twitter
    For Quick Alerts
    ALLOW NOTIFICATIONS  
    For Daily Alerts

    'ಎಮರ್ಜೆನ್ಸಿ'ಯಲ್ಲಿ ಇಂದಿರಾ ಗಾಂಧಿಯಾದ ಕಂಗನಾ ರನೌತ್: 1975ರಲ್ಲಿ ತುರ್ತು ಪರಿಸ್ಥಿತಿ ಹೇರಿದ್ದೇಕೆ?

    |

    ಬಾಲಿವುಡ್‌ನ ವಿವಾದಾತ್ಮಕ ನಟಿ ಕಂಗನಾ ರನೌತ್ ಹೊಸ ಸಿನಿಮಾ ಬಿಡುಗಡೆಗೆ ಸಜ್ಜಾಗಿದೆ. ಕಂಗನಾ ನಟಿಸಿದ 'ಧಾಕಡ್' ಸಿನಿಮಾ ಬಾಕ್ಸಾಫೀಸ್‌ನಲ್ಲಿ ಸೋತು ಸುಣ್ಣವಾಗುತ್ತಿದ್ದಂತೆ ಸೋಶಿಯಲ್ ಮೀಡಿಯಾದಲ್ಲಿ ಕಂಗನಾ ಟ್ರೋಲ್ ಆಗಿದ್ದರು.

    ಟ್ರೋಲ್‌ಗಳಿಂದ ಮುಜುಗರಕ್ಕೆ ಒಳಗಾಗಿದ್ದ ಕಂಗನಾ ರನೌತ್ 'ಎಮರ್ಜಿನ್ಸಿ'ಯಾಗಿ ಸಕ್ಸಸ್ ಪಡೆದು ಕೊಳ್ಳು ಸಜ್ಜಾಗಿದ್ದಾರೆ. ನೆಟ್ಟಿಗರ ಮುಂದೆ ಮತ್ತೆ ತನ್ನ ಸಾಮರ್ಥ್ಯವನ್ನು ತೋರಿಸಲು ಕಾದು ಕುಳಿತಿದ್ದಾರೆ. ಸದ್ಯ ಬಿಡುಗಡೆಯಾಗಿರುವ 'ಎಮರ್ಜೆನ್ಸಿ' ಫಸ್ಟ್ ಲುಕ್ ಮೆಚ್ಚುಗೆ ಗಳಿಸಿದೆ.

    ಮಹಾರಾಷ್ಟ್ರ ರಾಜಕೀಯ ಬಿಕ್ಕಟ್ಟು: ಬಾಲಿವುಡ್‌ ಮಂದಿ ಪ್ರತಿಕ್ರಿಯೆ ಏನು?ಮಹಾರಾಷ್ಟ್ರ ರಾಜಕೀಯ ಬಿಕ್ಕಟ್ಟು: ಬಾಲಿವುಡ್‌ ಮಂದಿ ಪ್ರತಿಕ್ರಿಯೆ ಏನು?

    ಈ ಬಾರಿ ಖುದ್ದು ಕಂಗನಾ ರನೌತ್ ಕಥೆ ಬರೆದು ನಿರ್ದೇಶನ ಕೂಡ ಮಾಡಿದ್ದಾರೆ. ಅಲ್ಲದೆ 'ಎಮರ್ಜೆನ್ಸಿ' ಸಿನಿಮಾದ ನಿರ್ಮಾಪಕರಲ್ಲಿ ಕಂಗನಾ ಕೂಡ ಒಬ್ಬರು. ಟೈಟಲ್ ಸೂಚಿಸುವಂತೆ 1975ರ ತುರ್ತು ಪರಿಸ್ಥಿತಿಯನ್ನು ಸಂದರ್ಭದಲ್ಲಿ ನಡೆದ ಘಟನೆಗಳನ್ನು ಆಧಾರವಾಗಿಟ್ಟುಕೊಂಡು ಈ ಕಥೆಯನ್ನು ಹೆಣೆಯಲಾಗಿದೆ. ಅಸಲಿಗೆ 1975ರಲ್ಲಿ ಇಂದಿರಾ ಗಾಂಧಿ ತುರ್ತು ಪರಿಸ್ಥಿತಿಯನ್ನು ಹೇರಿದ್ದು ಯಾಕೆ? ಸಿನಿಮಾ ನೋಡುವುದಕ್ಕೂ ಮುನ್ನ ಅಸಲಿ ಕಾರಣ ತಿಳಿದು ಕೊಳ್ಳುವುದು ಮುಖ್ಯ.

