತಿಗಳು ಬಾಲಿವುಡ್‌ನ ಮುಖ್ಯವಾಹಿನಿಯೊಳಗೆ ಅವರು ಪ್ರವೇಶ ನೀಡುವವರೆಗೂ ಗೇಟುಗಳ ಮುಂದೆ 24/7 ವ್ಯವಸ್ಥೆಯ ಕುರಿತು ಮಾತನಾಡುತ್ತಲೇ ಇರುತ್ತಿದ್ದರು. ಎಷ್ಟೊಂದು ಬೂಟಾಟಿಕೆ? ಎಂದು ನಟ ರಣವೀರ್ ಶೋರಿ ಟ್ವೀಟ್ ಮಾಡಿದ್ದರು. ಅದಕ್ಕೆ ಕ್ರುದ್ಧರಾಗಿದ್ದ ಅನುರಾಗ್ ಕಶ್ಯಪ್, ನೀವು ಹೇಳಿದ್ದರ ಅರ್ಥವೇನು? ಆ ಜವಾನು ಯಾರು ಎಂದು ಸರಿಯಾಗಿ ಹೇಳಿ ಎಂದು ಕೇಳಿದ್ದರು. ಇದು ಟ್ರೋಲಿಗರಿಗೆ ಆಹಾರವಾಗಿದ್ದು, ಕುಂಬಳಕಾಯಿ ಕಳ್ಳ ಎಂದರೆ ಅನುರಾಗ್ ಕಶ್ಯಪ್ ಹೆಗಲು ಮುಟ್ಟಿಕೊಳ್ಳುತ್ತಿದ್ದಾರೆ ಎಂದು ಲೇವಡಿ ಮಾಡಿದ್ದಾರೆ.

  English summary
  Bollywood actress Kangana Ranaut's team slams director Anurag Kashyap for his comments on her and calls him Mini Mahesh Bhatt.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X