For Quick Alerts
  ALLOW NOTIFICATIONS  
  For Daily Alerts

  'ಆಕೆ ನೂರು ರೂಪಾಯಿಗೆ ಸಿಗುತ್ತಾಳೆ': ಪ್ರತಿಭಟನಾಕಾರ್ತಿ ಬಗ್ಗೆ ಕಂಗನಾ ಅಹಂಕಾರದ ಟ್ವೀಟ್

  |

  ಕಂಗನಾ ರಣೌತ್ ಟ್ವೀಟ್‌ಗಳು ಹಳಿ ತಪ್ಪಿ ಕೆಲ ತಿಂಗಳುಗಳೇ ಆಗಿಬಿಟ್ಟಿವೆ. ಮುಂಬೈ ಅನ್ನು ಪಾಕ್ ಆಕ್ರಮಿತ ಕಾಶ್ಮೀರವೆಂದು, ಸಹೊದ್ಯೋಗಿ ನಟಿಯರ ಬಗ್ಗೆ ಕೀಳು ಟ್ವೀಟ್‌ಗಳನ್ನು ಮಾಡಿ ಈಗಾಗಲೇ ಕೇಸುಗಳನ್ನು ಮೇಲೆ ಹೇರಿಕೊಂಡಿರುವ ಕಂಗನಾ, ಇದೀಗ ಮತ್ತೊಂದು ಕೀಳು ಅಭಿರುಚಿಯ, ಜೊತೆಗೆ ಸುಳ್ಳು ಮಾಹಿತಿ ಹರಡುವ ಟ್ವೀಟ್ ಮಾಡಿದ್ದಾರೆ.

  ದೇಶದೆಲ್ಲೆಡೆ ಕೇಂದ್ರ ಸರ್ಕಾರದ ರೈತ ನೀತಿ ವಿರುದ್ಧ ಮಾಡಲಾಗುತ್ತಿರುವ ರೈತ ಪ್ರತಿಭಟನೆಯ ಚಿತ್ರವೊಂದರ ಬಗ್ಗೆ ಕಂಗನಾ ಟ್ವೀಟ್ ಮಾಡಿದ್ದು, ಈ ಟ್ವೀಟ್ ಸುಳ್ಳು ಮಾಹಿತಿ ಹೊಂದಿಲ್ಲದೆ, ಹಿರಿಯ ಪ್ರತಿಭಟನಾಕಾರ್ತಿಯೊಬ್ಬರನ್ನು ಕೀಳಾಗಿ ವ್ಯಂಗ್ಯಮಾಡಿದ್ದಾರೆ.

  ಬಂಗಲೆ ನೆಲಸಮಗೊಳಿಸುವ ಪ್ರಕರಣ; ಜಯ ಸಾಧಿಸಿದ ಕಂಗನಾ ರಣಾವತ್

  ಡೆಲ್ಲಿ ಚಲೋ ರೈತ ಚಳುವಳಿಯಲ್ಲಿ ವಯಸ್ಸಾದ ಮಹಿಳೆಯೊಬ್ಬರು, ಪ್ರತಿಭಟನಾಕಾರರೊಂದಿಗೆ ಬಾವುಟ ಹಿಡಿದು ರಸ್ತೆಯಲ್ಲಿ ನಡೆಯುತ್ತಿರುವ ಚಿತ್ರ ಸಖತ್ ವೈರಲ್ ಆಗಿತ್ತು. ಆ ವೃದ್ಧೆ 2019 ರ ಶಾಹೀನ್ ಭಾಗ್‌ನಲ್ಲಿ ಸಿಎಎ ವಿರುದ್ಧ ಪ್ರತಿಭಟನೆಯಲ್ಲಿ ಭಾಗವಹಿಸಿದ್ದ ವೃದ್ಧೆ ಎಂದು ಸುಳ್ಳು ಮಾಹಿತಿಯನ್ನು ಕಂಗನಾ ಟ್ವೀಟ್ ಮಾಡಿದ್ದರು. ಅಸಲಿಗೆ ಇಬ್ಬರೂ ವೃದ್ಧೆಯರು ಬೇರೆ-ಬೇರೆ ಆಗಿದ್ದಾರೆ.

  ನೂರು ರೂಪಾಯಿಗೆ ಲಭ್ಯವಿದ್ದಾಳೆ ಎಂದ ಕಂಗನಾ

  ನೂರು ರೂಪಾಯಿಗೆ ಲಭ್ಯವಿದ್ದಾಳೆ ಎಂದ ಕಂಗನಾ

  ಸುಳ್ಳು ಮಾಹಿತಿ ಟ್ವೀಟ್ ಮಾಡಿದ್ದಲ್ಲದೆ, ಶಾಹೀನ್‌ ಬಾಗ್‌ನ ಅಜ್ಜಿಯೇ ಈಗ ಪಂಜಾಬ್‌ನ ರೈತ ಮಹಿಳೆ ಆಗಿದ್ದಾಳೆ. ಈಕೆ ನೂರು ರೂಪಾಯಿಗೆ ಲಭ್ಯವಿದ್ದಾಳೆ ಎಂದು ಕೀಳಾಗಿ ಟ್ವೀಟ್ ಮಾಡಿದ್ದರು ಕಂಗನಾ.

