For Quick Alerts
  ALLOW NOTIFICATIONS  
  For Daily Alerts

  ರೈತರನ್ನು ಭಯೋತ್ಪಾದರು ಎಂದ ನಟಿ ಕಂಗನಾ ರಣೌತ್

  |

  ನಟಿ ಕಂಗನಾ ರಣೌತ್ ಹೇಳಿಕೆಗಳು ದಿನದಿಂದ ದಿನಕ್ಕೆ ಕಠುವಾಗುತ್ತಾ ಹೋಗುತ್ತಿವೆ. ಮುಂಬೈ ಅನ್ನು ಪಾಕ್ ಆಕ್ರಮಿತ ಕಾಶ್ಮೀರ ಎಂದಿದ್ದ ಕಂಗನಾ, ನಟಿ ಊರ್ಮಿಳಾ ಮತೋಡ್ಕರ್ ಅನ್ನು 'ಪಾರ್ನ್ ನಟಿ' ಎಂದಿದ್ದರು. ಈಗ ಇದೇ ಕಂಗನಾ ರೈತರನ್ನು ಭಯೋತ್ಪಾದರು ಎಂದಿದ್ದಾರೆ.

  'ಯಾರನ್ನೋ' ಮೆಚ್ಚಿಸಲು, ಸಾಮಾಜಿಕ ಜಾಲತಾಣದಲ್ಲಿ ಎಲ್ಲದಕ್ಕೂ ಪ್ರತಿಕ್ರಿಯಿಸುವ ಗೀಳು ಹಚ್ಚಿಕೊಂಡಿರುವ ಕಂಗನಾ ರಣೌತ್, ಇದೀಗ ರೈತರ ಕುರಿತಾಗಿ ತಂದಿರುವ ಹೊಸ ಕಾಯ್ದೆಯ ಬಗ್ಗೆ ಟ್ವೀಟ್ ಮಾಡಿದ್ದಾರೆ.

  ಹಿಂದಿ ಸಿನಿಮಾರಂಗಕಿಂತ ತೆಲುಗು ಸಿನಿಮಾರಂಗ ಗ್ರೇಟ್ ಎಂದ ನಟಿ ಕಂಗನಾ

  ಪ್ರಧಾನಿ ಮೋದಿ ಅವರ ಒಂದು ಟ್ವೀಟ್‌ಗೆ ಪ್ರತಿಕ್ರಿಯಿಸುತ್ತಾ, ಹೊಸ ರೈತ ಕಾಯ್ದೆ ವಿರುದ್ಧ ಪ್ರತಿಭಟಿಸುತ್ತಿರುವ ರೈತರನ್ನು 'ಭಯೋತ್ಪಾದಕರು' ಎಂದಿದ್ದಾರೆ ನಟಿ ಕಂಗನಾ. ಅವರ ಈ ಟ್ವೀಟ್‌ಗೆ ಭಾರಿ ವಿರೋಧ ವ್ಯಕ್ತವಾಗುತ್ತಿದೆ.

  ಚುನಾವಣೆ ಹೇಳಿಕೆ: ಸುಳ್ಳು ಹೇಳಿ ಸಿಕ್ಕಿ ಬಿದ್ದ ಕಂಗನಾ!

  ರೈತರನ್ನು ಭಯೋತ್ಪಾದಕರಿಗೆ ಹೋಲಿಸಿದ ಕಂಗನಾ

  ರೈತರನ್ನು ಭಯೋತ್ಪಾದಕರಿಗೆ ಹೋಲಿಸಿದ ಕಂಗನಾ

  ಪ್ರತಿಭಟನೆ ಮಾಡುತ್ತಿರುವ ರೈತರನ್ನುದ್ದೇಶಿಸಿ ಟ್ವೀಟ್‌ ಮಾಡಿರುವ ಕಂಗನಾ, 'ಸಿಎಎ ಇಂದ ಒಬ್ಬರ ನಾಗರೀಕತೆಯೂ ಹೋಗಲಿಲ್ಲ, ಆದರೆ ಇವರು ರಕ್ತದ ನದಿಯನ್ನೇ ಹರಿಸಿದರು. ಇವರು ಅದೇ ಭಯೋತ್ಪಾದಕರು ಈಗ ಮತ್ತೆ ಪ್ರತಿಭಟಿಸುತ್ತಿದ್ದಾರೆ' ಎಂದಿದ್ದಾರೆ ಕಂಗನಾ.

  'ಮಲಗಿರುವಂತೆ ನಟಿಸುವವರನ್ನು ಎಬ್ಬಿಸಲು ಸಾಧ್ಯವೇ?'

  'ಮಲಗಿರುವಂತೆ ನಟಿಸುವವರನ್ನು ಎಬ್ಬಿಸಲು ಸಾಧ್ಯವೇ?'

