twitter
    For Quick Alerts
    ALLOW NOTIFICATIONS  
    For Daily Alerts

    ಅರ್ನಬ್ ಬಂಧನ: ಸೋನಿಯಾ ಸೇನೆ, ಪಪ್ಪು ಸೇನೆ ಎಂದು ಕಂಗನಾ ಟೀಕೆ

    |

    ರಿಪಬ್ಲಿಕ್ ಟಿವಿ ಸಂಪಾದಕ ಅರ್ನಬ್ ಗೋಸ್ವಾಮಿ ಅವರನ್ನು ಮುಂಬೈ ಪೊಲೀಸರು ಬುಧವಾರ ಬೆಳಗ್ಗೆ ಬಂಧಿಸಿದ್ದಾರೆ. ಬೆಳ್ಳಂಬೆಳಗ್ಗೆ ಮನೆಗೆ ನುಗ್ಗಿದ ಪೊಲೀಸರು ತನ್ನ ಮೇಲೆ ಹಲ್ಲೆ ಮಾಡಿ ಬಲವಂತವಾಗಿ ಎಳೆದೊಯ್ದಿದ್ದಾರೆ ಎಂದು ಅರ್ನಬ್ ಆರೋಪಿಸಿದ್ದಾರೆ.

    ಈ ಕಡೆ ಪತ್ರಕರ್ತ ಅರ್ನಬ್ ಗೋಸ್ವಾಮಿ ಬಂಧನ ಖಂಡಿಸಿರುವ ನಟಿ ಕಂಗನಾ ರಣಾವತ್, ಮಹಾರಾಷ್ಟ್ರ ಸರ್ಕಾರದ ವಿರುದ್ಧ ಟೀಕೆ ಮಾಡಿದ್ದಾರೆ.

    ಮುಂಬೈನಲ್ಲಿ ಬೆಳ್ಳಂಬೆಳಿಗ್ಗೆ ಹೈಡ್ರಾಮಾ: ಅರ್ನಬ್ ಗೋಸ್ವಾಮಿ ಬಂಧನ

    ''ಅರ್ನಬ್ ಗೋಸ್ವಾಮಿ ಮನೆಗೆ ನುಗ್ಗಿ ಆತನ ಮೇಲೆ ದಾಳಿ ನಡೆಸಿರುವ ಮಹಾರಾಷ್ಟ್ರ ಸರ್ಕಾರಕ್ಕೆ ನಾನು ಕೇಳಲು ಬಯಸುತ್ತೇನೆ, ನೀವು ಇನ್ನು ಎಷ್ಟು ಮನೆಗಳ ಮೇಲೆ ದಾಳಿ ಮಾಡ್ತೀರಾ? ಇನ್ನು ಎಷ್ಟು ಧ್ವನಿಗಳನ್ನು ಮುಚ್ಚಿಸುತ್ತೀರಾ? ಸೋನಿಯಾ ಸೇನೆ, ಪಪ್ಪು ಸೇನೆ ಇನ್ನು ಎಷ್ಟು ದಿನ ಇಂತಹ ಕೆಲಸಗಳನ್ನು ಮಾಡುತ್ತೇ'' ಎಂದು ಪ್ರಶ್ನಿಸಿದ್ದಾರೆ.

    Kangana Ranaut Fire On Maharashtra Government Over Arnab Goswami’s Arrest

    ಈ ಘಟನೆ ಬಗ್ಗೆ ವಿಡಿಯೋ ಮಾಡಿ ಟ್ವಿಟ್ಟರ್‌ನಲ್ಲಿ ಹಂಚಿಕೊಂಡಿರುವ ಕಂಗನಾ ರಣಾವತ್, ''ಅನ್ಯಾಯ, ಅಕ್ರಮಗಳ ವಿರುದ್ಧ ದನಿ ಎತ್ತುವವರ ಬಾಯಿ ಮುಚ್ಚಿಸಲಾಗುತ್ತಿದೆ, ಒಂದು ದನಿ ಮುಚ್ಚಿಸಿದರೆ ಮತ್ತಷ್ಟು ದನಿಗಳು ಎದ್ದೇಳುತ್ತದೆ'' ಎಂದು ಕಂಗನಾ ಕಿಡಿ ಕಾರಿದ್ದಾರೆ.

    ''ಇದಕ್ಕೂ ಮುಂಚೆ ಎಷ್ಟು ಜನ ದೇಶಭಕ್ತರ ಬಾಯಿಗಳನ್ನು ಮುಚ್ಚಿಸಿದ್ದೀರಾ ಎಂದು ಗೊತ್ತಿದೆ. ಆದರೂ ನಾವು ಯಾವುದಕ್ಕೂ ಅಂಜುವುದಿಲ್ಲ, ಒಂದು ದನಿ ನಿಲ್ಲಿಸಿದರೆ ಮತ್ತಷ್ಟು ದನಿ ಬರುತ್ತದೆ'' ಎಂದು ಕಾಂಗ್ರೆಸ್ ಹಾಗೂ ಶಿವಸೇನಾ ಸರ್ಕಾರದ ವಿರುದ್ಧ ನೇರವಾಗಿ ವಾಗ್ದಾಳಿ ನಡೆಸಿದ್ದಾರೆ.

    ಒಳಾಂಗಣ ವಿನ್ಯಾಸಗಾರ ಅನ್ವಯ್ ನಾಯಕ್ ಮತ್ತು ಅವರ ತಾಯಿ ಕುಮುದ ನಾಯಕ್ ಅವರು 2018ರ ಮೇ ತಿಂಗಳಲ್ಲಿ ಅಲಿಬಾಗ್‌ನ ತಮ್ಮ ನಿವಾಸದಲ್ಲಿ ಮೃತ ಸ್ಥಿತಿಯಲ್ಲಿ ಪತ್ತೆಯಾಗಿದ್ದರು. ರಿಪಬ್ಲಿಕ್ ಟಿವಿ ತನ್ನ ಕೆಲಸಕ್ಕೆ ಹಣ ಪಾವತಿಸದೆ ಬಾಕಿ ಉಳಿಸಿಕೊಂಡಿದ್ದೇ ತಂದೆ ಹಾಗೂ ಅಜ್ಜಿಯ ಆತ್ಮಹತ್ಯೆಗೆ ಕಾರಣ ಎಂದು ಅನ್ವಯ್ ಅವರ ಮಗಳು ಆದ್ನ್ಯಾ ನಾಯಕ್ ಆರೋಪಿಸಿದ್ದರು.

    ಈ ಕೇಸ್‌ನಲ್ಲಿ ಮುಂಬೈ ಪೊಲೀಸರು ಅರ್ನಬ್ ಗೋಸ್ವಾಮಿಯನ್ನು ಬಂಧಿಸಿದ್ದಾರೆ.

    English summary
    'You Assaulted him, Beat him; How many necks will you Strangle', Kangana Ranaut Fire On Maharashtra Government Over Arnab Goswami’s Arrest.
    Wednesday, November 4, 2020, 14:28
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X