  ಟ್ವೀಟ್ ಡಿಲೀಟ್ ಮಾಡಿದ ಕಂಗನಾ

  ಟ್ವೀಟ್ ಡಿಲೀಟ್ ಮಾಡಿದ ಕಂಗನಾ

  ಕಂಗನಾ ರ ಈ ಟ್ವೀಟ್‌ಗೆ ಭಾರಿ ವಿರೋಧ ವ್ಯಕ್ತವಾಗಿತ್ತು. ವಿರೋಧದ ಬೆನ್ನಲ್ಲೆ ಕಂಗನಾ ತಮ್ಮ ಟ್ವೀಟ್ ಅನ್ನು ಡಿಲೀಟ್ ಮಾಡಿದ್ದಾರೆ. ಆದರೆ ಕಂಗನಾ ಮಾಡಿದ್ದ ಟ್ವೀಟ್‌ನ ಸ್ಕ್ರೀನ್‌ ಶಾಟ್‌ಗಳು ಹರಿದಾಡುತ್ತಿವೆ. ಇದಷ್ಟೆ ಅಲ್ಲದೆ, ಪಂಜಾಬ್‌ನ ವಕೀಲ ಹರ್ಕಮ್ ಸಿಂಗ್ ಅವರು ಕಂಗನಾ ಟ್ವೀಟ್‌ ವಿರುದ್ಧ ದಾವೆ ಹೂಡಿದ್ದು, ನೊಟೀಸ್ ಸಹ ಕಳಿಸಿದ್ದಾರೆ.

  ಹೈದರಾಬಾದ್ ನಲ್ಲಿರುವ 'ಅಧೀರ' ಸಂಜಯ್ ದತ್ ರನ್ನ ಭೇಟಿಯಾದ ನಟಿ ಕಂಗನಾ

  ಶಾಹೀನ್ ಬಾಗ್ ಅಜ್ಜಿ ಹೆಸರು ಬಾಲ್ಕೀಸ್ ಬಾನು

  ಶಾಹೀನ್ ಬಾಗ್ ಅಜ್ಜಿ ಹೆಸರು ಬಾಲ್ಕೀಸ್ ಬಾನು

  ಶಾಹೀನ್ ಬಾಗ್‌ನಲ್ಲಿ ಸಿಎಎ ವಿರುದ್ಧ ಪ್ರತಿಭಟನೆಯಲ್ಲಿ ಭಾಗವಹಿಸಿದ್ದ ಅಜ್ಜಿಯ ಹೆಸರು ಬಾಲ್ಕಿಸ್ ಬಾನು, ರೈತ ಪ್ರತಿಭಟನೆಯಲ್ಲಿ ಭಾಗವಹಿಸಿದ್ದ ವಯಸ್ಸಾದ ವೃದ್ಧೆಯ ಪತ್ತೆಯಾಗಿಲ್ಲ. ಬಾಲ್ಕೀಸ್ ಬಾನು, ರೈತ ಪ್ರತಿಭಟನೆಯಲ್ಲಿ ಭಾಗವಹಿಸಲು ಯತ್ನಿಸಿದರಾದರೂ, ಅವರನ್ನು ವಶಕ್ಕೆ ಪಡೆದ ಪೊಲೀಸರು ಪ್ರತಿಭಟನೆಯಲ್ಲಿ ಭಾಗವಹಿಸಲು ಬಿಟ್ಟಿಲ್ಲ.

  ಏರ್ ಪೋರ್ಟ್ ಗೆ ಆಗಮಿಸಿದ ಕೃತಿ ಕರಬಂದ | Filmibeat Kannada
  ಈಗಾಗಲೇ ಕೆಲವು ಪ್ರಕರಣಗಳು ಕಂಗನಾ ಮೇಲಿವೆ

  ಈಗಾಗಲೇ ಕೆಲವು ಪ್ರಕರಣಗಳು ಕಂಗನಾ ಮೇಲಿವೆ

  ತಮ್ಮ ವಿವಾದಾತ್ಮಕ ಟ್ವೀಟ್‌, ಹೇಳಿಕೆಗಳಿಂದಾಗಿ ಕೆಲವು ಪ್ರಕರಣಗಳನ್ನು ತಲೆ ಮೇಲೆ ಹಾಕಿಕೊಂಡಿದ್ದಾರೆ ಕಂಗನಾ. ದ್ವೇಷ ಹರಡುವ ಯತ್ನ ಮಾಡಿದ್ದಾರೆಂದು, ಮುಂಬೈ ಪೊಲೀಸರು ಕಂಗನಾ ಹಾಗೂ ಅವರ ಸಹೋದರಿ ರಂಗೋಲಿ ವಿರುದ್ಧ ಎಫ್‌ಐಆರ್ ದಾಖಲಿಸಿದ್ದಾರೆ. ರೈತರನ್ನು ಭಯೋತ್ಪಾದರೆಂದು ಕರೆದಿದ್ದಕ್ಕೆ, ತುಮಕೂರಿನಲ್ಲಿಯೂ ಒಂದು ಪ್ರಕರಣ ದಾಖಲಾಗಿದೆ.

  ತಾಪ್ಸಿ ಪನ್ನು, ಸ್ವರಾ ಭಾಸ್ಕರ್ ಮೇಲೆ ಹರಿಹಾಯ್ದ ಕಂಗನಾ ಸಹೋದರಿ

  English summary
  Kangana Ranaut gets leagel notice for tweeting false news. She deleted the tweet.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X