    ಎಮರ್ಜೆನ್ಸಿ ಈಗ ಶುರು

    ಎಮರ್ಜೆನ್ಸಿ ಈಗ ಶುರು

    ಕಂಗನಾ ರನೌತ್ ಈಗ ಇಂದಿರಾ ಗಾಂಧಿ ಅವತಾರವೆತ್ತಿದ್ದಾರೆ. ಈ ಸಿನಿಮಾದ ಫಸ್ಟ್ ಲುಕ್ ಈಗ ತಾನೇ ರಿಲೀಸ್ ಆಗಿದೆ. ಶೂಟಿಂಗ್ ಶುರುವಾಗಿದೆ ಅನ್ನೋದನ್ನು ಸಿನಿಪ್ರಿಯರಿಗೆ ತಿಳಿಸುವುದಕ್ಕೆ ಕಂಗನಾ ಫಸ್ಟ್ ಲುಕ್ ಅನ್ನು ರಿಲೀಸ್ ಮಾಡಿದ್ದಾರೆ. ಸಹಜವಾಗಿಯೇ ಇಂದಿರಾ ಗಾಂಧಿ ಅಂದು ಎಮರ್ಜೆನ್ಸಿ ಘೋಷಿಸಿದ್ದು ಯಾಕೆ? ಕಂಗನಾ ಅದನ್ನು ಹೇಗೆ ತೆರೆಮೇಲೆ ತೋರಿಸಬಹುದು ಎಂಬ ಕುತೂಹಲವಿರುತ್ತೆ. ಈ ಕಾರಣಕ್ಕೆ ಅಂದು ತುರ್ತುಪರಿಸ್ಥಿತಿ ತಂದಿದ್ದೇಕೆ? ಅನ್ನುವುದನ್ನು ತಿಳಿದುಕೊಳ್ಳುವುದು ಮುಖ್ಯ.

    ಚಿತ್ರ ಸಾಹಿತಿ ಜಾವೇದ್ ಅಖ್ತರ್ ವಿರುದ್ಧ ಬೆದರಿಕೆ ಆರೋಪ ಹೊರಿಸಿದ ಕಂಗನಾ!ಚಿತ್ರ ಸಾಹಿತಿ ಜಾವೇದ್ ಅಖ್ತರ್ ವಿರುದ್ಧ ಬೆದರಿಕೆ ಆರೋಪ ಹೊರಿಸಿದ ಕಂಗನಾ!

    1975 ತುರ್ತು ಪರಿಸ್ಥಿತಿ ತಂದಿದ್ದೇಕೆ?

    1975 ತುರ್ತು ಪರಿಸ್ಥಿತಿ ತಂದಿದ್ದೇಕೆ?

    1971ರಲ್ಲಿ ಇಂದಿರಾ ಗಾಂಧಿ ಯಶಸ್ಸಿನ ಉತ್ತುಂಗದಲ್ಲಿದ್ದರು. ಚುನಾವಣೆಯಲ್ಲಿ ಇಂದಿರಾ ಗಾಂಧಿಗೆ ಭಾರೀ ಬಹುಮತ ಸಿಕ್ಕಿತ್ತು. ಇದೇ ವೇಳೆ ಇಂದಿರಾ ಗಾಂಧಿ ಪಾಕಿಸ್ತಾನದ ವಿರುದ್ಧ ಯುದ್ಧವನ್ನು ಧೈರ್ಯವಾಗಿ ಎದುರಿಸಿ ಗೆದ್ದಿದ್ದರು. 1971ರಲ್ಲಿ ಇಂದಿರಾ ಗಾಂಧಿ ಗೋಲಕ್‌ನಾಥ್ ತೀರ್ಪಿಗೆ ವಿರುದ್ಧವಾಗಿ ಸಂವಿಧಾನ ತಿದ್ದುಪಡಿಯನ್ನು ಮಾಡಿತ್ತು. ಇದರ ಹಿಂದೆನೇ ರಾಜ ಮನೆತನಗಳ 'ರಾಜ ಧನ' ಪದ್ಧತಿಯನ್ನು ರದ್ಧು ಮಾಡಿತ್ತು. ಸುಪ್ರೀಂ ಕೋರ್ಟ್ ಸಂಸತ್ತಿಗೆ ಸಂವಿಧಾನವನ್ನು ತಿದ್ಧುಪಡಿ ಮಾಡುವ ಅಧಿಕಾರವನ್ನು ನೀಡಬಾರದು ಎಂದು ಹೇಳಿತ್ತು. ಇಲ್ಲಿಂದ ಅಸಲಿಗೆ ತುರ್ತು ಪರಿಸ್ಥಿತಿ ಹೇರಲು ಒಂದೊಂದಾಗೇ ಸಂದರ್ಭಗಳು ಸೃಷ್ಠಿಯಾಗುತ್ತಾ ಹೋದವು.

    ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗಳೇ ಬದಲು

    ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗಳೇ ಬದಲು

    ಸಂವಿಧಾನದ 24ನೇ ವಿಧಿಯನ್ನು ಬದಲಾವಣೆ ಮಾಡಿದ್ದಕ್ಕೆ ಸುಪ್ರೀಂ ಕೋರ್ಟ್‌ನಲ್ಲಿ ಪ್ರಶ್ನೆ ಮಾಡಲಾಗಿತ್ತು. ಈ ವೇಳೆ ಸುಪ್ರೀಂ ಕೋರ್ಟ್ ಸಂಸತ್ತಿಗೆ ಸಂವಿಧಾನ ತಿದ್ದುಪಡಿ ಮಾಡುವ ಅಧಿಕಾರವಿಲ್ಲ ಎಂದು ತೀರ್ಪು ನೀಡಿತ್ತು. ಬಳಿಕ ಕೇಂದ್ರ ಸರ್ಕಾರ ಎ ಎನ್‌ ರಾಯ್‌ ಎಂಬುವವರನ್ನು ಭಾರತದ ಮುಖ್ಯನ್ಯಾಯಾಧೀಶರನ್ನಾಗಿ ಮಾಡಲಾಗಿತ್ತು. ಇವರು 24ನೇ ವಿಧಿಯ ತಿದ್ದು ಪಡಿಯನ್ನು ಎತ್ತಿಹಿಡಿದ್ದರು. ಇದು ವಿರೋಧ ಪಕ್ಷಗಳು ಕೆರಳುವಂತೆ ಮಾಡಿತ್ತು.

    ಇಂದಿರಾ ಗಾಂದಿ ವಿರುದ್ಧ ಕೆರಳಿದ ಜೆಪಿ

    ಇಂದಿರಾ ಗಾಂದಿ ವಿರುದ್ಧ ಕೆರಳಿದ ಜೆಪಿ

    1973 ಡಿಸೆಂಬರ್ ಹಾಗೂ ಮಾರ್ಚ್ 1974ರ ವೇಳೆಗೆ ಗುಜರಾತಿನಲ್ಲಿ ಶಿಕ್ಷಣ ಸಚಿವರ ವಿರುದ್ಧ ವಿದ್ಯಾರ್ಥಿಗಳು ಪ್ರತಿಭಟನೆ ಶುರು ಮಾಡಿದ್ದರು. ಇದೇ ವೇಳೆ ಬಿಹಾರದಲ್ಲಿ ಚಳುವಳಿಗಾರ ಜಯಪ್ರಕಾಶ್ ನಾರಾಯಣ್ ವಿದ್ಯಾರ್ಥಿಗಳಿಗೆ ಬೆಂಬಲ ನೀಡಿದರು. ಒಂದು ತಿಂಗಳ ಬಳಿಕ ಕಾರ್ಮಿಕರ ನಾಯಕ ಜಾರ್ಜ್ ಫರ್ನಾಂಡೀಸ್ ಕೂಡ ಜೊತೆಯಾದರು. ಇಂತಹ ಸಂದರ್ಭದಲ್ಲಿಯೇ ರಾಜ್ ನಾರಾಯಣ್ ಅವರು ಲೋಕಸಭೆ ಚುನಾವಣೆಯಲ್ಲಿ ಗಾಂಧಿ ವಿರುದ್ಧ ಸ್ಪರ್ಧಿಸಿದ್ದರು. ವಂಚನೆ ಆರೋಪದಡಿ ಅಲಹಾಬಾದ್ ಹೈಕೋರ್ಟ್‌ನಲ್ಲಿ ಇಂದಿರಾ ಗಾಂಧಿ ವಿರುದ್ಧ ಪ್ರಕರಣ ದಾಖಲಿಸಿದ್ದರು. 1975 ರಲ್ಲಿ, ಸರ್ಕಾರಿ ಯಂತ್ರವನ್ನು ದುರುಪಯೋಗಪಡಿಸಿಕೊಂಡ ಆರೋಪದಲ್ಲಿ ಇಂದಿರಾ ಗಾಂಧಿ ತಪ್ಪಿತಸ್ಥರೆಂದು ನ್ಯಾಯಾಲಯ ತೀರ್ಪು ನೀಡಿತು.

    ಇಂದಿರಾ ತುರ್ತು ಪರಿಸ್ಥಿತಿ ಘೋಷಣೆ

    ಇಂದಿರಾ ತುರ್ತು ಪರಿಸ್ಥಿತಿ ಘೋಷಣೆ

    ಇಂದಿರಾ ಗಾಂಧಿ ಅಲಹಾಬಾದ್ ಹೈಕೋರ್ಟ್‌ ನೀಡಿದ ತೀರ್ಪನ್ನು ಸುಪ್ರೀಂ ಕೋರ್ಟ್‌ನಲ್ಲಿ ಪ್ರಶ್ನಿಸಿದ್ದರು. ಮರುದಿನವೇ ಜಯಪ್ರಕಾಶ್ ನಾರಾಯಣ್ ದೆಹಲಿ ಚಳುವಳಿ ಆರಂಭಿಸಿದ್ದರು. ಅದೇ ದಿನ ಇಂದಿರಾ ಗಾಂಧಿ ಅಂದಿನ ರಾಷ್ಟ್ರಪತಿ ಫಕ್ರುದ್ದಿನ್ ಅಲಿ ಅಹಮ್ಮದ್ ಅವರಿಗೆ ತುರ್ತು ಪರಿಸ್ಥಿತಿಯನ್ನು ಘೋಷಿಸುವಂತೆ ಕೇಳಿಕೊಂಡರು.

    English summary
    Kangana Ranaut As Indira Gandhi in Emergency Explained 1975 Situation, Know More.
    Friday, July 15, 2022, 9:58
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X