  'ಮಲಗಿರುವವರನ್ನು ಎಬ್ಬಿಸಬಹುದು, ತಪ್ಪು ತಿಳಿದಿರುವವರಿಗೆ ಸರಿಯಾದ ಮಾಹಿತಿ ಕೊಡಬಹುದು, ಆದರೆ ಮಲಗಿರುವಂತೆ ನಟಿಸುತ್ತಿರುವವರಿಗೆ, ದಡ್ಡರಂತೆ ನಟಿಸುತ್ತಿರುವವರಿಗೆ ಏನು ತಿಳಿಹೇಳಿದರೆ ಏನು ಪ್ರಯೋಜನ?' ಎಂದು ಕಂಗನಾ ಪ್ರಶ್ನೆ ಮಾಡಿದ್ದಾರೆ.

  ಮತ್ತೊಂದು ಟ್ವೀಟ್ ಮಾಡಿದ ಕಂಗನಾ

  ಮತ್ತೊಂದು ಟ್ವೀಟ್ ಮಾಡಿದ ಕಂಗನಾ

  ತಮ್ಮ ಟ್ವೀಟ್‌ಗೆ ತೀವ್ರ ವಿರೋಧ ವ್ಯಕ್ತವಾಗುತ್ತಿದ್ದಂತೆ ಮಾರನೇಯ ದಿನ ಅದೇ ಟ್ವೀಟ್‌ಗೆ ಮತ್ತೊಂದು ಟ್ವೀಟ್ ಅನ್ನು ಜೋಡಿಸಿದ ಕಂಗನಾ ರಣೌತ್, 'ಪಪ್ಪುವಿನ ಸೇನೆ ಸುಳ್ಳು ಸುದ್ದಿಗಳನ್ನು ಇಟ್ಟುಕೊಂಡು ಗಲಾಟೆಗಳನ್ನು ಮಾಡುತ್ತಿದೆ' ಎಂದಿದ್ದಾರೆ. ನಾನು ರೈತರನ್ನು ಭಯೋತ್ಪಾದಕರು ಎಂದಿಲ್ಲ, ನಾನು ಹಾಗೆ ಹೇಳಿದ್ದಾಗಿ ಸಾಬೀತು ಮಾಡಿದರೆ ನಾನು ಕ್ಷಮೆ ಕೇಳುತ್ತೇನೆ ಎಂದಿದ್ದಾರೆ ಕಂಗನಾ.

  ಹೊಸ ರೈತ ಕಾಯ್ದೆಗೆ ಹಲವೆಡೆ ವಿರೋಧ

  ಹೊಸ ರೈತ ಕಾಯ್ದೆಗೆ ಹಲವೆಡೆ ವಿರೋಧ

  ಹೊಸ ರೈತ ಕಾಯ್ದೆಯನ್ನು ರಾಜ್ಯಸಭೆಯಲ್ಲಿ ಅಂಗೀಕಾರ ಮಾಡಲಾಗಿದೆ. ಈ ಕಾಯ್ದೆಯ ವಿರುದ್ಧ ದೇಶದ ಹಲವು ರಾಜ್ಯಗಳಲ್ಲಿ ಪ್ರತಿಭಟನೆ ನಡೆಯುತ್ತಿದೆ. ಹಲವು ಕಡೆಗಳಲ್ಲಿ ರೈತರು ಹೊಸ ಕಾಯ್ದೆಗೆ ವಿರೋಧ ವ್ಯಕ್ತಪಡಿಸುತ್ತಿದ್ದಾರೆ.

  ಪಂಜಾಬ್ ಪಂದ್ಯದಲ್ಲಿ Sudeep ರನ್ನು ಕಾದಿದ್ದು ಒಂದೇ ಪ್ರಶ್ನೆ | Filmibeat Kannada
  ಕಂಗನಾ ನಾಲಗೆ ಹರಿಬಿಟ್ಟಿರುವುದು ಮೊದಲಲ್ಲ

  ಕಂಗನಾ ನಾಲಗೆ ಹರಿಬಿಟ್ಟಿರುವುದು ಮೊದಲಲ್ಲ

  ಕಂಗನಾ ಹೀಗೆ ನಾಲಗೆ ಹರಿಬಿಟ್ಟಿರುವುದು ಇದು ಮೊದಲೇನಲ್ಲ, ಕೆಲವು ದಿನಗಳ ಹಿಂದಷ್ಟೆ ಮುಂಬೈ ಪಾಕ್ ಆಕ್ರಮಿತ ಕಾಶ್ಮೀರ ಎನಿಸುತ್ತಿದೆ ಎಂದಿದ್ದರು. ಬಾಲಿವುಡ್ ಅನ್ನು ಕೊಳಚೆ ಮೋರಿಗೆ ಹೋಲಿಸಿದ್ದರು. ಅಮಿತಾಬ್ ಕುಟುಂಬದ ಬಗ್ಗೆ ಕೆಟ್ಟದಾಗಿ ಮಾತನಾಡಿದ್ದರು. ಹಿರಿಯ ನಟಿ ಊರ್ಮಿಳಾ ಮತೋಡ್ಕರ್ ಅನ್ನು ಪಾರ್ನ್ ನಟಿ ಎಂದಿದ್ದರು.

  English summary
  Actress Kangana Ranaut compares farmers who protesting against new farmer bill with terrorists.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X